
ಹಳ್ಳಿಯ ಜೀವನ ಜನರನ್ನು ಒಳ್ಳೆಯ ಆರೋಗ್ಯವಂತರನ್ನಾಗಿ ಮಾಡುತ್ತದೆ. ಮನುಷ್ಯ ಆರೋಗ್ಯವಂತನಾಗಿ ಬದುಕಬೇಕಾದರೆ ಹಳ್ಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಓಡಾಡಬೇಕು. ಇಂದಿನ ಮಕ್ಕಳಿಗೆ ಹಳ್ಳಿ ಜೀವನದ ಪರಿಚಯವಿಲ್ಲ. ಆದರೆ ಈ ರೀತಿಯ ಕ್ಯಾಂಪ್ಗಳನ್ನು ಶಾಲೆಗಳಲ್ಲಿ ಆಯೋಜಿಸುವುದರಿಂದ ಮಕ್ಕಳಿಗೆ ಹಳ್ಳಿ ಜನರ ಬದುಕಿನ ಪರಿಕಲ್ಪನೆಯನ್ನು ತಿಳಿಸಲು ಸಾಧ್ಯ ಹಾಗೂ ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣವಾದರೆ ಯಾವುದೇ ದೇಶ ಪ್ರಗತಿ ಕಾಣಲು ಸಾಧ್ಯವಿಲ್ಲವೆಂದು ಕುಂದಾಪುರದ ಪ್ರಸಿದ್ಧ ನ್ಯಾಯವಾದಿ, ಉತ್ತಮ ವಾಗ್ಮಿಯೂ ಆಗಿರುವ ತಲ್ಲೂರು ಬಾಲಚಂದ್ರ ಶೆಟ್ಟಿಯವರು ಮಾತನಾಡಿದರು.ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ […]

ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ಯುವ ಕಾಂಗ್ರೆಸ್ಸ್ ವತಿಯಿಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಶ್ಚಿತಾರ್ಥ ಶೆಟ್ಟಿ ಅವರ ನೇತೃತ್ವದಲ್ಲಿ, ಕೇಂದ್ರ ಸರಕಾರದ ಜನ ವಿರೋಧಿ ಆಡಳಿತ ಮತ್ತು ಬೆಲೆ ಏರಿಕೆಯ ವಿರುದ್ಧ ಎ. 9 ರಂದು ಪ್ರತಿಭಟನೆ ನಡೆಯಿತು. ಕಳೆದ ಹತ್ತು ವರುಷಗಳಿಂದ ಕಚ್ಚಾ ತೈಲಗಳ ಬೆಲೆ ಇಳಿಕೆಯಾದರೂ, ಪೆಟ್ರೋಲ್ ಮತ್ತು ಡೀಸೆಲ್ ದರ ನಿಯಂತ್ರಿಸದ ಕೇಂದ್ರ ಸರಕಾರ ಮತ್ತೊಮ್ಮೆ ಗ್ಯಾಸ್ ದರವನ್ನು ರೂಪಾಯಿ 50ಕ್ಕೆ ಏರಿಸಿ ದೇಶದ ಭವಿಷ್ಯವನ್ನು ಆತಂಕಕ್ಕೆ ತಂದಿರಿಸಿದೆ. ರಾಜ್ಯ ಬಿಜೆಪಿ ಆಯೋಜಿಸಲಿರುವ […]

ವಿಶ್ವ ಆರೋಗ್ಯ ದಿನಾಚರಣೆ 2025 ಹಾಗೂ ಹೋಮಿಯೋಪಥಿಕ್ ಸಪ್ತಾಹದ ಉದ್ಘಾಟನೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಲ್ಲಿ 07.04.2025 ರಂದು ಮದ್ಯಾಹ್ನ 3:30ಕ್ಕೆ ಕಾಲೇಜು ಸಭಾಂಗಣದಲ್ಲಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆಯುಷ್ ಅಧಿಕಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಯೋಜಿತ ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ, ಆಡಳಿತಾಧಿಕಾರಿ, ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊ, ಡಾ. ಗಿರೀಶ್ ನಾವಡ […]

ಕಥೋಲಿಕ ಕ್ರೈಸ್ಥ ಸಮುದಾಯಕ್ಕೆ ಸೇರಿದ ಮಂಗಳೂರು ಹಾಗೂ ಉಡುಪಿ ಧರ್ಮಪ್ರಾಂತ್ಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಫುಡಾರ್ ಪ್ರತಿಷ್ಠಾನ್ (ರಿ.) ಸಂಸ್ಥೆಯ ನೇತ್ರತ್ವದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಎಪ್ರಿಲ್ 6 ರಂದು ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಸಭಾಂಗಣದಲ್ಲಿ ನೆರವೇರಿಸಲಾಯಿತು. ಎಸ್ಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ, ಪಿಎಚ್ ಡಿ, ವಿವಿಧ ಸ್ಪರ್ಧಾತ್ಮಕ ಪರೀಕ್ಶೆಗಳಲ್ಲಿ ಉತ್ತೀರ್ಣರಾದವರು ಹಾಗೂ ಕ್ರೀಡಾ ಕ್ಶೇತ್ರದಲ್ಲಿ ಅಂತರ್ರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆಗೈದ 405 ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜೆನರಲ್ ಮೊನ್ಸಿಂಜೊರ್ ವಂದನೀಯ ಮ್ಯಾಕ್ಸಿಮ್ ನೊರೊನ್ಹಾರವರು […]

ಬೈಬಲ್ ಕಾರ್ಯಕ್ರಮ ಸೇಂಟ್ ಜೋಸೆಫ್ ಸೆಮಿನರಿ, ಜೆಪ್ಪು. ಎಪಿಸ್ಕೋಪಲ್ ಸಿಟಿ ಡೀನರಿ ಜುಬಿಲಿ ವರ್ಷ 2025 ಆಚರಣೆ ವಿಷಯ: “ಭರವಸೆಯ ಯಾತ್ರಿಕರು; ಸುವಾರ್ತೆಯ ಆಯುಧಗಳು” ಮಂಗಳೂರು; ಎಪಿಸ್ಕೋಪಲ್ ಸಿಟಿ ಡೀನರಿ ಆಳವಾದ ನಂಬಿಕೆ ಮತ್ತು ಸಂತೋಷದಾಯಕ ಸಹಭಾಗಿತ್ವದ ಉತ್ಸಾಹದಲ್ಲಿ ಒಟ್ಟುಗೂಡಿದರು, ಇದು “ಭರವಸೆಯ ಯಾತ್ರಿಕರು; ಸುವಾರ್ತೆಯ ಆಯುಧಗಳು” ಎಂಬ ಸ್ಪೂರ್ತಿದಾಯಕ ವಿಷಯದ ಮೇಲೆ ಕೇಂದ್ರೀಕೃತವಾದ ಜುಬಿಲಿ ವರ್ಷ 2025 ಅನ್ನು ಗಂಭೀರವಾಗಿ ಉದ್ಘಾಟಿಸಿತು. ಈ ಆಧ್ಯಾತ್ಮಿಕವಾಗಿ ಶ್ರೀಮಂತ ಮತ್ತು ಸಾಂಸ್ಕೃತಿಕವಾಗಿ ರೋಮಾಂಚಕ ಆಚರಣೆಯು ಸಂಜೆ 5:30 ಕ್ಕೆ […]

ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜು – ವಾಣಿಜ್ಯ ವಿಭಾಗ – ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಹಯೋಗದೊಂದಿಗೆ, ಏಪ್ರಿಲ್ 08, 2025 ರಂದು ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಬೆಂಗಳೂರಿನ ಮೆಂಟರ್ಸ್ ಫಾರ್ ಕಿಡ್ಸ್ ಫೌಂಡೇಶನ್ (ಎಂಕೆಎಫ್) ನಲ್ಲಿ ಸಾಂಸ್ಥಿಕ ಪಾಲುದಾರಿಕೆಗಳ ಪ್ರಮುಖರಾದ ಶ್ರೀಮತಿ ಅರ್ಪಣಾ ಭಟ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದರು, “ಭವಿಷ್ಯಕ್ಕಾಗಿ ವಾಣಿಜ್ಯ ಮತ್ತು ಹಣಕಾಸು ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವುದು” ಎಂಬ ವಿಷಯದ ಕುರಿತು ಅಧಿವೇಶನವನ್ನು ನಡೆಸಿದರು. ಅಂತಿಮ ವರ್ಷದ (ಲಿಂಕ್ ಲಭ್ಯವಿಲ್ಲ) ವಿದ್ಯಾರ್ಥಿನಿ ಪೂನಂ […]

ಉಡುಪಿ,ಪಂಬೂರು; ಏಪ್ರಿಲ್ 09 ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ಸಂಸ್ಥೆಯ ಏಳು ವಿಶೇಷ ವಿದ್ಯಾರ್ಥಿಗಳು ಕೌಶಲ್ಯ, ಜ್ಞಾನ ಮತ್ತು ಅಗತ್ಯವಾದ ಶಿಕ್ಷಣ ಪಡೆದು ಮುಂದಿನ ಜೀವನದಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವಂತೆ ಶಕ್ತರೆಂದು ಘೋಶಿಸಿ, ಇವರು ಉತಿರ್ಣರೆಂದು ಮಾನ್ಯತೆ ನೀಡಿ ಏಪ್ರಿಲ್ 08, 2025 ರಂದು ವಿಶೇಷ ಪದವಿ ನೀಡಲಾಯಿತು. ಪದವಿ ಪತ್ರ ಪ್ರಧಾನ ಮಾಡಿದ ಉಡುಪಿ ಡಯಾಸಿಸ್ನ ವಿಕಾರ್ ಜನರಲ್ ವೆರಿ ರೆವರೆಂಡ್ ಮೊನ್ಸಿಂಝೋರ್ ಫರ್ಡಿನ್ಯಾಂಡ್ ಗೊನ್ಸಾಲ್ವಿಸ್ ಮಾತನಾಡಿ ‘ಈ ಸಂಸ್ಥೆಯ ಏಳು ವಿದ್ಯಾರ್ಥಿಗಳು ಪದವಿ […]

ಕುಂದಾಪುರ; ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ತಾಲೂಕು ಘಟಕದಿಂದ ಎಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಉಚಿತ ಆರೋಗ್ಯ ತಪಾಸಣಾ ಶಿಬಿರದ ಮೂಲಕ ಆಚರಿಸಲಾಯಿತು. ಕುಂದಾಪುರ ರೆಡ್ ಕ್ರಾಸನ ಸಭಾಪತಿ ಎಸ್ ಜಯಕರ ಶೆಟ್ಟಿ ದೀಪ ಬೆಳಗಿಸಿ ಶಿಬಿರವನ್ನು ಉಧ್ಘಾಟಿಸಿ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ಎಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನವಾಗಿ ಆಚರಿಸುತ್ತಿದ್ದು, 2025ರ ಈ ದಿನವನ್ನು “ತಾಯಂದಿರು ಮತ್ತು ನವಜಾತ ಶಿಶುಗಳ” ಆರೋಗ್ಯ ಅಭಿಯಾನಕ್ಕೆ ಮೀಸಲಿಡಲಾಗಿದೆ ಎಂದರು. ಜಗತ್ತಿನಾದ್ಯಂತ ತಾಯಂದಿರ ಹಾಗೂ […]

ಕುಂದಾಪುರ,ಎ.9; ಕುಂದಾಪುರ ಚಿಕ್ಕನಸಾಲು ರಸ್ತೆಯ, ರೋಯಲ್ ಸಭಾಭವನಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ರುವ ‘ಪರಾಶಕ್ತಿ’ ಕಿರಾಣಿ ಅಂಗಡಿ ಎಪ್ರಿಲ್ 9 ರಂದು ಬೆಂಕಿ ಗೆತುತ್ತಾಗಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಂಗಡಿಯ ಮಾಲೀಕ ಇಂದು ಎ.9 ಕ್ಕೆ ಬೆಳಿಗ್ಗೆಯೇ ಅಂಗಡಿಯ ಬಾಗಿಲು ತೆರರೆದಿದ್ದು, ಸ್ವಲ್ಪ ಸಮಯ ಅಂಗಡಿಯಲ್ಲಿದ್ದು, ಬಳಿಕ 8 ಗಂಟೆಗೆ ತನ್ನ ವಾಹನಕ್ಕೆ ಪೆಟ್ರೋಲ್ ಹಾಕಿಸಲಿಕ್ಕೆ ಕುಂದಾಪುರ ಪೇಟೆಗೆ ತೆರಳಿದು ಅರ್ಧ ಗಂಟೆ ನಂತರ ವಾಪಸು ಬರುವಾಗ, ಅಂಗಡಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ, ಅಂಗಡಿಯಲ್ಲಿದ್ದ ಎಲ್ಲಾ ಸಾಮಾನು […]