ಕುಂದಾಪುರ ಅಂಕದಕಟ್ಟೆ ನಿವಾಸಿ ಶೀನ ದೇವಾಡಿಗ (82) ಇವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 31-07-2022ರ ಆದಿತ್ಯವಾರ ನಿಧನರಾದರು. ಮೂಲತಹ:, ಚಾಂತರದವರಾಗಿದ್ದ ಅವರು ಉತ್ತಮ ಕೃಷಿಕರಾಗಿದ್ದು, ಅಂಗಡಿ ವ್ಯಾಪರದಲ್ಲೂ ಗುರುತಿಸಿ ಕೊಂಡಿದ್ದರು. ಶ್ರೀಯುತರು ಪತ್ನಿ, 4 ಗಂಡು, 1 ಹೆಣ್ಣು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕುಂದಾಪುರ: ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಪತ್ನಿ ನಾಗರತ್ನ ಶೆಟ್ಟಿ (80) ಭಾನುವಾರ ಸಂಜೆ ಬಸ್ರೂರಿನ ತಮ್ಮ ಸ್ವಗ್ರಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಧಾರ್ಮಿಕ, ಸಾಮಾಜಿಕ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಬಸ್ರೂರು ಹಾಗೂ ಕೊಲ್ಲೂರಿನ ಕೂಡುರಿನ ಪರಿಸರದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು.ಮೃತರಿಗೆ ಪತಿ, ಇಬ್ಬರು ಪುತ್ರರು, ಮೂವರು ಪುತ್ರಿಯರಿದ್ದಾರೆ ಅಂತ್ಯಕ್ರಿಯೆ: ಸೋಮವಾರ ಮಧ್ಯಾಹ್ನ ಕೊಲ್ಲೂರು ಸಮೀಪದ ಕೂಡುರು ಮನೆಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದ್ದು, ಬೆಳಗ್ಗೆ 9 ಗಂಟೆಯಿಂದ 11 ರವರೆಗೆ ಬಸ್ರೂರಿನ ಮನೆಯಲ್ಲಿ ಸಾರ್ವಜನಿಕ […]
ಕೋಟ: ಜಾತಿ ಧರ್ಮವನ್ನು ಮೀರಿ ನಮ್ಮೆಲ್ಲರನ್ನು ಭಾವುಕರಾಗಿ ಬಂಧಿಸಲ್ಪಡುವ ಕುಂದಾಪ್ರ ಕನ್ನಡ ನಮ್ಮೆಲ್ಲರ ಹೆಮ್ಮೆಯ ಭಾಷೆಯಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳ ಕೆಲಸ ಅದ್ವಿತೀಯ ಎಂದು ಕುಂದಾಪುರ ಭಂಡಾರ್‍ಕಾರ್ಸ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ರೇಖಾ ವಿ.ಬನ್ನಾಡಿ ಹೇಳಿದರುಅವರು ಗುರುವಾರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್, ರೋಟರಿ ಸಮುದಾಯ ದಳ ಬೀಜಾಡಿ-ಗೋಪಾಡಿ ಇವರ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ 4ನೇ ವರ್ಷದ ವಿಶ್ವ ಕುಂದಾಪ್ರ […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಕಾಳಾವರ ವರದರಾಜ ಶೆಟ್ಟಿ ಪ್ರಥಮ ದರ್ಜೆ ಕಾಲೇಜು ಇವರ ಸಹಭಾಗಿತ್ವದಲ್ಲಿ ಚರ್ಮ ರೋಗ ತಪಾಸಣೆ ಶೆಭಿರ ಆಯೋಜಿಸಲಾಯಿತು. ಈ ಶಿಬಿರವನ್ನು ಖ್ಯಾತ ಚರ್ಮ ರೋಗ ತಜ್ನ ಡಾ. ಅರುಣ ಶೆಟ್ಟಿ, ಕೊರ್ಗಿ ಇವರು ಉಚಿತ ತಪಾಸಣೆ ನಡೆಸಿದರು ಅಲ್ಲದೇ ಸೋಪ್, ಕ್ರೀಮ್, ಲೋಷನ್ ಮಾತ್ರೆ ಇತ್ಯಾದಿ ಗಳನ್ನು ಉಚಿತವಾಗಿ ನೀಡಿದರು. ಸುಮಾರು 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಯೋಜನ ಪಡೆದರು. ಡಾ. ಅರುಣ್ ಶೆಟ್ಟಿ ಕೆ. ಇವರು ಮಕ್ಕಳಿಗೆ […]
ಗಂಗೊಳ್ಳಿ;ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿಯಲ್ಲಿ ಶಾಲಾ ಸಂಸತ್ತನ್ನು ಜುಲೈ- 25 ರಂದು ರಚಿಸಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಿ ದೀಪ ಹಚ್ಚುವುದರ ಮೂಲಕ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಕ್ರೆಸೆನ್ಸ್ ಶಾಲಾ ಸಂಸತ್ತಿನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು. ಶಾಲಾ ನಾಯಕನಾಗಿ ವೀರೇಶ್ ಖಾರ್ವಿ, ಉಪನಾಯಕಿಯಾಗಿ ಚಂದನಾ, ಪ್ರಮಾಣವಚನ ಬೋಧಿಸಿದರು. ಶಿಕ್ಷಣ ಮಂತ್ರಿಯಾಗಿ ಸೃಷ್ಟಿ, ಕ್ರೀಡಾ ಮಂತ್ರಿಯಾಗಿ ಸಂಜನಾ, ಆಹಾರ ಮಂತ್ರಿಯಾಗಿ ನಮಿತಾ, ಸಾಂಸ್ಕೃತಿಕ ಮಂತ್ರಿಯಾಗಿ ಐಶೂ, ಸ್ವಚ್ಛತಾ ಮಂತ್ರಿಯಾಗಿ ಶಶಿ, ಸಭಾಪತಿಯಾಗಿ ಪ್ರಜ್ಞಾ, ವಿರೋಧ ಪಕ್ಷದ ನಾಯಕಿಯಾಗಿ ಮಾನ್ಯ, […]
ಕುಂದಾಪುರ: ‘ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸದಾ ಕಾರ್ಯಪ್ರವೃತ್ತವಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಆಶ್ರಯದಲ್ಲಿ ಆರಂಭಗೊಂಡ ಜ್ಯೂನಿಯರ್ ರೆಡ್ ಕ್ರಾಸ್ ಘಟಕವು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ಸಂಬಂಧಿ ತುರ್ತು ಸೇವೆಗಳ ಅರಿವು ಜೊತೆಗೆ ಮಾನವೀಯ ಮೌಲ್ಯಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಬೆಳೆಸುವ ಉದ್ದೇಶ ಈ ಸಂಸ್ಥೆ ಹೊಂದಿದೆ ‘ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿಯವರು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯವರು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ನೂತನವಾಗಿ […]
ಕುಂದಾಪುರ : ಶ್ರೀ ಕೃಷ್ಣನ ಪ್ರತಿಯೊಂದು ನಡೆಯೂ ನಮ್ಮ ಜೀವನಕ್ಕೆ ಆದರ್ಶ. ಅವನ ಬಾಲಲೀಲೆ, ಭ್ರಾತೃ ಪ್ರೇಮ, ಮುತ್ಸದ್ದಿತನ, ಗೀತಾಬೋಧನೆ ಎಲ್ಲವುಗಳಲ್ಲೂ ಜೀವನ ಸಂದೇಶವಿದೆ. ಅಂತಹವುಗಳನ್ನು ಪ್ರಕಟಪಡಿಸುವ, ಜನಜೀವನಕ್ಕೆ ಮಾದರಿಯಾಗಬಲ್ಲ ಕಾರ್ಯಕ್ರಮಗಳನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹಮ್ಮಿಕೊಳ್ಳಬೇಕು ಎಂದು ಕೋಟೇಶ್ವರ ಮಿತ್ರದಳ ದ ಅಧ್ಯಕ್ಷ ಗೋಪಾಲಕೃಷ್ಣ ಹತ್ವಾರ್ ಹೇಳಿದರು. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ರೂಪುರೇಷೆಗಳನ್ನು ನಿರ್ಧರಿಸಲು ಬುಧವಾರದಂದು ಕೋಟೇಶ್ವರದಲ್ಲಿ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಮಿತ್ರದಳ ಕೋಟೇಶ್ವರ ವಲಯದ ಆಶ್ರಯದಲ್ಲಿ ಪ್ರತಿ ವರ್ಷವೂ […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಈ ದಿನ ಮುಳ್ಳಿಕಟ್ಟೆ ನಿವಾಸಿ ಸರೋಜ ಇವರ ತಾಯಿ ಬೆನ್ನು ಮೂಳೆ ಮುರಿತದಿಂದ ನರಳುತ್ತಿರುವ ಕಾರಣ 6500/- ರೂಪಾಯಿ ಬೆಲೆ ಬಾಳುವ ಗಾಲಿ ಕುರ್ಚಿಯನ್ನು ನೀಡಿದರು. ಸಭಾಪತಿ ಎಸ್ ಜಯಕರ ಶೆಟ್ಟಿ ಇದನ್ನು ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ ಮತ್ತು ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು.
ಕುಂದಾಪುರ: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಜು. 27 ರಂದು ನಡೆಯಿತು. ರೋಟರಿ ಕ್ಲಬ್ ರಿವರ್ ಸೈಡ್ ಕುಂದಾಪುರ ಇದರ ಅಧ್ಯಕ್ಷರಾಗಿರುವ ಕೆ .ಎಸ್ ಮಂಜುನಾಥ್ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಹೆತ್ತವರು ನಗು ಮೊಗದಿಂದ ಸ್ವಾಗತಿಸಬೇಕು .ವಿದ್ಯಾರ್ಥಿಗಳು ವೇಳಾಪಟ್ಟಿಯನ್ನು ಸಿದ್ಧಗೊಳಿಸಿಕೊಂಡು ಅದರ ಅನ್ವಯ ಅಭ್ಯಾಸ ಮಾಡಿದರೆ ಯಶಸ್ಸು ದೊರೆಯುತ್ತದೆ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳನ್ನು ಅಣಿಗೊಳಿಸಬೇಕಾದ ಅನಿವಾರ್ಯತೆ ಹೆತ್ತವರು ಹಾಗೂ ಶಿಕ್ಷಕರಿಗೆ […]