ಕುಂದಾಪುರ: ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ಆಶ್ರಯದಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರಧಾನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಪ್ರೇಮಿಕ ಇವರು ದೀಪವನ್ನು ಬೆಳಗಿಸಿ ಮಾತನಾಡಿ ಕ್ಲಬ್ಬಿನ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು. ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೋ, ಜಗನ್ನಾಥ್ ಮೊಗೇರ ಪದ ಪ್ರದಾನ ನೆರವೇರಿಸಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಇತರರಿಗೆ ಸಹಾಯ ಮಾಡುವ, ಗೌರವವನ್ನು ನೀಡುವ ಹಾಗೂ ಅಂತರಾಷ್ಟ್ರೀಯ ಅರಿವು ಮೂಡಿಸುತ್ತದೆ ಎಂದರು. […]
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಪದವಿ ಕಾಲೇಜು ಆಡಳಿತ ಮಂಡಳಿಯು ಡಾ.ಶುಭಕರ ಆಚಾರಿ ಅವರನ್ನು 1ಆಗಸ್ಟ್ 2023ರಿಂದ ಪ್ರಾಂಶುಪಾಲರಾಗಿ ನೇಮಕ ಮಾಡಿದೆ.ಕಾಲೇಜಿನ ಜನಪ್ರಿಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ. ಡಾ.ಶುಭಕರಾಚಾರಿ ಅವರು ಮೂಲತಃ ತೀರ್ಥಹಳ್ಳಿಯ ಗಬಡಿ ಗ್ರಾಮದ ಸೀತಾರಾಮ ಆಚಾರ್ಯ ಮತ್ತು ಇಂದಿರಾ ಅವರ ಪುತ್ರ ಶುಭಕರಾಚಾರಿ ತೀರ್ಥಹಳ್ಳಿಯ ತುಂಗಭದ್ರಾ ಮಹಾವಿದ್ಯಾಲಯಲ್ಲಿ ಪದವಿ ಶಿಕ್ಷಣದ ನಂತರ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದು ಡಾಕ್ಟರೇಟ್ ನ್ನು ಮಂಗಳೂರು ವಿಶ್ವವಿದ್ಯಾಲಯದಿಂದ ಪಡೆದರು.ಸುಮಾರು 30 ವರ್ಷಗಳ ಸುದೀರ್ಘ […]
ಕುಂದಾಪುರ, ಜು.31: ‘ಆಟ ಪಾಠ ಊಟ ಇದು ಮನುಷ್ಯನಿಗೆ ಬೇಕಾಗಿರುವ ಅಗತ್ಯವಾದ ವಿಷಯಗಳು, ಅದರಲ್ಲಿ ಮಕ್ಕಳಿಗೆ ಅಚ್ಚು ಮೆಚ್ಚಿನದು ಆಟ, ನಮ್ಮ ಎಳೆಯವಲ್ಲಿ ಇದನ್ನೆ ಶಾಲೆಯಲ್ಲಿ ನಿರೀಕ್ಷಿಸುತ್ತಿದ್ದೆವು. ಆಟಗಳಿಂದ ನಮ್ಮ ಶರೀರ ಸುಧ್ರಡವಾಗುತ್ತದೆ. ಸೋಲು ಗೆಲುವು ಇದ್ದದೆ ಆದರೆ ಆಟದಲ್ಲಿ ನಮ್ಮನು ನಾವು ತೊಡಗಿಕೊಳ್ಳಬೇಕು, ನೀವು ಆಟದಲ್ಲಿ ಶ್ರಮ ಪಟ್ಟು ಸಾಧನೆ ಮಾಡಬೇಕು, ಈ ಆಟ ಇಲ್ಲಿಗೆ ಮುಕ್ತಾಯವಾಗುವುದಿಲ್ಲ, ತಾಲ್ಲೂಕಿನಿಂದ ಜಿಲ್ಲೆ, ಜಿಲ್ಲೆಯಿಂದ ರಾಜ್ಯ, ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ, ರಾಷ್ಟ್ರೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತಹ ಗುರಿಯನ್ನು […]
ಕೋಟ:ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯು ಸಂಘದ ಅಧ್ಯಕ್ಷ ಪ್ರಭಾಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ರಾಜ್ಯ ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಅಧ್ಯಕ್ಷರಾಗಿ ಸಾಯ್ಬರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿಜಯ ಕುಮಾರ್ ಶೆಟ್ಟಿ ಆಯ್ಕೆಯಾದರು.ಪ್ರಧಾನ ಕಾರ್ಯದರ್ಶಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ […]
ಕುಂದಾಪುರ, ಜು. ೩೦:ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ಮಾರ್ಗದ ಕಾಳಾವರ ಎಂಬಲ್ಲಿ ಭಾನುವಾರ ಸಂಜೆ ಕಾರು ಮತ್ತು ಲೂನಾ ನಡುವೆ ಅಪಘಾತಾವಾಗಿ ಲೂನಾ ಸವಾರ ನರಸಿಂಹ ಶೆಟ್ಟಿ (75) ಮ್ರತ ಪಟ್ಟಿದ್ದಾರೆ. ಕಾಳಾವರ ಸರಕಾರಿ ಶಾಲೆಯ ಸಮೀಪದ ಅಡ್ಡರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ನರಸಿಂಹ ಶೆಟ್ಟಿ ಮುಖ್ಯ ರಸ್ತೆಗೆ ಹಠಾತ್ ಪ್ರವೇಶಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೋಟೇಶ್ವರದಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರಿನ ಚಾಲಕ ಲೂನಾ ಹಠಾತ್ ಅಡ್ಡ ಬಂದಿದ್ದರಿಂದ […]
ಕುಂದಾಪುರ, ಜು. 30; ದಿನಾಂಕ 30-7-2023 ರಂದು ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಭಾದಿಂದ ಮೂರು ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಆಲ್ಬರ್ಟ್ ಕ್ರಾಸ್ತಾ ಸಹಾಯಧನ ವಿತರಣೆ ಮಾಡಿ ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಸಂಘಟನೆ ಸೇವೆಗಳ ಸಹಕಾರ ನಿರಂತರವಾಗಿ ಮಾಡುತ್ತಾ ಇದೆ. ಮುಂದೆ ಕೂಡ ಇಂತಹ ಒಳ್ಳೆ ಕೆಲಸಗಳು ಈ ಸಂಘಟನೆಯಲ್ಲಿ ನಡೆಯಲಿ’ ಎಂದು ಹಾರೈಸಿ ಸಂದೇಶವನ್ನು ನೀಡಿದರು. ಪಿಯುಸ್ ನಗರ ಕಥೊಲಿಕ್ […]
ಕೊಲ್ಲೂರು,ಜು.30: ಸ್ನೇಹಿತರೊಂದಿಗೆ ಕಳೆದ ಭಾನುವಾರ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದ ಸಂದರ್ಭ ಕಾಲುಜಾರಿ ನೀರಿನಲ್ಲಿ ಬಿದ್ದು.ಕಾಣೆಯಾಗಿದ್ದ ಭದ್ರಾವತಿಯ ಯುವಕ ಶರತ್ ಕುಮಾರನ [23] ಮೃತದೇಹ ಜಲಪಾತದ ಸಮೀಪದಲ್ಲಿಯೆ ಪತ್ತೆಯಾಗಿದೆ. ಶರತ್ ಹಾಗೂ ಸ್ನೇಹಿತ ಗುರುರಾಜ ಜೊತೆಗೂಡಿ ಜು.23ರ ಭಾನುವಾರದಂದು ಭದ್ರಾವತಿಯಿಂದ ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತ ನೋಡಲು ತೆರಳಿದ್ದರು. ಮಧ್ಯಾಹ್ನ 3-30ರ ಹೊತ್ತಿಗೆ ಜಲಪಾತ ಬಳಿ ವೀಡೀಯೋ ಮಾಡಲು ಹೇಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಕಾಲು ಜಾರಿ ಬಿದ್ದಿದ್ದರು ನೀರಿನ ಸೆಳತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಕಾಲು ಜಾರಿ […]
ಜೆಸಿಐ ಕುಂದಾಪುರ ಸಿಟಿಯಾ ಆಶ್ರಯದಲ್ಲಿ ಕೃಷಿ ಹಾಗು ಹೈನುಗಾರಿಕೆ ಯಲ್ಲಿ ಸಾಧನೆ ಮಾಡಿದ ಸಾದು ಎಸ್ ಬಿಲ್ಲವ ಇವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ನೆಲೆಯಲ್ಲಿ ಕುಂದಾಪುರದ ಸಹನಾ ಕನ್ವೆನ್ಷನ್ ಸಭಾಂಗಣ ದಲ್ಲಿ ಸನ್ಮಾನಿಸಲಾಯಿತು ಸಭೆಯ ಅಧ್ಯಕ್ಷ ತೆ ಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ವಹಿಸಿದರು ಸಮಾರಂಭ ದಲ್ಲಿ ವಲಯ 15 ರ ಪೂರ್ವ ವಲಯಾಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ತ ವಲಯ ಉಪಾಧ್ಯಕ್ಷ ಅಭಿಲಾಶ್ ಬಿ ಏ ಜೇಸಿ ಐ ಶಂಕರನಾರಾಯಣ […]
ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಪ್ರಿಯಾಂಕ ಖರ್ಗೆ ಅವರ ಹೇಳಿಕೆಯನ್ನು ಗುರಿಯಾಗಿರಿಸಿಕೊಂಡು ಕಿಡಿಗೇಡಿಗಳು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಎಂಬ ಹೆಸರನ್ನು ಬಳಸಿ ಖರ್ಗೆಯವರ ವರ್ಚಸ್ಸನ್ನು ಕುಗ್ಗಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹರಿಯ ಬಿಟ್ಟಿರುತ್ತಾರೆ ˌಈ ಹೇಳಿಕೆಗಳಿಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೂ ಯಾವುದೇ ಸಂಬಂಧವಿಲ್ಲ ˌ ಈ ಹಿನ್ನೆಲೆಯಲ್ಲಿ ಮಾನ್ಯ ಸಚಿವರ ವರ್ಚಸ್ಸಿಗೆ ಧಕ್ಕೆ ತರಲು ಸುಳ್ಳು ಹೇಳಿಕೆ ನೀಡಿ ಜಾಲತಾಣದಲ್ಲಿ ಹರಿಯಬಿಟ್ಟ ಕಿಡಿಗೇಡಿಗಳನ್ನು […]