ಕುಂದಾಪುರ: ಕುಂದಾಪುರದ ತೆಕ್ಕಟ್ಟೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಕೆಡವಿದ್ದಾರೆ. ಬಸವ ವಸತಿ ಯೋಜನೆಯಲ್ಲಿ ಮಂಜೂರಾಗಿದ್ದ ಮನೆಯ ಅನುದಾನ ಬಿಡುಗಡೆಗೆ ಲಂಚದ ಬೇಡಿಕೆ ಇಟ್ಟ ಆರೋಪಿ ಪಿಡಿಓ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ. ಬೇಳೂರು ಗ್ರಾಮ ಪಂಚಾಯಿತಿ ಪಿ ಡಿ ಓ ಜಯಂತ್ ಎಂಬತ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಆರೋಪಿ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗೆಬೆಟ್ಟು […]
ಹಂಗಾರಕಟ್ಟೆ : ಯಕ್ಷಗಾನ ಕವಿ ಪ್ರಸಂಗಕರ್ತ ಶಿರೂರು ಫಣಿಯಪ್ಪಯ್ಯ ಅವರ ಪ್ರಸಂಗ ಪುಸ್ತಕ ಸಂಪುಟ ಬಿಡುಗಡೆ ಕಾರ್ಯಕ್ರಮ 09 12 2023 ಶನಿವಾರ ಸಂಜೆ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ನಡೆಯಿತು. ಶಿರೂರು ಫಣಿಯಪ್ಪಯ್ಯ ವಿರಚಿತ ಜನಪ್ರಿಯ ಪ್ರಸಂಗ ಶ್ರೀ ಕೃಷ್ಣಗಾರುಡಿ, ಮಹೇಂದ್ರ ವಿಜಯ, ಮುನ್ನೂರು ವರ್ಷಗಳ ಹಿಂದಿನ ಹಟ್ಟಿಯಂಗಡಿ ರಾಮ ಭಟ್ ವಿರಚಿತ ಬಿಲ್ಲಹಬ್ಬ ಮತ್ತು ಕಂಸವಧೆ, ರತ್ನಪುರದ ರಾಮ ಕವಿಯ ಮೂಲಕಾಸುರ ಕಾಳಗ ಪ್ರಸಂಗಗಳನ್ನು ಒಳಗೊಂಡ ಫಣಿಗಿರಿ ಯಕ್ಷಸಂಪುಟ ಹಾಗೂ ಕ ಪು ಸೀತಾರಾಮ ಕೆದಿಲಾಯ […]
ಉಡುಪಿ, ಡಿ.3: ಉಡುಪಿಯ ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಮಾಣಿಕ್ಯ ಮಹೋತ್ಸವದ ಪ್ರಯುಕ್ತ ಆಯೋಜಿಸಲಾದ “ಸೇಂಟ್ ಮೇರಿಸ್ ರೂಬಿ ರನ್ 2023” ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಅಪಾರ ಭಾಗವಹಿಸುವಿಕೆಗೆ ಪಾತ್ರವಾಯಿತು. ರೂಬಿ ರನ್ ಮ್ಯಾರಥಾನ್ ಕಾರ್ಯಕ್ರಮವು ಡಿಸೆಂಬರ್ 3 ರಂದು ಭಾನುವಾರ ನಡೆಯಿತು. ಕಿರಿಯರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಬಹಳಷ್ಟು ಮಂದಿ ಕ್ರೀಡಾ ಸ್ಪೂರ್ತಿಯೊಂದಿಗೆ ಮ್ಯಾರಥಾನ್‌ನಲ್ಲಿ ಪಾಲ್ಗೊಂಡರು. ಮ್ಯಾರಥಾನ್ ಮುಗಿದ ಮೇಲೆ ಬಹುಮಾನ ವಿತರಣಾ ಸಮಾರಂಭ ನಡೆಯಿತು. ವಿಜೇತರಿಗೆ ಗಣ್ಯರು ನಗದು ಬಹುಮಾನ, ಸ್ಮರಣಿಕೆ, […]
ಕುಂದಾಪುರ ತಾಲೂಕು ಸೇನಾಪುರ ಗ್ರಾಮದ ಗುಡ್ಡಾಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅನುವಂಶಿಕ ಆಡಳಿತ ಮೊಕ್ತೇಸರರನ್ನಾಗಿ ಹಿರಿಯ ಕ್ರೃಷಿಕೋದ್ಯಮಿ ಅರುಣಕುಮಾರ್ ಶೆಟ್ಟಿಯವರನ್ನು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಘೋಷಿಸಿ ಆದೇಶಿಸಿದೆ. ಇವರು ಕಳೆದ ಐದು ದಶಕಗಳಿಂದ ಈ ದೇವಾಲಯದ ಆಡಳಿತ ವ್ಯವಸ್ಥೆ ನೋಡಿಕೊಂಡು ಬರುತ್ತಿದ್ದರು.
ಉಡುಪಿಯ ಕಟಪಾಡಿಯಲ್ಲಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಇತ್ತೀಚೆಗೆ ಆಯೋಜಿಸಿದ “ಚಿಗುರು ” ಕಾರ್ಯಕ್ರಮದಲ್ಲಿ ಕುಂದಾಪುರ ಸಾಧನಾ ಕಲಾ ಸಂಗಮದ ಕೊಳಲು ವಿದ್ಯಾರ್ಥಿಗಳಾದ ಕುಮಾರಿ ದಕ್ಷಾ ಸುನೀತಾ, .ಆದಿತ್ಯ ಆಚಾರ್ಯ,ಆದಿತ್ಯ ಬಿಲ್ಲವ,ಮತ್ತು ಹರಿಪ್ರಸಾದ್ ಇವರು ತಮ್ಮ ಕೊಳಲು ವಾದನವನ್ನು ಪ್ರಸ್ತುತ ಪಡಿಸಿದರು. ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ಯ 24ನೇ ವರ್ಷಾಚರಣೆ ಅಂಗವಾಗಿ ಆದಿತ್ಯವಾರ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ರಂಗಮಂದಿರದಲ್ಲಿ ವಾಯ್ಸ್ ಆಫ್ ಆರಾಧನಾ ತಂಡದ ಬಹುಮುಖ ಪ್ರತಿಭೆಗಳ ಅಂತರ್ ಜಿಲ್ಲಾ ಮಟ್ಟದ ಮಕ್ಕಳ ಸಾಂಸ್ಕøತಿಕ ಸಮ್ಮೇಳನ ಅತ್ಯಂತ ಅದ್ದೂರಿಯಾಗಿ ಜರಗಿತು.ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರು ಅಧ್ಯಕ್ಷತೆ ವಹಿಸಿದ್ದರು.ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ […]
“ಸಂಸ್ಥೆಯ ಬೆಳವಣಿಗೆಯು ಶ್ರೇಷ್ಠತೆಯ ಲಕ್ಷಣವಾಗಿದೆ. ಎಸ್.ಸಿ.ಎಸ್ ಕಾಲೇಜ್ ಮತ್ತು ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ಉನ್ನತ ಸಂಸ್ಥೆಗಳು ಸೂಚಿಸಿದ ಶಿಕ್ಷಣದ ಗುಣಮಟ್ಟಕ್ಕೆ ಬದ್ಧವಾಗಿದೆ. ಸಂಸ್ಥೆಯ 30ನೇ ಮೈಲಿಗಲ್ಲಿನ ಸಂಭ್ರಮಾಚರಣೆಯನ್ನು ವೀಕ್ಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ (ಪ್ರೊ.) ಯು.ಟಿ.ಇಫ್ತಿಕರ್ ಅಲಿ ಹೇಳಿದರು. ಅವರು 2023 ರ ಡಿಸೆಂಬರ್ 9 ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ […]
ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಆಂಜೆಲೊರ್ ಘಟಕವು ಗಾರ್ಡಿಯನ್ ಏಂಜೆಲ್ ಧರ್ಮಕ್ಷೇತ್ರ, ನಾಗೋರಿ, ಮಂಗಳೂರು ಇದರ ಅಂತರ ಧರ್ಮೀಯ ಸೌಹಾರ್ದ ಆಯೋಗದ ಸಹಯೋಗದೊಂದಿಗೆ 10 ಡಿಸೆಂಬರ್ 2023ರಂದು ಕಪಿತಾನಿಯೋ ಶಾಲಾ ಕ್ರೀಡಾಂಗಣದಲ್ಲಿ ಅಂತರ-ಧರ್ಮೀಯ ಸೌಹಾರ್ದ ಕ್ರೀಡಾಕೂಟವನ್ನು ಏರ್ಪಡಿಸಿತ್ತು. ಸಿಟಿ ಮತ್ತು ಸಿಟಿ ಎಪಿಸ್ಕೊಪಲ್ ವಲಯದ ಪುರುಷರ 13 ವೊಲಿಬಾಲ್ ಮತ್ತು ಮಹಿಳೆಯರ 10 ಥ್ರೋಬಾಲ್ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಕ್ರೀಡಾಕೂಟದ ಅಂಗವಾಗಿ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ ಧರ್ಮಕ್ಷೇತ್ರದ ವ್ಯಕ್ತಿಗಳಾದ ಶ್ರೀ ಪ್ರದೀಪ್ ಡಿಸೋಜಾ, ಹಾಗೂ […]
ಮಂಗಳೂರು: ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳನ್ನು ತಗ್ಗಿಸಲು ಹಸಿರು ಪ್ರಪಂಚವನ್ನು ಸೃಷ್ಟಿಸುವ ಮತ್ತು ಉಜ್ವಲ ಭವಿಷ್ಯವನ್ನು ಖಾತ್ರಿಪಡಿಸುವ ಗುರಿಯೊಂದಿಗೆ, ಬ್ಯಾಂಕ್ ಆಫ್ ಬರೋಡಾದ ವತಿಯಿಂದ ಮಂಗಳೂರಿನ ಸುತ್ತಮುತ್ತಲಿನ ಕಾಲೇಜುಗಳು ಮತ್ತು ಶಾಲೆಗಳಲ್ಲಿ ಹಣ್ಣಿನ ಮರ ನೆಡುವ ಮತ್ತು ಸಂರಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಡಿಜಿಎಂ ಶ್ರೀ ಅಶ್ವಿನಿ ಕುಮಾರ್ ಅವರೊಂದಿಗೆ ಉಪ ಪ್ರಧಾನ ವ್ಯವಸ್ಥಾಪಕರು ಮತ್ತು ಉಪ ವಲಯ ಮುಖ್ಯಸ್ಥರಾದ ಶ್ರೀ ರಮೇಶ ಕಾನಡೆ ಅವರು ಹಣ್ಣಿನ ಮರಗಳನ್ನು ಹಸ್ತಾಂತರಿಸುವ ಮೂಲಕ ಸಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಉಪಕ್ರಮವು ತಾಪಮಾನದ ಉಲ್ಬಣವನ್ನು […]