ಶ್ರೀನಿವಾಸಪುರ : ನಮ್ಮ ದೇಹದ ಪಂಚೇಂದ್ರಿಯಗಳಲ್ಲಿ ಕಣ್ಣುಗಳು ಒಂದು ಅಂಗವಾಗಿದ್ದು, ಕಣ್ಣಿನ ಆರೋಗ್ಯವನ್ನು ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಕೆ.ಮನು ಹೇಳಿದರು.ಪಟ್ಟಣದ ನ್ಯಾಯಾಲಯ ಸಭಾಂಗಣದ ಕಛೇರಿಯಲ್ಲಿ ಮಂಗಳವಾರ ಕಾನೂನು ಸೇವ ಪ್ರಾಧಿಕಾರ ಸಹಯೋಗದೊಂದಿಗೆ ಶ್ರೀನಿವಾಸಪುರ ರೋಟರಿ ಕ್ಲಬ್‍ವತಿಯಿಂದ ನಡೆದ ಕೋಲಾರದ ವಾಸನ್ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಉಚಿತ ಕಣ್ಣಿನ ತಪಾಸಣ ಶಿಬಿರ ಹಾಗು ಯುವದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಾಮಿ ವಿವೇಕಾನಂದರು ನಡೆದ ದಾರಿಯು ಒಳ್ಳೇಯ ದಾರಿಯಾಗಿದ್ದು, ಇಂದಿನ ಪೀಳಿಗೆಯು ಸ್ವಾಮಿ […]
ನಂದಳಿಕೆಃಕಾರ್ಕಳ ತಾಲೂಕಿನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ನಂದಳಿಕೆ ಚಾವಡಿ ಅರಮನೆ ಸುಂದರರಾಮ ಹೆಗ್ಡೆ ಯವರ ಶುಭ ಆಶೀರ್ವಾದದೊಂದಿಗೆ ಬೆಲ್ಮಣ್ಣು ಪುರುಷೋತ್ತಮ ಸ್ವಾಮಿಯವರ ನೇತೃತ್ವದಲ್ಲಿ ಬರುವ ದಿನಾಂಕ ಜನವರಿ 13ರ ಶನಿವಾರದಂದು ಬೆಳಿಗ್ಗೆ 5:30 ರಿಂದ ಇರುಮುಡಿ . ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಅಯ್ಯಪ್ಪ ದೇವರ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿರುವುದು.ಈ ದೇವತಾ ಕಾರ್ಯದಲ್ಲಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸುವ ಅಯ್ಯಪ್ಪ ಭಕ್ತವೃಂದ ನಂದಳಿಕೆ.
ಕುಂದಾಪುರ : ” ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರ ಸೀಮಿತ ಎಂಬಂತೆ ಬದುಕನ್ನು ಕಟ್ಟಿ ಕೊಳ್ಳುತ್ತಿದ್ದ ಕ್ಲಿಷ್ಟಕರ ಕಾಲದಲ್ಲಿ ಸಮಾನ ಮನಸ್ಕರ ಮಿಲನದಿಂದ ಸಮಾಜದಲ್ಲಿ ವಿದ್ಯಾಜ್ಯೋತಿಯನ್ನು ಬೆಳಗಿದ ಶ್ರೇಯಸ್ಸು ವಿದ್ಯಾರಂಗ ಮಿತ್ರ ಮಂಡಳಿಗೆ ಸಲ್ಲುತ್ತದೆ ಎಂದು ಬೈಂದೂರು ಪಟ್ಟಣ ಪುರಸಭೆಯ ಮುಖ್ಯಾಧಿಕಾರಿ ಸೂರ್ಯ ಕಾಂತ ಖಾರ್ವಿ ಹೇಳಿದರು ಅವರು ಕುಂದಾಪುರ ಖಾರ್ವಿ ಕೇರಿಯ ವಿದ್ಯಾರಂಗ ಹಾಗೂ ವಿದ್ಯಾನಿಧಿ ಯೋಜನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಶುಭಾ ಶಂಸನೆ ನುಡಿಗಳನ್ನಾಡಿದರು. ಸಮಾರಂಭ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ದಾಮೋದರ ಖಾರ್ವಿಯವರು ಸ್ವಾಗತಿಸಿದರು […]
ಕುಂದಾಪುರ : ಕುಂದಪ್ರಭ ಆಶ್ರಯದಲ್ಲಿ ಪ್ರದಾನ ಮಾಡಲಾಗುವ ಕೋ.ಮ.ಕಾರಂತ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 7 ರಂದು ಭಾನುವಾರ ಸಂಜೆ 4 ಗಂಟೆಗೆ ಕುಂದಾಪುರ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಜರುಗಲಿದೆ.ಖ್ಯಾತ ವಿದ್ವಾಂಸ, ರಂಗ ನಿರ್ದೇಶಕ, ನಟ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಕರ್ನಾಟಕ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ, ಕೋಟ ಶ್ರೀನಿವಾಸ ಪೂಜಾರಿ ಸಮಾರಂಭ ಉದ್ಘಾಟಿಸಲಿದ್ದಾರೆ. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಪ್ರಶಸ್ತಿ […]
ಮಲ್ಪೆ-ವೀರಮಾರುತಿ ಫ್ರೆಂಡ್ಸ್ ತೆಂಕನಿಡಿಯೂರು ಇವರ ಆಶ್ರಯದಲ್ಲಿ ತೆಂಕನಿಡಿಯೂರು ಹೈಸ್ಕೂಲ್ ಮೈದಾನದಲ್ಲಿ ಮಲ್ಪೆ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ-2023 ಜರುಗಿತು. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮತ್ತು ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ “ಸೋಲು ಗೆಲುವಿಗಿಂತ ಕ್ರೀಡಾಸ್ಪೂರ್ತಿ ಬಹುಮುಖ್ಯ“ ಯುವಕರು ಕ್ರೀಡಾಸ್ಪೂರ್ತಿಯಿಂದ ಆಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.ಈ ಹಿಂದೆ ಮಲ್ಪೆ ಪರಿಸರದ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು […]
ಮಂಗಳೂರು: ಮಿಲಾಗ್ರೆಸ್ ಸಮೀಪದ ಆರಾಧ್ಯ ಮಠದಲ್ಲಿ ನೆಲೆಸಿರುವ ಬಡ ಕ್ಲಾರೆಸ್ ನ ಸಹೋದರಿಯರು ತಮ್ಮ ಇಬ್ಬರು ಸಹೋದರಿಯರಾದ ಶ್ರೀ ಮೇರಿ ಮತ್ತು ಸೀನಿಯರ್ ಫಿಲೋಮಿನಾ ಅವರು ಪಟ್ಟಾಭಿಷೇಕಗೊಂಡಿರುವುದನ್ನು ನೋಡಿ ಸಂತೋಷಪಟ್ಟರು ಮತ್ತು ಶ್ರೀ ಮೇರಿ ಫ್ರಾನ್ಸಿನಾ ಅವರು 3 ಜನವರಿ 2024 ರಂದು ಮೊದಲ ವೃತ್ತಿಯನ್ನು ಪಡೆದರು. ಮಂಗಳೂರಿನ ಬಿಷಪ್ ಗೌರವಾನ್ವಿತ ರೆವ್ ಡಾ ಅಲೋಶಿಯಸ್ ಪೌಲ್ ಡಿಸೋಜಯಸ್. ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಸೇಂಟ್ ಆನ್ಸ್ ಫ್ರೈರಿಯ ರೆವ್ ಫಾದರ್ ರಾಕಿ ಡಿ’ಕುನ್ಹಾ ಅವರು ಸಭೆಗೆ ಧನ್ಯವಾದಗಳನ್ನು […]
ಮಂಗಳೂರು: ಬಂದರು, ವಿಮಾನಯಾನ, ರೈಲ್ವೇ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರಿದಿದ್ದು, ಈ ರೀತಿಯಾಗಿ ಸಮಗ್ರ ಅಭಿವೃದ್ಧಿ ಕಂಡ ನಗರ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಭಿನ್ನತೆಯಿಂದ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.ನಗರದ ಓಷಿಯನ್ ಪರ್ಲ್ ಹೊಟೇಲ್ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ […]
ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಆಕಸ್ಮಿಕವಾಗಿ ಓರ್ವ ಸ್ಕೂಟರ್ ಸಮೇತನಾಗಿ ದಕ್ಕೆ ಬಳಿಯ ನೀರಿಗೆ ಬಿದ್ದು ಮುಳುಗಡೆಗೊಂಡು ಕಣ್ಮರೆಯಾಗಿದ್ದಾರೆ. ಆತ ತಮಿಳುನಾಡು ಮೂಲದ ಮೀನುಗಾರನಾಗಿದ್ದು ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ. ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಈಶ್ವರ್ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಗಲಿಲ್ಲ. ಅದರೆ ಅತನ ಸ್ಕೂಟರ್‌ನ್ನು ಮಾತ್ರ ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆ ತಂದಿದ್ದಾರೆ.
ಕೋಟ-ಯುವ ಕ್ರಿಕೆಟಿಗ,ಕ್ರೀಡಾ ಸಂಘಟಕ ನಿತೇಶ್ ಶೆಟ್ಟಿ ಇವರ ಸಾರಥ್ಯದಲ್ಲಿ ರಾಷ್ಟ್ರೀಯ ಮಟ್ಟದ ಅದ್ಧೂರಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಪಾಂಚಜನ್ಯ ಟ್ರೋಫಿ-2023 ಇತ್ತೀಚಿಗೆ ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಜರುಗಿತು. ಕುಂದಾಪುರ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡಾಪಟುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕಿನಲ್ಲಿ ಎಂತಹ ಪರಿಸ್ಥಿತಿಯಲ್ಲೂ […]