ಕುಂದಾಪುರದಲ್ಲಿ ಪಾದ ತೊಳೆಯುವ ದಿನ – “ಯೇಸು ಕ್ರಿಸ್ತರರು ಸಣ್ಣವರಾಗಿ ಗುಲಾಮರಂತೆ ಪಾದ ತೊಳೆದರು” – ಫಾ. ಪಾವ್ಲ್ ರೇಗೊ

ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ – ಹವಾಮಾನ ಇಲಾಖೆ ಎಚ್ಚರಿಕೆ

ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಗಣಪತಿ ಹಾಗೂ ಆಂಜನೇಯ ದೇವಾಲಯಗಳ ಪ್ರತಿಷ್ಠಾಪನಾ ಕಾರ್ಯಕ್ರಮ

ಸ್ಪೂರ್ತಿದಾಯಕ ಗ್ರ್ಯಾಂಡ್ ಫಿನಾಲೆ ಸಂದೇಶ ಬೇಸಿಗೆ ಶಿಬಿರ 2025 ರ ಸಮಾರೋಪ/ Inspiring Grand Finale Marks Conclusion of Sandesha Summer Camp 2025

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದಲ್ಲಿ ವಾರ್ಷಿಕೋತ್ಸವ -2025 ರ ಆಚರಣೆ

ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಸೀಸನ್ 3 – ದಿನ 9

ಛಾಯ ಸಾಧಕ ಪ್ರಶಸ್ತಿಗೆ ಶ್ರೀನಿವಾಸಪುರದ ವೇಣುಗೋಪಾಲ ರೆಡ್ಡಿ ಭಾಜನ

ಇಲಾಖೆಯ ಎಡವಟ್ಟು ! ಕೋಟೇಶ್ವರ ಪರೀಕ್ಷಾ ಕೇಂದ್ರಕ್ಕಾಗಿ ಸಿ ಇ ಟಿ ಆಕಾಂಕ್ಷಿ ಗಳ ಪರದಾಟ!!

ಯೋಗ ಜೀವನ ಎಲ್ಲರಿಗೂ ಅವಶ್ಯಕ – ಎಂ. ಭೈರೇಗೌಡ

ಶ್ರೀನಿವಾಸಪುರ : ದುಖಃ ದುಮ್ಮಾನಗಳನ್ನು ದೂರವಿಟ್ಟುಕೊಳ್ಳಲು ಹಾಗೂ ಸಂತುಷ್ಟ ಜೀವನಕ್ಕಾಗಿ ಯೋಗ ಜೀವನ ಪ್ರತಿಯೊಬ್ಬರಿಗೂ ಇಂದು ಅತ್ಯವಶ್ಯಕವಾಗಿದೆ ಎಂದು ಸ ನೌ ಸಂ ಅಧ್ಯಕ್ಷ ಎಂ. ಭೈರೇಗೌಡ ಹೇಳಿದ್ದಾರೆ.
ಪಟ್ಟಣದ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಆಯೋಜಿಸಿದ್ದ ಮಾತೃ ಭೋಜನ ಹಾಗೂ ಮಾತಾಪಿತೃಗಳ ಪಾದಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಯಂದಿರು ಮಕ್ಕಳನ್ನು ಭ್ರಾತೃತ್ವದ ಭಾವನೆಯಿಂದ ಬೆಳೆಸಿದರೆ, ಮಕ್ಕಳಲ್ಲಿ ಸಂಸ್ಕಾರ ಬೆಳೆದು, ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.
ಅವರು ಮುಂದುವರೆದು ಮಕ್ಕಳಿಗೆ ಆಟ, ಪಾಠಗಳೊಂದಿಗೆ ದೈನಂದಿನ ದೈಹಿಕ ಶ್ರಮ ಹಾಗೂ ಯೋಗಾಭ್ಯಾಸವನ್ನು ಅಳವಡಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಸಣ್ಣವಯಸ್ಸಿನಿಂದ ಉತ್ತಮ ನಡತೆ ಮತ್ತು ಸಂಸ್ಕಾರ ಕಲಿತರೆ, ಅವರು ಜೀವನದಲ್ಲಿ ಗೌರವಪೂರ್ಣ ಬದುಕು ನಡೆಸಲು ಸಾಧ್ಯವಾಗುತ್ತದೆ. ತಂದೆ-ತಾಯಿಯ ಪಾದಪೂಜೆ ಮಾಡುವ ಸಂಸ್ಕಾರದಿಂದ ಕುಟುಂಬದಲ್ಲಿ ಪ್ರೀತಿ ಮತ್ತು ನೆಮ್ಮದಿ ನೆಲೆಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಅನುರಾಧಾ ಮಾತನಾಡಿ ಜೀವನದ ಆಧುನಿಕ ವೇಗದ ನಡುವೆ ಮಕ್ಕಳಿಗೆ ಮಾತೃಭೋಜನ, ಕೈತುತ್ತಿನ ಮಹತ್ವವನ್ನು ಕಲಿಸುವುದು ಅಗತ್ಯ. ಇಂಥ ಪರಂಪರೆ ತಾಯಿ ನಿರಂತರವಾಗಿ ಪೋಷಿಸಬೇಕು. ಯೋಗ ಶಿಕ್ಷಣ ಸಂಸ್ಥೆ ಸಮಾಜದಲ್ಲಿ ಸಂಸ್ಕೃತಿಯ ಉಳಿವಿಗೆ ಉಚಿತ ಸೇವೆ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಿತಿ ಎನ್.ಜಿ. ವರಲಕ್ಷ್ಮಮ್ಮ ಮಾತನಾಡಿ, ಮಕ್ಕಳು ಮನೆ ಬಿಡುವಾಗ ತಾಯಿ-ತಂದೆಯ ಆಶೀರ್ವಾದ ಪಡೆದು ಹೋಗುವ ಸಂಸ್ಕಾರ ಬೆಳೆಸಬೇಕು. ಕೈತುತ್ತಿನ ಮೂಲಕ ಹೆತ್ತವರ ಮೇಲಿನ ಪ್ರೀತಿ, ಭಾವನೆಗಳು ಮತ್ತಷ್ಟು ಗಾಢವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪೋಷಕರು ಮತ್ತು ಯೋಗ ಮಂಡಳಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.