

ಬಾರಕೂರು ಹೇರಾಡಿಯ ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೇರಾಡಿ ಗುರು ಪೂರ್ಣಿಮಾ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಮಂಜುನಾಥ್ ಉಪಾಧ್ಯ ಚಿತ್ರಪಾಡಿ ರವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ "ಕತ್ತ ಲಾಗಿರುವ ಮನಸಿನನಲ್ಲಿ ಬೆಳಕನ್ನು ತೋರಿಸುವ ಮಾರ್ಗವನ್ನು ತೋರಿಸುವವರು ಗುರು "
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಶ್ರೀಮತಿ ಲಿಖಿತಾ ಕೊಠಾರಿ, ಹೈ ಸ್ಕೂಲ್ ಉಸ್ತುವಾರಿ ಶ್ರೀಮತಿ ಬ್ರಿಜಿತ್ ಗೊನ್ಸಾಲ್ವಿಸ್ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಉಸ್ತುವಾರಿ ಶ್ರೀಮತಿ ಜ್ಯೋತಿ ಶೆಟ್ಟಿ ರವರು ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಶಾಲೆಯ ಸಂಚಾಲಕರಾದ ಶ್ರೀ ರಾಜ ರಾಮ್ ಶೆಟ್ಟಿ ಶುಭ ಹಾರೈಸಿದರು.
ಗುರುವಿನ ಮಹತ್ವ ತಿಳಿಸುವ ಭಜನೆಯನ್ನು ವಿದ್ಯಾರ್ಥಿಗಳಾದ ಶ್ರೇಯ, ಶರಣ್ಯ,ಖುಷಿ,ನವ್ಯಶ್ರೀ,ಸ್ಪರ್ಶ,ತನ್ವಿ, ಸಿಂಚನ ಜೀನ್ವಿತಾ, ತನುಶ್ರೀ, ಧನ್ಯಶ್ರೀ ನಡೆಸಿಕೊಟ್ಟರು.
ವಿದ್ಯಾರ್ಥಿಗಳಾದ ಪ್ರಸ್ತುತಿ, ಧರಿತ್ರಿ, ಶ್ರೀ ಲಕ್ಷ್ಮೀ ಮತ್ತು ಅಧಿತಿ ಪ್ರಾರ್ಥನೆ ಮಾಡಿದರು, ಅನುಷಾ ಸ್ವಾಗತಿಸಿ, ಚೈತ್ರ ಅಥಿತಿ ಗಳ ಪರಿಚಯವಾಚಿಸಿದರು, ಪ್ರತಿಜ್ಞಾ ವಂದಿಸಿದರು, ಖುಷಿ ಕಾರ್ಯಕ್ರಮ ನಿರೂಪಿಸಿದರು.






