ಶ್ರೀನಿವಾಸಪುರ : ತಾಲೂಕಿನ ೨೬ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು , ೨೬ ಬೋರ್ ವೆಲ್ ಬೇಡಿಕೆ ಇದ್ದು, ಆ ಗ್ರಾಮಗಳಲ್ಲಿ ಅತಿ ಶೀಘ್ರವಾಗಿ . ಮತ್ತು ವಾಟರ್ ಬೋರ್ಡ್ ವತಿಯಿಂದ ಬೋರ್ ವೆಲ್ ಕೊರೆಸುವ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಪ್ರದೇಶದಲ್ಲಿ ಪರಿಶೀಲಿಸಿ 56 ಕೊಳವೆ ಬಾವಿ ದುರಸ್ತಿ ಪಡಿಸಬೇಕೆಂದು ಸೂಚಿಸಿದರು
ನೀವು ಹಮ್ಮಿಕೊಂಡಿರುವ ಪ್ರಗತಿ ಕಾರ್ಯಗಳ ಬಗ್ಗೆ ಇದೇ ತಿಂಗಳು ೧೪ ತಾರೀಖಿನ ಒಳಗೆ ಮಾಹಿತಿ ಕೊಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳು ಎಚ್.ಎಸ್.ವೆಂಕಟಲಕ್ಷ್ಮಿ ಸೂಚಿಸಿದರು.
ಪಟ್ಟಣದ ತಹಶೀಲ್ದಾರ್ ಕಛೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕಿನಲ್ಲಿ ಬರ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್ಗಳಲ್ಲಿ ನೀರಿನ ಸಮಸ್ಯೆಯ ಬಗ್ಗೆ ಮಾಹಿತಿ ಲಭಿಸಿದ್ದು, ಆ ೧೦ ವಾರ್ಡ್ಗಳಲ್ಲಿ ರೀ ಬೋರ್ ಮಾಡಿಸಿ ನೀರಿನ ಸಮಸ್ಯೆ ಬಗೆಹರಿದರೆ ಸರಿ ಇಲ್ಲದಿದ್ದಲ್ಲಿ ಬೋರ್ವೆಲ್ ಕೊರಿಸಿ ನೀರಿನ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ಯಾವದಕ್ಕೂ ನನ್ನ ಗಮನಕ್ಕೆ ಇದೇ ತಿಂಗಳ ೧೪ ತಾರೀಖು ಒಳಗೆ ವರಧಿ ಕೊಡುವಂತೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಜಾನುವಾರುಗಳಿಗೆ ಮೇವು ಸಮಸ್ಯೆ ಇಲ್ಲದಂತೆ ಎಚ್ಚರಿಕೆ ವಹಿಸಲು ಪಶು ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಬರ ಪೀಡಿತ ತಾಲ್ಲೂಕುಗಳಿಗೆ ತಾಲ್ಲುಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳ ಸಭೆಯಲ್ಲಿ ತಾಲೂಕಿನ ಬರ ನಿರ್ವಹಣೆಗೆ ಸಂಬAದಿಸಿದ ಮಾಹಿತಿ ಪಡೆದು ಬರ ನಿರ್ವಹಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗು ಪ್ರಗತಿ ಕಾರ್ಯಗಳ ಬಗ್ಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.ಇನ್ನು ತಾಲೂಕಿನ ಸಮಸ್ಯೆಗಳು ಇದ್ದಲ್ಲಿ ನನ್ನ ಗಮನಕ್ಕೆ ತಂದರೆ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ, ತಾ.ಪಂ ಸಿಬ್ಬಂದಿ ಲಕ್ಷ್ಮಿಶ ಕಾಮತ್, ಸಹಾಯಕ ಕಾರ್ಯಪಾಲಕ ಅಭಿಯಂತರರು(ಪಿ.ಆರ್.ಇ.ಡಿ ಕುಡಿಯುವ ನೀರು) ನಾರಾಯಣಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ಬೈರೆಡ್ಡಿ, ಪಶುಸಂಗೋಪನ ಇಲಾಖೆ .ಸಹಾಯಕ ನಿರ್ದೇಶಕರು ಡಾ|| ಎಸ್.ಸುಬಾನ್ , ಪಿಡಬ್ಲುö್ಯಡಿ ಸಹಾಯಕ ನಿರ್ದೇಶಕ ಎನ್.ನಾರಾಯಣಸ್ವಾಮಿ, ತಹಶೀಲ್ದಾರ್ ಕಛೇರಿ ಸಿಬ್ಬಂದಿ ಕೆ. ಶಿಲ್ಪ ಇದ್ದರು.