

ಉಡುಪಿ: ಪತ್ನಿ ಮೃತಪಟ್ಟ ಮರುದಿನವೇ ಅವರ ಪತಿ ಕೂಡ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಉಡುಪಿ ತಾಲೂಕಿನ ಉದ್ಯಾವರದಲ್ಲಿ ಸಂಭವಿಸಿದ್ದು. ಉದ್ಯಾವರ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಲಾರೆನ್ಸ್ ಡೆಸಾ ಹಾಗೂ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಮೃತಪಟ್ಟ ದಂಪತಿ.
ಲಾರೆನ್ಸ್ ಡೆಸಾ ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಗುರುವಾರ ಅನಾರೋಗ್ಯದಿಂದ ಮನೆಯಲ್ಲೇ ಮೃತಪಟ್ಟಿದ್ದರು. ಅದರ ಬೆನ್ನಲ್ಲೆ ಪತಿ ಲಾರೆನ್ಸ್ ಡೆಸಾ ಕೂಡ ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಲಾರೆನ್ಸ್ ಡೆಸಾ ಅವರು ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯರಾಗಿದ್ದು ಸ್ಥಳೀಯ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದರು. ಉದ್ಯಮಿಯಾಗಿದ್ದ ಅವರು ಸ್ಥಳೀಯ ಲಯನ್ಸ್ ಹಾಗೂ ಇನ್ನಿತರ ಸಂಘಟನೆಗಳಲ್ಲಿ ಸಕ್ರೀಯ ಪದಾಧಿಕಾರಿಯಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು.
ಪತ್ನಿ ಶಿಕ್ಷಿಕಿ ಜುಲಿಯಾನಾ ಡೆಸಾ ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಸಹಿತಾ ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಇಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಕ್ರೀಡೆಯಲ್ಲಿಯೂ ಹಲವು ಪದಕಗಳನ್ನು ಜಯಿಸಿದ್ದರು.
ಲೊರೆನ್ಸ್ ಡೆಸಾ ಮತ್ತು ಜೂಲಿಯಾನ ಡೆಸಾ ದಂಪತಿಗಳ ಅಂತೀಮ ಕ್ರಿಯೆ ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚಿನಲ್ಲಿ ಡಿಸೆಂಬರ 2 ಸೋಮವಾರ ಸಂಜೆ 4 ಗಂಟೆಗೆ ಉಡುಪಿ ಧರ್ಮಥ್ಯಕ್ಷರ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಪೂಜಾ ವಿಧಿ ವಿಧಾನಗಳು ಆರಂಭಗಳ್ಳುವುದು. ಅದಕ್ಕೂ ಮುನ್ನಾ, ಮಧ್ಯಾಹ್ನ ಗಂಟೆ 2:15 ರಿಂದ ಸಂಜೆ ಗಂಟಿ 3.45 ವರೆಗೆ ಉದ್ಯಾವರ ಚರ್ಚ್ ವಠಾರದಲ್ಲಿ ಸಾರ್ವಜನಿಶರಿಗೆ ವೀಕ್ಷಣೆಗೆ
ಅವಕಾಶ ಇರುವುದಾಗಿ ಸಂಭಂಧಿಕರು ತಿಳಿಸಿದ್ದಾರೆ.