

ಕುಂದಾಪುರ: “ಕುಂದಪ್ರಭ” ಸಂಸ್ಥೆಯ ವತಿಯಿಂದ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ “ಸಾಧಕರ ಕಥೆ” ಸ್ಪರ್ಧೆ ಏರ್ಪಡಿಸಲಾಗಿದೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಕೇಳಿರುವ, ಓದಿರುವ, ಸಾಧಕರ ವಿಷಯಗಳನ್ನು ಉತ್ತಮವಾಗಿ ಕಥಾ ರೂಪದಲ್ಲಿ ನಿರೂಪಿಸುವ ಯುವ ಬರಹಗಾರರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಕಥೆ ನಾಲ್ಕು ಪುಟ ಮೀರದಂತೆ ಟೈಪ್ ಮಾಡಿ ಕಳುಹಿಸಬೇಕು. ಇಮೈಲ್ ಸಹ ಮಾಡಬಹುದು. kundaprabha@gmail.com , 15-12-2023ರೊಳಗೆ ತಲುಪುವಂತೆ “ಕುಂದಪ್ರಭ” ಕಥಾ ಸ್ಪರ್ಧೆ, ನಾರಾಯಣಗುರು ಕಾಂಪ್ಲೆಕ್ಸ್, ಈಸ್ಟ್ ಬ್ಲಾಕ್ ರಸ್ತೆ, ಕುಂದಾಪುರ-576201 ಈ ವಿಳಾಸಕ್ಕೆ ಕಳುಹಿಸಬೇಕು’ ಎಂದು ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.
ವಿಜೇತರಿಗೆ 7-01-2024 ರಂದು ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ತಿಳಿಸಿದ್ದಾರೆ.