ಸಮಾಜ ಸೇವಕ ಧರ್ಮ ಸಹಿಷ್ಣುತೆಯ ಆದರ್ಶ ಪ್ರಿಯ”ಹರಿಕ್ರೃಪಾ – ಗಣೇಶ ಕಿಣಿ” (63) ನಿಧನ

ಕುಂದಾಪುರದ ಚರ್ಚ್ (ಸಮೀಪದ) ರಸ್ತೆ ನಿವಾಸಿ,ಹರಿಕ್ರೃಪಾ ಏಜೆನ್ಸೀಸ್ ಮಾಲಕ,ಸಮಾಜ ಸೇವಕ ಗಣೇಶ್ ಕಿಣಿ (63) ನ.15ರಂದು ಮಂಗಳವಾರ ಹ್ರೃದಯಾಘಾತದಿಂದ ನಿಧನರಾದರು.
ತಮ್ಮ ನಡೆ ನುಡಿ,ಸೇವಾ ಗುಣಗಳಿಂದ ಜನಸಾಮಾನ್ಯರಿಂದ ಉತ್ತಮ ಗೌರವ ಪಡೆಯುತ್ತಿದ್ದ ಇವರು,ತಮ್ಮ ಹರಿಕ್ರಪಾ ಏಜೆನ್ಸೀಸ್ ಮೂಲಕ ಕ್ರೃಷ್ಣ ತುಪ್ಪ ಸೇರಿದಂತೆ ಪ್ರಸಿದ್ದ ಕಂಪೆನಿಗಳ ಸಿದ್ಧ ಆಹಾರ ವಸ್ತುಗಳ ವಿತರಣೆ ನಡೆಸುತ್ತಿದ್ದರು.ವ್ಯಾಪಾರಿ ವಲಯದಲ್ಲಿ ಜನಾನುರಾಗಿಯಾಗಿದ್ದರು.
ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರ ಅನನ್ಯ ಭಕ್ತರಾದ ಇವರು ಪ್ರತೀದಿನ ಪ್ರಾತಃಕಾಲ ದ ಪೂಜೆ ಆಗುವ ಮುನ್ನ ಉಪಸ್ಥಿತರಿದ್ದು,ಪೂಜೆಯ ನಂತರ ತನ್ನ ವ್ಯವಹಾರ,ಸೇವಾ ಕಾರ್ಯಗಳಿಗೆ ತೆರಳುತ್ತಿದ್ದರು.ದೇವಾಲಯದ ಎಲ್ಲಾ ಕಾರ್ಯಗಳಲ್ಲೂ ಸ್ವಯಂಸೇವಕರಾಗಿ ಶ್ರಮಿಸುತ್ತಿದ್ದರು. ಸಮಾಜದ ಯಾವುದೇ ಸಮಾರಂಭಗಳಿಗೆ ಆಹ್ವಾನವಿದ್ದಲ್ಲಿ ಕ್ರೀಯಾಶೀಲರಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದರು.

ತಮ್ಮ ಸಮಾಜದ ಅಲ್ಲದೆ ಇತರ ಸಮಾಜದ ಬಗ್ಗೆ ಕಳಕಳಿ, ಗೌರವ ಇದ್ದ ಅವರು ಕುಂದಾಪುರ ರೋಜರಿ ಚರ್ಚ್ ಬಗ್ಗೆ ಅಪಾರ ಅಭಿಮಾನ ಭಕ್ತಿ ಗೌರವ ಇಟ್ಟುಕೊಂಡಿದ್ದರು, ಸಂತ ಜೋಸೆಫ್ ಅನಾಥಶ್ರಮಕ್ಕೆ ಅವರು ಯಾವಾಗಲೂ ಆಹಾರ ನೀಡುವಿಕೆಯಿಂದ ಅವರು ಮನ್ನಣೆ ಗಳಿಸಿಕೊಂಡಿದ್ದರು, ಧರ್ಮ ಸಹಿಷ್ಣುತೆಯ ಆದರ್ಶ ಪ್ರಿಯ ವ್ಯಕ್ತಿಯಾಗಿದ್ದರು”

ಇವರಿಂದ ಸ್ವಲ್ಪ ಕಾಲದ ಹಿಂದೆ ಅವರ ಪತ್ನಿ ಇವರನ್ನು ಅಗಲಿದ್ದರು. ಪ್ರಸ್ತೂತ ಇವರು ಇವರು ಪುತ್ರಿ ಮೇಘನಾ ಹಾಗೂ ಅಪಾರ ಕುಟುಂಬವನ್ನು ಅಗಲಿದ್ದಾರೆ.
ಅಂತ್ಯಕ್ರೀಯೆ ನ.16ರಂದು ಬುಧವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ