

ಹಿರಿಯ ಉದ್ಯಮಿ ಕೇಶವ ಪ್ರಭು ನಿಧನ ಕುಂದಾಪುರದ ಹಿರಿಯ ಉದ್ಯಮಿ, ಕುಂದಾಪುರ ವರ್ತಕರ ಸಂಘದ ಮಾಜಿ ಅಧ್ಯಕ್ಷ, ಕೆ. ಕೇಶವ ಪ್ರಭು(86) ಡಿ.7 ರಂದು ಶನಿವಾರ ರಾತ್ರಿ ನಿಧನರಾದರು. ಕುಂಭಾಸಿ ದಿ.ವೆಂಕಟರಮಣ ಪ್ರಭು ಮನೆತನದ ಹಿರಿಯರಾದ ಇವರು ಕುಂದಾಪುರದಲ್ಲಿ ಮೆ. ವೆಂಕಟರಮಣ ಪ್ರಭು ಸಂಸ್ಥೆ ಮೂಲಕ ಹಲವು ದಶಕಗಳಿಂದ ವ್ಯವಹಾರೋದ್ಯಮ ನಡೆಸುತ್ತಿದ್ದರು. ಇವರು ಧಾರ್ಮಿಕ, ಸಾಮಾಜಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷರಾಗಿ ಎರಡು ದಶಕ ಸೇವೆ ಸಲ್ಲಿಸಿದ್ದರು.ಕುಂದಾಪುರ ಎಜ್ಯುಕೇಶನ್ ಸೊಸೈಟಿ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದರು .ಇವರು ಪತ್ನಿ ,ಓರ್ವ ಪುತ್ರ , ಪುತ್ರಿಯನ್ನು ಅಗಲಿದ್ದಾರೆ . ಇವರು ನಾಲ್ವರು ಸಹೋದರರು,ನಾಲ್ವರು ಸಹೋದರಿಯರ ದೊಡ್ಡ ಕುಟುಂಬದ ಮಾರ್ಗದರ್ಶಕರಾಗಿದ್ದರು. ಮ್ರೃತರ ಅಂತ್ಯಕ್ರಿಯೆ ಡಿ. .9ರಂದು ಸೋಮವಾರ ಬೆಳಿಗ್ಗೆ 10ಗಂಟೆಗೆ ಕುಂದಾಪುರ ವೆಸ್ಟ್ ಬ್ಲಾಕ್ ರಸ್ತೆಯಲ್ಲಿರುವ ಸ್ವಗ್ರೃಹ “ಮಹಾಲಸಾ ನಾರಾಯಣಿ “ಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ .