ರೂರ್ಕೆಲಾ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ನಿವೃತ್ತ ಎ.ಜಿ.ಎಂ. ಬೆಂಗಳೂರಿನ ಖ್ಯಾತ ಉದ್ಯಮಿ ನೈಲಾಡಿ ದೊಡ್ಡಮನೆ ಮಂಜಯ್ಯ ಶೆಟ್ಟಿ (98) ಡಿ. 14 ರಂದು ನಿಧನರಾದರು.
ಕುಂದಾಪುರದ ನೈಲಾಡಿ ಮನೆಯಲ್ಲಿದ್ದು, ಅಕ್ಕ ದಿ| ನೈಲಾಡಿ ಭವಾನಿ ಶೆಡ್ತಿ, ಭಾವ ಚಿತ್ತೂರು ಮಂಜಯ್ಯ ಶೆಟ್ಟಿಯವರ ಪ್ರೋತ್ಸಾಹದಿಂದ ಉನ್ನತ ವಿದ್ಯಾಭ್ಯಾಸ ಪಡೆದು ಮದ್ರಾಸ್ನ ಅಣ್ಣಾಮಲೈ ಯುನಿವರ್ಸಿಟಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಕುಂದಾಪುರ ತಾಲೂಕಿನ ಬಂಟ್ಸ್ ಸಮಾಜದಲ್ಲಿ ಪ್ರಥಮ ಇಂಜಿನಿಯರ್ ಎಂದು ಸಾಧನೆ ಮಾಡಿದವರು.
ರೂರ್ಕೆಲಾ ಉಕ್ಕಿನ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಎ.ಜಿ.ಎಂ. ಆಗಿ ನಿವೃತ್ತಿ ಪಡೆದು ಬೆಂಗಳೂರಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದರು.
ಬ್ರಹ್ಮಾವರ ಪಡುಬೆಟ್ಟುಬೀಡು ದಿ| ರಾಮಣ್ಣ ಶೆಟ್ಟಿ ಮತ್ತು ನೈಲಾಡಿ ದೊಡ್ಡಮನೆ ಅಕ್ಕಯ್ಯ ಶೆಟ್ಟಿ ಇವರ ಪುತ್ರರಾದ ಜನಾನುರಾಗಿಯಾಗಿದ್ದರು.
ಇವರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.