


ಕುಂದಾಪುರ: ‘ರಾಷ್ಟ್ರದಲ್ಲಿ ಆಗಬೇಕಾದ ಇನ್ನೂ ಹೆಚ್ಚಿನ ಸಾಧನೆಗೆ, ಅಭಿವೃದ್ಧಿಗೆ ಅಗತ್ಯವಿದ್ದಾಗ ಪ್ರತಿಯೊಬ್ಬರೂ ತಮ್ಮಿಂದಾದ ಸೇವೆ, ಕೊಡುಗೆಗಳನ್ನು ನೀಡಬೇಕು. ಆ ಮೂಲಕ ನಾವು ನಿಜವಾದ ಅರ್ಥದಲ್ಲಿ ಒಳ್ಳೆಯ ನಾಗರೀಕರಾಗಬೇಕು’ ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಕರೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ವಹಿಸಿದರು. ಹಿಂದಿ ವಿಭಾಗ ಮುಖ್ಯಸ್ಥೆಯಾದ ಶ್ರೀಮತಿ ಜಯಶೀಲಾ ಪೈಯವರು ವಂದನಾರ್ಪಣೆಗೈದರು.