ಕುಂದಾಪುರ: ಇಲ್ಲಿನ ಮೀನು ಮಾರ್ಕೆಟ್ ರಸ್ತೆಯ ಸಮೀಪದ ನಿವಾಸಿ ದಿ.ಬಾಬಾ ಆಚಾರ್ ಅವರ ಪುತ್ರ ಸುಧಾಕರ್ ಆಚಾರ್ ಅವರು ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು ಕುಂದಾಪುರದಲ್ಲಿ ಮುಖ್ಯ ರಸ್ತೆಯಲ್ಲಿ ಕಾಳಿಕಾಂಬ ಇಂಜಿನಿಯರ್ ವರ್ಕ್ಸ್ ಮಾಲೀಕರಾಗಿರುವ ಅವರು ಬೈಕ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಸಲಕರಣೆ. ಹಾಗೂ ಜನರೇಟರ್ ರಿಪೇರಿಯಲ್ಲಿ ಪರಿಣಿತರಾಗಿದ್ದರು. ಒಂದು ವಾರದ ಹಿಂದೆ ತೀವ್ರ ಅಸ್ವಸ್ಥಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಶೇಷ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡುತ್ತಾ ಇದ್ದು ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸುಧಾಕರ್ ಅವರು ಕುಂದಾಪುರ ನಗರದ ನುರಿತ ಮೆಕ್ಯಾನಿಕ್ ಆಗಿದ್ದು ಅವರಿಗೆ ಅಪಾರ ಗ್ರಾಹಕರಿದ್ದರು. ಅವರು ಅಪಾರ ಜನನ್ನಣೆ ಗಳಿಸಿ ಹೆಸರುವಾಸಿಯಾಗಿದ್ದ ದಿ!ಬಾಬಾಚಾರ್ ಪುತ್ರರಲ್ಲಿ ಓರ್ವರಾಗಿದ್ದು, ತಂದೆಯ ಕಸಬುನ್ನು ಯೋಗ್ಯ ರೀತಿಯಲ್ಲಿ ಮುಂದುವರೆಸಿಕೊಂಡು ಜನಪ್ರಿಯರಾಗಿದ್ದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಸಹೋದರರು, ಸಹೋದರಿಯರು ಬಂಧು ಬಳಗದವರನ್ನು ಮತ್ತು ಅಪಾರ ಮಿತ್ರರನ್ನು ಅಗಲಿದ್ದಾರೆ.