

ಕುಂದಾಪುರದ ಹಿರಿಯ ಸಮಾಜ ಸೇವಕ, ಧಾರ್ಮಿಕ ಮುಖಂಡ, ವ್ಯವಹಾರಸ್ಥ ಸಂಜೀವ ಖಾರ್ವಿ ಮೇಲ್ಕೇರಿ (83) ಡಿ.21ರಂದು ನಿಧನರಾದರು.
ಕುಂದಾಪುರದಲ್ಲಿ ಬೀಡಾ ಅಂಗಡಿ,
ಕೃಷ್ಣ ಕೋಲ್ಡ್ ಡ್ರಿಂಕ್ಸ್ ನಡೆಸುತ್ತಿದ್ದ ಸಂಜೀವ ಖಾರ್ವಿಯವರು ಶ್ರೀ ಶಾಂತಾದುರ್ಗಾ ದೇವಸ್ಥಾನದ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಬೆಂಗಳೂರಿನ ಯಶವಂತಪುರದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಡಿ. 21 ರಂದು ಗುರುವಾರ ನಿಧನರಾದರು.
ಇವರು ಮೂವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.