ನವದೆಹಲಿ; ಕಳೆದ ಒಂದು ವರ್ಷದ ಅವಧಿಯಲ್ಲಿ ಬರೊಬ್ಬರಿ 1,63,000ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆಇದು ಸಂಸತ್ತಿಗೆ ಕೇಂದ್ರ ಸರಕಾರ ತಿಳಿಸಿದೆ.
ಭಾರತೀಯ ಪೌರತ್ವ ತ್ಯಜಿಸಿದವರ ಪೈಕಿ ಅರ್ಧದಷ್ಟು ಮಂದಿ ಅಮೆರಿಕದ ಪ್ರಜೆಗಳಾಗಲು ಇಚ್ಛೆಪಟ್ಟಿದಾರೆ ಎಂದು ತಿಳಿದು ಬಂದಿದೆ. 2021 ರಲ್ಲಿ, 1,63,370 ಭಾರತೀಯರು ತಮ್ಮ ಭಾರತೀಯ ಪಾಸ್‌ಪೋರ್ಟ್‌ಗಳನ್ನು ತ್ಯಜಿಸಿದರು.
ಗೃಹ ಸಚಿವಾಲಯದ ಮಾಹಿತಿ ಪ್ರಕಾರ 2019 ಮತ್ತು 2020 ರಲ್ಲಿ ಕ್ರಮವಾಗಿ 1,44,017 ಮತ್ತು 85,256 ಆಗಿತ್ತು. ಪ್ರಕಾರ 2016ರಲ್ಲಿ 1,44,942 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದರು.
ಈ ಬಗ್ಗೆ 2015ರ ವರೆಗಿನ ಅಂಕಿ ಅಂಶ ಮಾತ್ರ ಲಭ್ಯವಿದ್ದು, ಸಂಸದ ಹಾಜಿ ಫಜ್ಲುರ್ ರೆಹಮಾನ್ ಅವರ ಪ್ರಶ್ನೆಗೆ ಉತ್ತರಿಸಿ, ಸಚಿವ ನಿತ್ಯಾನಂದ ರೈ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.