ಶ್ರೀನಿವಾಸಪುರ : ಬೆಂಗಳೂರಿನ ಸ್ಪೂರ್ತಿ ಕಲಾ ಟ್ರಸ್ಟ್ ವತಿಯಿಂದ ಉದಯಭಾನು ಕಲಾ ಸಂಘದ ಸಭಾಂಗಣದಲ್ಲಿ ಭಾನುವಾರ ಸ್ಪೂರ್ತಿ ಕುಮಾರ ಸೇವ ರತ್ನ ಪ್ರಶಸ್ತಿಯನ್ನ ಪಡೆದ ಶ್ರೀನಿವಾಸಪುರ ತಾಲೂಕಿನ ಆರ್.ಶಿವಕುಮಾರ್ ಗೌಡ , ಕೆ.ಎಲ್.ಕಾರ್ತಿಕ್ ಪಡೆದಿದ್ದು ತಾಲೂಕಿನ ಹೆಗ್ಗಳಿಕೆ ಕಾರಣರಾಗಿದ್ದಾರೆ. ಈ ಸಮಯದಲ್ಲಿ ಸಂಘದ ಸಂಸ್ಥಾಕ ಅಧ್ಯಕ್ಷೆ ಡಿ.ವನಜ, ಮುಖಂಡರಾದ ಎಂ.ಸಿ.ರಾಮಲಿಂಗಯ್ಯ, ಆರ್.ಬಾಲಾಜಿಸಿಂಗ್ ಇದ್ದರು.
HOLY ROSARY CHURCH, KUNDAPUR – 450 th JUBILEE SOUVENIR 2021
ಚೆಸ್ನಲ್ಲಿ ಎಚ್. ಎಮ್. ಎಮ್ ನ ಶ್ರೀನಿತ್ ಗೆ ದ್ವಿತೀಯ ಸ್ಥಾನ
ಕುಂದಾಪುರ (ಡಿ.31): ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ(ರಿ.) ಉಪ್ಪುಂದ ಇದರ ವತಿಯಿಂದ ಬ್ರಹ್ಮಾವರದಲ್ಲಿ ಡಿ.22 ರಂದು ನಡೆದ ಶ್ರೀ ಸಿದ್ಧಿವಿನಾಯಕ ಟ್ರೋಫಿ 2024 ರ ಚೆಸ್ ಪಂದ್ಯಾಟದಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ಎರಡನೇ ತರಗತಿ ವಿದ್ಯಾರ್ಥಿ ಶ್ರೀನಿತ್ ಶೇಟ್ 7ರ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿ 6 ರೌಂಡ್ಸ್ ಗಳಲ್ಲಿ
5 ಪಾಯಿಂಟ್ಸ್ ಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗು ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರರು ಅಭಿನಂದಿಸಿದರು.
ರಾಯಲ್ಪಾಡು ಕ್ರಾಸ್ ಸಮೀಪ ಆಂದ್ರ ಪ್ರದೇಶದ ಖಾಸಗಿ ಸ್ಲೀಪರ್ ಕೋಚ್ ಬಸ್ 40 ಅಡಿ ಆಳದ ಕಂದಕ್ಕೆ ಬಿದ್ದು ಒರ್ವ ಪ್ರಯಾಣಿಕನ ಸಾವು- 39 ಜನರಿಗೆ ಗಾಯ
ಶ್ರೀನಿವಾಸಪುರ : ರಾಯಲ್ಪಾಡು ಕ್ರಾಸ್ ಸಮೀಪ ಭಾನುವಾರ ಮಧ್ಯರಾತ್ರಿ ಸುಮಾರು 12-15 ಗಂಟೆ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ 40 ಅಡಿ ಆಳದ ಕಂದಕ್ಕೆ ಬಿದ್ದು, ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮೃತರಾಗಿದ್ದು ಉಳಿದ 39 ಜನರು ಗಾಯಗಳಾಗಿವೆ .
ಭಾನುವಾರ ರಾತ್ರಿ ಬೆಂಗಳೂರಿನಿಂದ ಆಂದ್ರ ಪ್ರದೇಶದ ಕನಿಗಿರಿ ನಗರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಾಯಲ್ಪಾಡು ಕ್ರಾಸ್ ಬಳಿ 40 ಅಡಿ ಆಲದ ಕಂದಕ್ಕೆ ಬಿದ್ದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಕನಿಗಿರಿ ನಗರದ ಅನಿಲ್ರೆಡ್ಡಿ ( 23 ವರ್ಷ) ಮೃತರಾಗಿದ್ದು, ಅನಿಲ್ರೆಡ್ಡಿ ಇವರು ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ರಾಯಲ್ಪಾಡು ಠಾಣಾವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಡಿಷಿನಲ್ ಎಸ್ಪಿ ರವಿಶಂಕರ್, ಡಿವೈಎಸ್ಪಿ ನಂದಕುಮಾರ್, ಸಿಪಿಐ ಶಿವಕುಮಾರ್, ರಾಯಲ್ಪಾಡು ಪಿಎಸ್ಐ ಯೋಗೇಶ್ ಬೇಟಿ ನೀಡಿ ಘಟನೆಯ ಬಗ್ಗೆ ತನಿಖೆ ನಡೆಸಿದರು.
ಕೆಪಿಎಸ್ಸಿ ಮತ್ತೆ ಯಡವಟ್ಟು-ಪರೀಕ್ಷೆ-5718 ನೋಂದಣಿ-2923 ಮಂದಿ ಗೈರು ಒ ಎಂ ಆರ್ ನಲ್ಲಿ ಮುದ್ರಣ ದೋಷ-2ಕೇಂದ್ರಗಳಲ್ಲಿ 1 ಗಂಟೆ ತಡವಾದ ಪರೀಕ್ಷೆ
ಕೋಲಾರ:- ನಗರದ 14 ಕೇಂದ್ರಗಳಲ್ಲಿ ಭಾನುವಾರ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪೆÇ್ರಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಎರಡು ಕೇಂದ್ರಗಳಲ್ಲಿ ಓಎಂಆರ್ನಲ್ಲಿ ಮುದ್ರಣ ದೋಷದಿಂದಾಗಿ 1 ಗಂಟೆ ತಡವಾಗಿ ಆರಂಭವಾಯಿತಲ್ಲದೇ ಶೇ.50ಕ್ಕಿಂತಲೂ ಹೆಚ್ಚು ಅಂದರೆ 2923 ಮಂದಿ ಗೈರಾಗಿದ್ದರು.
ಪರೀಕ್ಷೆಗೆ ಒಟ್ಟು 5718 ಮಂದಿ ಕುಳಿತಿದ್ದು, ಎಲ್ಲಾ 14 ಕೇಂದ್ರಗಳ ಪೈಕಿ ನಗರದ ಬಾಲಕರ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜು ಕೇಂದ್ರಗಳಲ್ಲಿ ಓಎಂಆರ್ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆಯಲ್ಲೇ ಮುದ್ರಣ ದೋಷವುಂಟಾಗಿ ಪರೀಕ್ಷೆ 1 ಗಂಟೆ ತಡವಾಗಿ ಆರಂಭಗೊಂಡಿತು. ಆದರೆ ನಂತರ ಅಷ್ಟೇ ಸಮಯ ನೀಡಿ ಪರೀಕ್ಷೆ ಬರೆಸಿದ್ದು, ಮತ್ಯಾವುದೇ ಗೊಂದಲ ಕಂಡು ಬರಲಿಲ್ಲ.
ಕೆಪಿಎಸ್ಸಿ ಯಡವಟ್ಟು ಅಭ್ಯರ್ಥಿಗಳ ಆಕ್ರೋಷ
ಓಎಂಆರ್ನಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಬದಲಾಗಿದ್ದು, ಈ ಅವ್ಯವಸ್ಥೆ ಸರಿಪಡಿಸಲು ಪರೀಕ್ಷೆ ಒಂದು ಗಂಟೆ ತಡವಾಗಿದ್ದು, ಕೊನೆಗೆ ಮ್ಯಾನ್ಯುಯಲ್ ಆಗಿಯೇ ಅಭ್ಯರ್ಥಿಗಳಿಂದ ಅವರವರ ನೋಂದಣಿ ಸಂಖ್ಯೆ ಬರೆಸಿ ಪರೀಕ್ಷೆ ನಡೆಸಲಾಯಿತು.
ಕಳೆದ ಬಾರಿಯೂ ಕೆಪಿಎಸ್ಸಿ ಯಡವಟ್ಟಿನಿಂದ ಪರೀಕ್ಷೆ ಮುಂದೂಡಲಾಗಿದ್ದು, ಇದೀಗ ಮತ್ತೆ ಸಮಸ್ಯೆ ಎದುರಾಗಿರುವ ಕುರಿತು ಅಭ್ಯರ್ಥಿಗಳು ಆಕ್ರೋಷ ವ್ಯಕ್ತಪಡಿಸಿದರು.
ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ.ರವಿ, ಎಸ್ಪಿ ನಿಖಿಲ್, ಅಪರ ಜಿಲ್ಲಾಧಿಕಾರಿ ಮಂಗಳಾ, ಎಸಿ ಡಾ.ಮೈತ್ರಿ, ಡಿಡಿಪಿಐ ಕೃಷ್ಣಮೂರ್ತಿ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೇಪರ್-1ಕ್ಕೆ 2905 ಮಂದಿ ಗೈರು
ಪರೀಕ್ಷೆಗೆ ಗೈರಾದವರ ಕುರಿತು ಮಾಹಿತಿ ನೀಡಿರುವ ಪರೀಕ್ಷಾ ನೋಡಲ್ ಅಧಿಕಾರಿ ಶಂಕರೇಗೌಡ, ಬೆಳಗಿನ ಅವಧಿಯಲ್ಲಿ ನಡೆದ ಸಾಮಾನ್ಯ ಜ್ಞಾನ ಪೇಪರ್-1 ರ ಪರೀಕ್ಷೆಗೆ 5718 ಮಂದಿ ನೋಂದಣಿ ಮಾಡಿಸಿದ್ದು, ಅವರಲ್ಲಿ 2813 ಮಂದಿ ಹಾಜರಾಗಿ 2905 ಮಂದಿ ಗೈರಾದರು.
ಮಧ್ಯಾಹ್ನದ ಅವಧಿಯಲ್ಲಿ ನಡೆದ ಪೇಪರ್-2 ಪರೀಕ್ಷೆಗೆ ನೋಂದಾಯಿಸಿದ್ದ 2718 ಮಂದಿ ಪೈಕಿ 2795 ಮಂದಿ ಹಾಜರಾಗಿದ್ದು, 2923 ಮಂದಿ ಗೈರಾದರು. ಶೇ.50ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಗೈರಾಗಿರುವುದು ಆಶ್ಚರ್ಯಕರ ಸಂಗತಿಯಾಗಿತ್ತು.
ಜಿಲ್ಲಾಡಳಿತದಿಂದ ಬಿಗಿ ಬಂದೋಬಸ್ತ್
ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿತ್ತು. ಪೂರ್ಣ ತೋಳಿನ ಶರ್ಟ್, ಶೂ ಹಾಕಿದ್ದರೂ ಪ್ರವೇಶವಿರಲಿಲ್ಲ.
ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿತ್ತು.
14ಕೇಂದ್ರಗಳಲ್ಲಿನ ಹಾಜರಾಗಿ ವಿವರ
ನಗರದ 14 ಕೇಂದ್ರಗಳಲ್ಲಿನ ಹಾಜರಾತಿ ವಿವರ ನೀಡಿರುವ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 558 ಮಂದಿ ನೋಂದಾಯಿಸಿದ್ದು 263 ಮಂದಿ ಹಾಜರಾಗಿ 295 ಮಂದಿ ಗೈರಾಗಿದ್ದರು. ಬಾಲಕರ ಪಿಯು ಕಾಲೇಜು ಕೇಂದ್ರದಲ್ಲಿ 480 ಮಂದಿ ಪೈಕಿ 236 ಮಂದಿ ಹಾಜರಾಗಿ 244ಮಂದಿ ಗೈರಾಗಿದ್ದರು.
ಬಾಲಕಿಯರ ಪದವಿ ಪೂರ್ವ ಕಾಲೇಜುಕೇಂದ್ರದಲ್ಲಿ 288 ಮಂದಿ ನೋಂದಾಯಿಸಿದ್ದು, 148 ಮಂದಿ ಹಾಜರಾಗಿ 140 ಮಂದಿಗೈರಾಗಿದ್ದರು. ಸರ್ಕಾರಿ ಮಹಿಳಾ ಕಾಲೇಜು ಕೇಂದ್ರದಲ್ಲಿ 528 ಮಂದಿ ನೋಂದಾಯಿಸಿದ್ದು, 271 ಮಂದಿ ಹಾಜರಾಗಿ 257 ಮಂದಿ ಗೈರಾಗಿದ್ದರು.
ನೂತನ ಪದವಿ ಪೂರ್ವ ಕಾಲೇಜಿನಲ್ಲಿ 240 ಮಂದಿ ನೋಂದಾಯಿಸಿದ್ದು, 117 ಮಂದಿ ಹಾಜರಾಗಿ 123 ಮಂದಿ ಗೈರಾಗಿದ್ದರೆ ಕಾರಂಜಿಕಟ್ಟೆಯ ಸುಭಾಷ್ ಶಾಲೆಯಲ್ಲಿ 336 ಮಂದಿ ನೋಂದಾಯಿಸಿದ್ದು, 160 ಮಂದಿ ಹಾಜರಾಗಿ 176 ಮಂದಿ ಗೈರಾಗಿದ್ದರು.
ಮೆಥೋಡಿಸ್ಟ್ ಶಾಲೆ ಕೇಂದ್ರದಲ್ಲಿ 264 ಮಂದಿ ಪೈಕಿ 153 ಮಂದಿ ಹಾಜರಾಗಿದ್ದು, 111 ಮಂದಿ ಗೈರಾಗಿದ್ದರೆ, ಅಲಮಿನ್ ಕಾಲೇಜು ಕೇಂದ್ರದಲ್ಲಿ 240 ಮಂದಿ ಪೈಕಿ 129 ಮಂದಿ ಹಾಜರಾಗಿದ್ದು, ಅಲ್ಲಿಯೂ 111 ಮಂದಿ ಗೈರಾಗಿದ್ದರು.
ಎಸ್ಡಿಸಿ ಪದವಿ ಕಾಲೇಜು ಕೇಂದ್ರದಲ್ಲಿ 576 ಮಂದಿ ಪೈಕಿ 304 ಮಂದಿ ಹಾಜರಾಗಿದ್ದು, 272 ಮಂದಿ ಗೈರಾಗಿದ್ದರು. ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ 576 ಮಂದಿ ಪೈಕಿ 277 ಮಂದಿ ಹಾಜರಾಗಿದ್ದು, 299 ಮಂದಿ ಗೈರಾಗಿದ್ದರೆ, ಎಸ್ಡಿಸಿ ಇಂಡಿಪೆಂಡೆಂಟ್ ಕಾಲೇಜಿನಲ್ಲಿ 336 ಮಂದಿ ಪೈಕಿ 163 ಮಂದಿ ಹಾಜರಾಗಿದ್ದು, 173 ಮಂದಿ ಗೈರಾಗಿದ್ದಾರೆ.
ಗೋಕುಲ್ ಕಾಲೇಜಿನಲ್ಲಿ 480 ಮಂದಿ ನೋಂದಾಯಿಸಿದ್ದು, 229 ಮಂದಿ ಹಾಜರಾಗಿ 251 ಮಂದಿ ಗೈರಾಗಿದ್ದರು. ಮದರ್ತೆರೇಸಾ ಶಾಲೆ ಕೇಂದ್ರದಲ್ಲಿ 360 ಮಂದಿನೋಂದಾಯಿಸಿದ್ದು, ಅವರಲ್ಲಿ 167 ಮಂದಿ ಹಾಜರಾಗಿ 193 ಮಂದಿ ಗೈರಾಗಿದ್ದರು.
ಉಳಿದಂತೆ ಮಹಿಳಾ ಸಮಾಜ ಪ್ರೌಢಶಾಲೆ ಕೇಂದ್ರದಲ್ಲಿ 288 ಮಂದಿ ಪೈಕಿ 156 ಮಂದಿ ಹಾಜರಾಗಿದ್ದು, 132 ಮಂದಿ ಗೈರಾಗಿದ್ದಾರೆ. ಮಹಿಳಾ ಸಮಾಜ ಪಿಯು ಕಾಲೇಜು ಕೇಂದ್ರದಲ್ಲಿ 240 ಮಂದಿ ಪೈಕಿ 99 ಮಂದಿ ಹಾಜರಾಗಿ 141 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ ಅವರು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪರೀಕ್ಷೆ ಕಾರ್ಯಗಳಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ವೀಣಾ, ಪರೀಕ್ಷಾ ನೋಡಲ್ ಅಧಿಕಾರಿ ವಿಷಯ ಪರಿವೀಕ್ಷಕ ಶಂಕರೇಗೌಡ, ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತಿ ಕೇಂದ್ರಕ್ಕೆ ವಿಶೇಷವಾಗಿ ನಿಯೋಜನೆ ಮಾಡಲಾಗಿತ್ತು. 4 ಕೇಂದ್ರಗಳಿಗೆ ಒಬ್ಬ ವೀಕ್ಷಕರು. 3 ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿ, ಪ್ರತಿ ಕೇಂದ್ರಕ್ಕೆ ಮುಖ್ಯಅಧೀಕ್ಷಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿತ್ತು.
ಪ್ರಶ್ನೆಪತ್ರಿಕೆಗಳನ್ನು ಖಜಾನೆಯಲ್ಲಿ ಸಂರಕ್ಷಣೆ, ವಿತರಣೆ ಕುರಿತಂತೆ ನಿಗಾವಹಿಸಲು ಅಪರ ಜಿಲ್ಲಾಧಿಕಾರಿ ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿತ್ತು.
ಕೇಂದ್ರಗಳ ಮೇಲ್ವಿಚಾರಕರಾಗಿ ಗಾಯತ್ರಿ, ಶಶಿವಧನ, ರಾಧಮ್ಮ, ನಾಗರಾಜ್ ಸೇರಿದಂತೆ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಪ್ರಾಂಶುಪಾಲರನ್ನು ನೇಮಿಸಲಾಗಿತ್ತು.
ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಷಡಕ್ಷರಿ ಪುನರಾಯ್ಕೆಕೆಜಿಎಫ್ ನೌಕರರ ಸಂಘದ ಪದಾಧಿಕಾರಿಗಳಿಂದ ವಿಜಯೋತ್ಸವ
ಕೋಲಾರ:- ರಾಜ್ಯ ಸರ್ಕಾರಿನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಪುನರಾಯ್ಕೆಯಾದ ಹಿನ್ನಲೆಯಲ್ಲಿ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ ನೇತೃತ್ವದಲ್ಲಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಷಡಕ್ಷರಿ ಅವರು ತಮ್ಮ ಮೊದಲ ಅವಧಿಯಲ್ಲಿ ಮಾಡಿದ ನೌಕರ ಸ್ನೇಹಿ ಕಾರ್ಯಚಟುವಟಿಕೆಗಳೇ ಅವರ ಗೆಲುವಿಗೆ ಕಾರಣವಾಗಿತ್ತು. ಅವರನ್ನು ಸೋಲಿಸಲು ಹಲವಾರು ಮಂದಿ ನಡೆಸಿದ ಷಡ್ಯಂತ್ರವನ್ನೂ ನೌಕರರು ವಿಫಲಗೊಳಿಸಿದರು ಎಂದು ತಿಳಿಸಿದರು.
7ನೇ ವೇತನ ಆಯೋಗ ಜಾರಿ ಜತೆಗೆ ನೌಕರ ಸ್ನೇಹಿಯಾಗಿ ಅವರು ಮಾಡಿದ ಕೆಲಸಗಳು ನೂರಾರು ಇದ್ದು, ಇಂದು ನೌಕರರು ನೆಮ್ಮದಿಯಿಂದ ಕರ್ತವ್ಯ ನಿರ್ವಹಣೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಇದೀಗ ಎನ್ಪಿಎಸ್ ರದ್ದತಿ, ಹಳೆ ಪಿಂಚಣಿ ಜಾರಿ, ಆರೋಗ್ಯ ಸಂಜೀವಿನಿ ಜಾರಿ ಜತೆಗೆ ಕೇಂದ್ರ ಸಮಾನ ವೇತನ ಕೊಡಿಸುವ ಸಂಕಲ್ಪದೊಂದಿಗೆ ಷಡಕ್ಷರಿ ಅವರು ಆಯ್ಕೆಯಾಗಿದ್ದು, ಇದು ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಗೆಲುವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಅನಿಲ್ಕುಮಾರ್, ಖಜಾಂಚಿ ಸತೀಶ್ ಕುಮಾರ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ.ಶ್ರೀನಿವಾಸ್, ಕಾರ್ಯದರ್ಶಿ ರವಿಚಂದ್ರ ನಾಯ್ಡು, ಖಜಾಂಚಿ ಭಾರತಿ, ನೌಕರರ ಸಂಘದ ನಿರ್ದೇಶಕರಾದ ಶ್ರೀಧರ್,ಪ್ರಸನ್ನಕುಮಾರ್,ಆರ್ಮುಗಂ, ವಿಜಯಕುಮಾರ್, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್, ಕಾರ್ಯದರ್ಶಿ ಸುಬ್ರಮಣಿ,ಗೌರವಾಧ್ಯಕ್ಷ ಉಮಾದೇವಿ, ಸುರೇಶ್,ಗಿರೀಶ್,ನೌಕರರಾದ ಅಂಬಿಕಾ, ನಾಗವೇಣಿ,ಮಲ್ಲಿಕಾ,ಶ್ರೀನಿವಾಸಮೂರ್ತಿ, ಶ್ರೀನಿವಾಸ್,ಕೇಶವರೆಡ್ಡಿ ಮತ್ತಿತರರಿದ್ದರು.
ಎಚ್. ಎಮ್. ಎಮ್. ವಿ.ಕೆ.ಆರ್ ನ ಕಂಚಿನ ಹುಡುಗ- ಅಥರ್ವ ಖಾರ್ವಿ
ಕುಂದಾಪುರ (ಡಿ.30): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ 6ನೇ ತರಗತಿಯ ವಿಧ್ಯಾರ್ಥಿ ಅಥರ್ವ ಖಾರ್ವಿ ನವದೆಹಲಿಯಲ್ಲಿ ಜರುಗಿದ ಆಲ್ ಇಂಡಿಯಾ ಸಬ್ ಜೂನಿಯರ್ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, ಕಂಚಿನ ಪದಕವನ್ನು ಗಳಿಸಿರುತ್ತಾನೆ. ಕಂಚಿನ ಪದಕ ವಿಜೇತ ಕರಾಟೆ ಪಟುವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು
14 ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆಗೆ 5718 ಮಂದಿ ನೋಂದಣಿ – ಪೂರ್ವಸಿದ್ದತೆಗಳನ್ನು ಪರಿಶೀಲಿಸಿದ ಡಿಸಿ ಡಾ.ರವಿ
ಕೋಲಾರ:- ನಗರದ 14 ಕೇಂದ್ರಗಳಲ್ಲಿ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ನಡೆಸಿ ಅಗತ್ಯ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪರೀಕ್ಷಾ ಮುಖ್ಯ ಮೇಲ್ವಿಚಾರಕರೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.
ಪರೀಕ್ಷೆಗೆ ಮುನ್ನಾದಿನ ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಹಿತಿ ನೀಡಿ, ಪರೀಕ್ಷೆಗೆ ಒಟ್ಟು 5718 ಮಂದಿ ಕುಳಿತಿದ್ದು, ಎಲ್ಲಾ 14 ಕೇಂದ್ರಗಳು ನಗರದಲ್ಲೇ ಇವೆ ಎಂದು ತಿಳಿಸಿದರು.
ಬೆಳಗಿನ ಅವಧಿಯ ಪರೀಕ್ಷೆ ಬೆಳಗ್ಗೆ 10ರಿಂದ 12 ರವರೆಗೂ ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೂ ನಡೆಯಲಿದ್ದು, ಜಿಲ್ಲಾಡಳಿತದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಎಡಿಸಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ
ಪ್ರಶ್ನೆಪತ್ರಿಕೆಗಳನ್ನು ಖಜಾನೆಯಲ್ಲಿ ಸಂರಕ್ಷಣೆ, ವಿತರಣೆ ಕುರಿತಂತೆ ನಿಗಾವಹಿಸಲು ಅಪರ ಜಿಲ್ಲಾಧಿಕಾರಿ ಮಂಗಳಾ, ಜಿಲ್ಲಾ ಖಜಾನಾಧಿಕಾರಿ ಮಹೇಂದ್ರ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದ್ದು, ಪರೀಕ್ಷಾ ನೋಡಲ್ ಅಧಿಕಾರಿಯಾಗಿ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿಕೇಂದ್ರಕ್ಕೂ ಓರ್ವ ಮೇಲ್ಚಿಚಾರಕರಿದ್ದು, ತಲಾ ಒಬ್ಬರಂತೆ ಸ್ಥಳೀಯ ನಿರೀಕ್ಷಣಾಧಿಕಾರಿಯನ್ನು ನೇಮಿಸಲಾಗಿದೆ. ಪ್ರತಿ 4 ಕೇಂದ್ರಗಳಿಗೆ ಒಬ್ಬರು ವೀಕ್ಷಕರು, ತಲಾ 3 ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಪ್ರಶ್ನೆಪತ್ರಿಕೆ ಸಾಗಾಣೆ ಸಂದರ್ಭದಲ್ಲಿ ಪ್ರತಿ ಮಾರ್ಗಾಧಿಕಾರಿ ಜತೆ ಐದು ಮಂದಿ ಪೊಲೀಸರ ಬೆಂಗಾವಲು ಒದಗಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೇ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಓರ್ವ ಕಂದಾಯ ನಿರೀಕ್ಷಕರನ್ನು ಜಿಲ್ಲಾಡಳಿತದಿಂದ ನೇಮಿಸಲಾಗಿದ್ದು, ಕೇಂದ್ರಗಳಲ್ಲಿ ಕುಡಿಯುವ ನೀರು, ಗಾಳಿ,ಬೆಳಕು, ಡೆಸ್ಕ್ಗಳು ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲು ಅಗತ್ಯ ಕ್ರಮವಹಿಸಿದೆ.
ಬಿಗಿ ಬಂದೋಬಸ್ತ್ ನಿಷೇಧಾಜ್ಞೆ ಜಾರಿ
ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿದೆ, ಪೂರ್ಣ ತೋಳಿನ ಶರ್ಟ್, ಶೂ ಹಾಕಿದ್ದರೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗುವುದು.
ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿದೆ.
14ಕೇಂದ್ರಗಳಲ್ಲಿನ ಹಾಜರಾಗಿ ವಿವರ
ಡಿಡಿಪಿಐ ಕೃಷ್ಣಮೂರ್ತಿ ಕೇಂದ್ರಗಳ ಕುರಿತು ಮಾಹಿತಿ ನೀಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು, ನೂತನ ಪದವಿ ಪೂರ್ವ ಕಾಲೇಜು, ಸರ್ಕಾರಿಬಾಲಕರ ಪದವಿ ಪೂರ್ವ ಕಾಲೇಉ, ಸರ್ಕಾರಿ ಮಹಿಳಾ ಪದವಿ ಕಾಲೇಜು,ಮಹಿಳಾ ಸಮಾಜ ಪಿಯು ಕಾಲೇಜು, ಸುಭಾಷ್ ಪ್ರೌಢಶಾಲೆ, ಎಸ್ಡಿಸಿ ಕಾಲೇಜು, ಎಸ್ಡಿಸಿ ಇಂಡಿಪೆಂಡೆಂಟ್ ಪಿಯು ಕಾಲೇಜು, ಚಿನ್ಮಯ ವಿದ್ಯಾಲಯ, ಗೋಕುಲ ಕಾಲೇಜು, ಮಹಿಳಾ ಸಮಾಜ ಪ್ರೌಢಶಾಲೆ, ಮದರ್ತೆರೆಸಾ ಇಂಗ್ಲೀಷ್ ಶಾಲೆ, ಅಲ್ಅಮೀನ್ ಡಾ.ಮುಮ್ತಾಜ್ ಅಹಮದ್ ಖಾನ್ ಪದವಿಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆಗೆ ಸಿದ್ದತೆ ನಡೆಸಲಾಗಿದೆ.
ಪರೀಕ್ಷಾ ಕಾರ್ಯಗಳಲ್ಲಿ ಮಾರ್ಗಾಧಿಕಾರಿಗಳಾಗಿ ಬಿಇಒಗಳಾದ ಉಮಾ, ಚಂದ್ರಕಲಾ, ಮುನಿಲಕ್ಷ್ಮಯ್ಯ, ಗಂಗರಾಮಯ್ಯ, ಶಿಕ್ಷಣಾಧಿಕಾರಿ ವೀಣಾ ಅವರನ್ನು ನೇಮಿಸಲಾಗಿದೆ.
ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ, ಉಪವಿಭಾಗಾಧಿಕಾರಿ ಡಾ.ಚೈತ್ರಾ,ತಹಸೀಲ್ದಾರ್ ನಯನಾ, ಕೈಗಾರಿಕಾ ಇಲಾಖೆ ಉಪನಿರ್ದೇಶಕ ರವಿಚಂದ್ರ ನಗರದ ಮದರ್ತೆರೇಸಾ, ಸುಭಾಷ್ ಶಾಲೆ ಮತ್ತಿತರ ಕೇಂದ್ರಗಳಿಗೆ ಭೇಟಿ ನೀಡಿ, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಕ್ರಮವಹಿಸಲು ಸೂಚಿಸಿದರು.
ನೋಡಲ್ ಅಧಿಕಾರಿ ಶಂಕರೇಗೌಡ ಮಾಹಿತಿ ನೀಡಿ, ಕೇಂದ್ರಗಳ ಮೇಲ್ವಿಚಾರಕರಾಗಿ ಗಾಯತ್ರಿ, ಶಶಿವಧನ, ರಾಧಮ್ಮ, ನಾಗರಾಜ್ ಸೇರಿದಂತೆ ವಿವಿಧ ಸರ್ಕಾರಿ ಪ್ರೌಢಶಾಲೆಗಳ ಮುಖ್ಯಶಿಕ್ಷಕರು, ಉಪಪ್ರಾಂಶುಪಾಲರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.
.
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಇವರಿಗೆ ಗೌರವ ಡಾಕ್ಟರೇಟ್
ಶಂಕರನಾರಾಯಣ : ಕಳೆದ ಎರಡೂವರೆ ದಶಕಗಳಿಂದ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸಿ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದು ಪ್ರಸ್ತುತ ಮದರ್ ತೆರೇಸಾ ಶಿಕ್ಷಣ ಸಂಸ್ಥೆ ಶಂಕರನಾರಾಯಣ, ಕುಂದಾಪುರ ತಾಲೂಕಿನಲ್ಲಿ ಮುಖ್ಯಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಶ್ರೀ ರವಿದಾಸ್ ಶೆಟ್ಟಿ ಇವರ ನಿಷ್ಠಾವಂತ,ಸರಳ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಎಷಿಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಕೊಯಂಬತ್ತೂರು ತಮಿಳುನಾಡಿನ ಹೊಸೂರು ಕ್ಲಾಸ್ಟಾ ಹಿಲ್ಸ್ ನಲ್ಲಿ ನಡೆದ ಘಟಿಕೋತ್ಸವದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು 28ನೇ ಡಿಸೆಂಬರ್, 2024 ರಂದು ಪ್ರದಾನಮಾಡಲಾಯಿತು
ಈ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದ ಮುಖ್ಯಶಿಕ್ಷಕರನ್ನು ಸಂಸ್ಥೆಯ ಆಡಳಿತಮಂಡಳಿಯ ಅಧಿಕಾರಿದ್ವಯರಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭಾಶಯಗಳನ್ನು ಕೋರಿರುತ್ತಾರೆ
ಕ್ರಿಸ್ಮಸ್ – 2024 – ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ರೀತಿಯಲ್ಲಿ ಆಚರಿಸಿದ ಕಥೊಲಿಕ್ ಸಭಾ ಸಿಟಿ ವಲಯ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ಸಿಟಿ ವಲಯವು ಈ ವರ್ಷದ ಕ್ರಿಸ್ಮಸ್ ಹಬ್ಬವನ್ನು ಒಂದು ಬಡ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ವಿಭಿನ್ನ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು. ವಲಯಕ್ಕೆ ಒಳಪಟ್ಟ ಎಲ್ಲಾ ಘಟಕಗಳು ಹಾಗೂ ಸದಸ್ಯರ ಆರ್ಥಿಕ ನೆರವು ರುಪಾಯಿ 90,000/- ವನ್ನು ಕ್ರಿಸ್ಮಸ್ ದಿನದಂದು ಸಿಟಿ ವಲಯದ ಅಧ್ಯಕ್ಷರಾದ ಶ್ರೀಯುತ ಅರುಣ್ ಡಿಸೋಜ ಇವರು ಶಕ್ತಿನಗರ ಘಟಕದ ಅಧ್ಯಕ್ಷರಾದ ಶ್ರೀಯುತ ಡೇವಿಡ್ ಕ್ರಾಸ್ತಾ ಇವರಿಗೆ ಹಸ್ತಾಂತರ ಮಾಡಿದರು. ಈ ವೇಳೆ ಸಿಟಿ ವಲಯದ ನಿಕಟ-ಪೂರ್ವ ಅಧ್ಯಕ್ಷರಾದ ಶ್ರೀಯುತ ವಿಲ್ಫ್ರೆಡ್ ಆಲ್ವಾರಿಸ್, ವಲಯ ಖಜಾಂಚಿ ಶ್ರೀಯುತ ಪ್ಯಾಟ್ರಿಕ್ ಲೋಬೊ, ರಾಜಕೀಯ ಸಂಚಾಲಕರಾದ ಶ್ರೀಯುತ ಟೋನಿ ಪಿಂಟೊ, ಶಕ್ತಿನಗರ ಚರ್ಚಿನ ಪಾಲನ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ಸ್ಟ್ಯಾನಿ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಮತಿ ಮೇರಿ ಪಿಂಟೊ, ಶಕ್ತಿನಗರ್ ಘಟಕದ ಕಾರ್ಯದರ್ಶಿ ಶ್ರೀಮತಿ ಲವೀನಾ ಪಿಂಟೊ, ಸಮುದಾಯ ಅಭಿವ್ರದ್ದಿ ಸಂಚಾಲಕರಾದ ಶ್ರೀಯುತ ವಿಕ್ಟರ್ ಪಾಸ್ಕಲ್ ಫೆರ್ನಾಂಡಿಸ್, ಘಟಕದ ಸದಸ್ಯರು ಉಪಸ್ಥರಿದ್ದರು.
ಶ್ರೀಯುತ ವಿಲ್ಫ್ರೆಡ್ ಆಲ್ವಾರಿಸ್ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಯುತ ಅರುಣ್ ಡಿಸೋಜಾ ಈ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ಘಟಕದ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು.