ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾಸ್ ಪಿ ಯು ಕಾಲೇಜಿನ ದ್ವಿತೀಯ ಪಿ ಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಭೇಟಿ ಹಮ್ಮಿಕೊಳ್ಳಲಾಯಿತು ಉಡುಪಿ ಜಿಲ್ಲೆಯ ಪ್ರತಿಷ್ಠಿತ ಕೈಗಾರಿಕೆ ಸಂಸ್ಥೆಗಳಿಗೆ 70 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಭೇಟಿ ನೀಡಿ ವಿವಿಧ ದಿನಬಳಕೆಯ ಗ್ರಹೋಪಯೋಗಿ ವಸ್ತುಗಳ ಉತ್ಪಾದನೆ, ನೂತನ ತಂತ್ರಗಾರಿಕೆಯ ಬಳಕೆ, ಪ್ರೊಡಕ್ಷನ್ ಮತ್ತು ಪ್ರೋಸೆಸ್ಸಿಂಗ್, ಕಚ್ಚಾವಸ್ತುಗಳ ಬಳಕೆಯಿಂದ ಉತ್ಪಾದನೆಯಾಗುವ ತ್ಯಾಜ್ಯಗಳ ಮರುಬಳಕೆ, ಉದಯವಾಣಿ ದಿನಪತ್ರಿಕೆಯ ಉತ್ಪಾದನೆಯನ್ನು ಪ್ರಾಯೋಗಿಕವಾಗಿ ನೋಡಿ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಂಡರು ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರಾದ ಗೀತಾ, ರಸಿಕ ಮತ್ತು ಸುಮಾ ಉಪಸ್ಥಿತರಿದ್ದರು
HOLY ROSARY CHURCH, KUNDAPUR – 450 th JUBILEE SOUVENIR 2021
ಹುತಾತ್ಮ ಯೋಧ ಅನೂಪ್ ಪೂಜಾರಿಯವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೇರವೆರಿತು
ಕುಂದಾಪುರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರ ವಾಹನ ಕಣಿವೆಗೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಹುತಾತ್ಮರಾದ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಯೋಧ ಅನೂಪ್ ಪೂಜಾರಿ (33) ಪಾರ್ಥಿವ ಶರೀರವನ್ನು ವಿಮಾನ ಮೂಲಕ ಇಂದು (ಡಿ.26) ಮುಂಜಾನೆ ಮಂಗಳೂರಿಗೆ ತರಲಾಗಿದ್ದು, ಬಳಿಕ ಅದನ್ನು ಆಂಬುಲೆನ್ಸ್ ವಾಹನದಲ್ಲಿ ಕುಂದಾಪುರದ ಬೀಜಾಡಿಗೆ ತರಲಾಯಿತು.
ದಕ್ಷಿಣ ಕನ್ನಡ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು. ಮಾಜಿ ಯೋಧರೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜತೆಗಿದ್ದರು. ಬಳಿಕ ಅಂತಿಮ ನಮನ ಸಲ್ಲಿಸಿದರು.
ಇಂದು (ಡಿ.26) ಬೆಳಗ್ಗೆ 9ಕ್ಕೆ ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ತರಲಾಯಿತು. ಈ ವೇಳೆ ತಾಯಿ, ಪತ್ನಿ ಹಾಗೂ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಮನೆಯಲ್ಲಿ ಸಕಲ ವಿಧಿ ವಿಧಾನಗಳನ್ನು ನೆರವೇರಿಸಿ, ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆ ಬಳಿಕ ಅವರು ಕಲಿತ ಬೀಜಾಡಿ ಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಪ್ತರು, ಸಾರ್ವಜನಿಕರು, ಶಾಲಾ ಮಕ್ಕಳು, ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.
ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಅನೂಪ್ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿತ್ತು. ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅವರ ಅಂತ್ಯಸಂಸ್ಕಾರ ನಡೆಯಿತು. ಅನೂಪ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಅಂತಿಮ ವಿಧಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಸೇನಾ ಸಿಬ್ಬಂದಿ ಭಾಗಿಯಾಗಿದ್ದರು. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.
ಗಂಗೊಳ್ಳಿಯಲ್ಲಿ ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆ
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ರುಗ್ಮಯಾನ: ಸುವರ್ಣ ರಥದತ್ತ ಸಂಭ್ರಮದ ಪಥ
ಕುಂದಾಪುರ (ಡಿ.26): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಡಾಕ್ಟರ್ ಮತ್ತು ಇಂಜಿನಿಯರ್ ವೃತ್ತಿಯ ಕಡಗೆ ಮನಸ್ಸು ಮಾಡುತ್ತಾರೆ. ಆದರೆ ಇತರ ಕೆಲಸದ ಕಡೆಗೆ ಮನಸ್ಸು ಮಾಡುವುದಿಲ್ಲ. ವಿದ್ಯಾರ್ಥಿ ಜೀವನದಲ್ಲೇ ದೇಶ ಪ್ರೇಮ, ದೇಶ ಭಕ್ತಿಯನ್ನು ಬೆಳೆಸಿಕೊಂಡರೆ ದೇಶ ಸೇವೆಯನ್ನು ಮಾಡುವ ಬೇರೆ ಬೇರೆ ಸರ್ಕಾರಿ ಕೆಲಸಗಳಿವೆ. ಅದರತ್ತ ಮನಸ್ಸು ಮಾಡಬೇಕು ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿ, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿರುವ ಶ್ರೀಯುತ ಪುನೀತ್ ಕುಮಾರ್ ಹೇಳಿದರು.
ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ 49ರ ವಾರ್ಷಿಕ ಸಂಭ್ರಮದ ರುಗ್ಮಯಾನ ಸುವರ್ಣ ರಥದತ್ತ ಸಂಭ್ರಮದ ಪಥ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಜೀವನದ ಸವಿ ನೆನಪುಗಳನ್ನು ಬಿಚ್ಚಿಟ್ಟರು. ಸಂಸ್ಥೆಯ ಸಂಚಾಲಕರು ಹಾಗು ಅಧ್ಯಕ್ಷರು ಆಗಿರುವ ಶ್ರಿ ಬಿ ಎಂ ಸುಕುಮಾರ್ ಶೆಟ್ಟಿ ಅವರು ಮಾತನಾಡುತ್ತಾ ಇಂದಿನ ಮಕ್ಕಳಿಗೆ ದೊರೆಯಬೇಕಾದ ಎಲ್ಲ ಒಳ್ಳೆಯ ಶಿಕ್ಷಣವು ಮಕ್ಕಳಿಗೆ ಕೊಡುವಲ್ಲಿ ನಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ. ಸುವರ್ಣ ಸಂಭ್ರಮಾಚರಣೆ ಆಚರಿಸುತ್ತಿರುವ ಕುಂದಾಪುರ ವಲಯದ ಏಕೈಕ ಆಂಗ್ಲ ಮಾಧ್ಯಮ ಶಾಲೆಯಾಗಿರುವುದು ಸಂಸ್ಥೆಗೆ ಸಲ್ಲುವ ಗೆಲುವಿನ ಮುಕುಟ ಎಂದು ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಾಂಶಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ಎಚ್.ಎಮ್.ಎಮ್ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜಗದೀಶ್ ಆಚಾರ್ ಸಾಸ್ತಾನ ವಾರ್ಷಿಕ ವರದಿ ವಾಚಿಸಿದರು. ಕಳೆದ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಗೈದ ವಿದ್ಯಾರ್ಥಿಗಳಾದ ಶ್ರೀಧನ್ ಶೆಟ್ಟಿ, ಸುಜನ್ ಉಪಾಧ್ಯಾಯ, ಸಮೃದ್ಧಿ, ಕೌಶಿಕ್ ಶೆಟ್ಟಿ ಹಾಗೂ ಎನ್.ಸಿ.ಸಿ ಯಲ್ಲಿ ಸಾಧನೆ ಮಾಡಿದ ಅನ್ವಿತಾಳನ್ನು ಸನ್ಮಾನಿಸಲಾಯಿತು. ಇದೇ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದ ಕಲಾ ಶಿಕ್ಷಕರಾದ ರಮೇಶ್ ಹಾಂಡರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಕುಮಾರಿ ಪ್ರಾಪ್ತಿ ಮಡಪ್ಪಾಡಿ ಮತ್ತು ಸಮರ್ಥ ಕಾರ್ಯಕ್ರಮ ನಿರೂಪಿಸಿ ವಂದಸಿದರು.
ಎಂ ಐ ಟಿ ಮೂಡ್ಲಕಟ್ಟೆ ಓರಿಯಂಟೇಷನ್ ಕಾರ್ಯಕ್ರಮ
ಕುಂದಾಪುರ; ಪ್ರಥಮ ವರ್ಷಕ್ಕೆ ಸೇರ್ಪಡೆಯಾದ ಎಮ್ ಬಿ ಎ ಮತ್ತು ಏಮ್ ಸಿ ಎ ವಿದ್ಯಾರ್ಥಿಗಳಿಗೆ ಒಂದು ವಾರದ ಓರಿಯೆಂಟೇಷನ್ ಮತ್ತು ಇಂಡಕ್ಷನ್ ಕಾರ್ಯಕ್ರಮದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಎಂ. ಬಿ. ಎ ವಿಭಾಗದ ಮುಖ್ಯಸ್ಥರಾದ ಡಾ. ಸುಚಿತ್ರ ಪೂಜಾರಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಮುಖ್ಯ ಅತಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಶಾಂತ್ ಕುಂದರ್ (ಮ್ಯಾನೇಜಿಂಗ್ ಪಾರ್ಟ್ನರ್ ಜನತಾ ಹೊಲ್ಡಿಂಗ್ಸ್ ) ನಾಯಕತ್ವ, ಮತ್ತು ವ್ಯವಹಾರದ ಹೊಸ ದೃಷ್ಠಿಕೋನ ಮತ್ತು ಅಭಿವೃದ್ಧಿಯ ಕುರಿತು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು. ಐ ಎಂ ಜೇ ಸಂಸ್ಥೆಗಳ ಬ್ರಾಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆಯವರು ಉನ್ನತ ವ್ಯಾಸಂಗದ ಉದ್ದೇಶ ತಿಳಿಸಿದರು. ಕಾರ್ಯಕ್ರಮದಲ್ಲಿ ಪ್ರೊ . ಅಮೃತ ಮಾಲಾ (ಪ್ಲೇಸ್ ಮೆಂಟ್ ಅಂಡ್ ಟ್ರೇನಿಂಗ್ ಡೀನ್ ) ಇವರು ವೃತ್ತಿ ಮಾರ್ಗದರ್ಶನ ದ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಮ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಎಂ ಸಿ ಏ ವಿಭಾಗ ಮುಖ್ಯಸ್ಥೆ ಡಾ. ನಂದಿನಿ ಯವರು ಉಪಸ್ಥಿತರಿದ್ದರು. ಎಂ.ಬಿ.ಎ ವಿದ್ಯಾರ್ಥಿನಿಯಾದ ಕುಮಾರಿ ಸಹಾರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ನೀಲ್ ಗ್ಲಾಡ್ವಿನ್ ವಂದಿಸಿದರು
ಮೌಂಟ್ ರೋಸರಿ ಚರ್ಚ್, ಸಂತೆಕಟ್ಟೆ, ಕಲ್ಯಾಣಪುರದಲ್ಲಿ ಕ್ರಿಸ್ಮಸ್ ಆಚರಣೆ / Christmas Celebration at Mount Rosary Church, Santhekatte, Kallianpur
ಕಲ್ಯಾಣಪುರದ ಸಂತೆಕಟ್ಟೆಯ ಮೌಂಟ್ ರೋಸರಿ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆಯು ಭವ್ಯವಾದ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುವ ಕಾರ್ಯಕ್ರಮವಾಗಿತ್ತು. ಸಂಜೆ 6:30 ರಿಂದ 7:00 ರವರೆಗೆ ಕ್ಯಾರೋಲ್ ಗಾಯನದ ಮೋಡಿಮಾಡುವ ಅಧಿವೇಶನದೊಂದಿಗೆ ಪ್ರಾರಂಭವಾಯಿತು, ಜೊವಿಟಾ ಫೆರ್ನಾಂಡಿಸ್ ಮತ್ತು ಅವರ ಸುಸಂಘಟಿತ ಗಾಯಕರ ತಂಡ. ಅವರ ಮಧುರ ಮತ್ತು ಸಾಮರಸ್ಯದ ಕ್ಯಾರೋಲ್ಗಳ ನಿರೂಪಣೆಯು ವಾತಾವರಣವನ್ನು ಸಂತೋಷ ಮತ್ತು ಗೌರವದಿಂದ ತುಂಬಿತು, ರಾತ್ರಿಯ ಸ್ವರವನ್ನು ಸಂಪೂರ್ಣವಾಗಿ ಹೊಂದಿಸುತ್ತದೆ.
ಅತ್ಯಾಕರ್ಷಕ ದೀಪಗಳು, ಕ್ರಿಸ್ಮಸ್ ಅಲಂಕಾರಗಳು, ನಕ್ಷತ್ರಗಳು ಮತ್ತು ಸುಂದರವಾಗಿ ರಚಿಸಲಾದ ಕೊಟ್ಟಿಗೆಗಳಿಂದ ಅಲಂಕರಿಸಲ್ಪಟ್ಟ ಚರ್ಚ್, ನೋಡುವುದಕ್ಕೆ ಒಂದು ದೃಶ್ಯವಾಗಿತ್ತು. ಅಲಂಕಾರಗಳ ಭವ್ಯತೆಯು ಪ್ರಶಾಂತವಾದ ಮತ್ತು ಹಬ್ಬದ ವಾತಾವರಣವನ್ನು ಸೃಷ್ಟಿಸಿತು, ಹಾಜರಿದ್ದ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಅನುಭವವನ್ನು ಹೆಚ್ಚಿಸಿತು.
ಧರ್ಮಗುರು ಫಾ. ಪ್ರೀತಂ, ಪ್ರಾಂತೀಯ ಹೋಲಿ ಕ್ರಾಸ್ ಫಾದರ್ಸ್ ಮೈನರ್ ಸೆಮಿನರಿ, ಕಟಪಾಡಿ, ಮುಖ್ಯ ಸಂಚಾಲಕರಾಗಿ. ಅವರೊಂದಿಗೆ ಪ್ಯಾರಿಷ್ ಪ್ರೀಸ್ಟ್, ರೆ.ಡಾ. ರೋಕ್ ಡಿಸೋಜಾ, ಮತ್ತು ಸಹಾಯಕ ವಿಕಾರ್, ರೆ.ಫಾ. ಆಲಿವರ್ ನಜರೆತ್. ಚರ್ಚ್ ಭಕ್ತರಿಂದ ತುಂಬಿ ತುಳುಕಿತು, ಅಸಾಧಾರಣವಾಗಿ ದೊಡ್ಡ ಮತ್ತು ಉತ್ಸಾಹಭರಿತ ಸಭೆಯು ಸಂತೋಷದಾಯಕ ಸಂದರ್ಭವನ್ನು ಆಚರಿಸಲು ಜಮಾಯಿಸಿತು.
ಆಧ್ಯಾತ್ಮಿಕ ಆತ್ಮಾವಲೋಕನ ಮತ್ತು ಜವಾಬ್ದಾರಿಯ ವಿಷಯದ ಮೇಲೆ ಕೇಂದ್ರೀಕೃತವಾದ ಧರ್ಮೋಪದೇಶವು ವಿಶೇಷವಾಗಿ ಮನಸೆಳೆಯಿತು. ರೆ.ಫಾ. ಪ್ರೀತಮ್ ಬುಕ್ ಆಫ್ ಜೆನೆಸಿಸ್ನಿಂದ ಮೂರು ಆಳವಾದ ಪ್ರಶ್ನೆಗಳನ್ನು ಪ್ರತಿಬಿಂಬಿಸಿದರು: “ನೀವು ಎಲ್ಲಿದ್ದೀರಿ?” ಆಡಮ್ಗೆ, “ನಿನ್ನ ಸಹೋದರ ಎಲ್ಲಿದ್ದಾನೆ?” ಮತ್ತು “ನೀವು ಏನು ಮಾಡಿದ್ದೀರಿ?” ಕೇನ್ ಗೆ. ಅವರು ಈ ಪ್ರಶ್ನೆಗಳನ್ನು ಆಧುನಿಕ ಜೀವನಕ್ಕೆ ಕೌಶಲ್ಯದಿಂದ ವಿವರಿಸಿದರು, ದೇವರು, ಕುಟುಂಬ, ನೆರೆಹೊರೆಯವರು ಮತ್ತು ಪ್ರಕೃತಿಯೊಂದಿಗೆ ತಮ್ಮ ಸಂಬಂಧಗಳನ್ನು ಮೌಲ್ಯಮಾಪನ ಮಾಡಲು ನಿಷ್ಠಾವಂತರನ್ನು ಒತ್ತಾಯಿಸಿದರು. ನಮ್ಮ ಜೀವನದಲ್ಲಿ ಕ್ರಿಸ್ತನನ್ನು ಸಾಗಿಸುವ ಅಗತ್ಯವನ್ನು ಸಂದೇಶವು ಒತ್ತಿಹೇಳಿತು ಮತ್ತು ಪ್ರೀತಿ, ಸಹಾಯ ಮತ್ತು ಇತರರ ಕಾಳಜಿಯಲ್ಲಿ ಮಾದರಿಯಾಗಿದೆ.
ಯೂಕರಿಸ್ಟಿಕ್ ಆಚರಣೆಯ ನಂತರ, ರೆ.ಡಾ. ರೋಕ್ ಡಿಸೋಜಾ ಅವರು ತಮ್ಮ ಹೃತ್ಪೂರ್ವಕ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸಿದರು ಮತ್ತು ಕಾರ್ಯಕ್ರಮವನ್ನು ಅದ್ಭುತವಾಗಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ಕ್ರಿಸ್ಮಸ್ ಉತ್ಸಾಹದಿಂದ ತುಂಬಿದ ಪ್ಯಾರಿಷಿಯನ್ಗಳು ಪವಿತ್ರ ಮಾಸ್ನ ನಂತರ ಆತ್ಮೀಯವಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು, ಆಚರಣೆಗೆ ವೈಯಕ್ತಿಕ ಸ್ಪರ್ಶ ನೀಡಿದರು.
ಕೇಕ್ ವಿತರಣೆಯೊಂದಿಗೆ ಉತ್ಸವವು ಮುಂದುವರೆಯಿತು, ನಂತರ ಐಸಿವೈಎಂ ಮತ್ತು ವೈಸಿಎಸ್ ಗುಂಪುಗಳು ಆಯೋಜಿಸಿದ ಉತ್ಸಾಹಭರಿತ ಚಟುವಟಿಕೆಗಳು. ರೋಮಾಂಚಕವಾದ ಹೌಸಿ ಆಟವು ಉತ್ಸಾಹವನ್ನು ತಂದಿತು ಮತ್ತು ಸಾಂಟಾ ಕ್ಲಾಸ್ ತನ್ನ ಹರ್ಷಚಿತ್ತದಿಂದ ವರ್ತಿಸುವ ಮೂಲಕ ಮಕ್ಕಳು ಮತ್ತು ವಯಸ್ಕರನ್ನು ಸಂತೋಷಪಡಿಸಿದರು. ಸಂತೋಷದ ಆವೇಗವನ್ನು ಜೀವಂತವಾಗಿರಿಸುವ ವಿವಿಧ ಇತರ ಆಟಗಳನ್ನು ಸಹ ನಡೆಸಲಾಯಿತು.
ಆಧ್ಯಾತ್ಮಿಕ ಆಳ, ಹಬ್ಬದ ಅಲಂಕಾರಗಳು, ಸಂಗೀತದ ತೇಜಸ್ಸು ಮತ್ತು ಸಮುದಾಯದ ಒಗ್ಗಟ್ಟಿನ ತಡೆರಹಿತ ಮಿಶ್ರಣವು ಆಚರಣೆಯನ್ನು ನಿಜವಾಗಿಯೂ ಸ್ಮರಣೀಯವಾಗಿಸಿದೆ. ಮೌಂಟ್ ರೋಸರಿ ಚರ್ಚ್ ಮತ್ತೊಮ್ಮೆ ಕ್ರಿಸ್ಮಸ್-ನಂಬಿಕೆ, ಪ್ರೀತಿ ಮತ್ತು ಸಂತೋಷದ ನಿಜವಾದ ಸಾರವನ್ನು ಉದಾಹರಿಸಿತು.
Christmas Celebration at Mount Rosary Church, Santhekatte, Kallianpur
The Christmas celebration at Mount Rosary Church, Santhekatte, Kallianpur, was a grand and spiritually uplifting event. The evening began with an enchanting session of carol singing from 6:30 PM to 7:00 PM, led by Jovita Fernandes and her cohesive choir team. Their melodious and harmonious rendition of carols infused the atmosphere with joy and reverence, perfectly setting the tone for the night.
The church, adorned with stunning lighting, Christmas decorations, stars, and a beautifully crafted crib, was a sight to behold. The grandeur of the decorations created a serene and festive ambiance, enhancing the spiritual experience for everyone present.
The Eucharistic Celebration was the highlight of the evening, led by Rev. Fr. Preetam, Provincial of Holy Cross Fathers Minor Seminary, Katpadi, as the main celebrant. He was joined by the Parish Priest, Rev. Dr. Roque D’Souza, and Assistant Vicar, Rev. Fr. Oliver Nazareth. The church overflowed with devotees, an unusually large and enthusiastic congregation gathered to celebrate the joyous occasion.
The homily, centered on the theme of spiritual introspection and responsibility, was particularly moving. Rev. Fr. Preetam reflected on three profound questions from the Book of Genesis: “Where are you?” to Adam, “Where is your brother?” and “What have you done?” to Cain. He skillfully related these questions to modern life, urging the faithful to evaluate their relationships with God, family, neighbors, and nature. The message emphasized the need to carry Christ in our lives and be exemplary in love, helpfulness, and concern for others.
After the Eucharistic Celebration, Rev. Dr. Roque D’Souza conveyed his heartfelt Christmas greetings and extended gratitude to all who contributed to making the event a resounding success. The parishioners, filled with the Christmas spirit, exchanged greetings warmly after the Holy Mass, adding a personal touch to the celebrations.
The festivities continued with cake distribution, followed by lively activities organized by the ICYM and YCS groups. A thrilling Housie game brought excitement, and Santa Claus delighted the children and adults with his cheerful antics. Various other games were also conducted, keeping the joyous momentum alive.
The seamless blend of spiritual depth, festive decorations, musical brilliance, and community togetherness made the celebration truly memorable. Mount Rosary Church once again exemplified the true essence of Christmas—faith, love, and joy.
Reported by: P Archibald Furtado. Photographs by : Praveen Cuthino.
ಪ್ರತಿ ಪಂಚಾಯಿತಿಗೆ ಉಚಿತ ಕಟಾವು ಯಂತ್ರೋಪಕರಣಗಳನ್ನು ನೀಡಿರಿ, ಖಾಸಗಿ ಯಂತ್ರಗಳ ದುಬಾರಿ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಿ – ಬಂಗವಾದಿ ನಾಗರಾಜಗೌಡ
ಶ್ರೀನಿವಾಸಪುರ : ಪ್ರತಿ ಪಂಚಾಯಿತಿಗೊಂದು ರಾಗಿ ಹಾಗೂ ಭತ್ತ ಕಟಾವು ಯಂತ್ರೋಪಕರಣಗಳನ್ನು ಕೃಷಿ ಇಲಾಖೆಯಿಂದ ಉಚಿತವಾಗಿ ನೀಡುವ ಜೊತೆಗೆ ಖಾಸಗಿ ಉಯಂತ್ರಗಳ ದುಬಾರಿ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಿ ರೈತರ ರಕ್ಷಣೆ ಮಾಡಬೇಕು ಪತ್ರಿಕಾ ಹೇಳಿಕೆ ಮುಖಾಂತರ ಕೃಷಿ ಅಧಿಕಾರಿಗಳನ್ನು ರೈತ ಸಂಘದಿಂದ ಕೃಷಿ. ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಒತ್ತಾಯಿಸಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ರೈತ ಸಂಘದ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ಬೆಳೆದಿರುವ ರೈತರಿಗೆ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡು ಯಂತ್ರೋಪಕರಣಗಳು ಸಿಗದೆ ತೀವ್ರ ಸಂಕಷ್ಠಕ್ಕೆ ಸಿಲುಕಿದ್ದಾರೆ ಸರ್ಕಾರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಯಂತ್ರದಾರೆ ಯೋಜನೆಯನ್ನು ಸಮಪರ್ಕವಾಗಿ ನಿರ್ವಹಣೆ ಮಾಡದೇ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದಾರೆ . ಬೆಳೆ ಕಟಾವು ಮಾಡಲು ಸಕಾಲಕ್ಕೆ ಕೂಲಿ ಕಾರ್ಮಿಕರು ಸಿಗದೆ ವಿಧಿಯಿಲ್ಲದೆ ದುಪ್ಪಟ್ಟು ಹಣ ಪಾವತಿಸಿ ಖಾಸಗಿ ಯಂತ್ರೋಪಕರಣ ಕಡೆ ಮುಖ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.
ಖಾಸಗೀ ಕಟಾವು ಯಂತ್ರೋಪರಣಗಳ ಮಾಲೀಕರು ದುಪ್ಪಟ್ಟ ಬೆಲೆಯನ್ನು ಪ್ರತಿ ಎಕರೆಗೆ ಆರರಿಂದ ಹತ್ತು ಸಾವಿರ ವರೆಗೆ ನಿಗದಿ ಮಾಡಿ ರೈನ್ನು ಆರ್ಥಿಕ ಸಂಕಷ್ಟಕ್ಕೆ ಈಡಾಗುಂತೆ ಮಾಡಿದ್ದಾರೆ ಜಿಲ್ಲೆಗೆ ಈಗಾಗಲೇ ತಮಿಳುನಾಡು ಆಂದ್ರದಿಂದ ಕಟಾವು ಯಂತ್ರಗಳು ಕಾಲಿಟ್ಟಿದ್ದು ಪ್ರತಿ ಎಕರೆ ತಮಗೆ ಇಷ್ಟ ಬಂದ ರೀತಿ ಧರ ನಿಗದಿಮಾಡಿದ್ದು, ರೈತರನ್ನು ಶೋಷಣೆ ಮಾಡುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಯಾಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತಾಲ್ಲೂಕಕ ಅಧ್ಯಕ್ಷ ತೆರ್ನಹಳ್ಳಿ.ಅಂಜಿನಪ್ಪ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಕ್ರೋಡೀಕರಿಸಲು ಮುಂದಾಗಿರುವುದು ಬಿಟ್ಟರೆ ಕೃಷಿಯೇತರ ಚಟುವಟಿಕೆಗೆ ಅಂತಂತ್ರ ಪರಿಸ್ಥಿತಿ ಎದುರಿಸುತ್ತಿದೆ ರೈತರು ಬೆಳೆದಿರುವ ರಾಗಿ ಹಾಗೂ ಭತ್ತದ ಬೆಳೆಗಳನ್ನು ಸಕಾಲಕ್ಕೆ ಕಟಾವು ಮಾಡಿ ರಕ್ಷಣೆ ಮಾಡಿಕೊಳ್ಳಲು ಪರದಾಡುವ ಜೊತೆಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರಗಳು ಪರಾಡುವಂತಾಗಿದೆ ರೈತರಿಗೆ ಕೃಷಿ ಇಲಾಖೆಯಿಂದ ಕಟಾವು ಯಂತ್ರೋಪಕರಣಗಳನ್ನು ಉಚಿತವಾಗಿ ಇಲ್ಲದೆ ಸಬ್ಸಿಡಿ ರೂಪದಲ್ಲಿ ನೀಡುತ್ತಾರೆ ಎಂಬ ಆಶಾಭಾವನೆಯಿಂದ ಕಾದುಕುಳಿತಿದ್ದಾರೆ ಆದರೆ ಕೃಷಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಇತ್ತ ಗಮನ ಹರಿಸದೇ ಇರುವುದು ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಅಲವಟಿ ಶಿವು ರಾಜೇಂದ್ರಗೌಡ ಇದ್ದರು.
ಮಿಲಾಗ್ರೆಸ್ ಚರ್ಚ್ ಮಂಗಳೂರು ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು
ಮಂಗಳೂರು;ಮಿಲಾಗ್ರೆಸ್ ಚರ್ಚಿನ ಪ್ರಧಾನ ಧರ್ಮಗುರು ಫಾ.ಬೋನವೆಂಚರ್ ನಜರೆತ್ ಮುಖ್ಯ ಕಾರ್ಯದರ್ಶಿ, ಫಾ.ಮೈಕಲ್ ಸಾಂತ್ಮೇಯರ್ ಅವರು ಬೆಥ್ಲೆಹೆಮ್ನಲ್ಲಿ ಜನಿಸಿದ ಕ್ರಿಸ್ತನ ಜನನದ ಮಹತ್ವವನ್ನು ಮಾನವ ಜೀವನಕ್ಕೆ ವಿವರಿಸಿದರು. ಫಾ।ರಾಬಿನ್ ಸಾಂತುಮಾಯರ್,ಫಾ। ಉದಯ ಫರ್ನಾಂಡೀಸ್,ಫಾ। ಜೆರಾಲ್ಡ್ ಪಿಂಟೋ ಮೂರು ಸಾವಿರ ಜನಸಂದಣಿಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದರು. ಜನರು ಸಂಭ್ರಮದಲ್ಲಿ ಪಾಲ್ಗೊಂಡರು. ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಕೇಕ್ ಕತ್ತರಿಸುವ ಮೂಲಕ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು. ಕೇಕ್ ಹಾಗೂ ಜ್ಯೂಸ್ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
Milagres Church Mangalore celebrated Christmas with fervor and enthusiasm.
Mangalore; The Parish Priest Fr Bonaventure Nazareth was the main celebrant,Fr Michael santhmayor preached on the occasion explaining the significance of the birth of Christ born in Bethlehem to human Life .Frs Robin Santhmayor, Udaya Fernandez, Gerald Pinto concelebrated at the Mass.Around three thousand people joined the celebration. The Joy and festal greetings were being shared by cutting the cake by the vice president and the secretary of the Parish Pastoral Parishad.cake and juice was shared among the people and they felicitated each other exchanging the greetings.
ಕುಂದಾಪುರದಲ್ಲಿ ಕ್ರಿಸ್ಮಸ್ ಆಚರಣೆ – ಕ್ರಿಸ್ಮಸ್ ದೇವರ ಮಮತೆಯ ಹಬ್ಬ – ಫಾ| ಪೌಲ್ ರೇಗೊ
ಕುಂದಾಪುರ, ಡಿ.25: 454 ವರ್ಷದ ಇತಿಹಾಸವುಳ್ಳ ಕೆನರಾದಲ್ಲೆ ಅತ್ಯಂತ ಪ್ರಾಚೀನ ಇಗರ್ಜಿಗಳಲ್ಲಿ ಎರಡನೇ ಇಗರ್ಜಿಯಾದ ಹೋಲಿ ರೋಜರಿ ಇಗರ್ಜಿಯಲ್ಲಿ ಡಿ.24 ರ ಸಂಜೆ ಕ್ರಿಸ್ಮಸ ಹಬ್ಬ ಸಡಗರ ಭಕ್ತಿಭಾವದಿಂದ ದಿವ್ಯ ಬಲಿಪೂಜೆಯನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು.
ದಿವ್ಯ ಬಲಿಪೂಜೆಯನ್ನು ಅರ್ಪಿಸಿದ ಚರ್ಚಿನ ಧರ್ಮಗುರು ಅ।ವಂ। ಪೌಲ್ ರೇಗೊ ನಮಗೋಸ್ಕರ “ದೇವರು ಮನುಸ್ಯನಾಗಿದ್ದಾನೆ’ ದೇವರು ನಮನ್ನು ಎಷ್ಟು ಪ್ರೀತಿಸುತ್ತಾರೆಂದರೆ, ಅವರು ತನ್ನ ಒಬ್ಬನೇ ಪುತ್ರ ಯೇಸುನನ್ನು ನಮಗೊಸ್ಕರ ಜಗತ್ತಿಗೆ ಅರ್ಪಿಸಿದರು, ಏಕೆಂದರೆ ದೇವರು ನಮ್ಮನ್ನು ಅಷ್ಟು ಪ್ರೀತಿಸುತ್ತಾರೆ, ದೇವರು ನಮ್ಮೆಲ್ಲರನ್ನು ಪ್ರೀತಿಸುತ್ತಾರೆ, ಯೇಸುವು ಅತೀ ಕೆಳಗಿನವರಿಗೆ ಮೇಲೆತ್ತಲು, ಪಾಪಿಗಳನ್ನು ಕ್ಶಮಿಸಿ ಪರಿರವರ್ತಿಸಲು ಬಂದವನು. ಈ ಪ್ರಪಂಚದಲ್ಲಿ ಹುಟ್ಟಿ ತನ್ನ ಪಿತನ ಪ್ರೀತಿಯನ್ನು ಮನುಜರಿಗೆ ಧಾರೆ ಎರೆದರು. ಯೇಸು ಅವರು ದೇವರ ಪ್ರೀತಿಯನ್ನು ಸಾರಿದರು. ಯೇಸುವನ್ನು ನಂಬಿ ಕೆಟ್ಟ ಜೀವನದಿಂದ ಪರಿವರ್ತನೆ ಹೊಂದಿ ಉತ್ತಮವಾದ ಜೀವನ ಸಾರಬೇಕು, ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ, ಇಂದು ನಮ್ಮ ನಮ್ಮ ಹ್ರದಯಗಳಲ್ಲಿ ಯೇಸು ಹುಟ್ಟಬೇಕು, ನಾವು ಕನಿಷ್ಟರಿಗೆ ಸಹಾಯ, ಪರರಿಗೆ ಪ್ರೀತಿ ಪ್ರೇಮ ಕೊಟ್ಟರೆ, ಸಂಬಂಧಗಳನ್ನು ಉತ್ತಮ ಪಡಿಸಿಕೊಂಡಾಗ ನಮ್ಮ ಹ್ರದಯಗಳಲ್ಲಿ ದೇವರು ಹುಟ್ಟುತ್ತಾನೆ, ಕ್ರಿಸ್ಮಸ್ ಅಂದರೆ ದೇವರ ಪ್ರೀತಿ ಮಮತೆಯ ಹಬ್ಬ’ ಎಂದು ತಿಳಿಸಿ, ಶುಭಾಷಯ ಕೋರಿ ವಂದಿಸಿದರು.
ದಾನಿಗಳ ಮೂಲಕ ಎಲ್ಲರಿಗೆ ಕೇಕ್ ಅನ್ನು ಎಲ್ಲರಿಗೆ ಹಂಚಲಾಯಿತು. ಬಲಿದಾನದ ಬಳಿಕ ಹೌಸಿ ಆಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಐ.ಸಿ.ವೈ.ಎಮ್. ಸಂಘಟನೆಯಿಂದ ಬಹುಮಾನಗಳನ್ನು ವಿತರಿಸಲಾಯಿತು.