ಶ್ರೀನಿವಾಸಪುರ : ರೈತರು ನೆಮ್ಮದಿ ಜೀವನ ನಡೆಸಿದರೆ ದೇಶ ಸಂವೃದ್ಧಿಯಾಗಲು ಸಾಧ್ಯ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ಅಭಿಪ್ರಾಯಪಟ್ಟರು
ತಾಲೂಕಿನ ಕಲ್ಲೂರು ಹಾಗು ಪಾಳ್ಯ ಗ್ರಾಮದ ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯಿಂದ ಅಟಲ್ ಭೂಜಲ್ ಯೋಜನೆಯಡಿಯಲ್ಲಿ ಲಘು ನೀರಾವರಿ ಘಟಕಗಳನ್ನು ಯಶಸ್ವಿಯಾದ ರೈತರ ಕೃಷಿ ಭೂಮಿಗೆ ಬುಧವಾರ ಬೇಟಿ ನೀಡಿ ಪರಿಶೀಲಿಸಿದರು.
2023-24 ನೇ ಸಾಲಿನಲ್ಲಿ ತಾಲೂಕಿನಲ್ಲಿ ಅಟಲ್ ಭೂಜಲ್ ಯೋಜನೆಯಡಿಯಲ್ಲಿ 239 ಸಾಮಾನ್ಯ ವರ್ಗ, 41 ಪರಿಶಿಷ್ಟ ವರ್ಗ ಮತ್ತು 26 ಪರಿಶಿಷ್ಟ ಪಂಗಡ ವರ್ಗ ಒಟ್ಟು 306 ರೈತರು 311 ಹೆಕ್ಟೇರ್ ಪ್ರದೇಶದಲ್ಲಿ ಶೇ 90 ರಷ್ಟು ಹಾಯಧನದಡಿ ಒಟ್ಟು 249.28 ಲಕ್ಷಗಳನ್ನು ಪಡೆದು ತಾಲೂಕಿನ ರೈತರು ವಿವಿಧ ಕೃಷಿ ಬೆಳೆಗಳಾದ ರಾಗಿ, ಮುಸುಕಿನ ಜೋಳ, ಅವರೆ ಮತ್ತು ತೊಗರಿ ಬೆಳೆಗಳನ್ನು ಅನಿರ್ಧಿಷ್ಟ ಮಳೆಯಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆದು ರೈತರ ಮುಖದಲ್ಲಿ ನಗೆ ಬೀರುವಂತಾಗಿದೆ ಎಂದರು.
ಇದೇ ರೀತಿ ಪ್ರತಿ ವರ್ಷ ಇನ್ನೂ ಹೆಚ್ಚಿನ ಸಂಖ್ಯೆ ರೈತರಿಗೆ ರಿಯಾಯಿತಿ ಧರದಲ್ಲಿ ಲಘು ನೀರಾವರಿ ಘಟಗಳನ್ನು ಕಾಲ ಕಾಲಕ್ಕೆ ಪಡೆದುಕೊಂಡಲ್ಲಿ ಉತ್ತಮವಾಗಿ ಬೆಳಗಳನ್ನು ಬೆಳೆದು ಆರ್ಥಿಕವಾಗಿ ಸಭಲರಾಗಬಹುದು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ .
ಮುಳಬಾಗಿಲು ತಾಲೂಕಿನ ಕೃಷಿ ಇಲಾಖೆ ಉಪನಿರ್ದೇಶಕ ಎಸ್.ನಾಗರಾಜ್, ರೈತರಾದ ಪಾಳ್ಯ ಮಂಜುನಾಥ್, ಕಲ್ಲೂರು ಬೈರೆಡ್ಡಿ, ನಾರಾಯಣಸ್ವಾಮಿ ಇದ್ದರು.
HOLY ROSARY CHURCH, KUNDAPUR – 450 th JUBILEE SOUVENIR 2021
ನಾನೇನು ಕೊಲೆಗಾರನಲ್ಲ ಯಾವುದೇ ತನಿಖೆಗೂ ಸಿದ್ದ, ನನ್ನ ಜಾತಿ ಪ್ರಮಾಣ ಪತ್ರದ ಬಗ್ಗೆ ಅಪಪ್ರಚಾರ: ಕೊತ್ತೂರು ಮಂಜುನಾಥ್
ಕೋಲಾರ,ಡಿ.26: 2018ರಲ್ಲಿ ನನ್ನ ಮೇಲೆ ಕೇಸ್ ದಾಖಲಾಗಿತ್ತು. ಅದರ ಮೇಲೆ ನಾನು ತಡೆಯಾಜ್ಞೆ ತಂದಿದ್ದೆ. ನಂತರ ವಜಾ ಮಾಡಲು ಕೋರಿದ್ದೆ. ಆದರೆ, ಈಗ ಅದನ್ನು ತಳ್ಳಿ ಹಾಕಿ ಪ್ರಕರಣ ಸಂಬಂಧ ನನ್ನ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಯಾರೇ ವಿಚಾರಣೆಗೆ ಕರೆದರೂ ನಾನು ಸಹಕರಿಸುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು
ನಗರದ ತಮ್ಮ ಕಛೇರಿಯಲ್ಲಿ ತಮ್ಮ ಮೇಲಿನ ಎಫ್ಐಆರ್ ವಿರುದ್ಧದ ಮೇಲ್ಮನವಿ ವಜಾ ಸಂಬಂಧ ಪ್ರತಿಕ್ರಿಯಿಸಿ ಅವರು ಈಗ ಏನೇನೋ ಊಹಾಪೆÇೀಹ ಎದ್ದಿದೆ. 2010ರಿಂದ ಇಂಥ ವಿಚಾರಗಳೇ ಚರ್ಚೆಯಲ್ಲಿವೆ. ಕೊತ್ತೂರು ಮಂಜುನಾಥ್ಗೆ ಈ ರೀತಿ ಆಗುತ್ತದೆ, ಆ ರೀತಿ ಆಗುತ್ತದೆ. ಶಾಸಕ ಸ್ಥಾನ ಹೋಗಿಬಿಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ರೀತಿ ಹೇಳಿಹೇಳಿಯೇ 2013ರ ವಿಧಾನಸಭೆ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ನನ್ನ ಮೇಲೆ ಸೋತಿದ್ದ ಮುನಿಆಂಜಿನಪ್ಪ ಅವರನ್ನು ದಾರಿ ತಪ್ಪಿಸಿದ್ದರು. ಆತನಿಂದ ನ್ಯಾಯಾಲಯದಲ್ಲಿ ಸುಳ್ಳು ಹೇಳಿಸಿದರು. ಈಗ ಅಂಥ ಮಾತು ಮತ್ತೆ ಶುರುವಾಗಿದೆ. ಏನೇನೋ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದರು
ನನ್ನ ಬಗ್ಗೆ ಪೂರ್ಣ ಮಾಹಿತಿ ಬೇಕೆಂದರೆ ನನ್ನ ಗ್ರಾಮ ಪಂಚಾಯಿತಿಗೆ ಹೋಗಿ ಕೇಳಿದರೆ ಸಿಗುತ್ತದೆ. ನನ್ನ ತಂದೆ, ತಾಯಿ, ಹುಟ್ಟೂರು, ಅಜ್ಜ, ಅಜ್ಜಿ ಬಗ್ಗೆ ಮಾಹಿತಿ ಗೊತ್ತಾಗುತ್ತದೆ. ಮುಳಬಾಗಿಲಿನಲ್ಲಿ ನನ್ನ ಮೇಲೆ ಯಾರಾದರೂ ಪ್ರತಿಭಟನೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದ ಅವರು ಪ್ರಕರಣದಲ್ಲಿ ವಿಚಾರಣೆಗೆ ಸಹಕಾರ ನೀಡುತ್ತೇನೆ. ತಪ್ಪಿಸಿಕೊಂಡು ಎಲ್ಲಿಗೂ ಹೋಗಲ್ಲ. ಸಮಸ್ಯೆ ಏನಾದರೂ ಇದ್ದಿದ್ದರೆ ಕಚೇರಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದೆನೆ ನಾನೇನು ಕೊಲೆ ಮಾಡಿದ್ದೇನೆಯೇ ಎಂದರು.
ಬಿಜೆಪಿಯವರು ಆರೋಪ ಮಾಡಿದಂತೆ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಯಾರೂ ಪ್ರಯತ್ನಿಸಿಲ್ಲ. ಕೊಲೆ ಮಾಡುವುದು ಎಂದರೆ ಏನು ದೇವಸ್ಥಾನದ ಮುಂದೆ ಕೋಳಿ, ಕುರಿ ಕುಯ್ಯುವುದೇ ಅಂದು ಬೆಳಗಾವಿಯಲ್ಲಿ ಅವರನ್ನು ಪೆÇಲೀಸರು ಹೊರಗಡೆ ಕರೆದುಕೊಂಡು ಹೋಗಿ ಒಳ್ಳೆಯ ಕೆಲಸ ಮಾಡಿದ್ದಾರೆ ಒಂದು ವೇಳೆ ಆ ಸ್ಥಳದಲ್ಲಿದ್ದು, ಗಲಾಟೆ ಆಗಿದ್ದಾರೆ ಯಾರು ಜವಾಬ್ದಾರಿ ಆಗುತ್ತಿದ್ದರು ಆಗ ಪೆÇಲೀಸರು ಭದ್ರತೆ ನೀಡಿಲ್ಲ ಎಂಬುದಾಗಿ ಬಿಜೆಪಿಯವರು ತಗಾದೆ ತೆಗೆಯುತ್ತಿದ್ದರು ಶಾಸಕರನ್ನು ಕೊಲೆ ಮಾಡುವುದೆಂದರೆ ತಮಾಷೆನಾ ಹುಡುಗಾಟನಾ ಬಿಜೆಪಿಯವರು ಏನೋ ಮಾತನಾಡುತ್ತಾರೆ. ಅದು ಅಷ್ಟೊಂದು ಸುಲಭದ ಕೆಲಸವಲ್ಲ ಎಂದು ತಿರುಗೇಟು ನೀಡಿದರು.
ಶಾಸಕ ಮುನಿರತ್ನ ಮೇಲೆ ಯಾರೂ ಪುಂಡರು ಮೊಟ್ಟೆ ಎಸೆದಿರಬಹುದು. ಕೊಲೆ ಮಾಡುವಂತಿದ್ದರೆ ಯಾರಾದರೂ ಹೇಳಿಕೊಂಡು ಬಂದು ಕೊಲೆ ಮಾಡುತ್ತಾರೆಯೇ? ಅದರಲ್ಲೂ ತಲೆ ಮಧ್ಯ ಭಾಗಕ್ಕೆ ಗುರಿ ಇಟ್ಟು ಮೊಟ್ಟೆ ಎಸೆದಿದ್ದಾರೆ. ಶಾರ್ಟ್ ಶೂಟರ್ಗಳಿಗೆ ಮಾತ್ರ ಅದು ಸಾಧ್ಯ. ನನ್ನ ಪ್ರಕಾರ ಮುನಿರತ್ನ ಅವರೇ ಹೇಳಿ ಮೊಟ್ಟೆ ಹೊಡೆಸಿಕೊಂಡಿರಬಹುದು. ಆಕಸ್ಮಾತ್ ಉದ್ದೇಶಪೂರ್ವಕವಾಗಿ ಎಸೆದಿದ್ದರೆ ತಪ್ಪು. ಅವರೊಬ್ಬ ಶಾಸಕ. ಆ ರೀತಿ ಮಾಡಬಾರದು. ಶಾಸಕರಿಗೆ ಘನತೆ, ಗೌರವವಿರುತ್ತದೆ. ಹೀಗಾಗಿ, ತನಿಖೆ ನಡೆಸಿ ಕ್ರಮ ಆಗಬೇಕು ಎಂದರು.
ಹೆಚ್ಚುವರಿ 30 ಕೋಟಿ ಅನುದಾನ: ರಸ್ತೆ ಅಭಿವೃದ್ಧಿಗೆಂದು ಕೋಲಾರಕ್ಕೆ 30 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಬಹುತೇಕ ಕಾಮಗಾರಿಗಳಿಗೆ ಟೆಂಡರ್ ಆಗಿದೆ. ಹಳ್ಳಿಗಳಲ್ಲೂ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಹಿಂದೆ ಪಿಎಂಜಿವೈಎಸ್, ಸಿಎಂಜಿವೈಎಸ್ ಯೋಜನೆ ಇದ್ದದ್ದು ಈಗ ಪ್ರಗತಿ ಪಥವಾಗಿದೆ. ಈ ಯೋಜನೆಯಡಿ ಪ್ರತಿ ಕ್ಷೇತ್ರದಲ್ಲಿ 40 ಕಿ.ಮೀ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಪ್ರಸ್ತಾವ ಕಳುಹಿಸಿಕೊಡಲಾಗಿದೆ ಎಂದರು.
ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ಎಐಸಿಸಿ ಸಭೆ ನಡೆದು ನೂರು ವರ್ಷಗಳಾಗಿದೆ. ಆ ನೆನಪಿನಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ನಿಂದ ಸಮಾವೇಶ ನಡೆಯುತ್ತಿದ್ದು, ಶುಕ್ರವಾರದ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ ಎಂದರು ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಎನ್.ಅಂಬರೀಷ್, ಅಫ್ಸರ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಖಾದ್ರಿಪುರ ಬಾಬು, ಕಿಲಾರಿಪೇಟೆ ಮಣಿ ಮುಂತಾದವರು ಇದ್ದರು.
ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ಶಾಂತಿ ದೊರಕುತ್ತದೆ – ತೂಪಲ್ಲಿ ಆರ್.ನಾರಾಯಣಸ್ವಾಮಿ
ಶ್ರೀನಿವಾಸಪುರ : ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ದೇವರ ಸೇವೆ ಮಾಡುವುದರಿಂದ ದೊರೆಯುವ ಶಾಂತಿ ಬೇರಾವ ಕೆಲಸದಲ್ಲೂ ದೊರೆಯುವುದಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಗುರುವಾರ ಮುಜರಾಯಿ ದೇವಾಲಯಗಳ ಆರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ದೇವಾಲಯಗಳಲ್ಲಿ ಅರ್ಚಕರ ವೃತ್ತಿಯನ್ನ ಮಾಡುವುದು ಕಷ್ಟದ ಕೆಲಸ ಆದರೂ ಸಹ ದೇವಾಲಯಗಳನ್ನು ಅಭಿವೃದ್ಧಿಯಾಗುತ್ತಿರುವುದು ಶ್ಲಾಘನೀಯ. ಗ್ರಾಮೀಣ ಭಾಗದಲ್ಲಿ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳನ್ನು ಗ್ರಾಮದ ಎಲ್ಲಾ ಸಮುದಾಯಗಳ ಸಹಕಾರ ಪಡೆದು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ದೇವಾಲಯಗಳ ಅಭಿವೃದ್ಧಿಗೆ ಹಾಗು ಧಾರ್ಮಿಕ ಕಾರ್ಯಗಳಿಗೆ ನಮ್ಮ ಸಹಕಾರವು ಇರುತ್ತದೆ ಎಂದು ನುಡಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ರಂಗರಾಜನ್ ಮಾತನಾಡಿ ಅರ್ಚಕರು ಸಂಘನೆಯದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ತಾಲೂಕಿನ ಕೇಂದ್ರದಲ್ಲಿ ಒಂದು ಸಮುದಾಯಭವನ್ನ ನಿರ್ಮಿಸಿಕೊಡಲು ತಹಶೀಲ್ದಾರ್ ರವರಿಗೆ ಒತ್ತಾಯಿಸಿದರು.
ಇದೇ ಸಮಯದಲ್ಲಿ 2025 ನೂತನ ವರ್ಷದ ಕ್ಯಾಲೆಂಡರ್ ಹಾಗು ಅರ್ಚಕರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಹಿರಿಯ ಅರ್ಚಕರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಯಿತು. ಉಪತಹಶೀಲ್ದಾರ್ ಕೆ.ಎಲ್.ಜಯರಾಮ್, ಮುಖಂಡ ಕೆ.ಕೆ.ಮಂಜುನಾಥ್, ತಾಲೂಕು ಸಂಘದ ನಿಕಟಪೂರ್ವ ಖಜಾಂಚಿ ಡಿ.ರಾಜಣ್ಣ, ಮುಜರಾಯಿ ಗುಮಾಸ್ತೆ ಶೈಲಾಜ, ಎಫ್ಡಿಎ ರಾಜೇಶ್ವರಿ, ಜಿ.ಶ್ರೀನಿವಾಸಚಾರ್, ಉಪಾಧ್ಯಕ್ಷ ಕೆ.ವೆಂಕಟರಮಣಚಾರ್, ಜನಾರ್ಧನಾಚಾರ್, ಜಂಟಿ. ಕಾರ್ಯದರ್ಶಿ ವೈ.ಆರ್.ಶ್ರೀನಾಥ್ಚಾರ್, ಅರ್ಚಕರಾದ ಅರುಣ್ಕುಮಾರ್, ಕೆ.ನಾಗರಾಜಾಚಾರ್, ನವೀನ್, ಪಿ.ಪ್ರಸನ್ನಕುಮಾರ್, ವಿ.ಸುಬ್ರಮಣ್ಯಂ, ಹೆಚ್.ಜಿ.ನಾಗರಾಜ್ರಾವ್, ಆರ್.ಲಕ್ಷ್ಮೀನಾರಾಯಣಚಾರ್, ವೆಂಕಟರಮಣರಾವ್, ಎಸ್.ಶಿವನಂಜಯ್ಯ ಹಾಗು ಇತರರು ಇದ್ದರು.
ಕೋಲಾರ : ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅಧಿಕಾರ ಸ್ವೀಕಾರ
ಕೋಲಾರ : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅವರು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ಮಂಗಳ, ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
2012ರ ಐ.ಎ.ಎಸ್ ಬ್ಯಾಚ್ನ ಅಧಿಕಾರಿಯಾಗಿರುವ ಡಾ.ಎಂ.ಆರ್ ರವಿಯವರು ಶೈಕ್ಷಣಿಕವಾಗಿ ಎಂ.ಎ (ಇತಿಹಾಸ) ಎಂ.ಎ (ಇಂಗ್ಲೀಷ್) ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುತ್ತಾರೆ. ಇಂಗ್ಲೀಷ್ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಇವರು ಮೈಸೂರಿನ ಪ್ರಮುಖ ಆಂಗ್ಲ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಅನುಭವ ಹೊಂದಿರುತ್ತಾರೆ.
ವಿವಿಧ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಅನೇಕ ವಿದ್ಯಾರ್ಥಿಗಳ ಜೀವನ ದೆಸೆಯನ್ನು ತಿರುಗಿಸಿದ ಅವರು ಕಾಲೇಜು ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕರಾಗಿ, ಹುಣಸೂರಿನಲ್ಲಿ ಮತ್ತು ಕಾರವಾರದಲ್ಲಿ ಸಹಾಯಕ ಆಯುಕ್ತರಾಗಿ ಕೊಡಗಿನಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿ ವಿವಿಧ ಹುದ್ದೆಗಳಲ್ಲಿ ಕೆ.ಎ.ಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಐ.ಎ.ಎಸ್ ಅಧಿಕಾರಿಯಾಗಿ ಅವರು ಮೈಸೂರು ನಗರ ಆಯುಕ್ತರಾಗಿ ಶಿವಮೊಗ್ಗದಲ್ಲಿ ಪೌರಾಯುಕ್ತರಾಗಿ, ಮೈಸೂರಿನಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಎಂ.ಡಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೇ ಮಂಗಳೂರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಕರಾಗಿ, ಜವಳಿ ಅಭಿವೃದ್ಧಿ ಆಯುಕ್ತರಾಗಿ, ಕೈಮಗ್ಗ ನಿದೇಶಕರಾಗಿ, ಬೆಂಗಳೂರು ಹಾಗೂ ಚಾಮರಾಜನಗರಗಳಲ್ಲಿ ಜಿಲ್ಲಾಧಿಕಾರಿಯಾಗಿ ಸರ್ಕಾರದ ವಿವಿಧ ಅಂತಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಈ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಗ್ರ ಶಿಶು ರಕ್ಷಣಾ ಯೋಜನಾ ನಿದೇಶಕರಾಗಿದ್ದರು.
ಆಡಳಿತದಲ್ಲಿ ಸಮನ್ವಯತೆ:
ಬೆಂಗಳೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಕೋಲಾರ ತನ್ನದೇ ರೀತಿಯಲ್ಲಿ ವಿಶಿಷ್ಟವಾದ ಜಿಲ್ಲೆ. ಇಲ್ಲಿ ಕೆಲಸ ಮಾಡುವುದು ಉತ್ತಮ ಅವಕಾಶ ಎಂದು ಭಾವಿಸಿದ್ದೇನೆ. ಇಲ್ಲಿ ಸಾಕಷ್ಟು ಅವಕಾಶಗಳಿವೆ. ಇಲ್ಲಿನ ಜನರು ಹಲವು ರೀತಿಯ ಚಿಂತನೆ ಇರುವವರು. ನಮ್ಮ ಕೆಲಸ ಇಲ್ಲಿನ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಆಡಳಿತದಲ್ಲಿ ಸಮನ್ವಯತೆ ಸಾಧಿಸುವುದು. ವೈಯಕ್ತಿಕವಾಗಿಯೂ, ವೃತ್ತಿ ಜೀವನದಲ್ಲೂ ಈ ಜಿಲ್ಲೆಯಲ್ಲಿ ಕೆಲಸ ಮಾಡುವುದು ಒಂದು ಮೈಲಿಗಲ್ಲು ಎಂದು ಭಾವಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದು ಬಹಳಷ್ಟು ಅವಕಾಶಗಳು ತುಂಬಿರುವ ಜಿಲ್ಲೆ ಅನೇಕ ಉದ್ಯಮಗಳಿವೆ, ಸಂಸ್ಥೆಗಳಿವೆ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬಹುದಾದ ಸಾಧ್ಯತೆಯಿರುವ ಜಿಲ್ಲೆ. ಇಲ್ಲಿನ ಸಮನ್ವಯತೆ ಕೊರತೆಗಳನ್ನು ಸರಿದೂಗಿಸುಕೊಂಡು ಹೋಗಬೇಕಾಗಿದೆ. ಜಿಲ್ಲೆಯ ಜನರ ಜೊತೆಗೆ ಸಂಪರ್ಕದಲ್ಲಿ ಇದ್ದುಕೊಂಡು ಎಲ್ಲರ ಅಭಿಪ್ರಾಯಗಳನ್ನು ಪಡೆದು ಸಮನ್ವಯದ ಕೊರತೆಯನ್ನು ಸರಿಪಡಿಸುವ ಕೆಲಸ ಆಗಬೇಕಾಗಿದೆ.
ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡಯಿದೆ. ಅವರು ಜವಬ್ದಾರಿಯುತವಾಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಜನರು ಪ್ರಜ್ಞಾವಂತರಾಗಿರುವುದರಿಂದ ಅಧಿಕಾರಿಗಳ ಜೊತೆಗೆ ಕೆಲಸ ಮಾಡಿಸಿಕೊಳ್ಳುತ್ತಾರೆ. ಹೊಣೆಗಾರಿಕೆಯಿಂದ ಅಧಿಕಾರಿಗಳು ಜನ ಸಾಮಾನ್ಯರಿಗೆ ತ್ವರಿತ ಸ್ಪಂಧನೆ ನೀಡಬೇಕು. ಜಿಲ್ಲೆಯ ಬಗ್ಗೆ ಸಮಗ್ರ ಚಿತ್ರಣ ಪಡೆದು ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಲಾಗುವುದು ಎಂದರು
ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯತ್ತಾ ಕೊಂಡ್ಯೂವುದು ಶಿಕ್ಷಕರ ಜವಾಬ್ದಾರಿ – ಅಬ್ದುಲ್ ಮುಜೀದ್
ಶ್ರೀನಿವಾಸಪುರ : ಶಾಲೆಗಾಗಿ ನಾವು ಇದ್ದೇವೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯತ್ತಾ ಕೊಂಡ್ಯೂವುದು ಶಿಕ್ಷಕರ ಜವಾಬ್ದಾರಿ ಎಂದು ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಮುಜೀದ್ ಹೇಳಿದರು.
ಪಟ್ಟಣದ ಜಡ್.ಹೆಚ್.ಮೊಹುಲ್ಲಾ ದ ಸರ್ಕಾರಿ ಉರ್ದು ಹಾಗೂ ಇಂಗ್ಲೀಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಎ.ಪಿ.ಜೆ ಅಬ್ದುಲ್ ಕಲಾಂ ವೆಲ್ಫೇರ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುತಿನ ಚೀಟಿ ಹಾಗು ಅಂಕ ಪಟ್ಟಿ ಲೇಖನಿ ಮತ್ತು ನೂತನ ವರ್ಷದ ಕ್ಯಾಲೆಂಡರ್ ವಿತರಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದು, ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಹೇಳಿಕೊಡಲಾಗುತ್ತಿದ್ದು, ವಿದ್ಯಾರ್ಥಿಗಳ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಖಜಾಂಚಿ ಎ.ಟಿ.ಎಸ್. ರಿಜ್ವಾನ್ ಮಾತನಾಡಿ ಈ ಶಾಲೆಯಲ್ಲಿ ೧೭೫ ವಿದ್ಯಾರ್ಥಿಗಳು ಇದ್ದು ಶಾಲಾ ಕೊಠಡಿಗಳ ಕೊರತೆ ಇದ್ದು, ಈ ಸಂಬಂದ ಶಿಕ್ಷಣ ಸಚಿವರಿಗೆ ಕೊಠಡಿಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಡಲು ಅಹವಾಲನ್ನು ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಶಾಲೆಗೆ ಶೈಕ್ಷಣಿಕ ಮುನ್ನೆಡಿಸಿಕೊಡಬೇಕು ಎಂದು ಮನವಿ ಮಾಡಿದರು.
ಉಪಾಧ್ಯಕ್ಷ ಇಲಿಯಾಜ್ ಪಾಷ, ಸಂಘನಾ ಕಾರ್ಯದರ್ಶಿ ಇಂತಿಯಾಜ್, ಕಾರ್ಯದರ್ಶಿ ಅಕ್ರಂಪಾಷ, ಸದಸ್ಯರಾದ ಹಿದಾಯುತುಲ್ಲಾ ಖಾನ್, ಅಲ್ಲಾಬಕಷ್, ಎಸ್ಡಿಎಂಸಿ ಅಧ್ಯಕ್ಷ ಹಿದಾಯುತುಲ್ಲಾ ಖಾನ್, ಉಪಾಧ್ಯಕ್ಷ ಸಫೀನಾ, ಮುಖ್ಯ ಶಿಕ್ಷಕ ಮಹ್ಮದ್ ಸಾಧಿಕ್, ಶಿಕ್ಷಕರಾದ ರಿಹಾನಖಾನಮ್, ಅಸ್ಮಸುಲ್ತಾನ , ಭಾರತಮ್ಮ, ನುಸ್ರಕ್ ಅಮ್ಮಾಜಾನ್, ಗುಲ್ ಅಬ್ ಷ, ಕುಬ್ರಾಐಮನ್ ಇದ್ದರು.
ಹೆಮ್ಮಾಡಿ ಕಟ್ಟು :- ಸತ್ಯನಾರಾಯಣ ಪೂಜೆಗೆ ಆಮಂತ್ರಣ
ಶ್ರೀ ಗೋಪಾಲಕೃಷ್ಣ ಮಹಾಗಣಪತಿ ದೇವಸ್ಥಾನ ಕಟ್ಟು ಹೆಮ್ಮಾಡಿ ಇಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಮಹಾಪೂಜಾ ಕಾರ್ಯಕ್ರಮವು ಡಿಸೆಂಬರ್ 29ರಂದು ಜರುಗಲಿರುವುದು ಬೆಳಿಗ್ಗೆ ಗಂಟೆ 9ಕ್ಕೆ ಸರಿಯಾಗಿ ಸತ್ಯನಾರಾಯಣ ಪೂಜೆ ಹಾಗೂ ಗೋಪಾಲಕೃಷ್ಣ ಬಾಲಕಿಯರ ಭಜನಾ ತಂಡ ಕಟ್ಟು ಹೆಮ್ಮಾಡಿ ಇವರಿಂದ ಕುಣಿತ ಭಜನಾ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:30ಕ್ಕೆ ಸರಿಯಾಗಿ ಅನ್ನ ಸಂತರ್ಪಣೆ ನಡೆಯಲಿರುವುದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಶಾಲಾ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ರಾತ್ರಿ ಗಂಟೆ ಹತ್ತಕ್ಕೆ ಸರಿಯಾಗಿ ಓಂಕಾರ್ ಕಲಾವಿದರು ಕನ್ನಿಕೆರೆ ತೆಕ್ಕಟ್ಟೆ ಇವರಿಂದ ಈ ವರ್ಷದ ಹೊಚ್ಚಹೊಸ ನೆಗೆ ನಾಟಕ “ಆಪ್ದೆಲ್ಲ ಒಳ್ಳೆಯದಕ್ಕೆ” ಎನ್ನುವ ನಾಟಕ ಜರಗಲಿರುವುದು
ಊರಿನ ಪರ ಊರಿನ ಭಕ್ತಾದಿಗಳನ್ನು ಗೋಪಾಲಕೃಷ್ಣ ದೇವಸ್ಥಾನ ಹೆಮ್ಮಾಡಿ ಕಟ್ಟು ಇದರ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಊರ ಮಾನ್ಯರು ನಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದಾರೆ.
L ನ ಸ್ನೇಹಿತರು, 3L ನ 12 ಬಡ ಕುಟುಂಬಗಳ ಕ್ರಿಸ್ಮಸ್ ಆಚರಣೆ
ಜನರು ಕ್ರಿಸ್ಮಸ್ ಅನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ನಾನು ಕೂಡ ಅದನ್ನು ನನ್ನದೇ ಆದ ರೀತಿಯಲ್ಲಿ ಆಚರಿಸಿದೆ. ನಾನು ಗೋವಾದಿಂದ ಹೊರಗಿದ್ದೇನೆ. ನಾನು ಇತರ ನಂಬಿಕೆಗಳ ಮೂರು ಬಡ ಕುಟುಂಬಗಳೊಂದಿಗೆ ಕ್ರಿಸ್ಮಸ್ ಊಟಕ್ಕೆ ಸೇರಿಕೊಂಡೆ. ಅವರು ಬಹಳ ಪ್ರೀತಿ ಮತ್ತು ಉತ್ಸಾಹದಿಂದ ಸರಳವಾದ ಆದರೆ ರುಚಿಕರವಾದ ಆಹಾರವನ್ನು ಬೇಯಿಸಿದರು.
ಈ ವರ್ಷ, ನಾವು 3L ನ ಸ್ನೇಹಿತರು, 3L ನ 12 ಬಡ ಕುಟುಂಬಗಳನ್ನು (ಕೇವಲ ಎರಡು ಕ್ಯಾಥೋಲಿಕ್ ಕುಟುಂಬಗಳು) ಪ್ರಾಯೋಜಿಸಿದ್ದೇವೆ, ಅವರ ಕ್ರಿಸ್ಮಸ್ ಊಟಕ್ಕೆ. ಅವರಿಗೆ ಒಂದು ಕಿಲೋಗ್ರಾಂ ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಒದಗಿಸಲಾಯಿತು ಮತ್ತು ಕೋಳಿ ಖರೀದಿಸಲು ನಗದು ನೀಡಲಾಯಿತು. 22 ರ ಮೊದಲು ಅವರಿಗೆ ಕ್ರಿಸ್ಮಸ್ ಹ್ಯಾಂಪರ್ಗಳನ್ನು ನೀಡಲಾಯಿತು. ಮಕ್ಕಳೊಂದಿಗೆ ನಮ್ಮ ಸಂತೋಷವನ್ನು ಹಂಚಿಕೊಳ್ಳುವ ಒಂದು ಸಣ್ಣ ಗೆಸ್ಚರ್. ಆದರೆ ಅವರ ಪಾಲಿಗೆ ಅದೊಂದು ವರದಾನವಾಗಿತ್ತು.
ಕಡಿಮೆ ಸವಲತ್ತುಗಳನ್ನು ಹೊಂದಿರುವ ಅಂಚಿನಲ್ಲಿರುವ ಜನರನ್ನು ಹಂಚಿಕೊಳ್ಳುವಲ್ಲಿ ಮತ್ತು ಕಾಳಜಿ ವಹಿಸುವುದರಲ್ಲಿ ಹೆಚ್ಚಿನ ಸಂತೋಷವಿದೆ. – ಪ್ರತಾಪಾನಂದ ನಾಯ್ಕ್, ಎಸ್.ಜೆ
Friends of L, Christmas celebration of 12 poor families of 3L
People celebrate Christmas in different ways. I too celebrated it in my own way. I am out of Goa. I joined for Christmas lunch with three poor families of other faiths. They cooked simple but tasty food with great love and enthusiasm.
This year, we Friends of 3L, sponsored 12 poor families (only two were Catholic families) of 3L, for their Christmas lunch. They were provided one kilogram of good quality of basmati rice and given cash to buy chicken. They were given Christmas hampers prior to 22nd. A small gesture of sharing our joy with the children. But for them it was a blessing beyond words.
There is great joy in sharing and caring the less privileged marginalized people.– Pratapananda Naik, sj
ಕೋಟ ಭಕ್ತಿ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬದ ಆಚರಣೆ
ಕೋಟಃ ಡಿಸೆಂಬರ್ 24 ರ ಸಂಜೆ ಕೋಟ ಸಂತ ಜೋಸೆಫ್ ಇಗರ್ಜಿಯಲ್ಲಿ, ಧರ್ಮಗುರು ವಂ।ರೆಜಿನಾಲ್ಡ್ ಪಿಂಟೊ ಕ್ರಿಸ್ಮಸ್ ಹಬ್ಬದ ಪವಿತ್ರ ಬಲಿದಾನವನ್ನು ಅರ್ಪಿಸಿ, ಭಕ್ತಿ ಸಂಭ್ರಮದ ಕ್ರಿಸ್ಮಸ್ ಹಬ್ಬದ ಆಚರಣೆಯನ್ನು ಮಾಡಲಾಯಿತು. ಚರ್ಚಿನ ಧರ್ಮಗುರುಗಳಾದ ವಂ। ಸ್ಟ್ಯಾನಿ ತಾವ್ರೊ ಮತ್ತು ವಂ।ದೀಪಕ್ ಪುಟಾರ್ಡೊ ಸಹಬಲಿದಾನವನ್ನು ಅರ್ಪಿಸಿದರು.
ಭಕ್ತಾಧಿಗಳು ಕ್ರಿಸ್ಮಸ್ ಭಕ್ತಿ ಗೀತೆಗಳನ್ನು ಹಾಡಿದರು. ವಂ। ಸ್ಟ್ಯಾನಿ ತಾವ್ರೊ ಕ್ರತ್ಜನತೆ ಮತ್ತು ಶುಭಾಷಗಳನ್ನು ಕೋರಿದರು. ಬಲಿ ಪೂಜೆಯ ನಂತರ ಭಕ್ತಾದಿಗಳು ಪರಸ್ಪರ ಶುಭಾಷಯಗಳನ್ನು ಹಂಚಿಕೊಂಡರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ನಿಧನರಾದರು
ದೆಹಲಿ, ಡಿ. 26 ; ಭಾರತದ ಖ್ಯಾತ ಅರ್ಥ ಶಾಸ್ತ್ರಜ್ನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ತಮ್ಮ 92 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಮಾಜಿ ಪ್ರಧಾನಿ ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು
ಸಿಂಗ್ ಅವರು 33 ವರ್ಷಗಳ ಅವಧಿಯ ನಂತರ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು. ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವರಾದ ತಿಂಗಳುಗಳ ನಂತರ ಅವರು ಅಕ್ಟೋಬರ್ 1991 ರಲ್ಲಿ ರಾಜ್ಯಸಭೆಯನ್ನು ಪ್ರವೇಶಿಸಿದರು.
ಭಾರತದ ಆರ್ಥಿಕ ಉದಾರೀಕರಣದ ವಾಸ್ತುಶಿಲ್ಪಿ, ಸಿಂಗ್ ಅವರು 33 ವರ್ಷಗಳ ಅವಧಿಯ ನಂತರ ಏಪ್ರಿಲ್ 2024 ರಲ್ಲಿ ರಾಜ್ಯಸಭೆಯಿಂದ ನಿವೃತ್ತರಾಗಿದ್ದರು.
ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ಸೆಪ್ಟೆಂಬರ್ 26, 1932 ರಂದು ಜನಿಸಿದರು.
ಡಾ. ಮನಮೋಹನ್ ಸಿಂಗ್ ಅವರು 1972 ರಲ್ಲಿ ಹಣಕಾಸು ಸಚಿವಾಲಯದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರು 1982-1985 ರ ಅವಧಿಯಲ್ಲಿ ಆರ್ಬಿಐ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದರು. ಅವರು ಸಿಖ್ ಸಮುದಾಯದ ಏಕೈಕ ಸಿಖ್ ಪ್ರಧಾನಿ ಮಂತ್ರಿಯಾಗಿದ್ದರು. ಭಾರತ ದೇಶ ಮತ್ತು ಈಡೀ ಜಗತ್ತು ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾಲದಲ್ಲಿ, ಅವರ ಆರ್ಥಿಕ ಪರಿಸ್ಥಿತಿಯಿಂದ ಭಾರತವನ್ನು ತ್ತಮ್ಮ ಆರ್ಥಿಕ ನೀತಿಗಳಿಂದ ಮೇಲಕ್ಕೆ ಎತ್ತಿದಂತ ಧಿಮಂತ ಪ್ರಧಾನಿಯಾಗಿದ್ದರು.