ಬೀಜಾಡಿ; ದಿನಾಂಕ :- 28/12/2024 ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿಸೋಜಾ ರವರು ಹುತಾತ್ಮರಾದ ಯೋಧ ಶ್ರೀ ಅನೂಪ್ ಪೂಜಾರಿ ಬೀಜಾಡಿ ಯವರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸ್ವಾಂತ್ವನ ತಿಳಿಸಿ ಧೈರ್ಯ ತುಂಬಿದರು.
ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರನ್ನು ಬೇಟಿ ಮಾಡಿ ಸರಕಾರದ ವತಿಯಿಂದ ಸಿಗುವಂತಹ ಸವಲತ್ತುಗಳು ಹಾಗೂ ಪರಿಹಾರ ಸಿಗುವಂತೆ ಮಾತನಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಶೋಕ್ ಪೂಜಾರಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು , ಬಿ ಹಿರಿಯಣ್ಣ ಕೆ ಎಫ್ ಡಿ ಸಿ ಮಾಜಿ ಅಧ್ಯಕ್ಷರು , ವಿನೋದ್ ಕ್ರಾಸ್ಟೊ ಅಧ್ಯಕ್ಷರು ನಗರ ಯೋಜನಾ ಪ್ರಾಧಿಕಾರ , ರೋಷನ್ ಬರೆಟೊ ಪಂಚಾಯತ್ ಸದಸ್ಯರು , ಅಭಿಜಿತ್ ಪೂಜಾರಿ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರು, ಅಶೋಕ್ ಸುವರ್ಣ ನಾಮನಿರ್ದೇಶಿತ ಸದಸ್ಯರು, ಜೋಸೆಪ್ ರೆಬೆಲ್ಲೋ ,ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಇತರ ಮುಖಂಡರು ಉಪಸ್ಥಿತರಿದರು.