

ಕುಂದಾಪುರ: ಹೆಲ್ಪಿಂಗ್ ಹ್ಯಾಂಡ್ಸ್ ಚಾರೀಟೇಬಲ್ ಟೃಸ್ಟ್ (ರಿ.) ಕುಂದಾಪುರ ಇವರು ಕೋಟೇಶ್ವರ ಕೊಡಿ ಹಬ್ಬದಲ್ಲಿ ಮೂರು ದಿನಗಳ ಕಾಲ ವಿಶೇಷ ವಾದ ಬ್ರಹತ್ ವೇಷ ಧರಿಸಿ ಐದು ಬಡ ಮಕ್ಕಳ ವೈಧ್ಯಕೀಯ ಚಿಕಿತ್ಸೆಗಾಗಿ ಒಟ್ಟು 2,00,000 ದೇಣಿಗೆ ಸಂಗ್ರಹ ಮಾಡಿದ್ದು ದಿನಾಂಕ 04-12-23 ರಂದು ದೇಣಿಗೆ ಸಂಗ್ರಹಿಸಿದ ಹಣವನ್ನು ಶ್ರೀ ಕೋಟಿಲಿಂಗೆಶ್ವರ ದೇವಸ್ಥಾನದಲ್ಲಿ ಮಕ್ಕಳ ಪೋಷಕರ ಕೈಗೆ ಚೆಕ್ ಮೂಲಕ ಹಸ್ತಾಂತರ ಮಾಡಲಾಯಿತು.
ಈ ಸಂಧರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಮಂಡಳಿಯ ಸದಸ್ಯರಾದ ಶ್ರೀ ಸುರೇಶ್ ಬೆಟ್ಟಿನ್ , ಮಂಜುನಾಥ್ ಆಚಾರ್ಯ, ಶಾರಾದ ಮೂಡುಗೋಪಾಡಿ, ಹೆಲ್ಪಿಂಗ್ ಹ್ಯಾಂಡ್ಸ್ ಗೌರವಾಧ್ಯಕ್ಷರಾದ ಶ್ರೀ ರವೀಂದ್ರ ರಟ್ಟಾಡಿ , ಹಾಗೂ ಮೊಗವೀರ ಯುವ ಸಂಘಟನೆ ಕೋಟೆಶ್ವರ ಮಹಿಳಾ ಘಟಕದ ಅಧ್ಯಕ್ಷರಾದ ಕುಮಾರಿ ಉಷಾ ಬಂಗೇರ ಮಾರ್ಕೊಡು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿದ್ದ ಶ್ರೀ ಸುರೇಶ್ ಬೆಟ್ಟಿನ್ ಅವರು ಹೆಲ್ಪಿಂಗ್ ಹ್ಯಾಂಡ್ಸ್ ಸಮಾಜ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತನಾಡಿ , ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ದೇಣಿಗೆ ಸಂಗ್ರಹಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮೂರು ಚಂಡೆ ತಂಡಗಳಿಗೆ ಗೌರವ ಸನ್ಮಾನ ಮಾಡಲಾಯಿತು.
ಹಾಗೂ ಹಬ್ಬದಲ್ಲಿ ವಿಶೇಷ ವೇಷ ತೊಟ್ಟು ದೇಣಿಗೆ ಸಂಗ್ರಹಿಸಲು ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರ ಜೊತೆ ವೇಷ ತೊಟ್ಟು ದೇಣಿಗೆಗೆ ತಾವು ಕೈ ಜೋಡಿಸಿದ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರಾದ ಪ್ರದೀಪ್ ಕಾಂಚನ್ ಹೊದ್ರಾಳಿ, ಸಚಿನ್ ಕೋಡಿ, ಹಾಗೂ ಸುಚೀತ್ ಹೊದ್ರಾಳಿ ಇವರನ್ನು ಗೌರವಿಸಲಾಯಿತು.
ದೇವಸ್ಥಾನದ ಭಕ್ತಾಭಿಮಾನಿಗಳು ಸಹಾ ಹಬ್ಬದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ನ ಈ ಸಮಾಜಪರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷರಾದ ಪ್ರದೀಪ್ ಕೋಟೆಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು. ಕೋಷಾಧಿಕಾರಿಗಳಾದ ಸುನೀಲ್ ಖಾರ್ವಿ ಹಾಗೂ ದೀಪಕ್ ಖಾರ್ವಿ ಸಹಕರಿಸಿದರು. ಹೆಲ್ಪಿಂಗ್ ಹ್ಯಾಂಡ್ಸ್ ಇದರ ಎಲ್ಲಾ ಸದಸ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.


