ಕುಂದಾಪುರ,ನ.6: ಚಾರಿತ್ರಿಕ ಹಿನ್ನೆಲೆಯುಳ್ಳ ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಡಿ.5 ರಂದು ಸಂಜೆ ದೇವರ ದೇವರ ವಾಕ್ಯದ ಪೂಜಾ ವಿಧಿಯು ಯೇಸುವಿನಲ್ಲಿ ವಿಶ್ವಾಸಿಸಿ ಆತಾ ಹೇಳಿದಂತೆ ಮಾಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭ ಗೊಂಡು, ಕೊಸೆಸಾಂವ್ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು.
ಈ ಪೂಜಾ ವಿಧಿಯನ್ನು ಕಂಡ್ಲೂರು ಇಗರ್ಜಿಯ ಧರ್ಮಗುರು ವಂ|ಪಾ|ಡಾ| ಕೆನ್ಯೂಟ್ ಬಾರ್ಬೊಜಾ ನಡೆಸಿಕೊಟ್ಟು “ಯೇಸುವಿನಲ್ಲಿ ವಿಶ್ವಾಸ ಇರಿಸುವುದು ಜೀವನದ ನಮ್ಮ ಜೀವನಕ್ಕೆ ಅಡಿಪಾಯ, ದೈನಂದಿನ ಜೀವನದಲ್ಲಿ ನಾವು ವಿಶ್ವಾಸ ಇಡಬೇಕಾದರೆ ಯೇಸು ಹೇಳಿದಂತೆ ಒಳ್ಳೆಯ ಕಾರ್ಯಗಳನ್ನು ಮಾಡಬೆಕು, ಆದರೆ ನಾವು ನಮಗೆ ತೋಚದಂತೆ ಮಾಡಿ ದೇವರಲ್ಲಿ ವಿಶ್ವಾಸ ಇದೆ ಎಂದು ಹೇಳುತ್ತವೆ. ಇದು ತಪ್ಪು. ಯಾವುದು ತಪ್ಪು ಯಾವುದು ಸರಿ ಎಂದು ನಮಗೆ ಗೊತ್ತಿದ್ದರು ಬೇಡದನ್ನು ಮಾಡಿದರೆ, ದೇವರ ವಿಶ್ವಾಸವನ್ನು ಕಳೆದುಕೊಳ್ಳೊತ್ತೀರಿ. ದೇವರಲ್ಲಿ ವಿಶ್ವಾಸ ಇರದ ಜೀವನ ಅರ್ಥಹೀನವಾದುದು. ಮೇರಿ ಮಾತೆ ಧನ್ಯಳಾದದ್ದು ಯೇಸುವಿನ ತಾಯಿ ಆದ ಕಾರಣಕ್ಕಲ್ಲ, ಆತಳು ಯೇಸುವಿನ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದೆ ಕಾರಣ, ಯೇಸು ನೀರು ಇದ್ದದ್ದು ದ್ರಾಕ್ಷರಸ ಮಾಡಿ ಬದಲಿಸಿದ್ದು ಮೇರಿ ಮಾತೆಯ ಕೇಳಿಕೆಯಂತೆ, ಪವಾಡಗಳನ್ನು ಮಾಡಲು ನನ್ನಗಿನ್ನೂ ಸಮಯ ಬಂದಿಲ್ಲ ಎಂದರೂ, ಮೇರಿ ಮಾತೆಗೆ ಯೇಸುವಿನಲ್ಲಿ ಅಪಾರ ವಿಶ್ವಾಸ ಇತ್ತು ಅದರಂತೆ ಆಳುಗಳಿಗೆ ಆತ ಎನು ಹೇಳುತ್ತಾನು ಅದನ್ನು ಮಾಡಿ ಎಂದು ಹೊರಟು ಹೋಗುತ್ತಾಳೆ, ಯೇಸು ಆಳುಗಳಿಗೆ ಹೇಳಿದಂತೆ ಮಣ್ಣಿನ ದೊಡ್ಡ ಕೊಡಗಳಲ್ಲಿ ನೀರು ತುಂಬುತ್ತಾರೆ, ಯೇಸು ಅದನ್ನು ಆಶಿರ್ವದಿಸಿದಾಗ ನೀರಿದಿದ್ದು ದ್ರಾಕ್ಷರಸವಾಗಿ ಮಾರ್ಪಡುತ್ತದೆ, ಅಂದರೆ ಯೇಸುವಿನ ಮೇಲೆ ನಾವು ಅಚಲ ವಿಶ್ವಾಸ ಇಟ್ಟು ಪ್ರಾರ್ಥಿಸಿಸಬೇಕು, ನಾವು ಜೀವನ ಇಡೀ ಪಾರ್ಥನಶೀಲರಾಬೆಕು, ಅದೇ ರೀತಿ ನಮ್ಮಲ್ಲಿ ಪ್ರೀತಿ ಇರಬೇಕು ಪ್ರೀತಿ ಇದ್ದಲ್ಲಿ ಒಳ್ಳೆಯಕಾರ್ಯಗಳಾಗುತ್ತವೆ, ಆದರಿಂದ ನಾವು ಪ್ರೀತಿಶೀಲರಾಗೋಣ” ಎಂದು ಸಂದೇಶ ನೀಡಿದರು.
ಗಂಗೊಳ್ಳಿ ಇಗರ್ಜಿಯ ಧರ್ಮಗುರುಗಳಾದ ವಂ| ಥಾಮಸ್ ರೋಶನ್ ಡಿಸೋಜಾ ವಂದಿಸಿದರು.ಕುಂದಾಪುರ ವಲಯ ಪ್ರಧಾನ ಅ|ವಂ|ಧರ್ಮಗುರು ಸ್ಟ್ಯಾನಿ ತಾವ್ರೊ ಪ್ರಾರ್ಥನ ವಿಧಿಯಲ್ಲಿ ಭಾಗಿಯಾದರು. ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು. ಪ್ರಪ್ರಥಮ ಎಂಬಂತ್ತೆ ನೂತನ ತಂತ್ರಜ್ಞಾನದಿಂದ ಲೇಸರ್ ಲೈಟಿಂಗ್ ಮತ್ತು ಪಟಾಕಿ ಸಿಡಿಮದ್ದುಗಳ ಪ್ರದರ್ಶನ ಆಕರ್ಶಕವಾಗಿದ್ದು ಜನರ ಮೆಚ್ಚುಗೆ ಪಡೆಯಿತು.
ತೆರಾಲಿ ಹಬ್ಬದ ಪೋಷಕರಾದ ಪ್ರಕೃತಿ ಮತ್ತು ಅಲ್ಟನ್ ರೆಬೇರೊ, ಹಾಗೂ ಕುಟುಂಬಸ್ಥರಾದ, ಸುನೀತಾ ಉಪೇಂದ್ರ, ಅಲನ್ಸ್ಟೈನ್ ರೆಬೇರೊ, ಪ್ರಜ್ವಲ್, ಜಾಕ್ಲೀನ್, ತಿಮೊತಿ ರೊಡ್ರಿಗಸ್, ಧರ್ಮಭಗಿನಿಯರು, ಚರ್ಚಿನ ಉಪಾಧ್ಯಕ್ಷ ಅಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಭಕ್ತಾಧಿಗಳು ಹಾಗೂ ಜಾತಿ ಭೇದಭಾವ ಮರೆತು ಉರಿನ ಜನರು ಜಾತ್ರೆಯಲ್ಲಿ ಪಾಲ್ಗೊಂಡರು.