

“ಇ.ಎಸ್.ಐ. ಕೊರ್ಪರೇಷನ್” ನ ನಿವೃತ್ತ ಹಿರಿಯ ಅಧಿಕಾರಿ, ಸಾಹಿತಿ, ನಾಟಕಗಾರ, ರಂಗ ಕಲಾವಿದ ಯು. ವಸಂತ ಕುಮಾರ್ ಶೆಣೈ, ಗಂಗೊಳ್ಳಿ (75) ಮಾ.18 ರಂದು ಸೋಮವಾರ ಕೋಟೇಶ್ವರದಲ್ಲಿ ನಿಧನರಾದರು.
ಗಂಗೊಳ್ಳಿಯ ಹೋಟೆಲ್ ಉದ್ಯಮಿ ಯು. ಶೇಷಗಿರಿ ಶೆಣೈಯವರ ಹಿರಿಯ ಪುತ್ರರಾದ ಇವರು ಬೆಂಗಳೂರು ವಿ.ವಿ.ದಲ್ಲಿ ಸಂಗೀತ, ರಂಗಕಲೆಯಲ್ಲಿ ಶಿಕ್ಷಣ ಪಡೆದಿದ್ದಲ್ಲದೇ ಪತ್ರಿಕೋದ್ಯಮದಲ್ಲೂ ಸ್ನಾತಕೋತ್ತರ ಪದವಿ ಪಡೆದಿದ್ದರು. ಇ.ಎಸ್.ಐ.ಸಿ. ವೇದಿಕೆಗಳಲ್ಲದೇ ಬೆಂಗಳೂರಿನ ರಂಗ ಸಂಪದ ಸೇರಿದಂತೆ ಹವ್ಯಾಸಿ ನಾಟಕ ಸಂಸ್ಥೆಗಳಲ್ಲಿ ಕಲಾವಿದರಾಗಿ, ಮೇಕಪ್ ತಜ್ಞರಾಗಿ “ಮೈಮ್” ಕಲಾವಿದರಾಗಿ ಹೆಸರು ಗಳಿಸಿದವರು. ಸ್ವತ: ಹಲವು ನಾಟಕಗಳನ್ನು ಬರೆದವರು. ಕವಿ, ಲೇಖಕರಾಗಿ ಗುರುತಿಸಲ್ಪಟ್ಟವರು. ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಉಡುಪಿ ರಂಗ ಭೂಮಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದವರು. ರೇಡಿಯೋ, ನಾಟಕಗಳಲ್ಲಿ ವಿಶಿಷ್ಟ ಪಾತ್ರ ವಹಿಸಿದವರು.
ಇವರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.