ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಕಾರ್ಮೆಲ್ ಮಾತೆಯ ಹಬ್ಬ

PHOTOS : ANTONY DALMEIDA

ಕುಂದಾಪುರ, ಜು.17: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳು ನಡೇಸುತ್ತಿರುವ  ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು 16 ರಂದು ಭಕ್ತಿಪೂರ್ವಕ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.

  ಹಬ್ಬದ ಈ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಧಾರ್ಮಿಕ ಎಪಿಸ್ಕೊಲ್ ಅ|ವಂ| ರೋಶನ್ ಮಿನೆಜೆಸ್ ಒ.ಎಫ್.ಎಮ್., ಕಾಪುಚಿನ್, ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಮ್ಮ ಸಂದೇಶದಲ್ಲಿ ತಿಳಿಸಿದರು. ಕುಂದಾಪುರ ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ ತಾವ್ರೊ, ಕೊಟೇಶ್ವರ ಇಗರ್ಜಿಯ ವಂ|ಫಾ| ಸಿರಿಲ್ ಮಿನೆಜಸ್, ಕುಂದಾಪುರದ ಸಹಾಯಕ ವಂ|ಫಾ|ಅಶ್ವಿನ್ ಅರನ್ಹಾ,ಕುಂದಾಪುರ ವಲಯದ ಧರ್ಮಗುರುಗಳಾದ ವಂ|ಫಾ| ಎಡ್ವಿನ್ ಡಿಸೋಜಾ, ವಂ|ಫಾ| ಆಲ್ಬರ್ಟ್ ಕ್ರಾಸ್ತಾ, ಫ್ರಾನ್ಸಿಸ್ ಕರ್ನೆಲೀಯೊ, ವಂ|ಫಾ| ವಿನ್ಸೆಂಟ್ ಕುವೆಲ್ಲೊ, ವಂ|ಫಾ|ಮ್ಯಾಕ್ಸಿಮ್ ಡಿಸೋಜಾ, ವಂ|ಫಾ| ರೋಶನ್ ಡಿಸೋಜಾ ಇನ್ನಿತರ  ಧರ್ಮಗುರುಗಳು ಬಲಿದಾನದಲ್ಲಿ ಭಾಗಿಯಾದರು.

    ಕಟ್ಕೆರೆ ಆಶ್ರಮದ ವಂ|ಫಾ|ದೀಪ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಟ್ಕೆರೆ ಬಾಲ ಯೇಸು ಆಶ್ರಮದ ಮುಖ್ಯಸ್ಥರಾದ ವಂ|ಫಾ| ಆಲ್ವಿನ್ ಸಿಕ್ವೇರಾ ವಂದಿಸಿರು. ಇವರದೇ ನಿರ್ದೇಶನದಲ್ಲಿ ಕುಂದಾಪುರ ಮತ್ತು ಬಸ್ರೂರು ಗಾಯನ ಪಂಗಡ ಹಾಗೂ ಇನ್ನಿತರ ಸದಸ್ಯರೊಂದಿಗೆ ಭಕ್ತಿ ಗೀತೆಗಳ ಗಾಯನ ನಡೆಯಿತು. ಕಾರ್ಮೆಲ್ ಮಾತೆಯ ಈ ಹಬ್ಬಕ್ಕೆ ಕುಂದಾಪುರ ವಲಯ ಹಾಗೂ ಇತರ ಕಡೆಯಿಂದ ಭಕ್ತಾಧಿಗಳು ಪಾಲ್ಗೊಂಡರು.