ಉದ್ಯಾವರ: ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯ ಉದ್ಯಾವರ ಇಲ್ಲಿಯ ವಾರ್ಷಿಕ ಮಹೋತ್ಸವದ ಅಂಗವಾಗಿ ಸಂಜಾ ಪ್ರಾರ್ಥನಾ ವಿಧಿ ವಿಧಾನಗಳು ಭಕ್ತಿಯಿಂದ ನಡೆಯಿತು. ಇದಕ್ಕೂ ಮೊದಲು ಸಂತ ಫ್ರಾನ್ಸಿಸ್ ಝೆವಿಯರ್ ಆಂಗ್ಲ ಮಾಧ್ಯಮ ಶಾಲೆ ಮೇಲ್ಪೇಟೆಯಿಂದ ಸಂತ ಫ್ರಾನ್ಸಿಸ್ ಝೆವಿಯರ್ ರವರ ಪವಾಡ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಸಂಜಾ ಪ್ರಾರ್ಥನಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದ ಉಡುಪಿ ಶೋಕ ಮಾತ ದೇವಾಲಯದ ಸಹಾಯಕ ಧರ್ಮ ಗುರುಗಳಾದ ವo. ಫಾ. ರೋಯ್ ಲೋಬೊ, ‘ದೇವರ ವಾಕ್ಯದ ಪ್ರೇರಣೆಯಿಂದ ವಿಶ್ವಾಸದ ಹಣತೆಯನ್ನು ಪ್ರಜ್ವಲಿಸಿ ಕಷ್ಟಕಾರ್ಪಣ್ಯಗಳ ಕತ್ತಲೆಯನ್ನು ಓಡಿಸೋಣ’ ಎಂಬ ಸಂದೇಶವನ್ನು ನೀಡಿದರು.
ಉಡುಪಿ ಧರ್ಮ ಪ್ರಾಂತ್ಯದ ಕುಲಪತಿ ಅ. ವo. ಫಾ. ರೋಷನ್ ಡಿಸೋಜಾ, ಉಡುಪಿ ವಲಯದ ಪ್ರಧಾನ ಧರ್ಮ ಗುರುಗಳಾದ ಅ. ವo. ಫಾ. ಚಾರ್ಲ್ಸ್ ಮಿನೇಜಸ್, ಸಂತ ಫ್ರಾನ್ಸಿಸ್ ಝೆವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವo. ಫಾ. ಸ್ಟ್ಯಾನಿ ಬಿ ಲೋಬೋ, ಸಹಾಯಕ ಧರ್ಮ ಗುರುಗಳಾದ ವo. ಫಾ. ಲಿಯೋ ಪ್ರವೀಣ್ ಸಹಿತ 25ಕ್ಕೂ ಅಧಿಕ ಧರ್ಮ ಗುರುಗಳು ಸಂಜಾ ಪ್ರಾರ್ಥನಾ ವಿಧಿ ವಿಧಿಯಲ್ಲಿ ಭಾಗವಹಿಸಿದ್ದರು.