ಖರೀದಿಸುವ ವಸ್ತುವಿನ ಮೇಲೆ ಗುಣಮಟ್ಟ ಕುರಿತು ಪ್ರಮಾಣೀಕರಿಸಿದ ಮುದ್ರೆ ಇರುವುದನ್ನು ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಬೇಕು

ಶ್ರೀನಿವಾಸಪುರ:ಖರೀದಿಸುವ ವಸ್ತುವಿನ ಮೇಲೆ ಗುಣಮಟ್ಟ ಕುರಿತು ಪ್ರಮಾಣೀಕರಿಸಿದ ಮುದ್ರೆ ಇರುವುದನ್ನು ಖಾತ್ರಿಪಡಿಸಿಕೊಂಡು ವಸ್ತು ಖರೀದಿಸಬೇಕು ಎಂದು ಬೆಂಗಳೂರಿನ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಸಂಸ್ಥೆ ಅಧಿಕಾರಿ ಹೇಳಿದರು.
ತಾಲ್ಲೂಕಿನ ಪುಲಗೂರುಕೋಟೆ ಗ್ರಾಮದಲ್ಲಿ ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಂದ ಏರ್ಪಡಿಸಲಾಗಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿನಿಯರಿಂದ ಗುರುವಾರ ಏರ್ಪಡಿಸಿದ್ದ ವಸ್ತುಗಳ ಗುಣಮಟ್ಟ ಕುರಿತ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದ ನಾಗರಿಕರಲ್ಲಿ ವಸ್ತು ಖರೀದಿಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಬೇಕು. ಇಲ್ಲವಾದರೆ ಕಡಿಮೆ ಗುಣಮಟ್ಟದ ವಸ್ತುಗಳನ್ನು ಖರೀದಿಸಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ ಮನೆ ಮನೆಗೆ ಕರಪತ್ರ ವಿತರಿಸಿದರು. ಬೀದಿ ನಾಟಕ, ಹಾಡು ಹಾಗೂ ಅಭಿನಯದ ಮೂಲಕ ಬಿಐಎಸ್ ಬಗ್ಗೆ ಅರಿವು ಮೂಡಿಸಿದರು.
ಎನ್‍ಎಸ್‍ಎಸ್ ಶಿಬಿರದ ಕಾರ್ಯನಿರ್ವಹಣಾಧಿಕಾರಿ ಎನ್.ಗೋಪಾಲನ್, ಉಪ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಮಂಜುಳ, ಬಿಐಎಸ್ ಸಂಸ್ಥೆ ಅಧಿಕಾರಿ ರೀತು, ಬಿಐಎಸ್ ಮೆಂಟರ್ ಕೆ.ಎನ್.ವೇಣುಗೋಪಾಲ್, ಜಿ.ಕೆ.ನಾರಾಯಣಸ್ವಾಮಿ, ಆರ್.ರವಿಕುಮಾರ್, ಡಿ.ಎನ್.ವಿನಯ್ ಕುಮಾರ್, ಆರ್.ರವಿಕುಮಾರ್, ಎನ್.ಶಂಕರೇಗೌಡ, ಜಿ.ಮಾಧವಿ, ಲತಾ ಇದ್ದರು.