ಉತ್ತರಪ್ರದೇಶದಲ್ಲಿ ಆಸ್ಪತ್ರೆಯ ಸ್ವೀಪರ್/ ಭಿಕ್ಷುಕನ ಖಾತೆಯಲ್ಲಿ ಬರೋಬ್ಬರಿ 70 ಲಕ್ಷ ದೊರೆತ ಘಟನೆ ನಡೆದಿದೆ. ಆ ವ್ಯಕ್ತಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಪ್ರಯಾಗರಾಜ್‍ನಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಕಸ ಗುಡಿಸುವ ಕೆಲಸ ಮಡುತ್ತಿದ್ದ ಧೀರಜ್ ಕ್ಷಯರೋಗದಿಂದ ಬಳಲುತ್ತಿದ್ದ ಈತ ಭಾನುವಾರ ನಸುಕಿನ ವೇಳೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಧೀರಜ್ ಮರಣದ ಬಳಿಕ ಆತನ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಇರುವುದು ಬೆಳಕಿಗೆ ಬಂದಿದೆ. ಧೀರಜ್‍ನ ತಂದೆಯೂ ಇದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದು, ಅವರ ಮರಣದ ನಂತರ ಧೀರಜ್‍ಗೆ ಈ ಕೆಲಸ ಸಿಕ್ಕಿತ್ತು ಎನ್ನಲಾಗಿದೆ.
ತಂದೆ ಹಾಗೂ ಮಗ ಇಬ್ಬರೂ ತಮ್ಮ ಸಂಬಳ ಬರುವ ಬ್ಯಾಂಕ್ ಖಾತೆಯಿಂದ ಯಾವುದೇ ಹಣವನ್ನು ಡ್ರಾ ಮಾಡುತ್ತಿರಲಿಲ್ಲ. ಇದಕ್ಕೆ ಬಲವಾದ ಕಾರಣವೂ ಇತ್ತು ಎನ್ನಲಾಗಿದೆ. ತಂದೆಯಂತೆ ಧೀರಜ್ ಕೂಡ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಂದ ಹಣ ಕೇಳುತ್ತಾ, ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದನು.
ಧೀರಜ್ ತನ್ನ ಬ್ಯಾಂಕ್ ಖಾತೆಯಿಂದ ಒಂದು ಬಾರಿಯೂ ಹಣ ಡ್ರಾ ಮಾಡಿರಲಿಲ್ಲವಂತೆ, ತನ್ನ 80 ವರ್ಷದ ತಾಯಿಗೆ ಬರುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರಂತೆ ಅಲ್ಲದೆ ಹೆಚ್ಚಿನ ಹಣದ ಅಗತ್ಯವಿದ್ದರೆ ಸ್ನೇಹಿತರು ಹಾಗೂ ಹೊರಗಡೆ ಭಿಕ್ಷೆ ಬೇಡುತ್ತಿದ್ದನು. ಹೀಗಾಗಿ ಧೀರಜ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಉಳಿದುಕೊಂಡಿದೆ .
ಧೀರಜ್ ಇನ್ನೂ ಮದುವೆಯಾಗಿರಲಿಲ್ಲ ಯಾಕೆಂದರೆ ಒಂದು ವೇಳೆ ಮದುವೆಯಾದರೆ ಆ ಹೆಣ್ಣು ಹಣಕ್ಕೆ ಮರುಳಾಗುತ್ತಾಳೆ ಇಲ್ಲವೇ ತನ್ನ ಹಣದೊಂದಿಗೆ ಎಸ್ಕೇಪ್ ಆಗಬಹುದು ಎಂದು ಧೀರಜ್ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಇನ್ನೂ ಮದುವೆ ಯೋಚನೆ ಮಾಡಿರಲಿಲ್ಲ. ಅಲ್ಲದೆ ಆತ ಪ್ರತೀ ವರ್ಷನೂ ತೆರಿಗೆ ಕಟ್ಟುತ್ತಿದ್ದಾನೆ ಎಂದು ಸ್ನೇಹಿತನ ಮೂಲಕ ತಿಳಿದು ಬಂದಿದೆ.