
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: 2020-21ನೇ ಸಾಲಿನಲ್ಲಿತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ, ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದರೋಟರಿ ವಾರ್ಷಿಕ ಸಭೆಯಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್18 ಪ್ರಶಸ್ತಿಗಳನ್ನು ಪಡೆದುಕೊಂಡಿದೆಎಂದು 2020-21ನೇ ಸಾಲಿನ ಅಧ್ಯಕ್ಷರಾದಎಸ್. ಶಿವಮೂರ್ತಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶಿವಮೂರ್ತಿ, 2020-21 ನೇ ಸಾಲಿನಲ್ಲಿಒಟ್ಟು 150 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಾನು ಅಧಿಕಾರಿ ವಹಿಸಿಕೊಂಡ ದಿನವೇ ಪೆÇಲೀಸ್ ವಸತಿಗೃಹದಲ್ಲಿ ಗಿಡಗಳನ್ನು ನಾಟಿ ಮಾಡುವ ಮುಖಾಂತರ ಪ್ರಾರಂಭವಾದಕಾರ್ಯಕ್ರಮವುತಾಲ್ಲೂಕಿನಾಧ್ಯಂತ ಸುಮಾರುಒಂದು ಸಾವಿರ ಗಿಡಗಳನ್ನು ನೆಡಲಾಗಿದೆ. […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಮಂಗಳವಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವ ಭೈರವೇಶ್ವರ ವಿದ್ಯಾ ನಿಕೇತನದ ವಿದ್ಯಾರ್ಥಿನಿ ಕೆ.ಪೂರ್ವಿ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಶಾಲೆಯ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ನಿರ್ದೇಶಕ ಎ.ವೆಂಕಟರೆಡ್ಡಿ, ಬಾಲಕಿಯ ತಂದೆ ಕೃಷ್ಣಾರೆಡ್ಡಿ ಇದ್ದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಮಂಗಳವಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿರುವ ಭೈರವೇಶ್ವರ ವಿದ್ಯಾ ನಿಕೇತನದ ವಿದ್ಯಾರ್ಥಿನಿ ಕೆ.ಪೂರ್ವಿ ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ಸಿಆರ್ಪಿ ಎಂ.ಅಮರನಾಥ್, ಮುಖ್ಯ ಶಿಕ್ಷಕ ವೆಂಕಟರೆಡ್ಡಿ, ಬಾಲಕಿಯ ತಂದೆ ಕೃಷ್ಣಾರೆಡ್ಡಿ, ತಾಯಿ ಬಯಮ್ಮ ಇದ್ದರು.

JANANUDI.COM NETWORK ಗಂಗೊಳ್ಳಿ, ಅ.10: 2020 ರ ಸಾಲೀನ ಕರ್ನಾಟಕ ರಾಜ್ಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಕು.ಶ್ರೇಯಾ ಮೇಸ್ತಾ, 625 ರಲ್ಲಿ 625 ಅಂಕ ಪಡೆದು ಗಂಗೊಳ್ಳಿಯ ಇತಿಹಾಸದಲ್ಲಿ ಅವಿಸ್ಮರಣೀಯ ಸಾಧನೆ ಗೈದಿದ್ದಾಳೆ.ಅವಳನ್ನು ಅಗೋಸ್ತ್ 10 ರಂದು ಶಾಲಾ ವತಿಯಿಂದ ಅವಳ ಮನೆಗೆ ತೆರಳಿ ಅವಳನ್ನು ಸನ್ಮಾನಿಸಲಾಯಿತು. ಶ್ರೇಯಾಳ ಜೊತೆ ಹುಟ್ಟಿದ (ಅವಳಿ ಜವಳಿ) ಸಂಜಯ್ ಮೇಸ್ತಾ ಕೂಡ ಶಾಲೆಗೆ ದ್ವಿತೀಯ ಸ್ಥಾನ ಪಡೆದದ್ದು, ಇವನನ್ನು ಅಭಿನಂದಿಸಲಾಯಿತು. ಇವರು […]
JANANUDI.COM NETWORK ಬೆಂಗಳೂರು: ಸಮುದ್ರದಲ್ಲಿ ತೇಲುವ ಚಿನ್ನ ಎಂದು ಕರೆಯಲಾಗುವ ಅಂಬರ್ ಗ್ರೀಸ್(ತಿಮಿಂಗಿಲದ ವಾಂತಿ) ಮತ್ತು ಪ್ರಾಚೀನ ವಸ್ತುಗಳನ್ನು ಮಾರಲು ಯತ್ನಿಸುತ್ತಿದ್ದ ಗುಂಪೊಂದನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,ಸುಮಾರು ರೂ. 80 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಮಜೀಬ್ ಪಾಷಾ, ಮಹಮದ್ ಮುನ್ನಾ, ಗುಲಾಬ್ ಚಂದ್ ಅಲಿಯಾಸ್ ಗುಡ್ಡು, ಸಂತೋಷ್ ಮತ್ತು ಜಗನ್ನಾಥಾಚಾರ್ ಬಂಧಿತರಾಗಿದ್ದು, ಇವರು ಪರವಾನಗಿಯಿಲ್ಲದೆ ಅಪರೂಪದ ವಸ್ತುಗಳನ್ನು ಅಕ್ರಮವಾಗಿ ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪ ಮಾಡಲಾಗಿದೆ.ಅಂಬರ್ ಗ್ರೀಸ್ ಸಮುದ್ರಗಳಲ್ಲಿ ಸಿಗುವ ತಿಮಿಂಗಿಲದ ವಾಂತಿಯಾಗಿದ್ದು, ಈ […]

JANANUDI.COM NETWORK ಬೆಂಗಳೂರು: ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಇಂದು ಮಧ್ಯಾಹ್ನ 3.30ಕ್ಕೆ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಶಿಕ್ಷಣ ಇಲಾಖೆ ಫಲಿತಾಂಶವನ್ನ ಪ್ರಕಟ ಮಾಡಿದೆ.ಜುಲೈ 19 ಮತ್ತು 22ರಂದು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 9ರಂದು ಪ್ರಕಟಿಸುವುದಾಗಿ ಪ್ರಾಥಮಿಕಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು.ಈ ಬಾರಿ ಪರೀಕ್ಷೆಗೆ ರಾಜ್ಯದಲ್ಲಿ 8.72 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳು ಪಾಸ್ ಆಗುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದ್ದರು. www.esslc.karnatakagovt.in, www.kseeb.kar.nic.in […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಜಿಲ್ಲೆಯ ದಮನಿತ ಮಹಿಳೆಯರ ಕ್ಷೇಮಾಭಿವೃದ್ಧಿಗೆ ಸ್ಥಾಪಿತಗೊಂಡು ಸೇವೆ ಸಲ್ಲಿಸುತ್ತಿರುವ ಕೋಲಾರ ಜಿಲ್ಲಾ ಸೌಖ್ಯ ಸಮೃದ್ಧಿ ಸಂಸ್ಥೆಯು ಆ.7 ರಿಂದ ಆ.20 ರವರೆವಿಗೂ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ.ಜಿಲ್ಲೆಯ ದಮನಿತ ಮಹಿಳೆಯರು ವಾರ್ಷಿಕ ಹಾಗೂ ಅಜೀವ ಸದಸ್ಯತ್ವಕ್ಕಾಗಿ ವಿಳಾಸದ ಪುರಾವೆ, ಎರಡು ಭಾವಚಿತ್ರಗಳನ್ನು ನೀಡಿ ವಾರ್ಷಿಕ ಹಾಗೂ ಅಜೀವ ಸದಸ್ಯತ್ವ ಶುಲ್ಕ ಪಾವತಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ವೈ.ಎಸ್.ವೀಣಾ, ಕಾರ್ಯದರ್ಶಿ ಸುಮಿತ್ರ ಕೋರಿದ್ದಾರೆ

JANANUDI.COM NETWORK ಬೆಂಗಳೂರು: ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ಬೊಮ್ಮಾಯಿ ಮಂತ್ರಿ ಮಂಡಳದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದು, ಗ್ರಹ ಖಾತೆಯನ್ನು ಆರಗ ಜ್ಞಾನೇಂದ್ರ ಅವರಿ ನೀಡಿದ್ದು ಕಾರ್ಕಳದ ವಿ. ಸುನೀಲ್ ಕುಮಾರ್ ಅವರಿಗೆ ಇಂಧನ, ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಮತ್ತು ಹಿಂದುಳಿದ ವರ್ಗಗಳ ಖಾತೆ ಹಾಗೂ ಸುಳ್ಯದ ಶಾಸಕ ವಿ ಅಂಗಾರ ಅವರಿಗೆ ಮೀನುಗಾರಿಕೆ ಖಾತೆಯನ್ನು ವಹಿಸಲಾಗಿದೆ. ಯಾವ ಖಾತೆ ಯಾರಿಗೆ ಎಂಬ ವಿವರ ಆ ಕುರಿತು ಸಂಪೂರ್ಣ ವಿವರ ಇಲ್ಲಿದೆ. […]

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಇಲ್ಲಿಗೆ ಸಮೀಪದ ಕೋಟೇಶ್ವರದ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಹೊರ ಜಗುಲಿಯನ್ನೇ ಮನೆ ಮಾಡಿಕೊಂಡು ಸುಮಾರು 30 ವರ್ಷಗಳಿಂದಲೂ ವಾಸಿಸುತ್ತಾ, ಭಿಕ್ಷಾಟನೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಭಿಕ್ಷುಕನೊಬ್ಬನನ್ನು ಸೋಮವಾರ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈತನ ತೀವ್ರ ಅನಾರೋಗ್ಯದಿಂದಾಗಿ ದೇವಾಲಯ ಆಡಳಿತ ಸಮಿತಿಯವರ ವಿನಂತಿಯ ಮೇರೆಗೆ ಕೋಟದ ಆಪತ್ಬಂಧು ಜೀವನ್ಮಿತ್ರ ನಾಗರಾಜ ಅವರು ಈ ಭಿಕ್ಷುಕನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು. ಭಿಕ್ಷುಕನ ಹಿನ್ನೆಲೆ ಭಿಕ್ಷುಕ ಸುಮಾರು 57 ವರ್ಷ […]