
JANANUDI NEWS NETWORK (EDITOR : BERNARD D’COSTA) ನವದೆಹಲಿ : ಗೃಹ ಬಳಕೆ ಅಡುಗೆ ಅನಿಲದ ಬೆಲೆ ಮತ್ತೆ ಏರಿಕೆಯಾಗಿದೆ 14.2 ಕೆ.ಜಿ ತೂಕದ ಸಿಲಿಂಡರಿನ ಗೃಹಬಳಕೆಯ ಅಡುಗೆ ಅನಿಲದ ಬೆಲೆ ಇಂದಿನಿಂದ 50 ರೂಪಾಯಿ ಏರಿಕೆಯಾಗಲಿದೆ ಎಂದು ಸರ್ಕಾರಿ ಸ್ವಾಮ್ಯ ಸಂಸ್ಥೆಗಳು ತಿಳಿಸಿವೆ.ದೇಶದ ಪ್ರಮುಖ ನಗರಗಳಲ್ಲಿ ಪರಿರಿಷ್ಕ್ರತ ದರ ಇಂದಿನಿಂದ ಜಾರಿಯಾಗಲಿದ್ದು,ರಾಷ್ಟ್ರದ ರಾಜಧಾನಿಯಲ್ಲಿ 14.3 ಕೆ.ಜಿ. ತೂಕದಕದ ಅಡುಗೆ ಅನಿಲದ ಸಿಲಿಂಡರ್ ದರ 1,058.ರೂಪಾಯಿ ಆಗಿದ್ದು, ಚೆಂಗಳೂರಿನಲ್ಲಿ 1055 ರೂಫಾಯಿ. ಮುಂಬೈನಲ್ಲಿ 1.052 ರೂಪಾಯ, […]

JANANUDI.COM NETWORK EDITOR : BERNARD D’COSTA ನವದೆಹಲಿ: ಕೇಂದ್ರ ರಸ್ತೆಗಳು ಮತ್ತು ಮೋಟಾರು ಮಾರ್ಗಗಳ ಸಚಿವಾಲಯವು ಚಾಲನಾ ಪರವಾನಗಿ ಹೊಸ ನಿಯಮಗಳು 2022 ಅನ್ನು ಪರಿಚಯಿಸಿದೆ.ಇದಲ್ಲದೆ, ಚಾಲನಾ ಪರವಾನಗಿಯನ್ನು ಪಡೆಯಲು ಕೇಂದ್ರ ಸಚಿವಾಲಯವು ಕೆಲವು ಚಾಲನಾ ಪರವಾನಗಿ ನಿಯಮಗಳನ್ನು 2022 ಬದಲಾಯಿಸಿದೆ.ಈ ನಿಯಮಗಳು 03 ಜುಲೈ 2022 ರಿಂದ ಜಾರಿಗೆ ಬರಲಿವೆ ಮತ್ತು ಎಲ್ಲಾ ಹೊಸ ಡೈವಿಂಗ್ ಲೈಸೆನ್ಸ್ ಹುಡುಕುವವರು parivahan.gov.in ನಿಂದ ಹೊಸ ನಿಯಮಗಳೊಂದಿಗೆ ಚಾಲನಾ ಪರವಾನಗಿಯನ್ನು ಪಡೆಯಲು ಸಾಧ್ಯವಾಗಲಿದೆ.ಲರ್ನಿಂಗ್ ಲೈಸನ್ಸ್ ಯಾವ ಜಿಲ್ಲೆಯಲ್ಲಿ […]

JANANUDI.COM NETWORK ಇಂದೋರ್: ಪಿಜ್ಜಾ ಡೆಲಿವರಿ ಯುವತಿಯ ಮೇಲೆ ನಾಲ್ವರು ಯುವತಿಯರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ. ನಂದಿನಿ ಯಾದವ್ ಎನ್ನುವ ಡೊಮಿನೋಸ್ ಮಿಜ್ವಾ ಡೆಲಿವರಿ ಯುವತಿ ಮನೆಯೊಂದಕ್ಕೆ ಪಿಜ್ಜಾ ತಲುಪಿಸಲು ತೆರಳಿದ್ದಾಗ ನಾಲ್ವರು ಯುವತಿಯರು ಕ್ಷುಲ್ಲಕ ಕಾರಣಕ್ಕೆ ಕೈಗಳಿಂದ ಯದ್ವ ತದ್ವ ಹೊಡೆದು ನೆಲಕ್ಕೆ ಉರುಳಿಸಿ ಬೆತ್ತದಿಂದ ಅಮಾನುಷವಾಗಿ ನಯನಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಯನಾ ಕೂಗಾಡಿದರೂ ಅವಳ ಮೇಲೆ ಕನಿಕರ ಪಡದೆ ಹಲ್ಲೆ ಮುಂದುವರಿಸಿದ್ದಾರೆ. ಈ ವೇಳೆ […]

JANANUDI.COM NETWORK ಇತ್ತೀಚಿನ ವರ್ಷಗಳಲ್ಲಿ ಭಾರತ ದೇಶಾದ್ಯಂತ, ಕೋಮು ಗಲಬೆ, ಹಿಂಸಾಚಾರ, ಭ್ರಷ್ಟಾಚಾರ, ಕೊಲೆಗಳು, ಅತ್ಯಾಚಾರಗಳು, ಆತ್ಮಹತ್ಯೆ ಪ್ರಕರಣಗಳು, ಸರಕಾರಿ ನೌಕರಿ ದಕ್ಕಿಸಿಕೊಳ್ಳಲು ತೆಗೆದು ಕೊಳ್ಳುವ ಲಂಚ, ಇನ್ನಿತರ ಲಂಚವತಾರಗಳು ಇಂತವುಗಳಿಗೆಲ್ಲ ಕಡಿವಾಣ ಇಲ್ಲದಂತಾಗಿ ಎಗ್ಗಿಲ್ಲದೆ ಸಾಗುತಿದೆ. ದೇಶ ದ್ರೋಹಿಗಳಿಗೆ ಜಯಕಾರ, ಮಹಾತ್ಮ ಗಾಂಧಿಯ ಹತ್ಯೆ ಮಾಡಿದವರಿಗೆ ಸಹ ಜಯಕಾರ, ಅವರನ್ನು ರಾಷ್ಟ್ರೀಯ ಹೀರೊಗಳತೆ ಪ್ರತಿಬಿಂಬಿಸುವುದು ಇಂದಿನ ಪೀಳಿಗೆಯಲ್ಲಿ ಕೆಲವರಿಗೆ ಚಾಳಿಯಾಗಿದೆ. ಅಂದರೆ ಇವತ್ತಿನ ಯುವ ಜನಾಂಗಕ್ಕೆ ಸಮಾಜ ಘಾತುಕ ಸಂಗತಿಗಳನ್ನು ಅವರ ಮನಸಿನೊಳಗೆ ತುಂಬುವಂತಹ ಹೇಯ […]

JANANUDI.COM NETWORK ಕಾರವಾರ-ಮುಂಬೈನಿಂದ ಮಂಗಳೂರಿಗೆ ರೈಲಿನ ಮೂಲಕ ದಾಖಲೆ ಇಲ್ಲದೆ ಸಾಗಿಸುತಿದ್ದ ಎರಡು ಕೋಟಿ ರೂ.ಗಳ ಹಣವನ್ನು ಕಾರವಾರದ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ದಾಖಲೆ ಇಲ್ಲದೆ ಈ ಹಣ ಸಾಗಿಸುತ್ತಿರುವುದರಿಂದ ಇದು ಹವಾಲಾ ಹಣ ಇರಬಹುದು ಎಂದುಶಂಕಿಸಲಾಗಿದೆ.ಆರೋಪಿಯನ್ನು ರಾಜಸ್ಥಾನ ಮೂಲದ ಮನೋಹರ್ ಸಿಂಗ್ ಅಲಿಯಾಸ್ ಚೇನ್ ಸಿಂಗ್ ಎಂದು ಗುರುತಿಸಲಾಗಿದೆ. ಮಂಗಳೂರು ಎಕ್‌ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ ಮನೋಹರ್ ಸಿಂಗ್‌ನನ್ನು ಕಾರವಾರದ ಬಳಿ, ಬಳಿ ಟಿಕೆಟ್ ಇಲ್ಲದಕ್ಕೆ ರೈಲ್ವೆ ಪೊಲೀಸರು ದಂಡ […]

JANANUDI.COM NETWORK ಬಿಹಾರ : ಪುತ್ರನ ಶವವನ್ನು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಳ್ಳಲು ವೃದ್ಧ ದಂಪತಿ ಹಣಕ್ಕಾಗಿ ಬೀದಿಗಿಳಿದು ಭಿಕ್ಷೆ ಬೇಡಿದಂತಹ ದಾರುಣ ಘಟನೆಯೊಂದು.ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಈ ಘಟನೆ ಇವತ್ತಿನ ಭಾರತದ ಪರಿಸ್ಥಿತಿಯ ದರ್ಪಣವಾಗಿ ಗೋಚರಿಸುತ್ತದೆ. ಬಡತನ ನಿವಾರಿಸುವ ಸಲುವಾಗಿ ಕೆಲಸ ಮಾಡಬೇಕಾದ ಇಂದಿನ ಸರಕಾರ, ಮತದ ಆಶೆಗಾಗಿ ಧಾರ್ಮಿಕ ಭಾವನೆಯನ್ನು ಕೆರಳಿಸಿ, ಹಿಂದೂ ಧರ್ಮ ಉದ್ದಾರ ಮಾಡುತ್ತೇವೆ ಎಂದು ನಂಬಿಸಿ, ಭಾರತವನ್ನು, ಉಳಿದ ದೇಶಗಳಿಕಿಂತ ಹಿಂದುಳಿದಂತೆ ಮಾಡಲು ಹೋರಟಿದೆ. ಭಾರತದಲ್ಲಿ ಧರ್ಮದಾಹದ ಹಿನ್ನೆಲೆಯಲ್ಲಿ […]

JANANUDI.COM NETWORK ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ಅಖಿಲ ಭಾರತೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳುವವರಿಗೆ ಸವಾಲು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಜ್ಯೋತಿಷ್ಯರು ಕೂಡ ತಪ್ಪು ಉತ್ತರಗಳನ್ನು ಹೇಳುವ ಮೂಲಕ ಸೋತಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲೇ ಲಕೋಟೆ ತೆರೆದು ಜ್ಯೋತಿಷಿಗಳು ನೀಡಿದ ಉತ್ತರ ತಪ್ಪು ಎಂದು ಸಾಬೀತು ಪಡಿಸಿ ಒಂದು ಲಕ್ಷ ರೂಪಾಯಿ ಬಹುಮಾನ ತನ್ನಲ್ಲೇ ಇರಿಸಿಕೊಂಡಿದ್ದಾರೆ. […]

JANANUDI.COM NETWORK ತಿರುವನಂತಪುರ;ಕೇರಳದ ಕೊಲ್ಲಂ ಜಿಲ್ಲೆಯೊಂದರಲ್ಲಿ ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಜ್ವರದ ವೈರಸ್ ಕಂಡು ಬಂದಿದೆ. ಈ ವೈರಸ್ ಗೆ ತುತ್ತಾದ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೊರೊನಾ ಎಂಬ ಹೆಮ್ಮಾರಿಯ ಆರ್ಭಟದ ಮಧ್ಯೆ ಕೇರಳದಲ್ಲಿ ಹೊಸ ಟೊಮೇಟೋ ಸೋಂಕು ಜನರಲ್ಲಿ ಭೀತಿಯುಂಟು ಮಾಡಿದೆ.ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಈ ಜ್ವರ ಸಾಂಕ್ರಾಮಿಕ ರೋಗ ಆದುದರಿಂದ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗಾ ವಹಿಸಿದೆ. ಟೊಮೇಟೊ ಜ್ವರ ಇದೊಂದು ಅಪರೂಪದ ವೈರಲ್ ಸೋಂಕು ಆಗಿದ್ದು, ಈ ಜ್ವರದಲ್ಲಿ ಬಳಲುತ್ತಿರುವ ಮಕ್ಕಳಲ್ಲಿ ಕೆಂಪು ಗುಳ್ಳೆ ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟಾಗುತ್ತಿವೆ. ಈ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುದರಿಂದ ಇದನ್ನು ಟೊಮೇಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಜ್ವರದ ಪ್ರಕರಣಗಳು ವರದಿಯಾಗಿದ್ದು, ಇದು ಇತರ ಪ್ರದೇಶಗಳಿಗೂ ಹರಡಬಹುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

JANANUDI.COM NETWORK ಹೊಸದಿಲ್ಲಿ:ಭಾರತೀಯ ರೈಲ್ವೆ ಇಲಾಖೆಯು ತಾಯಂದಿರ ದಿನದ ವಿಶೇಷದ ಅಂಗವಾಗಿ ರೈಲುಗಳಲ್ಲಿ ಪ್ರತ್ಯೇಕ ಬೇಬಿ ಬರ್ತ್ (ನವಜಾತ ಶಿಶುಗಳಆಸನ)ಗಳನ್ನು ಪರಿಚಯಿಸಿದೆ.ಇದರಲ್ಲಿ ಶಿಶುಗಳು ತಮ್ಮ ತಾಯಂದಿರೊಂದಿಗೆ ಮಲಗಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ೦ದು ಮೀಸಲಿಟ್ಟ ಲೋವರ್ ಬರ್ತ್‌ಗಳನ್ನು ಬೇಬಿ ಬರ್ತ್‌ಗಳ ಪಕ್ಕದಲ್ಲಿಯೇ ಇರಿಸಲಾಗಿದೆ. ಇದರಿ೦ದಾಗಿ ಪುಟ್ಟಕ೦ದಮ್ಮಗಳು ಯಾವುದೇ ಅಡಚಣೆಯಿಲ್ಲದೇ ತಮ್ಮ ತಾಯೊಂದಿಗೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಪ್ರಾಯೋಗಿಕ ಹಂತವಾಗಿಕೆಲವು ರೈಲುಗಳಲ್ಲಿ ಮಾತ್ರ ಈ ಹೊಸ ವ್ಯವಸ್ಥೆಯನ್ನು ನೀಡಲಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ಶಿಶುಗಳನ್ನು ಸುರಕ್ಷಿತವಾಗಿರಿಸಲು ಮತ್ತು ತಾಯಂದಿರಿಗೆ ಉತ್ತಮ ನಿದ್ರೆ ಪಡೆಯಲು ಸಾಕಷ್ಟು […]