JANANUDI.COM NETWORK ಮಂಗಳೂರು: ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ಅಖಿಲ ಭಾರತೀಯ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ವೀಳ್ಯದೆಲೆ ನೋಡಿ ಜ್ಯೋತಿಷ್ಯ ಹೇಳುವವರಿಗೆ ಸವಾಲು ಹಾಕಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಜ್ಯೋತಿಷ್ಯರು ಕೂಡ ತಪ್ಪು ಉತ್ತರಗಳನ್ನು ಹೇಳುವ ಮೂಲಕ ಸೋತಿದ್ದಾರೆ. ಪತ್ರಿಕಾ ಗೋಷ್ಟಿಯಲ್ಲೇ ಲಕೋಟೆ ತೆರೆದು ಜ್ಯೋತಿಷಿಗಳು ನೀಡಿದ ಉತ್ತರ ತಪ್ಪು ಎಂದು ಸಾಬೀತು ಪಡಿಸಿ ಒಂದು ಲಕ್ಷ ರೂಪಾಯಿ ಬಹುಮಾನ ತನ್ನಲ್ಲೇ ಇರಿಸಿಕೊಂಡಿದ್ದಾರೆ. […]
JANANUDI.COM NETWORK ತಿರುವನಂತಪುರ;ಕೇರಳದ ಕೊಲ್ಲಂ ಜಿಲ್ಲೆಯೊಂದರಲ್ಲಿ ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಜ್ವರದ ವೈರಸ್ ಕಂಡು ಬಂದಿದೆ. ಈ ವೈರಸ್ ಗೆ ತುತ್ತಾದ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೊರೊನಾ ಎಂಬ ಹೆಮ್ಮಾರಿಯ ಆರ್ಭಟದ ಮಧ್ಯೆ ಕೇರಳದಲ್ಲಿ ಹೊಸ ಟೊಮೇಟೋ ಸೋಂಕು ಜನರಲ್ಲಿ ಭೀತಿಯುಂಟು ಮಾಡಿದೆ.ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ ಈ ಜ್ವರ ಸಾಂಕ್ರಾಮಿಕ ರೋಗ ಆದುದರಿಂದ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗಾ ವಹಿಸಿದೆ. ಟೊಮೇಟೊ ಜ್ವರ ಇದೊಂದು ಅಪರೂಪದ ವೈರಲ್ ಸೋಂಕು ಆಗಿದ್ದು, ಈ ಜ್ವರದಲ್ಲಿ ಬಳಲುತ್ತಿರುವ ಮಕ್ಕಳಲ್ಲಿ ಕೆಂಪು ಗುಳ್ಳೆ ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟಾಗುತ್ತಿವೆ. ಈ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುದರಿಂದ ಇದನ್ನು ಟೊಮೇಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಜ್ವರದ ಪ್ರಕರಣಗಳು ವರದಿಯಾಗಿದ್ದು, ಇದು ಇತರ ಪ್ರದೇಶಗಳಿಗೂ ಹರಡಬಹುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
JANANUDI.COM NETWORK ಹೊಸದಿಲ್ಲಿ:ಭಾರತೀಯ ರೈಲ್ವೆ ಇಲಾಖೆಯು ತಾಯಂದಿರ ದಿನದ ವಿಶೇಷದ ಅಂಗವಾಗಿ ರೈಲುಗಳಲ್ಲಿ ಪ್ರತ್ಯೇಕ ಬೇಬಿ ಬರ್ತ್ (ನವಜಾತ ಶಿಶುಗಳಆಸನ)ಗಳನ್ನು ಪರಿಚಯಿಸಿದೆ.ಇದರಲ್ಲಿ ಶಿಶುಗಳು ತಮ್ಮ ತಾಯಂದಿರೊಂದಿಗೆ ಮಲಗಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ೦ದು ಮೀಸಲಿಟ್ಟ ಲೋವರ್ ಬರ್ತ್‌ಗಳನ್ನು ಬೇಬಿ ಬರ್ತ್‌ಗಳ ಪಕ್ಕದಲ್ಲಿಯೇ ಇರಿಸಲಾಗಿದೆ. ಇದರಿ೦ದಾಗಿ ಪುಟ್ಟಕ೦ದಮ್ಮಗಳು ಯಾವುದೇ ಅಡಚಣೆಯಿಲ್ಲದೇ ತಮ್ಮ ತಾಯೊಂದಿಗೆ ರೈಲಿನಲ್ಲಿ ಪ್ರಯಾಣಿಸಬಹುದಾಗಿದೆ. ಪ್ರಾಯೋಗಿಕ ಹಂತವಾಗಿಕೆಲವು ರೈಲುಗಳಲ್ಲಿ ಮಾತ್ರ ಈ ಹೊಸ ವ್ಯವಸ್ಥೆಯನ್ನು ನೀಡಲಾಗಿದೆ. ರೈಲು ಪ್ರಯಾಣದ ಸಮಯದಲ್ಲಿ ಶಿಶುಗಳನ್ನು ಸುರಕ್ಷಿತವಾಗಿರಿಸಲು ಮತ್ತು ತಾಯಂದಿರಿಗೆ ಉತ್ತಮ ನಿದ್ರೆ ಪಡೆಯಲು ಸಾಕಷ್ಟು […]
JANANUDI.COM NETWORK ಆಂಧ್ರಪ್ರದೇಶ: ಅಸಾನಿ ಚಂಡಮಾರುತ ದೇಶಾದ್ಯಂತ ತನ್ನ ಪ್ರಭಾವ ಬೀರುತ್ತಿದ್ದುಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸುನ್ನಪಲ್ಲಿ ಕಡಲ ತೀರದಲ್ಲಿ ಅಸಾನಿ ಅಬ್ಬರದ ಅಲೆಗಳ ಮೂಲಕ ಚಿನ್ನದ ಬಣ್ಣದ ರಥವೊಂದು ಸಮುದ್ರದಲ್ಲಿ ಬಂದು ಬಿಟ್ಟಿದೆ.ಬೌದ್ಧ ಶೈಲಿಯಲ್ಲಿರುವ ಈ ರಥ ಮ್ಯಾನ್ಮಾರ್, ಮಲೇಷಿಯಾ, ಥೈಲ್ಯಾಂಡ್ ನಿಂದ ತೇಲಿ ಬಂದಿರಬಹುದು ಎಂದು ಸದ್ಯ ಊಹಿಸಲಾಗಿದೆ. ರಥವನ್ನು ವೀಕ್ಷಿಸಲು ನೆರೆಹೊರೆಯ ಗ್ರಾಮಸ್ಥರು ಜಮಾಯಿಸಿದ್ದು, ವಿಶಿಷ್ಟವಾದ ಈ ರಥ ಎಲ್ಲರನ್ನೂ ಆಶ್ವರ್ಯ ಚಕಿತ ಮಾಡಿದೆ.ಗ್ರಾಮಸ್ಥರು ಹಗ್ಗಗಳ ಸಹಾಯದಿಂದ ಈ ರಥವನ್ನು ದಡಕ್ಕೆ ಎಳೆದಿದ್ದಾರೆ. ಚಿನ್ನದ […]
JANANUDI.COM NETWORK ಅಹ್ಮದಾಬಾದ್, ಏ.9; ಖ್ಯಾತ ಹಿಂದು ದೇವಾಲಯದಲ್ಲಿ ಮುಸ್ಲಿಮರಿಗೆ ಇಪ್ತಾರ್ ಕೂಟವನ್ನು ಏರ್ಪಡಿಸಿ ಸಾಮರಸ್ಯ ಮೆರೆದಿರುವ ಘಟನೆ ಗುಜರಾತ್‍ನ ಬಾಣಸ್ವಾತ್ ಜಿಲ್ಲೆಯ ದಲ್ವಾನ ಎಂಬ ಗ್ರಾಮದಲ್ಲಿ ನಡೆದಿದೆ. ವರಂದ ವೀರ್ ಮಹಾರಾಜ್ ಮಂದಿರ್ ರಮಝಾನ್ ಉಪವಾಸ ತೊರೆಯಲು ಸುಮಾರು 100 ಮುಸ್ಲಿಮರಿಗೆ ವ್ಯವಸ್ಥೆ ಮಾಡಿಕೊಟ್ಟು ಇಂದು ಅಗತ್ಯವಾದ ಬೇಕಾಗಿರುವ ಸಾಮರಸ್ಯಕ್ಕೆ ಸುದ್ದಿಯಾಗಿದೆ. ವಡ್ಗಮ್ ತಾಲೂಕಿನ 1200 ವರ್ಷಗಳ ಇತಿಹಾಸವುಳ್ಳ ದೇವಲಯದಲ್ಲಿ ನಿನ್ಮೆ ಸಂಜೆ ಇಫ್ತಾರ್ ವ್ಯವಸ್ಥೆ ಮಾಡಿರುವ ಬಗ್ಗೆ ವರದಿಯಾಗಿದೆ.ಉಪವಾಸ ತೊರೆಯಲು ಹಣ್ಣುಗಳು, […]
JANANUDI.COM NETWORK ಹೊಸದಿಲ್ಲಿ: ಭಾರತದಲ್ಲಿ ಕೋವಿಡ್ 19 ರ ‘ಎಕ್ಸ್‌ಇ’ ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಮುಂಬೈ ಯಲ್ಲಿ ‘ಎಕ್ಸ್‌ಇ’ ರೂಪಾಂತರ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿತ್ತು, ಇದೀಗ ಕೇಂದ್ರ ವರದಿಗಳನ್ನು ನಿರಾಕರಿಸಿದೆ. ‘ಎಕ್ಸ್‌ಇ’ ರೂಪಾಂತರ ಮಾದರಿಯ ಫಾಸ್ಟ್ಕ್ಯೂ ಫೈಲ್ಗಳನ್ನು ಐಎನ್‌ಎಸ್‌ಎಸಿಒಜಿ ಜೀನೋಮಿಕ್ ತಜ್ಞರು ವಿಶ್ಲೇಷಿಸಿದ್ದಾರೆ. ಅವರು ಈ ರೂಪಾಂತರದ ಜೀನೋಮಿಕ್ ಸಂವಿಧಾನವು ‘ಎಕ್ಸ್‌ಇ’ ರೂಪಾಂತರದ ಜೀನೋಮಿಕ್ ಚಿತ್ರದೊಂದಿಗೆ ಸಂಬಂಧ ಹೊಂದಿಲ್ಲ ಎಂದು ಊಹಿಸಿದ್ದಾರೆ ಎಂದು ಅಧಿಕೃತ […]
JANANUDI.COM NETWORK ಮುಂಬೈ : ಭಾರತಕ್ಕೂ ಕೊರೊನಾ ರೂಪಾ೦ತರಿ XE ವೈರಸ್ ಪತ್ತೆಯಾಗಿದ್ದು, ಹೀಗೆ ರೂಪಾ೦ತರಿ XE ವೈರಸ್ ಕಾಲಿಟ್ಟಂದತಾಗಿದೆ, XE ವೈರಸ್ ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆಯಾಗಿದೆ.ಇಂಗ್ಲೆಂಡ್ ನಲ್ಲಿ ಪತ್ತೆಯಾಗಿದ್ದ, ಕೊರೊನಾ ರೂಪಾ೦ತರಿ ವೈರಸ್ ಇದೀಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದು 376ಜನರನ್ನ ಪರೀಕ್ಟೆ ಗಳಪಡಿಸಲಾಗಿತ್ತು ಅದರಲ್ಲಿ 50 ವರ್ಷದ ವ್ಯಕ್ತಿಯಲ್ಲಿ XE ಕೊರೊನಾ ರೂಪಾ೦ತರಿ ದೃಡಪಟ್ಟಿದೆ. ಅವರು ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದರು. ಮಾರ್ಚ್ ರಂದು ಅವರು.ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದರು ಎ೦ದು bmcತಿಳಿಸಿದೆ. ಈ ಹೊಸ […]
JANANUDI.COM NETWORK ಹೊಸದಿಲ್ಲಿ ಮಾ.3: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾನುವಾರ ಮತ್ತೊಮ್ಮೆ ಲೀಟರ್‌ಗೆ ತಲಾ 80 ಪೈಸೆಯಷ್ಟು ಹೆಚ್ಚಿಸಲಾಗಿದೆ.ಇದು ಕಳೆದ ಎರಡು ವಾರಗಳಲ್ಲಿ ಇದು 13 ದಿನಗಳಲ್ಲಿ 11ನೇ ಬಾರಿಯ ಹೆಚ್ಚಳವಾಗಿದೆ. ಪ್ರತಿ ಲೀಟರ್ ಬೆಲೆಯಲ್ಲಿ ಒಟ್ಟಾರೆಯಾಗಿ 8ರೂ. ಹೆಚಿದೆ. ದೆಹಲಿಯಲ್ಲಿ ಪೆಟ್ರೋಲ್ ದರವು ಈ ಹಿಂದೆ 102.61 ರಿಂದ 103.41 ರಷ್ಟಿದ್ದರೆ, ಡೀಸೆಲ್ ದರಗಳು ಲೀಟರ್‌ಗೆ 93.87 ರಿಂದ94.67 ಕ್ಕೆ ಏರಿದೆ. ದೇಶಾದ್ಯಂತ ದರಗಳನ್ನು ಹೆಚ್ಚಿಸಲಾಗಿದೆ ಮತ್ತು ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ರಾಜ್ಯದಿಂದ […]
JANANUDI.COM NETWORK ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಮಂಡಿಸಿದ 2022-23ನೇ ಸಾಲಿನ ಆಯವ್ಯಯದಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದ ಪರಿಣಾಮ ಇಂದಿನಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣಲಿದೆ. ಅಬಕಾರಿ ಸುಂಕವನ್ನು ಹೆಚ್ಚಿಸಿದ ಪರಿಣಾಮ ಕಚ್ಚಾ ವಸ್ತು, ಅವುಗಳಿಗೆ ಸಂಬಂಧಿಸಿದ ಉತ್ಪನ್ನಗಳ ಬೆಲೆಗಳು ಸಹ ಏರಿಕೆಯಾಗಲಿವೆ.ಅಗತ್ಯವಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯು ಬಿಸಿ ನೇರವಾಗಿ ಜನ ಸಾಮಾನ್ಯರಿಗೆ ತಟ್ಟಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಜನರು ಸೋತಿರುವಾಗ ಬೆಲೆ ಏರಿಕೆಯ ಹೊರೆಯನ್ನು […]