
ಶ್ರೀನಿವಾಸಪುರ: ವಿದ್ಯಾಕೇಂದ್ರಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ದೇವಾಲಯಗಳಾಗಬೇಕೆ ಹೊರತು ಅಂಕಪಟ್ಟಿಗಳನ್ನು ತಯಾರಿಸುವ ಯಂತ್ರಗಳಾಗಬಾರದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ವಿ. ಗೋಪಿನಾಥ್ ಹೇಳಿದರು. ಶ್ರೀನಿವಾಸಪುರ ತಾಲೂಕಿನ ಯಲ್ಡೂರು ಗ್ರಾಮದ ಶ್ರೀ ಪ್ರೀತಿವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಂಟನೇ ವರ್ಷದ ಅಂತರ ಶಾಲಾ ಗೀತಾ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ಭಗವದ್ಗೀತೆಯನ್ನು ಮಕ್ಕಳು ಪ್ರತಿದಿನವೂ ಪಠಣ ಮಾಡಿ ಅರ್ಥನ್ನು ಗ್ರಹಿಸಬೇಕು. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಿ […]

ಶ್ರೀನಿವಾಸಪುರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಜ್ಯ ಮಟ್ಟದದಿಂದ ರಾಷ್ಟ್ರ ಮಟ್ಟಕ್ಕೆ ಕಬಡ್ಡಿ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಶಿಕ್ಷಕಿ ಎನ್.ಮಾದವಿ ಆಯ್ಕೆಯಾಗಿದ್ದು.ಇವರು ಜನವರಿ ದಿ. 3ರಿಂದ 8ನೇ ತಾರೀಖಿನವರೆಗೂ ದೆಹಲಿಯ ತ್ಯಾಗರಾಜ ಸ್ಟೇಡಿಯಂ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕ್ರೀಡಾಪಟುಗಳು ಪಾಲ್ಗಳ್ಳಲಿದ್ದಾರೆ ಎಂದು ಕ್ರೀಡಾಪಟು ಎನ್.ಮಾದವಿ ಮಾಹಿತಿ ನೀಡಿದರು.

ಬೆಂಗಳೂರು: ಕಲ್ಪತರ ನಾಡು ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಗೃಹ ಸಚಿವ ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಆಯೋಜಿಸುತ್ತಿರುವ ರಾಜ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಆಹ್ವಾನಿಸಿದಾಗ ಮುಖ್ಯಮಂತ್ರಿಗಳು ಸಮ್ಮತಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ […]

ಕೋಲಾರ.ಡಿ.20, ಶ್ರೀನಿವಾಸಪುರ ತಾಲೂಕು ಹೊಸಗುಡ್ಯ ಅರಣ್ಯದ ಜಂಗಾಲಕುಂಟೆ ಸ.ನಂ. 1 ಮತ್ತು 2 ರಲ್ಲಿನ ಜಂಟಿ ಸರ್ವೆಗೆ ಗೈರಾಜರಾಗಿರುವ ಕಂದಾಯ ಮತ್ತು ಸರ್ವೆ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರನ್ನು ದಿಕ್ಕುತಪ್ಪಿಸಿ ಡಿ-20 ರಂದು ಜಂಟಿ ಸರ್ವೆ ಮಾಡಿ ಕಾನೂನನ್ನು ಗೌರವಿಸುತ್ತೇವೆಂದು ಹೇಳಿಕೆ ನೀಡುತ್ತಿದ್ದ ಜಿಲ್ಲಾಡಳಿತ ಇಂದು ಜಂಟಿ ಸರ್ವೆಗೆ ಕಂದಾಯ, ಸರ್ವೆ ಅಧಿಕಾರಿಗಳು ಗೈರು ಹಾಜರಾಗಿ ಜ-2 ಕ್ಕೆ ಆರ್.ಸಿ ಆದೇಶದಂತೆ ಜಂಟಿ […]

ಕೋಲಾರ; ಡಿ.19: ಡಿಸೆಂಬರ್ 30ಕ್ಕೆ ಸಾವಿರ ದಿನ ಪೂರ್ಣಗೊಳ್ಳುತ್ತಿರುವ ಚನ್ನರಾಯಪಟ್ಟಣ ಭೂಸ್ವಾಧೀನಾ ವಿರೋಧಿ ಹೋರಾಟದ ಪ್ರತಿಭಟನೆಗೆ ಕೋಲಾರ ಜಿಲ್ಲೆಯಿಂದ 200 ಜನ ರೈತರು ಭಾಗವಹಿಸಲು ಗಾಜಲದಿನ್ನೆ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ರೈತರ ಕೃಷಿ ಜಮೀನನ್ನು ಕೈಗಾರಿಕೆ, ರಸ್ತೆ, ನಿವೇಶನದ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡು ಸ್ಥಳೀಯ ರೈತ ಮಕ್ಕಳಿಗೆ ಉದ್ಯೋಗ ನೀಡುತ್ತೇವೆಂದು ನಂತರ ಯಾವುದೇ ಕೈಗಾರಿಕೆಗಳನ್ನು ಮಾಡದೆ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು, ಕೃಷಿಯನ್ನೇ ನಂಬಿರುವ ರೈತರ ಕುಟುಂಬಗಳನ್ನು […]

ಶ್ರೀನಿವಾಸಪುರ : ಎಂ.ಜಿ. ರಸ್ತೆಯ ಎರಡೂ ಕಡೆ ಇವರು ನಡೆಸುವ ವ್ಯಾಪಾರ ವಹಿವಾಟಿನಿಂದ ಪ್ರತಿವರ್ಷ ಸುಮಾರು ಅಪಘಾತಗಳಾಗಿದ್ದು, ಪ್ರತಿನಿತ್ಯ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗಳು ಕೂಡ ಸಾರ್ವಜನಿಕರು ಅನುಭವಿಸಬೇಕಾಗಿದೆ. ಪ್ರತಿ ವರ್ಷವು ಕೂಡ ಇವರ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತುತ್ತಿದ್ದರೂ ತಾಲ್ಲೂಕು ಆಡಳಿತ ಜಾಣಕುರಡರಂತೆ ವರ್ತಿಸುತ್ತಿದೆ ಎಂದು ಎಂದು ಮಾವು ಬೆಳೆಗಾರರ ಕ್ಷೇಮಾಭವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ದೂರಿದರು.ಪಟ್ಟಣದ ಎಂಜಿ ರಸ್ತೆಯಲ್ಲಿ ಅವರ ಕಾಯಿ ಮಂಡಿ ತೆರೆವುಗೊಳಿಸುವ ಬಗ್ಗೆ ಮಂಗಳವಾರ ತಹಶೀಲ್ದಾರ್ ರವರಿಗೆ ಮನವಿ ಪತ್ರ […]

ಶ್ರೀನಿವಾಸಪುರ : ರೈತರು ಕಳೆದ 6 ತಿಂಗಳಿನಿಂದ ಹಿಂದೆ ರೈತರು ತಮ್ಮ ಜಮೀನನ್ನು ಹದ ಮಾಡಿ ಅವರೆ ಕಾಳು ಹಾಕಿ ಕಾಲ ಕಾಲಕ್ಕೆ ಔಷದಿ ಸಿಂಪಡಣೆ ಮಾಡಿ ಒಂದಿಷ್ಟು ಹಣ ಸಂಪಾದನೆ ಮಾಡುಬಹುದು ಕನಸು ಕಂಡಿರುತ್ತಾರೆ ಆದರೆ ಫಸಲು ಕೈಗೆ ಬಂದ ಸಮಯದಲ್ಲಿ ಹಣ ಬರಿಲಿಲ್ಲವೆಂದರೆ 6 ತಿಂಗಳು ಕಷ್ಟ ಪಟ್ಟಿದ್ದೆಲ್ಲಾ ವ್ಯರ್ಥವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಸೋಮವಾರ […]

ಕೋಲಾರ,ಡಿ.11: ತಹಶೀಲ್ದಾರ್ ಕಚೇರಿ ಮುಂದೆ ಶಾಂತಿಯುತ ಹೋರಾಟ ಮಾಡುತ್ತಿದ್ದ ರೈತ ಸಂಘದ ಕಾರ್ಯಕರ್ತರ ಮೇಲೆ ರಮೇಶ್‍ಕುಮಾರ್ ಬೆಂಬಲಿಗರು ಮಾಡಿರುವ ಹಲ್ಲೆ, ದೌಜ್ರ್ಯನ್ಯ ಮತ್ತು ಬಾಬಾ ಸಾಹೇಬ್ ಪೋಟೋಗೆ ಅವಮಾನ ಮಾಡಿರುವ ತಹಶೀಲ್ದಾರ್‍ರವರ ಅನುಚಿತ ವರ್ತನೆ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಹೈಕೋರ್ಟ್ ಆದೇಶ ಕೇಂದ್ರ ಸಚಿವಾಲಯದ ಪತ್ರವ್ಯವಹರದಂತೆ ಜಿಗಲಕುಂಟೆ ಅರಣ್ಯ ಪ್ರಧೇಶದ ಸರ್ವೇ ನಂ.1 ಮತ್ತು 2 ರಲ್ಲಿ ಜಂಟಿ […]

ಶ್ರೀನಿವಾಸಪುರ : ರೈತರ ಪರವಾಗಿ ಕೆಲಸ ಮಾಡುವುದಕ್ಕೆ ಬೇಕಾದಷ್ಟು ಇದೆ. ಅದನ್ನ ಮಾಡುವುದು ಬಿಟ್ಟು ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ರಾಜ್ಯ ದಲಿತ ಮುಖಂಡ ಎನ್.ಮುನಿಸ್ವಾಮಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಾಲೂಕು ದಲಿತ ಸಂಘದವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಅದನ್ನು ಬಿಟ್ಟು ಇಲ್ಲ ಸಲ್ಲದ ಗಲಾಟೆಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ. ಸಭ್ಯತೆಯೊಂದಿಗೆ ಹೋರಾಟ ಮಾಡಲಿ, ಚಳುವಳಿಗಾರರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು . ಚೌಕಟ್ಟುಗಳನ್ನು ಮೀರಿ ಸೋಮವಾರ ಪ್ರತಿಭಟನೆ ಮಾಡಿರುವುದು ಸರಿಯಲ್ಲ ಎಂದು ನುಡಿದರು. […]