
ಕೋಲಾರ,ಜ,.08: ತಾಲೂಕಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಸ್ವಯಂ ಘೋಷಿತ ಹಿರಿಯ ಸಹಕಾರಿಗಳಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ರೈತ ಸಮುದಾಯವು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂಆರ್ ಶ್ರೀನಾಥ್ ತಿಳಿಸಿದರು.ಭಾನುವಾರ ನಡೆದ ಟಿಎಪಿಸಿಎಂಎಸ್ ಚುನಾವಣೆಯ ಫಲಿತಾಂಶವನ್ನು ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ರೈತರ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದ್ದ ಟಿಎಪಿಸಿಎಂಎಸ್ ಸಹಕಾರಿಗಳು ತಮ್ಮ ಸ್ವಾರ್ಥಕ್ಕೆ ಬಳಕೆಯಾಗಿದ್ದೇ ಹೆಚ್ಚು ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸಹಕಾರಿಗಳ ಮಾರ್ಗದರ್ಶನದಲ್ಲಿ ಈ ಚುನಾವಣೆಯನ್ನು ಎದುರಿಸಲಾಗಿತ್ತು.ತಾಲೂಕಿನ ಟಿಎಪಿಸಿಎಂಎಸ್ ಸಹಕಾರಿ ಸಂಸ್ಥೆಯಲ್ಲಿ ಸುಮಾರು 1980 ರಲ್ಲಿ ನಡೆದ ಚುನಾವಣೆಯೇ […]

ಶ್ರೀನಿವಾಸಪುರ: ಶ್ರೀನಿವಾಸಪುರ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ವೈ.ಆರ್.ನಾಗೇಂದ್ರಬಾಬು ರವರನ್ನ ಭಾನುವಾರ ದಾವಣಗರೆಯಲ್ಲಿ ನಡೆದ ಕರ್ನಾಟಕ ರಾಜ್ಯ ವಾಸವಿಕನ್ಯಕಾಪರಮೇಶ್ವರಿ ದೇವಾಲಯಗಳ ಒಕ್ಕೂಟ ಪ್ರಥಮ ಸಮಾವೇಶದಲ್ಲಿ ಮೆಡಲ್ ನೀಡುವುದರ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ವಾಸವಿಕನ್ಯಕಾಪರಮೇಶ್ವರಿ ದೇವಾಲಯದ ಒಕ್ಕೂಟದ ಅಧ್ಯಕ್ಷ ಪ್ರಭಾಕರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕ ಎಸ್.ಆರ್. ಅಮರನಾಥ್, ಶ್ರೀನಿವಾಸಪುರ ಆರ್ಯವೈಶ್ಯ ಸಂಘದ ಸದಸ್ಯ ಎಸ್.ವಿ.ರಾಮನಾಥ್ ಇದ್ದರು

ಟೇಕಲ್ ಜ 8 : ಮಾಲೂರು ತಾಲ್ಲೂಕಿನ ಶಾಸಕರು ಹಾಗೂ ಕೋಚಿಮುಲ್ ಅಧ್ಯಕ್ಷರಾದ ಕೆ.ವೈ.ನಂಜೇಗೌಡರಿಗೆ ಸೋಮವಾರ ಅವರ ಮನೆ, ಜೆಲ್ಲಿ ಕ್ರಷರ್ ಹಾಗೂ ಆಪ್ತರ ಮನೆಗಳ ಮೇಲೆ ಮುಂಜಾನೆಯಿಂದಲೇ ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವರ ಸ್ವಗ್ರಾಮ ಟೇಕಲ್‍ನ ಕೊಮ್ಮನಹಳ್ಳಿಯ ಮನೆಗೆ ಮುಂಜಾನೆ 5-30 ಗಂಟೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಶಾಸಕರು ಕಣ್ಣು ಬಿಡುವ ಹೊತ್ತಿಗೆ ಇಡಿ ಅಧಿಕಾರಿಯು ಮನೆಯೊಳಗೆ ಪ್ರವೇಶಿಸಿ ಅವರ ಬಳಿ ಎಲ್ಲಾ ಮಾಹಿತಿಯನ್ನು ಪಡೆದಿದ್ದಾರೆ. ಕೆಲವು ಮೂಲ […]

ಶ್ರೀನಿವಾಸಪುರ: ಕಂದಾಯ ಇಲಾಖೆ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಎಂಜಿ ರಸ್ತೆಯಲ್ಲಿ ಅವರೆ ಕಾಯಿ ವಹಿವಾಟು ನಡೆಸದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಎಂಜಿ ರಸ್ತೆಯಲ್ಲಿ ನಡೆಯುತ್ತಿದ್ದ ಅವರೆಕಾಯಿ ವಹಿವಾಟು ನಿಲ್ಲಿಸಲು ಹೋದ ಪೊಲೀಸ್ ಸಿಬ್ಬಂದಿ ಹಾಗೂ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ ರಸ್ತೆಯ ಎರಡೂ ಕಡೆ ದೊಡ್ಡ ಮಟ್ಟದಲ್ಲಿ ಬೆಳಿಗ್ಗೆಯಿಂದ ರಾತ್ರಿ ವರೆಗೆ ಅವರೆಕಾಯಿ ವಹಿವಾಟು ನಡೆಸುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿರುವುದಾಗಿ ತಿಳಿಸಿ ವ್ಯಾಪಾರಿಗಳ ಮನವೊಲಿಸಲಾಯಿತು.ಪುರಸಭೆ ಕಚೇರಿ ಸಭಾಂಗಣದಲ್ಲಿ […]

ಶ್ರೀನಿವಾಸಪುರ: ರಾಜ್ಯಾದ್ಯಂತ ಮೂಲೆ ಮೂಲೆಗೂ ರಾಜ್ಯರಸ್ತೆ ಸಾರಿಗೆ ಸಂಸ್ಥೆಯು ಸೇವೆ ಸಲ್ಲಿಸುತ್ತಿದ್ದು, ಈ ಸೇವೆ ಸಲ್ಲಿಸುತ್ತಿರುವ ಚಾಲಕರು, ನಿರ್ವಾಹಕರುಉತ್ತಮಆರೋಗ್ಯ ಹೊಂದಿರಬೇಕೆಂಬ ದೃಷ್ಟಿಯಿಂದ ಈ ಆರೋಗ್ಯತಪಾಸಣಾ ಶಿಭಿರವನ್ನು ಏರ್ಪಡಿಸಿದ್ದು, ಇದರಉಪಯೋಗವನ್ನುಪಡೆದುಕೊಳ್ಳಬೇಕೆಂದು ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ನಅಧ್ಯಕ್ಷರಾದಎಸ್.ಎನ್. ಮಂಜುನಾಥರೆಡ್ಡಿ ತಿಳಿಸಿದರು. ಪಟ್ಟಣದಕರ್ನಾಟಕರಾಜ್ಯರಸ್ತೆ ಸಾರಿಗೆ ಸಂಸ್ಥೆಯಡಿಪೆÇೀದಲ್ಲಿಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು, ಚಾಲಕರು, ಮತ್ತು ಸಿಬ್ಬಂಧಿಗೆ ರೋಟರಿ ಶ್ರೀನಿವಾಸಪುರ ಸೆಂಟ್ರಲ್, ಪವನ್‍ಆಸ್ಪತ್ರೆ ಶ್ರೀನಿವಾಸಪುರ ಹಾಗೂ ವಾಸನ್ ಐ ಕೇರ್, ಕೋಲಾರಇವರ ಸಂಯುಕ್ತಆಶ್ರಯದಲ್ಲಿಉಚಿತಆರೋಗ್ಯತಪಾಸಣಾ ಶಿಭಿರದ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದಎಸ್.ಎನ್. ಮಂಜುನಾಥರೆಡ್ಡಿ, ಸಾರಿಗೆ ಸಂಸ್ಥೆಯಲ್ಲಿಕಾರ್ಯ ನಿರ್ವಹಿಸುತ್ತಿರುವ ನಿರ್ವಾಹಕರು ಹಾಗೂ […]

ಕೋಲಾರ : ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳು ರೈತರ ಬಗ್ಗೆ ಮಾತೃ ಹೃದಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಹಕಾರ ಬ್ಯಾಂಕ್‌ಗಳ ಮುಖಾಂತರ ವಿವಿಧ ಬೆಳೆಗಳಿಗೆ ನೀಡಲಾಗುವ ಬೆಳೆ ಸಾಲದ ಮಿತಿಯನ್ನು ನಿರ್ಧರಿಸಲು ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ರೈತರು ಕಷ್ಟಜೀವಿಗಳಾಗಿದ್ದು, ಬೆಳೆ ಸಾಲ ಮರುಪಾವತಿಯಲ್ಲಿ ಬೇರೆ ಜಿಲ್ಲೆಗಳಿಗಿಂತ ಮುಂದೆ ಇದ್ದಾರೆ. ಜಿಲ್ಲೆಯಲ್ಲಿ ಯಾವುದೇ ಜೀವನದಿಗಳು ಹರಿಯುತ್ತಿಲ್ಲವಾದರೂ ಇಲ್ಲಿನ ವಾತಾವರಣ, ಮಣ್ಣಿನ ಫಲವತ್ತತೆಗೆ […]

ಕೋಲಾರ,ಜ.04: ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿರುವ ಪೊಲೀಸ್ ಹೊರ ಠಾಣೆಯನ್ನು ನರಸಾಪುರ ಕೇಂದ್ರ ಸ್ಥಾನದಲ್ಲಿಯೇನರಸಾಪುರ ಮದರ್ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ನರಸಾಪುರ ಹೋಬಳಿಯ ಗ್ರಾಮಸ್ಥರು ಹಾಗೂ ಯುವ ಮುಖಂಡ ಎನ್.ವಿ.ಗೋಪಿ ಅವರ ನೇತೃತ್ವದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಪೊಲೀಸ್ ಹೊರ ಠಾಣೆ ಇದ್ದು ಇದನ್ನು ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿರುತ್ತದೆ. ಕಾರಣ ನರಸಾಪುರ ಕೈಗಾರಿಕಾ ಪ್ರದೇಶ ಸ್ಥಾಪನೆಗೊಂಡಿದ್ದು, ಕಾರ್ಖಾನೆಗಳು ಸ್ಪಾಪನೆಯಾಗಿ ಸುಮಾರು 10 ರಿಂದ 15 ವರ್ಷಗಳಾಗಿದ್ದು, ಪ್ರಸಿದ್ದ […]

ಶ್ರೀನಿವಾಸಪುರ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಲೋಕೋಪಯೋಗಿ ಇಲಾಖೆಯಿಂದ ಎಸ್‍ಎಫ್‍ಸಿ ವಿಶೇಷ ಅನುದಾನದಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಹೊಸದಾಗಿ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲಾಗಿರುವ ಎಚ್.ನಲ್ಲಪ್ಪಲ್ಲಿ, ಉನಿಕಿಲಿ, ಕೊಳ್ಳೂರು ಹಾಗೂ ಬೈರಪ್ಪಲ್ಲಿ ಹೊಸ ಬಡಾವಣೆಗಳ ಅಭಿವೃದ್ದಿಗೆ ಪ್ರಥಮ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.ಈಗಾಗಲೆ ಪುರಸಭೆ ಹೊಸ ಬಡಾವಣೆಗಳ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲು ಸರ್ಕಾರದಿಂದ ರೂ.15 ಕೋಟಿ ಬಿಡುಗಡೆಯಾಗಿದೆ. ಒಟ್ಟು ರೂ.25 ಕೋಟಿ […]

ಕೋಲಾರ/ 02 ನರಸಾಪುರ ಭಾಗದ ಜನರ, ಕಾರ್ಮಿಕ, ಮಹಿಳಾ ಕಾರ್ಮಿಕರ ಬಹುದಿನಗಳ ಬೇಡಿಕೆಯಾದಂತಹ ನರಸಾಪುರ ಗ್ರಾಮದಲ್ಲಿ ಹೊಸ ಪೆÇಲೀಸ್ ಠಾಣೆಯನ್ನು ಮಂಜೂರು ಮಾಡುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರಲ್ಲಿ ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮನವಿ ನೀಡಿದರು.ಕೋಲಾರಕ್ಕೆ ಬುಧವಾರ ಆಗಮಿಸಿದ್ದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರಿಗೆ ಮನವಿ ನೀಡಿ ಮನವಿಯಲ್ಲಿ. ಕೋಲಾರ ತಾಲ್ಲೂಕು. ನರಸಾಪುರ ಕೈಗಾರಿಕಾ ಪ್ರದೇಶದ ಭಾಗದಲ್ಲಿ ಜನಸಂಖ್ಯೆ […]