ಕೋಲಾರ:- ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅಥವಾ ಅವರ ಅಳಿಯ ಚಿಕ್ಕಪೆದ್ದನ್ನ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು.ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೆ.ಎಚ್.ಮುನಿಯಪ್ಪ, ಪಕ್ಷ ನಿಷ್ಟರಾಗಿದ್ದು, ಜಿಲ್ಲೆಯಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರನ್ನು ಹೊಂದಿದ್ದಾರೆ, ಕ್ಷೇತ್ರದ ಸಂಪೂರ್ಣ […]
ಕೋಲಾರ : ಲೋಕಸಭೆಗೆ ಸಾರ್ವತ್ರಿಕ ಚುನಾವಣೆ-2024 ರ ಸಂಬಂಧ ದಿನಾಂಕ : 16/03/2024 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣೆಗಳನ್ನು ನಿರ್ಭೀತವಾಗಿ, ಮುಕ್ತವಾಗಿ, ಶಾಂತಿಯುತವಾಗಿ ನಡೆಸಲು ಮತ್ತು ಈ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ಸಲುವಾಗಿ, ಜಿಲ್ಲೆಯಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ. 1) ಚುನಾವಣೆಯು ಘೋಷಣೆಯಾದ ದಿನಾಂಕದಿಂದ ಮತಗಳ ಎಣಿಕೆ ದಿನಾಂಕದವರೆಗೆ ಪರವಾನಗಿ ಹೊಂದಿರುವ ಆಯುಧಗಳ ಬಳಕೆಯನ್ನು ನಿಷೇಧಿಸಿ ಸಿಆರ್ಪಿಸಿ 1973 ರ […]
ಶ್ರೀನಿವಾಸಪುರ : ಡಿವಿಜಿ ಬದುಕಿನ ಸರಳ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾದ ಕೆಲವು ಘಟನೆಗಳನ್ನು ಉದಾಹರಸಿ, ವಿದ್ಯಾರ್ಥಿಗಳ ಜೀವನಕ್ಕೆ ನೆರವಾಗಿ ಆತ್ಮಸ್ಥೈರ್ಯ ತುಂಬುವ ಕಗ್ಗದ ಕೆಲವು ಪದ್ಯಗಳನ್ನು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಬಿ. ಗೋಪಾಲಗೌಡರು ಹೇಳಿ ವ್ಯಾಖ್ಯಾನಿಸಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸಪುರ ಘಟಕದಿಂದ ಡಿವಿಜಿ ಅವರ ಜನ್ಮದಿನೋತ್ಸವದ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು.ಲೇಖಕಿ ಹಾಗೂ ಕದಳಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಾಯಾ ಬಾಲಚಂದ್ರ ಮಾತನಾಡಿ ಕಗ್ಗದ […]
ಶ್ರೀನಿವಾಸಪುರ : ಪಟ್ಟಣದ ಪ್ರಾಂತ ರೈತ ಸಂಘದ ಕಛೇರಿಯಲ್ಲಿ ಮಂಗಳವಾರ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು.ಕೆಪಿಆರ್ಎಸ್ ನ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ತಾಲೂಕಿನ ಕೆಲ ರೈತರು ಅರಣ್ಯ ಅಧಿಕಾರಿಗಳ ವಿರುದ್ಧ ಉಚ್ಚನ್ಯಾಯಾಲಯದಲ್ಲಿ ಕೇಸು ಹಾಕಿ ಕೊಂಡು , ತಡೆಯಾಜ್ಞೆ ತಂದು ತಮ್ಮ ಜಮೀನುಗಳನ್ನು ರಕ್ಷಿಸಿಕೊಂಡು ಬೆಳೆ ಮಾಡುತ್ತಿರುವಾಗ ಅಂತಹ ರೈತರ ಬಳಿ ಹೋಗಿ ಈ ಜಮೀನು ಅರಣ್ಯ ಇಲಾಖೆ ಪರವಾಗಿ ಆಗಿದ್ದು, ನೀವುಗಳು ಈ ಜಮೀನು ಕಡೆ ಬರಬಾರದು ಎಂದು ರೈತರನ್ನು ಬೆದರಿಸುತ್ತಿದ್ದಾರೆ. ಇಂತಹ ತಪ್ಪು […]
ಶ್ರೀನಿವಾಸಪುರ : ಗ್ರಾಮೀಣ ಭಾಗದ ಹಳ್ಳಿಗಳಲ್ಲಿನ ಸಾರ್ವಜನಿಕರು ನಕಲಿ ಕಂಪನಿಗಳಿಂದ ಮೋಸಹೋಗುತ್ತಿದ್ದಾರೆ. ಇದನ್ನ ತಡೆಗಟ್ಟುವ ಉದ್ದೇಶದಿಂದ ನಕಲಿ ಕಂಪನಿಗಳು ಮಾಡುತ್ತಿರುವ ಮೋಸಗಳ ಬಗ್ಗೆ ಅರಿವು ಮೂಡಿಸಿಬೇಕು. ನಂತರ ಎಲ್ಐಸಿಯ ಉದ್ದೇಶದ ಬಗ್ಗೆ ಅರಿವು ಮೂಡಿಸಿ, ಎಲ್ಐಸಿ ಕಂಪನಿಯಿಂದ ಹೊಸ ಪಾಲಿಸಿಗಳ ಬಗ್ಗೆ ಪರಿಚಯ ಮಾಡಿಸಿ, ಅರಿವು ಮೂಡಿಸಿ ಪಾಲಿಸಿದಾರರನ್ನಾಗಿ ಮಾಡಿಸಿಲು ಮುಂದಾಗಬೇಕು ಎಂದು ಜಿಲ್ಲಾ ಎಲ್ಐಸಿ ಶಾಖಾ ವ್ಯವಸ್ಥಾಪಕ ಎನ್.ಆರ್.ಸಿದ್ದೇಶ್ ಸಲಹೆ ನೀಡಿದರು.ಪಟ್ಟಣದ ಎಲ್ಐಸಿ ಉಪಶಾಖೆ ಕಛೇರಿಯಲ್ಲಿ ಮಂಗಳವಾರ ತಾಲೂಕಿನ ಎಲ್ಐಸಿ ಪ್ರತಿನಿದಿಗಳ ಸಭೆಗೆ ಚಾಲನೆ ನೀಡಿ […]
ಶ್ರೀನಿವಾಸಪುರ : ಕಂದಾಯ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆದು ಅಂತಿಮ ವರದಿ ಸರ್ಕಾರಕ್ಕೆ ಬರುವ ತನಕ ಅರಣ್ಯ ಇಲಾಖೆಯವರು ರೈತರಿಗೆ ತೊಂದರೆ ಕೊಡಬಾರದೆಂದುಸರ್ಕಾರದ ಆದೇಶ ಇದ್ದರು , ಈ ಸೋಮವಾರ ಸರ್ಕಾರದ ಆದೇಶವನ್ನು, ಹೈಕೋರ್ಟ್ ಆದೇಶವನ್ನು ದಿಕ್ಕರಿಸಿದ್ದಾರೆ ಎಂದು ಪಿ.ಆರ್. ಸೂರ್ಯನಾರಾಯಣ ಆರೋಪಿಸಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರನ್ನು ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.ಶ್ರೀನಿವಾಸಪುರದ ವಲಯ ಅರಣ್ಯಾಧಿಕಾರಿ ಮತ್ತು ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿ ತಾಲೂಕಿನ ಕಸಬಾ ಹೋಬಳಿಯ ಪಾತಪಲ್ಲಿ, ದ್ವಾರಸಂದ್ರ, ಆರಮಾಕಲಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಈ […]
ನರಸಾಪುರ,ಮಾ.18: ಮಹೇಂದ್ರ ಏರೋ ಸ್ಟೈಸ್ ಕಂಪನಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ಖಾಸಗಿ ವ್ಯಕ್ತಿಗಳು ಹಾಗೂ ಅವರಿಗೆ ಕುಮ್ಮಕ್ಕು ನೀಡಿರುವ ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ಕ್ರಮಿನಲ್ ಮೊಕದ್ದಮೆ ದಾಖಲು ಮಾಡಿ ನೊಂದ ಕಾರ್ಮಿಕರಿಗೆ ನ್ಯಾಯ ಕೊಡಿಸಬೇಕೆಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಕಾರ್ಮಿಕ ಸಚಿವರು ಹಾಗೂ ಜಿಲ್ಲಾಡಳಿತವನ್ನು ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯ ಮಾಡಿದ್ದಾರೆ.ರೈತರ ಕೃಷಿ ಭೂಮಿ ನೀರು ಹಾಗೂ ಮೂಲಭೂತ ಸೌಕರ್ಯಗಳನ್ನು ಸ್ಥಳಿಯ ಕಾರ್ಮಿಕರಿಗೆ ಉದ್ಯೋಗ ನೀಡದೆ ಹೊರ ರಾಜ್ಯದ ಕಾರ್ಮಿಕರಿಗೆ ಲಕ್ಷ ಲಕ್ಷ ಉದ್ಯೋಗವನ್ನು […]
ಶ್ರೀನಿವಾಸಪುರ: ಹಾಲೇರಿ ಗ್ರಾಮದಲ್ಲಿ ಭಾನುವಾರ ಪುನೀತ್ರಾಜಕುಮಾರ್ (ಅಪ್ಪು) ರವರ 49 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸಿಹಿ ಹಂಚಿ, ಅನ್ನ ಸಂತರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳಾದ ಮಾರುತಿಚಾರಿ, ಸುನಿಲ್, ಸುಮನ್, ಕೃಷ್ಣ, ನವೀನ್, ಅನಿಲ್, ರಾಘವೇಂದ್ರ, ನಾಗ, ಪಾಂಡು, ಶ್ರೀಕಂಠ ಹಾಗು ಗ್ರಾಮಸ್ಥರು ಉಪಸ್ಥಿತಿರಿದ್ದರು
ಶ್ರೀನಿವಾಸಪುರ : ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಸ್ಥಳೀಯ ಗ್ರಾ,ಪಂ. ನೀತಿ ಸಂಹಿತೆ ಹೆಸರಿನಲ್ಲಿ ಮನೆಗಳ ಮೇಲೆ ಕಟ್ಟಲಾಗಿದ್ದ ಕೇಸರಿ ಧ್ವಜ ಹಾಗೂ ಶ್ರೀರಾಮನ ಕಟೌಟ್ಗಳನ್ನು ತೆರವು ಮಾಡಿದ ಪಂಚಾಯಿತಿ ಸಿಬ್ಬಂದಿ ಗ್ರಾಮದ ಕೂರೀಗೆಪಲ್ಲಿ ರಸ್ತೆಯ ತಿಪ್ಪೆಯಲ್ಲಿ, ಸ್ಮಶಾನದ ಬಳಿ ಬಿಸಾಡಿದ್ದಕ್ಕೆ ಗ್ರಾ.ಪಂ ಸದಸ್ಯ ವೇಂಪಲ್ಲಿ ವೆಂಕಟರಮಣ, ಮೊಟಮಾಕಲ ರಘು, ರೆಡ್ಡಪ್ಪ, ಯಡಗಾನಪಲ್ಲಿ ಶಿವಣ್ಣ, ವೆಂಕಟರಮಣ, ಮಲ್ಲಿಮೋರಪಲ್ಲಿ ಮದನಮೋಹನರೆಡ್ಡಿ, ಚಿಂತಪಲ್ಲಿ ಗ್ರಾಮದ ಗೋವಿಂದು, ಮಂಜುನಾಥ್, ವೆಂಕಟೇಶ್, ದಿಗವ ಚಿಂತಪಲ್ಲಿ ಬಾಲಾಜಿರೆಡ್ಡಿ ರವರು ಗ್ರಾ,ಪಂ ಸಿಬ್ಬಂದಿ ಕಾರ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.ಕೂರಿಗೇಪಲ್ಲಿ […]