ಶ್ರೀನಿವಾಸಪುರ 1 : ಒಂದು ವರ್ಷದಿಂದ ಸಮರ್ಪಕ ಮಳೆ ಬಾರದೆ,ಭೂಮಿಯಲ್ಲಿ ಉಷ್ಣಾಂಶ ಹೆಚ್ಚಿದ್ದು ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ಹೂ ಹಂತದಲ್ಲೆ ಮಾವಿನ ಫಸಲು ಉದರಿ ಡಿಸೆಂಬರ್ ತಿಂಗಳಿನಲ್ಲಿ ಬರಬೇಕಿದ್ದ ಹೂ ಫೆಬ್ರವರಿ ತಿಂಗಳಿನಲ್ಲಿ ಬಂದಿತು ಫಸಲು ತಡವಾಗುವುದರ ಜೊತೆಗೆ ರಣ ಬಿಸಲಿನ ತಾಪಕ್ಕೆ ಕಾಯಿ ಆಗಬೇಕಿದ್ದ ಪಿಂದೆ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಬಿಳುತ್ತಿದ್ದೆ ಕೊಂಚ ದೊಡ್ಡದಾಗಿ ಬಲಿತಿದ್ದ ಮಾವಿನ ಕಾಯಿ ನೀರಿನ ಅಂಶ ಸಿಗದೆ ಬಿಸಿಲ ತಾಪಕ್ಕೆ ಸೊರಗುತ್ತಿದೆ.ಸ್ವಂತ ಟ್ರಾಕ್ಟರ್ ಹಾಗು ಟ್ಯಾಂಕರ್ ಇದ್ದವರು […]
ಶ್ರೀನಿವಾಸಪುರ : ತಾಲೂಕು ಕೇಂದ್ರಕ್ಕೆ ವಿವಿಧ ಕಛೇರಿಗಳಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಂತಹ ಸಾರ್ವಜನಿಕರ ಸ್ಥಿತಿ ಹೇಳತೀರದು. ಬಹುತೇಕ ಜ್ಯೂಸ್ ಅಂಗಡಿಗಳ ಬಳಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದತಂಹ ಸಾರ್ವಜನಿಕರು ತಮ್ಮ ದಾಹವನ್ನು ತೀರಿಸಿಕೊಳ್ಳಲು ಹೆಚ್ಚು ಜ್ಯೂಸ್ ಅಂಗೆಡಿಗಳತ್ತಾ ಮೊರೆ ಹೋಗುತ್ತಿದ್ದು ಕಂಡು ಬಂತು.ಪ್ರತಿ ವರ್ಷಕ್ಕಿಂತ ಈ ವರ್ಷ ವಾತಾವರಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಸೂರ್ಯನ ತಾಪಕ್ಕೆ ಬೆವರಿ ಸುಸ್ತಾದ ಜನರು ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. ಎಳೆನೀರು, ಮಜ್ಜಿಗೆ, ಐಸ್ […]
ಶ್ರೀನಿವಾಸಪುರ ೨ : ತಾಲೂಕಿನ ಚಲ್ದಿಗಾನಹಳ್ಳಿ ಬೈಪಾಸ್ ಬಳಿ ಶ್ರೀನಿವಾಸಪುರ ತಹಶೀಲ್ದಾರ್ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪುಟ್ಟ ಗಾಯಗಳೋಂದಿಗೆ ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹಾಗೂ ಕಾರು ಚಾಲಕ ಬಚಾವ್ ಆಗಿರುವ ಘಟನೆ ಮಂಗಳವಾರ ರಾತ್ರಿ ಸುಮಾರು ೭ ಗಂಟೆಯಿಂದ ೭:೩೦ ಸಮಯದಲ್ಲಿ ನಡೆದಿದೆ.ಖಾಸಗಿ ಬಸ್ ಕಾರು ಡಿಕ್ಕಿ ಹೊಡೆದು, ಬಳಿಕ ಮೊತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದ ಹಿನ್ನಲೆಯಲ್ಲಿ ದ್ವಿಚಕ್ರವಾಹನ ಸವಾರನಿಗೂ ಸಣ್ಣಪಟ್ಟಗಾಯಗಳೊಂದಿಗೆ ಬಚಾವ್ ಆಗಿದ್ದು, ಖಾಸಗಿ ಬಸ್ ಪಣಸಮಾಕನಹಳ್ಳಿ ಬಳಿ ಬಸ್ ಬಿಟ್ಟು ಪರಾರಿಯಾಗಿದ್ದು, […]
ಕೋಲಾರ,ಏ.30: ಪೆನ್‍ಡ್ರೈವ್ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್ ರೇವಣ್ಣ ಮತ್ತು ಎಚ್.ಡಿ. ರೇವಣ್ಣ ಅವರನ್ನು ಬಂಧಿಸಿ ಸೂಕ್ತ ತನಿಖೆ ನಡೆಸಲು ಮತ್ತು ಸಂತ್ರಸ್ತ ಮಹಿಳೆಯರನ್ನು ರಕ್ಷಿಸಲು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.ಕಳೆದ ಕೆಲವು ದಿನಗಳಿಂದ ಪ್ರಭಾವಿ ರಾಜಕಾರಣಿಯೊಬ್ಬರದು ಎನ್ನಲಾದ ಆಶ್ಲೀಲ ಚಿತ್ರಗಳಿರುವ ಪೆನ್‍ಡ್ರೈವ್‍ಗಳನ್ನು ಹಾಸನದ ಬೀದಿ ಬೀದಿಗಳಲ್ಲಿ ಹಂಚಲಾಗುತ್ತಿದೆ. ಆ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳು ವಾಟ್ಸ್‍ಫ್‍ಗಳಲ್ಲಿ ಹರಿದಾಡುತ್ತಿವೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ […]
ಮುಳಬಾಗಿಲು.ಏ.30, ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣವನ್ನು ಪರಿಗಣಿಸಿ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಿ ಆರೋಪಿ ಕಾಮಾಂದಕ ಪ್ರಜ್ವಲ್ ರೇವಣ್ಣ ವಿರುದ್ದ ಕಠಿಣ ಶಿಕ್ಷೆ ವಿದಿಸುವ ಜೊತೆಗೆ ಪೆನ್‍ಡ್ರೈವ್ ಗಳನ್ನು ಹಂಚಿಕೆ ಮಾಡಿದರವರ ವಿರುದ್ದ ಕ್ರಮ ಜರುಗಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಪತ್ರಿಕಾ ಹೇಳಿಕೆ ಮುಖಾಂತರ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಒತ್ತಾಯಿಸಿದರು.ನಗರದ ಹೊರವಲಯದ ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ಮಹಿಳಾ ಘಟಕದ ಸಭೆಯಲ್ಲಿ ಮಾತನಾಡಿದ ರವರು ಪ್ರತಿದಿನ ಪ್ರತಿ ಕ್ಷಣ ಒಂದು ವರ್ಷದ […]
ಕೋಲಾರ:- ಜಿಲ್ಲೆಯ ಆರು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-2 ಯಶಸ್ವಿಯಾಗಿ ನಡೆದಿದ್ದು, ಇಂದಿನ ಪ್ರಥಮ ಭಾಷೆ ಕನ್ನಡ ವಿಷಯಕ್ಕೆ 845 ಮಂದಿ ಹೆಸರು ನೋಂದಾಯಿಸಿದ್ದು, 730 ಮಂದಿ ಹಾಜರಾಗುವ ಮೂಲಕ 115 ಮಂದಿ ಗೈರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಅವರು, ಪಿಯುಸಿ ಪರೀಕ್ಷೆ-2 ಕ್ಕೆ ಪ್ರತಿತಾಲ್ಲೂಕಿಗೆ ಒಂದರಂತೆ ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಾಗಿಲ್ಲ ಮತ್ತು ಎಲ್ಲೂ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ […]
ಕೋಲಾರ,ಏ.29: ನಗರದ ಬಂಗಾರಪೇಟೆ ಸರ್ಕಲ್‍ನಲ್ಲಿರುವ ಸಾಮ್ರಾಟ್ ಅಶೋಕ ಬಾರ್‍ನ ಕ್ಯಾಶಿಯರ್ ಶೇಷಗಿರಿ ನಾಯಕ್ ಹಾಗೂ ಸಿಬ್ಬಂದಿ ಮೇಲೆ ಹಣದ ವಿಚಾರಕ್ಕೆ ಕೊಲೆ ಮಾಡಲು ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಮದ್ಯದ ಅಂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ರಕ್ಷಣೆ ನೀಡುವಂತೆ ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಎಸ್ಪಿ ನಾರಾಯಣ್ ಅವರಿಗೆ ಮನವಿ ಮಾಡಿದ್ದಾರೆ.ಈ ವೇಳೆ ಮಾತನಾಡಿದ ಮದ್ಯ ಮಾರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಚಲಪತಿ, ಇತ್ತೀಚೆಗೆ ಕೋಲಾರ ನಗರದ ಮದ್ಯದ ಅಂಗಡಿಗಳಲ್ಲಿ ಪುಂಡಪೆÇೀಕರಿಗಳು, ಪುಡಿ ರೌಡಿಗಳ […]
ಕೋಲಾರ:- ನಗರದ ಕಾರಂಜಿಕಟ್ಟೆಯ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಕಳೆದ ರಾತ್ರಿ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.ನೂರಾರು ವರ್ಷಗಳಿಂದ ಅಪಾರ ಜನಮನ್ನಣೆ ಗಳಿಸಿರುವ ಕಾರಂಜಿಕಟ್ಟೆಯ ಹೂವಿನ ಕರಗ ಮಹೋತ್ಸವದಲ್ಲಿ ಕಳೆದ ಹಲವಾರು ವರ್ಷಗಳಿಂದ ಕರಗ ಹೊರುತ್ತಿರುವ ಬೇತಮಂಗಲದ ಖ್ಯಾತ ಕರಗದ ಪೂಜಾರಿ ನಾಗರಾಜ್‍ರಿಗೆ ವಯಸ್ಸಾದ ಹಿನ್ನೆಲೆ ಅವರ ಪುತ್ರ ಮುನಿರಾಜು ಎರಡನೇ ಬಾರಿ ದೇವಾಲಯದ ಮುಂಭಾಗದ ಆವರಣದಲ್ಲಿ ನಿರ್ಮಿಸಿದ್ದ ಪುಷ್ಪಾಲಂಕೃತ ಸುಂದರ ವೇದಿಕೆಯಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ನರ್ತಿಸುವ ಮೂಲಕ […]
ಶ್ರೀನಿವಾಸಪುರ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿರವರು ಸ್ವಾಗ್ರಾಮವಾದ ಗುಡಿಸಿವಾರಿಪಲ್ಲಿ ಗ್ರಾಮದ ಮತಗಟ್ಟೆಯಲ್ಲಿ ಮತಚಲಾಯಿಸಿದರು