ಕುಂದಾಪುರ, ಡಿ. 3: ಪೊಲೀಸರು ಹಾಗೂ ಪತ್ರಕರ್ತರು ದಿನದ 24 ಗಂಟೆಯೂ ಚಲನಶೀಲರಾಗಿರುತ್ತಾರೆ. ಆದರೂ ಇಬ್ಬರದು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮುದಾಯದ ಹಿತದೃಷ್ಟಿಯಿಂದ ಇಬ್ಬರದು ಉತ್ತಮ ಕಾರ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಇಬ್ಬರದೂ ದೊಡ್ಡ ಪರಿಶ್ರಮವಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.ಅವರು ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಕುಂದಾಪುರ ತಾಲೂಕು ಕಾರ್‍ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ […]
ಕುಂದಾಪುರ, ಡಿ.3: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಸರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 2 ರಂದು ರಂಗು ರಂಗಾಗಿ ನೆಡಯಿತು.ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ರೋಸರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಸ್ಟ್ಯಾನಿ ತಾವ್ರೊ “ಚಿಕ್ಕ ಮಕ್ಕಳು ಶಾಲೆಯಲ್ಲಿ ಮತು ಮನೆಗಳಲ್ಲಿ ಕೇಂದ್ರ ವ್ಯಕ್ತಿಗಳಾಗಿರುತ್ತಾರೆ, ಮಕ್ಕಳು ಶಾಲೆಯಲ್ಲಿ ಇರದಿದ್ದರೆ ಶಾಲೆ ಬರಿದಾಗಿ ಕಾಣುತ್ತದೆ, ಮಕ್ಕಳು ಮನೆಯಲ್ಲಿ ಇಲ್ಲದಿದ್ದರೆ ಮನೆ ಬರಿದಾಗಿ ಕಾಣುತ್ತೆ. ಹೆತ್ತವರಿಗೆ, ಶಿಕ್ಷಕರಿಗೆ ಮಕ್ಕಳೇ ಸರ್ವಸ್ವ, ಮನೆಗಳಲ್ಲಿ […]
ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವನ್ನು ಶ್ರೀಮತಿ ಪ್ರಕೃತಿ ಮತ್ತು ಶ್ರೀ ಅಲ್ಟನ್ ರೆಬೇರೊ ಹಾಗೂ ಅವರ ಕುಟುಂಬದವರ ಪೋಷಕತ್ವದಲ್ಲಿ ನಡೆಯಲಿದ್ದು, ಇವರುಗಳು ಪ್ರೀತಿಯಿಂದ ಎಲ್ಲರನ್ನು ಆಮಂತ್ರಿಸಿದ್ದಾರೆ. ನೀವೆಲ್ಲರೂ ದಿನಾಂಕ 03.12.2023 ರಂದು ಸಂಜೆ ಗಂಟೆ 5.00 ಕ್ಕೆ ನಡೆಯಲಿರುವ ಭ್ರಾತೃತ್ವದ ಭಾನುವಾರ ದಿವ್ಯ ಬಲಿಪೂಜೆಗೆ, ದಿನಾಂಕ 05.12.2023 ರಂದು ಸಂಜೆ ಗಂಟೆ 6.30 ನದೆಯಲಿರುವ ಸಂಧ್ಯಾವಂದನಾ (ದೇವರ ವಾಕ್ಯದ ಪ್ರಾರ್ಥನಾ ಸಭೆಗೆ, ಹಾಗೇ ದಿನಾಂಕ 6.12.2023 ರಂದು ನಡೆಯಲಿರುವ ಬೆಳಿಗ್ಗೆ ಗಂಟೆ 10.00 […]
ಸಾಮರ್ಥ್ಯವು ನೀವು ಮಾಡುವ ಸಾಮರ್ಥ್ಯವನ್ನು ಹೊಂದಿದೆ.ನೀವು ಏನು ಮಾಡುತ್ತೀರಿ ಎಂಬುದನ್ನು ಪ್ರೇರಣೆ ನಿರ್ಧರಿಸುತ್ತದೆ.ನೀವು ಅದನ್ನು ಎಷ್ಟು ಚೆನ್ನಾಗಿ ಮಾಡುತ್ತೀರಿ ಎಂಬುದನ್ನು ವರ್ತನೆ ನಿರ್ಧರಿಸುತ್ತದೆ.
ದಿನಾಂಕ 30-11-2023 ರಂದು ಫೆಡರೇಷನ್ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (ಫೋಕಸ್ ) ಸಂಘಟನೆಯ ವತಿಯಿಂದ ಮೂಡಬಿದ್ರೆಯ ಪಾಲಡ್ಕದಲ್ಲಿರುವ ಶ್ರೀ ಅಲೆಕ್ಸ್ ಪಿಂಟೊ ಇವರ ಬಡ ಕುಟುಂಬಕ್ಕೆ ಭೇಟಿ ನೀಡಿ ₹25000/- ಮೊತ್ತದ ಚೆಕ್ಕನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುನಿಲ್ ಮೊಂತೇರೊ, ಸಂಚಾಲಕ ಬಾಸಿಲ್ ರಾಡ್ರಿಗಸ್, ಸದಸ್ಯರಾದ ಜಾನ್ ಬ್ಯಾಪ್ತಿಸ್ಟ್ ಡಿಸೋಜ, ಮೆಲ್ವಿನ್ ಪಿರೇರಾ, ಆಲ್ವಿನ್ ಕೋಟ್ಯಾನ್, ಮೆಲ್ವಿನ್ ರಾಡ್ರಿಗಸ್, ಸುಧೀರ್ ಜಾನ್ ಪ್ರಸಾದ್ , ಸಚಿನ್ ಸಲ್ಡಾನ್ಹಾ ಉಪಸ್ಥಿತರಿದ್ದರು.
ಬಳ್ಕೂರಿನ ರಿಕ್ಷಾ ಚಾಲಕನ ಮಗಳು ಅಕ್ಷತಾ, ಪಿ. ಯು.ಸಿ. ವಿದ್ಯಾರ್ಥಿನಿ ಕಿಡ್ನಿ ಸಮಸ್ಯೆ ಯಿಂದ ಬಳಲುತ್ತಿದ್ದು. ಔಷಧ ಮತ್ತು ಡೈಲೆಸಿಸ್ ಬಗ್ಗೆ ತುಂಬಾ ಖರ್ಚು ಆಗುತ್ತಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತು ಇತರ ಕೆಲವು ಸದಸ್ಯರು ಕೊಡಮಾಡಿದ ರೂಪಾಯಿ 61,000/- ವನ್ನು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ರೋಗಿಯ ತಂದೆಗೆ ಹಸ್ಥಾತರಿಸಿದರು. ಅಲ್ಲದೇ ದೇಣಿಗೆ ನೀಡಿದ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು.
ಕುಂದಾಪುರ: ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯ ಹೆಮ್ಮಾಡಿ ಹಾಲು ಡೈರಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಅಫಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ನೆಡೆದಿದೆ. ಬೈಕ್ ಸವಾರ ಹಕ್ಲಾಡಿ ಸಮೀಪದ ತೊಪ್ಲು ನಿವಾಸಿ ಮಹಾಬಲ ಪೂಜಾರಿ (48) ಗುರುತಿಸಲಾಗಿದೆ. ಮೃತರು ಖಾಸಗಿ ಬಸ್ಸು ಚಾಲಕರಾಗಿದ್ದು, ಕೊನೆಯ ಟ್ರಿಪ್ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅವಘಡ ನೆಡೆದಿದೆ. ಸ್ಥಳಕ್ಕೆ ಸಂಚಾರ ಠಾಣಾ ಪೊಲೀಸ್ ಭೇಟಿ ನೀಡಿದ್ದಾರೆ.
ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ಸಂಘದ ವತಿಯಿಂದ ಪ್ರಸ್ತುತ ವರ್ಷದ ಸಾಂಸ್ಕೃತಿಕ ತಂಡಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಪ್ರತಿವರ್ಷವೂ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿಧ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವನ್ನು ಒದಗಿಸಲಾಗುತ್ತಿದ್ದು ಈ ವರ್ಷ ವಿಶೇಷ ಯೋಜನೆ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಎಲ್ಲ ವಿಧ್ಯಾರ್ಥಿಗಳನ್ನು ಹತ್ತು ತಂಡಗಳಾಗಿ ವಿಂಗಡಿಸಿ ಮುಂದಿನ ಎಲ್ಲ ಸ್ಪರ್ದೆಗಳನ್ನು ತಂಡದ ಮಧ್ಯೆ ನಡೆಸಲಾಗುತ್ತದೆ. ಈ ಮೂಲಕ ವಿಧ್ಯಾರ್ಥಿಗಳ ಕ್ರಿಯಾಶೀಲತೆ ಹಾಗೂ ಪ್ರತಿಭೆ ಹೊರಹಾಕಲು ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ. ಮೊದಲ ಸ್ಪರ್ದೆಯಾಗಿ ಫ಼್ಯಾಶನ್ ಶೋ […]
ಕುಂದಾಪುರ: ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಬುಧವಾರ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಲಂಚ ಸ್ವೀಕರಿಸುತ್ತಿದ್ದ ವೇಳೆ ಸಿಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಚೇರಿಯಲ್ಲಿ ಲಿಪಿಕ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜು ಪೂಜಾರಿ ಎಂಬವರು ನಾಗರಿಕರೊಬ್ಬರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ. ವಾಹನವೊಂದು ಅರಣ್ಯ ಇಲಾಖೆಯಿಂದ ಮುಟ್ಟುಗೋಲಾಗಿದ್ದು ಅದನ್ನು ಬಿಡಿಸುವ ಸಂಬಂಧ ಕಡತವನ್ನು ಸಂಬಂಧಪಟ್ಟ ಅಧಿಕಾರಿಗೆ ಕಳುಹಿಸಲು ಮಂಜು ಪೂಜಾರಿ ಲಂಚದ ಬೇಡಿಕೆಯಿಟ್ಟಿದ್ದರು. ಮಾತುಕತೆ ಪ್ರಕಾರ ಕಚೇರಿ ವೇಳೆಯಲ್ಲಿ […]