ಶ್ರೀನಿವಾಸಪುರ : ಪಟ್ಟಣದ ಪೌರಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಮನೆ ನಿರ್ಮಾಣಕ್ಕೆ ಅಗತ್ಯವಾದ ಜಮೀನು ಗುರುತಿಸಲಾಗಿದ್ದು, ಆದಷ್ಟು ಬೇಗ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಪುರಸಭಾಧ್ಯಕ್ಷ ಬಿ.ಎಸ್.ಭಾಸ್ಕರ್ ಹೇಳಿದರು. ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭೆ ವತಿಯಿಂದ ಬುಧವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ನಾಗರಿಕರ ಆರೋಗ್ಯ ರಕ್ಷಣೆಗೆ ಶ್ರಮಿಸುವ ಪೌರಕಾರ್ಮಿಕರು ನಿಜವಾಗಿಯೂ ಪಟ್ಟಣದ ಪ್ರಥಮ ಪ್ರಜೆಗಳು ಎಂದು ಅಭಿಪ್ರಾಯಪಟ್ಟರು. ಪೌರಕಾರ್ಮಿಕರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸಲಾಗುವುದು. ಅವರಿಗೆ […]
ಉಡುಪಿ, ಸೆಪ್ಟೆಂಬರ್ 23, 2024: ವ್ಯಕ್ತಿಗಳ ಮೇಲೆ ಮಾರುಕಟ್ಟೆಯ ಪ್ರಭಾವವು ಹೆಚ್ಚಾಗಿ ಸಾಮಾಜಿಕ ಮಾಧ್ಯಮದ ಮೇಲೆ ಅವಲಂಬಿತವಾಗಿದೆ ಎಂದು ಸ್ವತಂತ್ರ ಕಾರ್ಪೊರೇಟ್ ವಿಷಯ ರಚನೆಕಾರ, ಮಾಧ್ಯಮ ತಜ್ಞ ಮತ್ತು ತರಬೇತುದಾರ ಶ್ರೀ ರಾನ್ಸನ್ ಲೂಯಿಸ್ ಹೇಳಿದರು. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾಧ್ಯಮ ತಂಡವನ್ನುದ್ದೇಶಿಸಿ ಅವರು ಮಾತನಾಡಿದರು. ಜನಮನದಲ್ಲಿರುವುದು ಮತ್ತು ಜನಪ್ರಿಯತೆ ಈ ದಿನಗಳಲ್ಲಿ ಅಗತ್ಯವಾಗಿದೆ ಎಂದು ಅವರು ಹೇಳಿದರು. ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವ ಅವರು ಸಂವಹನ ಕೌಶಲ್ಯ ಮತ್ತು ಮಾಧ್ಯಮ ಸಂಬಂಧಿತ ಅಂಶಗಳಲ್ಲಿ ವಿದ್ಯಾರ್ಥಿಗಳ […]
ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜಿನ NSS ಘಟಕವು ಸೆಪ್ಟೆಂಬರ್ 22, 2024 ರಂದು ಐತಿಹಾಸಿಕ ಕವಲೇದುರ್ಗ ಕೋಟೆಗೆ ತನ್ನ ವಾರ್ಷಿಕ ಟ್ರೆಕ್ಕಿಂಗ್ ದಂಡಯಾತ್ರೆಯನ್ನು ಆಯೋಜಿಸಿದೆ. ಒಟ್ಟು 63 ಉತ್ಸಾಹಿ ಸ್ವಯಂಸೇವಕರು, ಇಬ್ಬರು ಅಧ್ಯಾಪಕರೊಂದಿಗೆ, ಶ್ರೀ ಗಣೇಶ್ ನಾಯಕ್ ಮತ್ತು ನೇತೃತ್ವದಲ್ಲಿ ಈ ಸಾಹಸವನ್ನು ಕೈಗೊಂಡರು. ಶ್ರೀಮತಿ ಶುಭಲತಾ, ಎನ್ ಎಸ್ ಎಸ್ ಅಧಿಕಾರಿಗಳು. ವಿಶೇಷವೆಂದರೆ, ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಅವರು ಚಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಿದರು, ವಿದ್ಯಾರ್ಥಿಗಳಲ್ಲಿ ಸಾಂಘಿಕ ಮತ್ತು ಸೌಹಾರ್ದತೆಯ ಮನೋಭಾವವನ್ನು ಬೆಳೆಸುವ ಬದ್ಧತೆಯನ್ನು ಪ್ರದರ್ಶಿಸಿದರು. ಈ […]
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಇವರಿಗೆ ಸನ್ಮಾನ ಕಾರ್ಯಕ್ರಮ ನೆಡೆಯಿತು. “ಎಂಜಿನಿಯರಿಂಗ್, ಮೆಡಿಕಲ್ ಅಥವಾ ಇನ್ಯಾವುದೇ ವಾಣಿಜ್ಯ, ತಾಂತ್ರಿಕ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದವರೂ ಕೂಡ ಸೈನ್ಯವನ್ನು ಸೇರಿ ಸೇವೆ ಸಲ್ಲಿಸಬಹುದು. ಆಗ ಅದು ಶ್ರೇಷ್ಠವಾದ ದೇಶಸೇವೆಯಾಗುವುದೇ ಹೊರತು ವ್ಯಕ್ತಿಗತವಾದ ಹುದ್ದೆಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ನನ್ನ ಏಳಿಗೆಗೆ ಕಾರಣವಾದ ಆರ್.ಎನ್.ಎಸ್ ಪಿ.ಯು.ಕಾಲೇಜಿಗೆ ಕೃತಜ್ಞನಾಗಿದ್ದೇನೆ ” ಎಂದು ಭಾರತೀಯ ಭೂಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕಾತಿ ಹೊಂದಿದ ಕಾಲೇಜಿನ […]
ಮಂಗಳೂರು, ಸೆ.24, 2024: ಸೇಂಟ್ ಆನ್ಸ್ ಫ್ರೈರಿ ಬೆಜೈ ಡಿವೈನ್ ಮರ್ಸಿ ರಿಟ್ರೀಟ್ ಸೆಂಟರ್‌ನಲ್ಲಿ ಸೇಂಟ್ ಪಡ್ರೆ ಪಿಯೋ ಅವರ ಹಬ್ಬವನ್ನು ಸೆ.23 ರಂದು ಆಚರಿಸಲಾಯಿತು. ಬೆಳಗ್ಗೆ 9.30ಕ್ಕೆ ಪೂಜ್ಯರ ಆರಾಧನೆ ಆರಂಭಗೊಂಡ ನಂತರ ಮೆರವಣಿಗೆ ನಡೆಯಿತು. ಸೇಂಟ್ ಆನ್ಸ್ ಫ್ರೈರಿಯ ರೆವ್ ಡಾ ರಾಕಿ ಡಿ’ಕುನ್ಹಾ ಅವರು ಪ್ರತಿಮೆ ಮತ್ತು ಮೆರವಣಿಗೆಯಲ್ಲಿ ಬಳಸುವ ವಾಹನವನ್ನು ಸಾರ್ವಜನಿಕರಿಗೆ ತೆರೆದಿಡಲು ಆಶೀರ್ವದಿಸಿದರು. ಸುಮಾರು 500 ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 10.30 ಕ್ಕೆ ಬಿಜೈನ ಧರ್ಮಗುರು ಮತ್ತು ಮಂಗಳೂರು […]
ಕುಂದಾಪುರ: ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮವನ್ನು ಇತ್ತೀಚೆಗೆ ಎಂ.ಐ.ಟಿ ಕಾಲೇಜಿನಲ್ಲಿ ಉದ್ಘಾಟಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೀವಿಯಸ್ ಸೊಲ್ಯುಶನ್ ಪ್ರೈವೇಟ್ ಲಿಮಿಟೆಡ್ನನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆದ ಶ್ರೀಯುತ ಸುಯೋಗ್ ಶೆಟ್ಟಿ ಇವರು ಪ್ರಥಮ ವರ್ಷದ ತಾಂತ್ರಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ” ತಾಂತ್ರಿಕ ತರಬೇತಿಯ ಬಗ್ಗೆ ಕುತೂಹಲ ಇರಬೇಕು, ವಿದ್ಯಾರ್ಥಿ ಜೀವನದಲ್ಲಿ ಎದುರಿಸಬೇಕಾದ ಸವಾಲುಗಳನ್ನು ಹಾಗೂ ಬದಲಾಗುತ್ತಿರುವ ತಂತ್ರಜ್ಞಾನವನ್ನು ಮುಂದಿನ ನಾಲ್ಕು ವರ್ಷ ಕಲಿಕೆಯಲು ಗಮನ ಹರಿಸಬೇಕೆಂದು ಕರೆಕೊಟ್ಟರು. ಗೌರವ […]
ಕುಂದಾಪುರ,ದಿನಾಂಕ:25.09.2024 ರಂದು ನಗರದ ಸೈ0ಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರಸೂಸಲು “ಉತ್ಕರ್ಷ -2024″ಎನ್ನುವ ಹೆಸರಿನಿಂದ ವೇದಿಕೆ ಸಜ್ಜುಗೊಳಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರು ಹಾಗೂ ಕುಂದಾಪುರ ಚರ್ಚಿನ ಪ್ರಧಾನ ಧರ್ಮ ಗುರುಗಳಾಗಿರುವ ಅತೀ ವಂದನೀಯ ಫಾದರ್ ಪಾವ್ಲ್ ರೇಗೊರವರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿ, ‘ಪ್ರತಿಭೆ ಎಲ್ಲರಲ್ಲೂ ಇದೆ. ಸರಿಯಾದ ವೇದಿಕೆ ಸಿಕ್ಕಾಗ ಬಳಸಿ ಕೊಳ್ಳಬೇಕು ಎನ್ನುತ್ತಾ ಎಲ್ಲರೂ ತಮ್ಮತಮ್ಮಲ್ಲಿಯ ಪ್ರತಿಭೆಯನ್ನು ಸರಿಯಾಗಿ ತೋರ್ಪಡಿಸಿಕೊಳ್ಳಬೇಕು’ ಎಂದು […]
ಕೊಲ್ಲುರು ಠಾಣಾ ವ್ಯಾಪ್ತಿಯ ಇಡೂರು ಕುಂಜಾಡಿ ಸಮೀಪದ ಜನ್ನಾಲ್ ಎಂಬಲ್ಲಿ ಟೇಂಪೊ ಹಾಗೂ ಬಸ್ ನಡುವೆ ಅಪಘಾತ ಹಲವರಿಗೆ ಗಾಯಗಳಾಗಿವೆ. ಬಸ್ಸು ಕುಂದಾಪುರ ಹೆಮ್ಮಾಡಿ ಮಾರ್ಗವಾಗಿ ಕೊಲ್ಲೂರಿಗೆ ತೆರಳುತೀತ್ತು. ಬಸ್ಸನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಬಸ್ಸಿನಲ್ಲಿ ೩೦ ಕ್ಕೂ ಹೇಚ್ಚು ಪ್ರಯಾಣಿಕರಿದ್ದರು.ಅದರಲ್ಲಿ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ ರಾಘವೇಂದ್ರ ೪೩, ವಾಸಿಂ (೩೦) ಟೇಂಪೊನಲ್ಲಿದ್ದವರು, ಬಸ್ಸಿನಲ್ಲಿದ್ದ ಅಮ್ರತ (೧೭) ಪ್ರತ್ಯಸ್ಥಿ (೧೬) ಅಖಿತ್ (೨೮) ಗಾಯಾಳುಗಳೆಂದು ಗಾಯಾಳುಗಳೆಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ […]
ಕುಂದಾಪುರ : ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್ ಎಮ್ ಎಂ ಹಾಗೂ ವಿಕೆಆರ್ ಶಾಲೆಗಳ ಟೀಚರ್ ಟ್ರೈನಿಂಗ್ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ 25.09.2024 ರಂದು ಪ್ರಿಸ್ಕೂಲ್ ವಿದ್ಯಾರ್ಥಿಗಳಿಗೆ ಸುಂದರ ಕೈಬರಹ ಎನ್ನುವ ವಿಷಯದ ಕುರಿತು ಕಾರ್ಯಾಗಾರ ನೆರವೇರಿತು. ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕಿ ಹಾಗೂ ಕೈಬರಹ ಪರಿಣಿತರಾಗಿರುವ ಶ್ರೀಮತಿ ಕವಿತಾ ಪಿ ಅವರು ಶಾಲಾ ಪೂರ್ವ ಮಕ್ಕಳ ಭಾವನಾತ್ಮಕ ಕೈಬರಹದ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿತಾ ನೀಡಿದರು. ಸಂಸ್ಥೆಯ ಪ್ರಾಂಶುಪಾಲೆ ಆಗಿರುವ ಡಾ. ಚಿಂತನಾ ರಾಜೇಶ್ ಹಾಗೂ ವಿಷಯ […]