ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋವಿಡ್‍ನಿಂದಾಗಿ ಸಂಕಷ್ಟಕ್ಕೀಡಾಗಿರುವ ಖಾಸಗಿ ಅನುದಾನ ರಹಿತ ಶಾಲೆ,ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ತಲಾ 5 ಸಾವಿರ ಪ್ಯಾಕೇಜ್ ಘೋಷಿಸಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿರುವ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ಇನ್ನೊಂದು ಕಂತಿನಲ್ಲಿ ಮತ್ತೆ 5 ಸಾವಿರ ನೀಡುವಂತೆ ಮನವಿ ಮಾಡಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಸುರೇಶ್‍ಕುಮಾರ್ ನೇತೃತ್ವದ ಎಂಎಲ್‍ಸಿಗಳ ನಿಯೋಗಕ್ಕೆ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪ 5 ಸಾವಿರ ರೂ ಪ್ಯಾಕೇಜ್ ಘೋಷಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.ಆದರೆ ತೀವ್ರ […]
JANANUDI.COM NETWORK ಕುಂದಾಪುರ,ಮೇ. : ಗ್ರಾ.ಪಂ ಗಳನ್ನು ಸೀಲ್ ಡೌನ್ ಮಾಡಿರುವುದು ಪರಿಣಾಮಕಾರಿಯಾಗಿ ಪರಿಣಮಿಸಿದೆ.ಆದರಿಂದ ಮಂಗಳವಾರದಂದು ಸಭೆ ನಡೆಸಿ ಯಾವ್ಯಾವ ಪಂಚಾಯತ್ ಮತ್ತು ಹಾಗೂ ಪುರಸಭೆ ವಾರ್ಡ್ ಗಳನ್ನು ಸೀಲ್ ಡೌನ್ ಮಾಡಬೇಕೆಂದು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಇಂದು ಶನಿವಾರ ನಗರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸರಕಾರದ ಆದೇಶದಂತೆ ಲಸಿಕಾ ಕೇಂದ್ರವನ್ನು ತೆರೆಯಲಾಗಿದೆ. ಅರ್ಹರಿಗೆ ಮಾತ್ರ ಲಸಿಕೆ ದೊರೆಯಕಬೇಕೆಂಬ ಉದ್ದೇಶದಿಂದ ಈ […]
ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು ರೋಟರಿ ಕ್ಲಬ್ ಬೆಳ್ಮಣ್ ಇದರ ನೇತೃತ್ವದಲ್ಲಿ ಹಾಗೂ ಬೆಳ್ಮಣ್ ಹಾಗೂ ನಂದಳಿಕೆ ಪರಿಸರದ ವಿವಿಧ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ನಂದಳಿಕೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಕಾರ್ಕಳ ಬಿಳಿಬೆಂಡೆಯ ಬೀಜ ವಿತರಣೆಯ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಹಾಗೂ ಕರ್ನಾಟಕ ಸರಕಾರದ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಇವರು ಬಿಳಿಬೆಂಡೆಯ ಬೀಜ ವಿತರಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ’ಅತ್ಯಧಿಕ ಪೌಷ್ಠಿಕಾಂಶವುಳ್ಳ […]
ವರದಿ : ಮಝರ್, ಕುಂದಾಪುರ ಕುಂದಾಪುರ : ಮಹಾಮಾರಿಯ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಕುಂದಾಪುರ ಕಲಾಮಂದಿರದ ಲಸಿಕಾ ಕೇಂದ್ರದಲ್ಲಿ ಇದೀಗ ಸಮಾಜ ಸೇವೆಯ ಸೋಗಿನಲ್ಲಿ ರಾಜಕೀಯವು ತಾಂಡವವಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತಲಿದೆ. ಲಸಿಕೆ ಹಾಕಿಸಿಕೊಳ್ಳಲು ಬೆಳ್ಳಂಬೆಳಗ್ಗೆ ದೂರದಿಂದ ಬಂದು ತಮ್ಮ ಸರತಿಗಾಗಿ ಸಂಜೆ ತನಕ ಕಾದಿದರೂ, ಕೇಂದ್ರದಲ್ಲಿ ಠಿಕಾಣಿ ಹೂಡಿರುವ ಪುಢಾರಿಗಳಿಂದಾಗಿ ಲಸಿಕೆ ಲಭ್ಯವಾಗದೆ,ಹಿಡಿಶಾಪ ಹಾಕುತ್ತಾ ಹಿಂತಿರುಗಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಹೇಳಲಾಗುತ್ತಿದೆ. ಲಸಿಕಾ ಕೇಂದ್ರದಲ್ಲಿ ಅದಾಗಲೇ ಮಟ್ಟಸವಾಗಿ ತಳವೂರಿರುವ ಎರಡನೇ ಹಂತದ […]
JANANUDI.COM NETWORK ಕುಂದಾಪುರ,ಜೂ.1: ಭಾರತೀಯ ರೆಡ್ ಕ್ರಾಸ್ ರಾಜ್ಯದ ಶಾಖೆಯಿಂದ ಕೊಡ ಮಾಡಲ್ಪಟ್ಟ ಹೈಪೋ ಆಕ್ಸಿಜನ್ ಯಂತ್ರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ, ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇಂದು, ಕುಂದಾಪುರ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಮಿಶನರ್ ರಾಜು ಕೆ. ಕೋವಿಡ್ ಇನ್‌ಚಾರ್ಜ್ ಡಾ.ನಾಗೇಶ್, ಕುಂದಾಪುರ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರಾಬರ್ಟ್ ರೆಬೆಲ್ಲೊ, ಕುಂದಾಪುರ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಜಯಕರ್ ಶೆಟ್ಟಿ ಉಪಾಧ್ಯಕ್ಷ ಡಾ.ಉಮೇಶ್ ಪುತ್ರನ್, ಕಾರ್ಯದರ್ಶಿ […]
JANANUDI.COM NETWORK ಕುಂದಾಪುರ, ಮೇ. 30: ಆಯುಷ್ ಸಂಘಟನೆ (AFI) ಕುಂದಾಪುರ ತಾಲ್ಲೂಕು ಘಟಕವು ಸುಮಾರು 37 ಸಾವಿರ ರೂಪಾಯಿ ಬೆಲೆ ಬಾಳುವ ವಾಷಿಂಗ್ ಮೆಷಿನ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಅಗತ್ಯವಿರುವ ನಿತ್ಯ ಬಳಕೆಯ ಯಂತ್ರಗಳನ್ನು, ಕುಂದಾಪುರ ರೆಡ್ ಕ್ರಾಸ್ ಕೋವಿಡ್ ಸೆಂಟರಿಗೆ ದಾನವಾಗಿ ನೀಡಿತು. ಈ ವಸ್ತುಗಳನ್ನುಹಸ್ತಾಂತರಿಸುವಾಗ ಸಹಾಯಕ ಕಮಿಶನರ್ ರಾಜು.ಕೆ, ಪುರಸಭಾ ಮುಖ್ಯ ಮುಖ್ಯಾಧಿಕಾರಿ ಗೋಪಾಲ ಕ್ರಷ್ಣ ಶೆಟ್ಟಿ, ಕುಂದಾಪುರ ತಾಲೂಕು ವೈದ್ಯಾಧಿಕಾರಿ ನಾಗಭೂಷಣ ಉಡುಪ, ಕುಂದಾಪುರ ತಾಲೂಕು ಆಯುಷ್ ಹಿರಿಯ ವೈದ್ಯಾಧಿಕಾರಿ […]
JANANUDI.COM NETWORK ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಲ ತೆಗೆದುಕೊಂಡವರ ಮೇಲೆ ಯಾವುದೇ ರೀತಿಯ ಸಾಲ ವಸೂಲಾತಿಯ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಒತ್ತಡ ಹೇರುವಂತಿಲ್ಲ. ಸಾಲ ಮರುಪಾವತಿಗೆ ಒತ್ತಾಯಿಸಿದಲ್ಲಿ, ಅಂತವರ, ಅಂತಹ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಲಾಗುವುದು, ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪರ ವಹಿವಾಟುಗಳು ನಿಂತು ಹೋಗಿದ್ದು. ಜನರು ಸಂಕಷ್ಟದಲ್ಲಿದ್ದಾರೆ. ಮೈಕ್ರೋ ಫೈನಾನ್ಸ್ ಗಳು, ಸಹಕಾರಿ ಸಂಘಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ […]
ವರದಿ : ಮಝರ್, ಕುಂದಾಪುರ ಕುಂದಾಪುರ : ಉಡುಪಿಯಲ್ಲಿ ಜೆ ಎಮ್ ಜೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿದಜಾರ್ಜ್ ಡಿ. ಅಲ್ಮೇಡಾ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (26.05.2021) ಬುಧವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ರಾದರು. ಮೂಲತಃ ಕುಂದಾಪುರ ಪಡುಕೋಣೆಯವರಾಗಿದ್ದ ಇವರು ತ್ರಾಸಿಯಲ್ಲಿ ನೆಲೆಸಿ 30 ವರ್ಷಗಳ ಕಾಲ ಕುವೈಟಿನ ದರ್ ಅಲ್ ಸಫಿ ಆಸ್ಪತ್ರೆಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ದುಡಿದಿದ್ದರು. ಈ ಸಂದರ್ಭದಲ್ಲಿ ನೂರಾರು ಯುವಕರನ್ನು ವಿದೇಶಕ್ಕೆ ಕರೆದೊಯ್ದು ಉದ್ಯೋಗ ನೀಡಿದ್ದರು. ಜಾರ್ಜ್ ಡಿ.ಅಲ್ಮೇಡಾ […]
JANANUDI.COM NETWORK ಉಡುಪಿ, ಮೇ 25: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಸಂದರ್ಭದಲ್ಲಿ ಕೆ.ಪಿ.ಎಂ.ಇ. ಅಡಿ ನವೀಕರಣ ಮಾಡದ ಹಾಗೂ ಕೋವಿಡ್-19 ಮಾರ್ಗಸೂಚಿ ಪಾಲಿಸದ ಸಂಸ್ಥೆಗಳ ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ ಕಾಯ್ದೆ ಅನ್ವಯ ರದ್ದು ಪಡಿಸಲಾವುದು ಎಂದು ಜಿಲ್ಲಾ ಕೆ.ಪಿ.ಎಂ.ಇ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಲಲೇ ಉಡುಪಿ ತಾಲೂಕಿನ 16, ಕುಂದಾಪುರ ತಾಲೂಕಿನ 3 ಹಾಗೂ ಕಾರ್ಕಳ ತಾಲೂಕಿನ 7 ಸಂಸ್ಥೆಗಳ ನೋಂದಣಿಯನ್ನು ಕೆ.ಪಿ.ಎಂ.ಇ ಹಾಗೂ ಎಪಿಡೆಮಿಕ್ […]