JANANUDI.COM NETWORK ಮಲ್ಪೆಏ. 7 : ಉಡುಪಿಯ ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾದ ಘಟನೆ ಇಂದು ಸಂಭವಿಸಿದೆ. ಇವರು ಕೇರಳದ ಕೊಟ್ಟಾಯಂನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಕೊಟ್ಟಾಯಂನ ಮಂಗಳಾ ಇಂಜಿನಿಯರಿಂಗ್ ಕಾಲೇಜಿನ 42 ಮಂದಿ ವಿದ್ಯಾರ್ಥಿಗಳ ತಂಡ ಮಲ್ಪೆಗೆ ಪ್ರವಾಸಕ್ಕೆಂದು ಬಂದಿತ್ತು. ವಿದ್ಯಾರ್ಥಿಗಳ ಜೊತೆ ಇಬ್ಬರು ಉಪನ್ಯಾಸಕರೂ ಕೂಡ ಇದ್ದರು. ನೀರಿನಲ್ಲಿ ಆಡುವಾಗ ಆಕಸ್ಮಿಕವಾಗಿ ಸಮುದ್ರದಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ ಅವರಲ್ಲಿ ಇಬ್ಬರು ವಿದ್ಯಾರ್ಥಿಗಳ ಮೃತದೇಹ […]
JANANUDI.COM NETWORK ಕುಂದಾಪುರ, ಏ.7: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಶಾಖೆಯು ಏಪ್ರಿಲ್ 7 ರಂದು ವಿಶ್ವ ಆರೋಗ್ಯ ದಿನಾಚರಣೆ ಆಚರಿಸಿತು. ಕಾರ್ಯಕ್ರಮ ವನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರಿ ಶಸ್ತ್ರ ಚಿಕಿತ್ಸಕರಾದ ಡಾ. ರಾಬರ್ಟ್ ರೆಬೆಲ್ಲೊ ಇವರು ಉದ್ಘಾಟಿಸಿ ಸಂದೇಶ ನೀಡಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್. ಜಯಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯಿಂದ ಸರಕಾರಿ ಆಸ್ಪತ್ರೆಗೆ ನೂರು ಮಾಸ್ಕನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು. 110 ಜನರು […]
JANANUDI.COM NETWORK ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಇವರ ಆಶ್ರಯದಲ್ಲಿ ಜೆಸಿಐ ಕುಂದಾಪುರ ಇವರ ಪ್ರಾಯೋಜಕತ್ವದ ವಿಶ್ವ ಅರೋಗ್ಯ ದಿನಾಚರಣೆಯ ಪ್ರಯುಕ್ತ ಪ್ರಯಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರ ಅರೋಗ್ಯ ಮತ್ತು ಸಮಸ್ಯೆಗಳು ಎಂಬ ವಿಷಯದ ಮೇಲೆ ತಜ್ಞ ವೈದ್ಯರಿಂದ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಮನೀಶ್ ಆಸ್ಪತ್ರೆಯ ಸಂಸ್ಥಾಪಕಿ, ಡಾ. ಪ್ರಮೀಳಾ ನಾಯಕ್ ಫೆರ್ನಾಂಡಿಸ್ ಅವರು ಭಾಗವಹಿಸಿದ್ದರು.ಕಾರ್ಯಾಗಾರದಲ್ಲಿ ಮಹಿಳೆಯರ ದೇಹಕ್ಕೆ ಮತ್ತು ಮನಸಿಗೆ ಸಂಬಂಧವಿರುವ ಸಮಸ್ಯೆಗಳ ಮೇಲೆ ಮಾಹಿತಿ […]
JANANUDI.COM NETWORK ಕುಂದಾಪುರ, ಏ.6: ಕುಂದಾಪುರ ಪುರಸಭೆ ವ್ಯಾಪ್ತಿಯೊಳಗೆ ಆಟೋ ರಿಕ್ಷಾಗಳಿಗೆ ಸೂಕ್ತ ನಿಲ್ದಾಣಗಳನ್ನು ಗುರುತಿಸಿ ಮೂಲ ಸೌಕರ್ಯ ಒದಗಿಸಿ ಕೊಡಬೇಕು ಎನ್ನುವುದು ಬಹು ದೀರ್ಘಕಾಲದ ಬೇಡಿಕೆಯಾಗಿದೆ. ಈ ಬಗ್ಗೆ ಹಲವು ಬಾರಿ ಪುರಸಭೆಗೆ ಮನವಿ ನೀಡಿ ಒತ್ತಾಯಿಸಿದರೂ ಪುರಸಭೆಯಿಂದ ಸೂಕ್ತ ಸ್ಪಂದನೆ ದೊರೆತಿಲ್ಲ. ಈ ಹಿಂದೆ ಕೆಲವು ನಿಲ್ದಾಣ ಪುರಸಭೆ ಗುರುತಿಸಿದರು ಈ. ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಹಾಗೂ ಸಹಾಯಕ ಆಯುಕ್ತರಿಗೂ ಹಲವು ಬಾರಿ ಮನವಿ ನೀಡಲಾಗಿದೆ. ಇತ್ತೀಚಿನ ದಿನದಗಳಲ್ಲಿ ಪುರಸಭೆ ವ್ಯಾಪ್ತಿಯೊಳಗೆ ಪ್ರತಿ ಆಟೋಹಾಗು ಗೂಡ್ಸ್ […]
JANANUDI.COM NETWORK ಕುಂದಾಪುರ,ಎ.5: 26: ಸುಧಿರ್ಘ 37 ವರ್ಷಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡಿ ಇದೀಗ ಕುಂದಾಪುರ ಸಂತ ಜೋಸೆಫ್ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ನೀಡಿ ನಿವ್ರತ್ತರಾದ ಭಗಿನಿ ಕೀರ್ತನ ಇವರಿಗೆ ಶಾಲಾ ಆಡಳಿತ ಮಂಡಳಿ, ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬಂದಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾಸಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶಿರ್ವಚಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆಯ ಸಿ.ಆರ್.ಪಿ ಸುನೀತಾ […]
JANANUDI.COM NETWORK ಕುಂದಾಪುರ: ಎನ್ ಎಮ್ ಎ ಕುಂದಾಪುರ ತಾಲೂಕು ಸಮಿತಿಯ 2021-22 ನೇ ಸಾಲಿನ ಮಹಾಸಭೆಯು ದಿನಾಂಕ 01/04/2022 ರ ಶುಕ್ರವಾರ ಕುಂದಾಪುರ ಕೋಡಿಯ ಎನ್ ಎಮ್ ಎ ಸೌಹಾರ್ಧ ಭವನದಲ್ಲಿ ಮಹಮ್ಮದ್ ರಫೀಕ್ ಗಂಗೊಳ್ಳಿ ರವರ ಅಧ್ಯಕ್ಷತೆಯಲ್ಲಿ ಹಾಗೂ ಯೂಸುಫ್ ಅಹ್ಮದ್ ಅವರ ಪ್ರವಚನದೊಂದಿಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಎನ್ ಎಮ್ ಎ ಕೇಂದ್ರ ಅಧ್ಯಕ್ಷರಾದ ಅಬೂಬಕ್ಕರ್ ಮಹಮ್ಮದ್ ಅಲೀ, ಗೌರವಾಧ್ಯಕ್ಷ ಶೇಖ್ ಅಬೂ ಮಹಮ್ಮದ್ ಹಾಗೂ ಮುಖ್ಯ ಅತಿಥಿ ಇಬ್ರಾಹಿಂ ಹೊಸನಗರ ಇವರು ಉಪಸ್ಥಿತರಿದ್ದರು. […]
JANANUDI.COM NETWORK ಕುಂದಾಪುರ: ಮಾರ್ಚ್ 30ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಅಧ್ಯಾಪಕರ ಸಂಘದ ವಾರ್ಷಿಕ ಸ್ನೇಹಕೂಟ-2022 ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ವಿಶ್ವಸ್ಥರಾದ ಕೆ.ಶಾಂತಾರಾಮ್ ಪ್ರಭು ನಿವೃತ್ತ ಉಪನ್ಯಾಸಕರನ್ನು ಗೌರವಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ.ಲಲಿತಾದೇವಿ ವಹಿಸಿದ್ದರು.ಕಾರ್ಯಕ್ರಮದಲ್ಲಿ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದ ಡಾ.ರೇಖಾ ವಿ.ಬನ್ನಾಡಿ ಮತ್ತು ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಪ್ರೊ.ಸಂಧ್ಯಾ.ಜಿ.ಕೆ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ […]
JANANUDI.COM NETWORK ಕುಂದಾಪುರ: ‘ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ವಿದ್ಯಾರ್ಥಿಗಳಿಗೆ ಎದುರಾಗುವ ಅಳುಕು -ಅಂಜಿಕೆಗಳಂಥ ಭಾವನಾತ್ಮಕ ತೊಡಕುಗಳು ಸಹಜ. ಅಂಥ ಅಡ್ಡಿ- ಆತಂಕಗಳನ್ನು ಕೆಲವು ಸರಳ ಮಾನಸಿಕ ಕೌಶಲ್ಯದ ಚಟುವಟಿಕೆಗಳ ಮೂಲಕ ಹತ್ತಿಕ್ಕಿ, ಮನೋಬಲ ಹೆಚ್ಚಿಸಿಕೊಂಡು ಪರೀಕ್ಷಾ ಕಾರ್ಯದಲ್ಲಿ ಸಫಲತೆ ಪಡೆಯಬೇಕು ” ಎಂದು ಬೆಂಗಳೂರಿನ ನಿಹಾರಿಕಾ ಲರ್ನಿಂಗ್ ಸ್ಪೇಸ್ ಸಂಸ್ಥೆಯ ಖ್ಯಾತ ತರಬೇತುದಾರರಾದ, ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶ್ರೀಲತಾ ಧನ್ಯಾ ರವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ ಪರೀಕ್ಷೆಯನ್ನು ಎದುರಿಸಲು […]
JANANUDI.COM NETWORK ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕಲ್ಕಡ್ಕ ಪ್ರಭಾಕರ ಭಟ್ ನೀಡಿದ ಆಹ್ವಾನವನ್ನು ವಿರೋಧಿಸಿ ಸಿಎಫ್ಐ ಕಾರ್ಯಕರ್ತರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರಭಾಕರ ಭಟ್ ಗೋ ಬ್ಯಾಕ್ ಎಂದು ಘೋಷಣೆ ಕೂಗತೊಡಗಿ ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಸಿಎಫ್ಐ ವಿದ್ಯಾರ್ಥಿ ನಾಯಕ ಸೇರಿ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡರು. ಕೋಮು ದ್ವೇಷ ಭಾಷಣವನ್ನು ನಿರಂತರವಾಗಿ ಮಾಡುತ್ತಿರುವ […]