
ಕೋಲಾರ: ಆಲೂಗಡ್ಡೆಗೆ ಬಾಧಿಸುತ್ತಿರುವ ಅಂಗಮಾರಿ ಹಾಗೂ ಬುಡ ರೋಗ ನಿಯಂತ್ರಣಕ್ಕೆ ಉಚಿತ ಔಷಧಿ ವಿತರಣೆ ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ರೋಗ ಬೆಳೆ ಸಮೇತ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಲಕ್ಷಾಂತರ ರೂಪಾಯಿ ಸಾಲದ ಜೊತೆಗೆ ಮನೆಯ ಹೆಂಡತಿ ಒಡವೆಯನ್ನು ಅಡ ಇಟ್ಟು ಬೆಳೆದಿರುವ 2 ಎಕರೆ ಆಲೂಗಡ್ಡೆ ಬೆಳೆ ಸಂಪೂರ್ಣವಾಗಿ ರೋಗಕ್ಕೆ ಬಲಿಯಾಗಿದೆ. ಲಕ್ಷ ಲಕ್ಷ ಹಣ ನೀಡಿ ಖರೀದಿ ಮಾಡಿ ಔಷಧಿಯಿಂದ ಕನಿಷ್ಠಪಕ್ಷ ಶೇ.10ರಷ್ಟೂ ಸಹ ರೋಗ […]

ವಿಶ್ವ ಮಧುಮೇಹ ದಿನದ ಅಂಗವಾಗಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯು ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ವಿಭಾಗ ಮತ್ತು ಕಾಲೇಜಿನ ರಾಘ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ದಿನಾಂಕ 13.11.2022 ರಂದು ‘ಮುಲ್ಲರ್ರನ್ನ್’ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.ಮಂಗಳೂರಿನ ಸಂಚಾರಿ ಸಹಾಯಕ ಪೊಲೀಸ್ ಆಯುಕ್ತರಾದ ಗೀತಾ ಕುಲಕರ್ಣಿಯವರು ಮ್ಯಾರಥನ್ನ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ […]

ಮಂಗಳೂರು: 14ನೇ ನವೆಂಬರ್ 2022 ರಂದು ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ನಲ್ಲಿ ಮಕ್ಕಳ ದಿನವನ್ನು ಉತ್ಸಾಹ ಮತ್ತು ಹುರುಪಿನಿಂದ ಆಚರಿಸಲಾಯಿತು. ಇದು ವಿದ್ಯಾರ್ಥಿಗಳಿಗೆ ಮೋಜಿನ ದಿನವಾಗಿತ್ತು. ವರ್ಣರಂಜಿತ ಉಡುಗೆಯಲ್ಲಿ ಶಾಲೆಗೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಆನಂದ ಅನುಭವಿಸಲು ಹಾಗೆ ಮಕ್ಕಳಲ್ಲಿ ವಿಶೇಷ ಭಾವನೆ ಮೂಡಿಸಲು ಶಿಕ್ಷಕರಿಂದ ವಿಶೇಷ ಸಭೆ ಆಯೋಜಿಸಲಾಗಿತ್ತು. ಶಿಕ್ಷಕರಿಂದ ದೇವರ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾಂಶುಪಾಲರಾದ ಫಾದರ್ ಜೋಸೆಫ್ ಉದಯ್ ಫೆರ್ನಾಂಡಿಸ್ ಮಕ್ಕಳ ದಿನಾಚರಣೆಯ ಮಹತ್ವವನ್ನು ಕೇಂದ್ರೀಕರಿಸಿ ಭಾಷಣ ಮಾಡಿ “ಜೀವನದ […]

ಬೆಳ್ತಂಗಡಿ: ಹೋಲಿ ರೆಡೀಮರ್ ಶಾಲೆ, ಬೆಳ್ತಂಗಡಿಯು ವೈಟ್ ಬೆಲ್ಟ್ ವಿಭಾಗದಲ್ಲಿ, ಬಂಟ್ವಾಳದ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನವೆಂಬರ್ 12 ರಂದು ಯೊಮೊಟೊ ಶೋಟೊಕಾನ್ ಕರಾಟೆ ಅಸೋಸಿಯೇಶನ್ ಟ್ರಸ್ಟ್ (ಆರ್) ಆಯೋಜಿಸಿದ ರಾಜ್ಯ ಮಟ್ಟದ 2022 ರ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಅನೇಕ ಬಹುಮಾನಗಳನ್ನು ಗೆದ್ದುಕೊಂಡಿದೆ ಕುಮಿಟೆ ಶೈಲಿಯಲ್ಲಿ 8ನೇ ತರಗತಿಯ ಸುಮಿತ್ ಸೆರಾವೊ ದ್ವಿತೀಯ ಸ್ಥಾನ ಪಡೆದರು.7ನೇ ತರಗತಿಯ ಕುಶಿ ಕಟಾದಲ್ಲಿ ದ್ವಿತೀಯ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನ ಪಡೆದರು.6ನೇ ತರಗತಿಯ ಮಾನ್ವಿ […]

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಇದರ ಸಹಯೋಗದಲ್ಲಿ ಆವಿಷ್ಕಾರ: “ಶಿಕ್ಷಣ ಸಂಸ್ಥೆಗಳ ಭವಿಷ್ಯ ನಿರ್ಧಾರ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಹೈಯರ್ ಎಜುಕೇಷನ್ ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಸೋಮಶೇಖರ್ ಭಟ್ ಮಾತನಾಡಿ ನಾವು ಸಂಸ್ಥೆಗೆ ಋಣಿಯಾಗಿರಬೇಕು. ಸಂಸ್ಥೆ ನಮ್ಮ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ದಾರಿ ಮೂಲಕ ನಮ್ಮನ್ನು ಬೆಳೆಸುತ್ತದೆ. ಹಾಗೆ ದೊರಕುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು […]

ಕುಂಭಾಶಿ ಶ್ರೀ ವೆಂಕಟರಮಣ ಪ್ರಭು ಚಾರಿಟೇಬಲ್ ಟ್ರಸ್ಟ್, ಕಾವೇರಿ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ವತಿಯಿಂದ ಅಶಕ್ತರಿಗೆ ಆರೈಕೆ ನೀಡುವ ಹೆಬ್ರಿಯ ಶ್ರೀ ಕೃಷ್ಣ ಸೇವಾ ಕೇಂದ್ರಕ್ಕೆ ಒಕ್ಸಿಜನ್ ಕಾನ್ಸಂಟ್ರೆಟರ್ ಹಸ್ತಾಂತರಿಸಲಾಯಿತು. ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ರೋ. ಶಾಂತರಾಮ ಪ್ರಭು, ಕಾರ್ಯದರ್ಶಿ ರೋ. ಸಚಿನ್ ನಕ್ಕತ್ತಾಯ, ರೋ. ಸುರೇಖಾ ಪುರಾಣಿಕ, ಹಾಗೂ ಹೆಬ್ರಿಯ ಶ್ರೀ ಕೃಷ್ಣ ಸೇವಾ ಕೇಂದ್ರದ ಡಾ. ಭಾರ್ಗವಿ ಐತಾಳ ಉಪಸ್ಥಿತರಿದ್ದರು.

ಮಂಗಳೂರು: ಜೆಪ್ಪುವಿನ ಸೇಂಟ್ ಜೋಸೆಫ್ ಚರ್ಚ್ ನಲ್ಲಿ ಚರ್ಚ್ನ ಮಕ್ಕಳು ನವೆಂಬರ್ 11 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿ ಮಕ್ಕಳೆಲ್ಲಒಗ್ಗೂಡ ಸಂತೋಷದಿಂದ ಸಮಯ ಕಳೆದರು. 6 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗಾಗಿ ಕಾರ್ಯಕ್ರಮವನ್ನು ಸೃಜನಾತ್ಮಕ ಮತ್ತು ವಿನೂತನ ರೀತಿಯಲ್ಲಿ ಆಯೋಜಿಸಲಾಗಿತ್ತು. ಚರ್ಚಿನ ಎಲ್ಲಾ ಮಕ್ಕಳಿಗಾಗಿ ಬೈಬಲ್ ಆಟಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಮಕ್ಕಳು ಉತ್ಸಾಹದಿಂದ ಇದರಲ್ಲಿ ಪಾಲ್ಗೊಂಡರು. ಚಟುವಟಿಕೆಗಳು ಮತ್ತು ಆಟಗಳ ಮೂಲಕ ಮಕ್ಕಳಿಗೆ ಬೈಬಲ್ ಜ್ನಾನವನ್ನು ಕಲಿಸಲು, ಒಂದು ನವೀನ ಮತ್ತು ಪ್ರಾಯೋಗಿಕ ವಿಧಾನದ. […]

ಬಸ್ರೂರು: ನ.13: ಸಂತ ಪಿಲಿಪ್ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋದರತ್ವ ಭಾನುವಾರವನ್ನು (ನ.13)ಸಂಭ್ರಮದಿಂದ ಆಚರಿಸಲಾಯಿತು. ಪರಮಪ್ರಸಾದಕ್ಕೆ ಭವ್ಯ ಮೆರವಣಿಗೆಯ ಮೂಲಕ ಗೌರವವನ್ನು ಸೂಚಿಸಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ.ಫಾ. ಕೆನ್ಯುಟ್ ಬಾರ್ಬೋಜ ದಿವ್ಯ ಬಲಿಪೂಜೆ ಅರ್ಪಿಸಿದರು, ಅತಿಥಿ ಧರ್ಮಗುರುಗಳಾಗಿ ವಂ.ಫಾ. ರೋಶನ್ ಮಾಬೆನ್ ಹಾಗು ಚರ್ಚಿನ ಗುರುಗಳಾದ ವಂ.ಫಾ . ಚಾರ್ಲ್ಸ್ ನೊರೊನ್ಹಾ, ವಂ.ಫಾ. ಚಾರ್ಲ್ಸ್ ಲೂಯಿಸ್ ಉಪಸ್ಥಿತರಿದ್ದರು. ಬಸ್ರೂರು: ನ.13: ಸಂತ ಪಿಲಿಪ್ ನೇರಿ ಚರ್ಚಿನ ತೆರಾಲಿ ಪ್ರಯುಕ್ತ ಸಹೋರತ್ವ ಭಾನುವಾರವನ್ನು (ನ.13)ಸಂಭ್ರಮದಿಂದ ಆಚರಿಸಲಾಯಿತು. ಪರಮಪ್ರಸಾದಕ್ಕೆ […]