ಶಿರ್ವ: ಇಂದು ಸ್ಪರ್ಧಾತ್ಮಕ ಯುಗದಲ್ಲಿ ಯುವಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಯೋಗ ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು.ಯೋಗದಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಿಕೊಳ್ಳುವ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದೆಂದು ಶಿರ್ವ ವಲಯ ಪತಂಜಲಿ ಯೋಗ ಸಮಿತಿಯ ಯೋಗಗುರುಗಳಾದ ಶ್ರೀ ರಾಧಾಕೃಷ್ಣ ಪ್ರಭು ಅವರು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಯೋಗ ಮತ್ತು ಫಿಟ್ನೆಸ್ ಸೆಲ್ ಹಾಗೂ ಎನ್.ಸಿ.ಸಿ ಸಂಯುಕ್ತವಾಗಿ ಏರ್ಪಡಿಸಿದ ಯೋಗ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉದ್ಘಾಟಿಸಿ ಮಾತನಾಡಿದರು.ಆರೋಗ್ಯಯುತ ಯುವಜನರನ್ನು […]

Read More

ಇತ್ತೀಚೆಗೆ ನೇಪಾಳ ದೇಶದ ಪೊಕ್ರ ದಲ್ಲಿ ಆಯೋಜಿಸಲಾದ ಯೂತ್ ಗೇಮ್ ಇಂಟರ್ ನೇಶನಲ್ ಸಿರೀಸ್ 2022ನ ತ್ರೋ ಬಾಲ್ ಪಂದ್ಯಾಟದಲ್ಲಿ ಭಾರತ ತಂಡದ ನಾಯಕಿಯಾಗಿ ಚಿನ್ನದ ಪದಕ ಪಡೆದ ಸುಜಾತ ಕೆ ಎನ್.ಗೋಪಾಲ್ . ಬಸ್ರೂರು ಶಾರದಾ ಕಾಲೇಜಿನ ಮಾಜಿ ಚಾಂಪಿಯನ್ ಹಾಗೂ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನ ಮಾಜಿ ವಿದ್ಯಾರ್ಥಿನಿ ಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು,ಮೊಗವೀರ ಮಹಿಳಾ ಮಹಾಜನ ಸಂಘದ ಸದಸ್ಯರಾಗಿದ್ದಾರೆ.

Read More

ರೋಟರಿ ಕ್ಲಬ್ ಕುಂದಾಪುರ ದಕ್ಷಿಣವು ಮಾತೃ ಸಂಸ್ಥೆಯಾಗಿ ಕುಂದಾಪುರದ ಓಕ್ ವುಡ್ ಇಂಡಿಯನ್ ಶಾಲೆಯಲ್ಲಿ ಹೊಸದಾಗಿ ಇಂಟರ್ಯಾಕ್ಟ ಕ್ಲಬ್ ಪ್ರಾರಂಭಿಸಿದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ರೋಟರಿ ಗವರ್ನರ್ ಅಭಿನಂದನ್ ಶೆಟ್ಟಿ, ಇಂಟರ್ಯಾಕ್ಟ ಸಂಯೋಜಕಿ ಜುಡಿತ್ ಮೆಂಡೋನ್ಸಾ, ರೋ. ಸುರೇಖಾ ಪುರಾಣಿಕ, ಶಾಲಾ ಪ್ರಿನ್ಸಿಪಾಲ್ ನೀತಾ ಶೆಟ್ಟಿ ಹಾಗೂ ಸಹನಾ ಶೆಟ್ಟಿ ಪಾಲ್ಗೊಂಡಿದ್ದರು.ರೋ. ಅಭಿನಂದನ್ ಶೆಟ್ಟಿ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಇಂಟರ್ಯಾಕ್ಟ ಕ್ಲಬ್ ನ ಧ್ಯೇಯ ಉದ್ದೇಶಗಳ ಬಗ್ಗೆ ತಿಳಿಸಿದರು.

Read More

ರೋಟರಿ ಕುಂದಾಪುರ ದಕ್ಷಿಣದ ಸದಸ್ಯರಾದ ರೋ. ಮನೋಹರ ಪಿ ತಮ್ಮ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳ ವಸತಿ ಶಾಲೆ ಮಾನಸ ಜ್ಯೋತಿಯಲ್ಲಿ ಹಣ್ಣು ಹಂಪಲು ಹಂಚಿ, ದೇಣಿಗೆಯನ್ನು ನೀಡಿ, ಮಕ್ಕಳೊಂದಿಗೆ ಆಚರಿಸಿಕೊಂಡರು.ರೋಟರಿ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಮಾಜಿ ಅಧ್ಯಕ್ಷರಾದ ವಾಸುದೇವ ಕಾರಂತ, ಕೆ.ಪಿ.ಭಟ್ , ಕಾರ್ಯದರ್ಶಿ ಸಚಿನ್ ನಕ್ಕತ್ತಾಯ,ರೋ. ಸುರೇಖಾ ಪುರಾಣಿಕ ,ಶ್ರೀಮತಿ ವಿಜಯಲಕ್ಷ್ಮಿ ಮನೋಹರ ಹಾಗೂ ಮಾನಸ ಜ್ಯೋತಿಯ ಶೋಭಾ ಮಧ್ಯಸ್ಥ ಪಾಲ್ಗೊಂಡಿದ್ದರು.

Read More

“ಹದಿಹರೆಯವೆನ್ನುವುದು ತಂಬಾಕು ಸೇವಿಸಬೇಕೆನ್ನುವ ಆಮಿಷಗಳಿಗೆ ಒಳಗಾಗುವ ಆರಂಭಿಕ ಹಂತ.  ವೈಯುಕ್ತಿಕ ಆರೋಗ್ಯದ ಮೇಲೆ ತಂಬಾಕು ಸೇವನೆ ಬೀರುವ ಅಪಾಯಕಾರಿ ಪರಿಣಾಮಗಳ ಬಗ್ಗೆ ಯುವಜನರು ಗಂಭೀರವಾಗಿ ಯೋಚಿಸಿ, ಆರೋಗ್ಯ ಇಲಾಖೆ ಹೊರಡಿಸುವ ಮುನ್ನೆಚ್ಚರಿಕಾ ಮಾಹಿತಿಗಳು ಸಂದೇಶಗಳನ್ನು ಚೆನ್ನಾಗಿ ಮನಗಂಡು ತಂಬಾಕು- ಮುಕ್ತ ಸಮಾಜ ಸೃಷ್ಟಿಯಾಗಬೇಕು” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ ಸೆಲ್ ನ ಆರೋಗ್ಯಾಧಿಕಾರಿಯಾದ ಶ್ರೀಮತಿ ಮಂಜುಳಾ ಶೆಟ್ಟಿ ಯವರು […]

Read More

ಕುಂದಾಪುರ: ಕ್ರೀಡೆ ಶಿಸ್ತಿನ ಜೊತೆಗೆ ಧೈರ್ಯ, ಸಾಹಸವನ್ನು ಕಲಿಸುತ್ತದೆ.ಕ್ರೀಡೆಯಲ್ಲಿ ವೇಗ,ಎತ್ತರ, ಶಕ್ತಿಯನ್ನು ಒಲಿಷ್ಠಗೊಳಿಸುವ ಹಾಗೇ ಅಭ್ಯಾಸ ಮಾಡಿ ಪದಕ ಪಡೆಯುವುದು ಎಲ್ಲರ ಗುರಿಯಾಗಬೇಕು ಎಂದು ಕುಂದಾಪುರ ಸೈಂಟ್ ಮೇರಿಸ್ ಸಮೂಹ ಸಂಸ್ಥೆಯ ಸಂಚಾಲಕ,ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂ.ಫಾ.ಸ್ಟ್ಯಾನಿ ತಾವ್ರೊ ಹೇಳಿದರು.ಅವರು ಬುಧವಾರ ನಗರದ ಗಾಂಧಿ ಮೈದಾನದಲ್ಲಿ ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರದ ಸಹಯೋಗದಲ್ಲಿ ನಡೆದ ಕುಂದಾಪುರ ವೃತ್ತ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಧ್ವಜಾರೋಹಣಗೈದು […]

Read More

ಕುಂದಾಪುರ: ಸೆಪ್ಟೆಂಬರ್ 20ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯುಥ್ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ “ಮಣ್ಣು ರಕ್ಷಿಸಿ” ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಲ್ಕತ್ತಾ ದ ಸಾಹಿಲ್ ಝಾ ಮಾತನಾಡಿ, ಮಣ್ಣುನಮ್ಮ ಪರಿಸರದ ಮತ್ತು ಬದುಕಿಗೆ ಅವಿಭಾಜ್ಯ ಅಂಗವಾಗಿದೆ. ಸುಸ್ಥಿರ ಕೃಷಿ ಮತ್ತು ಪರಿಸರಕ್ಕಾಗಿ ಮಣ್ಣನ್ನು ಉಳಿಸಬೇಕಾಗಿದೆ. ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಸುಮಾರು ಸಾವಿರಾರು ಕಿಲೋಮೀಟರ್ ದೂರ ಸೈಕಲ್ ನಲ್ಲಿ ದೇಶಾದ್ಯಂತ ಸಂಚರಿಸುತ್ತಿದ್ದೇನೆ. “ಮಣ್ಣು ಕುರಿತು ಮಾತಾಡಿ, ಮಣ್ಣು ಕುರಿತು […]

Read More

ಸಂಚಾಲಕರು- ಅಬ್ಬನಡ್ಕ ಸಂದೀಪ್ ವಿ. ಪೂಜಾರಿಗೌರವಾಧ್ಯಕ್ಷರು- ರಾಜು ಶೆಟ್ಟಿ ಕುಂಟಲಗುಂಡಿಸ್ಥಾಪಕಾಧ್ಯಕ್ಷರು- ವಿಠಲ ಮೂಲ್ಯನಿಕಟ ಪೂರ್ವಾಧ್ಯಕ್ಷರು- ಬೋಳ ಉದಯ ಅಂಚನ್ಉಪಾಧ್ಯಕ್ಷರು- ಲೀಲಾ ಪೂಜಾರಿಕಾರ್ಯದರ್ಶಿ- ಲಲಿತಾ ಆಚಾರ್ಯಜೊತೆ ಕಾರ್ಯದರ್ಶಿ- ಸುದರ್ಶನ್ ಕುಂದರ್ಕೋಶಾಧಿಕಾರಿ- ಆಶ್ವಿನಿ ಪ್ರಭಾಕರ್ಅಭಿವೃದ್ಧಿ ಸಮಿತಿಯ ಅಧ್ಯಕ್ಷರು – ದಿನೇಶ್ ಪೂಜಾರಿ ಬೀರೊಟ್ಟುಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ – ಸಂಧ್ಯಾ ಶೆಟ್ಟಿಮಹಿಳಾ ಸಂಘಟನಾ ಕಾರ್ಯದರ್ಶಿ- ಪದ್ಮಶ್ರೀ ಪೂಜಾರಿಭಜನಾ ಮಂಡಳಿಯ ಗೌರವಾಧ್ಯಕ್ಷರು – ರಾಜೇಶ್ ಕೋಟ್ಯಾನ್ಭಜನಾ ಮಂಡಳಿಯ ಆಧ್ಯಕ್ಷರು- ಸುಲೋಚನಾ ಕೋಟ್ಯಾನ್ಭಜನಾ ಮಂಡಳಿಯ ಕಾರ್ಯದರ್ಶಿ- ಕೀರ್ತನ್ ಕುಮಾರ್ಶ್ರೀ ವನದುರ್ಗಾ ಸ್ವಸಹಾಯ ಸಂಘದ ಅಧ್ಯಕ್ಷೆ- […]

Read More