ಕರ್ಣಾಟಕ ಬ್ಯಾಂಕ್ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು ಎಲ್ಲರ ಜೀವನಕ್ಕೆ ಸ್ಪೂರ್ತಿಯಾಗಿರುವ ಉತ್ತಮ ಸಂಗೀತ, ಸಾಹಿತ್ಯ, ಸಾಂಸ್ಕøತಿಕ ಚಟುವಟಿಕೆಗಳಿಗೆ ನಿರಂತರವಾಗಿ ಸ್ಪೂರ್ತಿ, ಪ್ರೇರಣೆ ನೀಡುತ್ತಾ ಬಂದಿದೆ. ಅದರಲ್ಲೂ ಯುವ ಜನಾಂಗ ಶಿಕ್ಷಣ, ವೃತ್ತಿಯ ಒತ್ತಡದಲ್ಲೂ ಸಾಹಿತ್ಯ ಸಂಗೀತದಂತಹ ಉತ್ತಮ ಚಟುವಟಿಕೆಯ ಬಗ್ಗೆ ಆಸಕ್ತಿ ತೋರುವಾಗ ಸಂತೋಷವಾಗುತ್ತದೆ. ಕುಂದಾಪುರದಲ್ಲಿ ಸಂಗೀತ ಭಾರತಿ ಟ್ರಸ್ಟ್ (ರಿ.), ಚಿರಂತನ ಚಾರಿಟೆಬಲ್ ಟ್ರಸ್ಟ್ (ರಿ.) ಸುರತ್ಕಲ್ ಸಂಯುಕ್ತ ಆಶ್ರಯದಲ್ಲಿ ಹದಿಮೂರು ಮಂದಿ ಯುವ ಕಲಾವಿದರು ತಮ್ಮ ಸಂಗೀತ ಹಾಗೂ […]
ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ, ಚಿರಂತನ ಚಾರಿಟೆಬಲ್ ಟ್ರಸ್ಟ್ ಸುರತ್ಕಲ್ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮ್ಯಾಕ್ಸ್ ಮೀಡಿಯಾ ಉಡುಪಿ, ಭಂಡಾರ್ಕಾರ್ಸ್ ಕಾಲೇಜು ಇವುಗಳ ಸಹಯೋಗದಲ್ಲಿ ಕುಂದಾಪುರದ ರಂಗ ಅಧ್ಯಯನ ಕೇಂದ್ರದಲ್ಲಿ ರವಿವಾರ “ಅಮೃತಭಾರತಿಗೆ ಸಂಗೀತದಾರತಿ” ಹಿಂದುಸ್ಥಾನಿ ಯುವ ಶಾಸ್ತ್ರಿಯ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು.ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ವಿಶ್ವಸ್ಥ ಕೆ. ಶಾಂತಾರಾಮ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಸಂಗೀತಕ್ಕೆ ತನ್ನದೇ ಆದ ಮಾಂತ್ರಿಕ ಶಕ್ತಿ ಇದ್ದು, ಇಂತಹ ಸಂಗೀತೋತ್ಸವ ಯುವ ಕಲಾವಿದರಿಗೆ ಉತ್ತಮ ವೇದಿಕೆ. ಇಂತಹ […]
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ| ಧರ್ಮಗುರು ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು 8 ಸೆಪ್ಟೆಂಬರ್ 2022 ರಂದು ತೊಟ್ಟಂನ ಸೇಂಟ್ ಆನ್ಸ್ ಚರ್ಚ್ನಲ್ಲಿ ಮೋಂತಿ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿ ಆಚರಿಸಿದರು. ಬೆಳಗ್ಗೆ 7.30ಕ್ಕೆ ಸೇಂಟ್ ಆನ್ಸ್ ಪ್ರಾರ್ಥನಾ ಮಂದಿರದ ಮುಂಭಾಗದಲ್ಲಿ ಧರ್ಮಗುರು ವಂ| ಡೆನಿಸ್ ಡೆಸಾ ಅವರು ಹೊಸ ತೇನೆಯನ್ನು ಆಶೀರ್ವದಿಸಿದರು. ನಂತರ ಸೇಂಟ್ ಆನ್ಸ್ ಚರ್ಚ್ ತೊಟ್ಟಂಗೆ ಮೆರವಣಿಗೆ ನಡೆಸಿ ಮೇರಿ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಸಾಮೂಹಿಕ ಬಲಿದಾನದ ವೇಳೆ ಬಿಷಪ್ […]
‘ಮೊಬೈಲ್, ಟಿ.ವಿ ಯಂಥ ಯಾವುದೇ ತಾಂತ್ರಿಕ ಉಪಕರಣಗಳಿಲ್ಲದ ಪ್ರಾಚೀನ ಕಾಲದಿಂದಲೂ ಗುರುವೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಶಕ್ತಿಯಾಗಿದ್ದರು. ಇಂದಿಗೂ ವಿದ್ಯಾರ್ಥಿ- ಶಿಕ್ಷಕ ಸಂಬಂಧ ನಾಜೂಕತೆಯಿಂದ ಕೂಡಿದ್ದಾಗಿದೆ. ಪ್ರತಿಯೊಂದು ವಿಷಯವನ್ನು ಕೂಲಂಕಷವಾಗಿ ಗಮನಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರೂ ಎಲ್ಲ ಆಯಾಮಗಳಿಂದಲೂ ಆದರ್ಶರಾಗಿರಬೇಕು’ಎಂದು ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ ದಿನಾಚರಣೆಯ ಪ್ರಯಕ್ತ ಆಯೋಜಿಸಲಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಸಂಖ್ಯಾಶಾಸ್ತ್ರ ಪಾಧ್ಯಾಪಕರಾದ ಪ್ರೊ.ಬಾಲಕೃಷ್ಣ ಭಟ್ ರವರು ತಿಳಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ […]
ಕುಂದಾಪುರ: ಮೇಧಾವಿಗಳು ತಿಳಿದವರು ಶಿಕ್ಷಣದ ಕುರಿತು ಸಾಕಷ್ಟು ವ್ಯಾಖ್ಯಾನ ಪ್ರಕಾರ ಶಿಕ್ಷಣ ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಾಗಬಾರದು. ಅದರಾಚೆಗೂ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವು ದೊರೆತಾಗ ಆ ಶಿಕ್ಷಣಕ್ಕೆ ಅರ್ಥ ಬರುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಶಿಕ್ಷಣವು ಬೇರೆ ಬೇರೆ ಆಯಾಮವನ್ನು ಪಡೆದುಕೊಂಡಿದೆ. ಹೊಸ ಶಿಕ್ಷಣ ನೀತಿಯೂ ಮಕ್ಕಳನ್ನು ತರಗತಿ ಮಾತ್ರವಲ್ಲದೇ ಅದರಾಚೆಗೆ ತೆರಡಿದಲು ಸಾಧ್ಯವಾಗಿದೆ. ವಿದ್ಯಾರ್ಥಿಗಳೆಲ್ಲರೂ ಶೈಕ್ಷಣಿಕ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ಸರ್ವಪಳ್ಳಿ ರಾಧಾಕೃಷ್ಣನ್ ಅವರನ್ನು ಇಂದು ಮಾತ್ರ ನೆನೆಯುವುದು ಅಲ್ಲ, […]
PHOTOS: RICHARD DSOUZA ಮೌಂಟ್ ರೋಜರಿ ಕಥೊಲಿಕ್ ಸಭಾ ಕಲ್ಯಾಣಪುರ ಹಾಗೂ ಶಿಕ್ಷಣ ಆಯೋಗದ ಸಹಯೋಗದಲ್ಲಿ ಭಾನುವಾರ ಮೌಂಟ್ ರೋಜರಿ ಚರ್ಚಿನಲ್ಲಿ ಶಿಕ್ಷಕರ ಜೊತೆ ಬಲಿ ಪೂಜೆಯ ಬಳಿಕ ಚರ್ಚಿನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು 40ಕ್ಕೂ ಅಧಿಕ ಚರ್ಚಿನ ಶಿಕ್ಷಕ ಶಿಕ್ಷಕಿಯರು ಇದರಲ್ಲಿ ಪಾಲ್ಗೊಂಡಿದ್ದು ಎಲ್ಲರನ್ನೂ ಧರ್ಮಗುರುಗಳು ಗುಲಾಬಿಯನ್ನು ನೀಡಿ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹಾರೈಸಿದರು. ಧರ್ಮಗುರು ಫಾ. ಡಾ. ರೋಕ್ ಡಿಸೋಜ ಉಪಸ್ಥಿತರಿದ್ದು ಸಂದೇಶ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಧರ್ಮಗುರುಗಳಾದ ಫಾ| ರೋಲ್ವಿನ್ […]
ಭಾರತೀಯ ವೈದ್ಯಕೀಯ ಸಂಘ ( IMA) ಕುಂದಾಪುರ ದ ಆಶ್ರಯದಲ್ಲಿ KMC ಮಣಿಪಾಲ್ ಅವರ ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ದಿನಾಂಕ 3.9.22 ರಂದು ಕುಂದಾಪುರದ ಗಿಳಿಯಾರು ಕುಶಲ ಹೆಗ್ಡೆ ರೋಟರಿ ಭವನದಲ್ಲಿ ನೆರವೇರಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ KMC ಯ neurosurgery ವಿಭಾಗ ದ ಮುಖ್ಯಸ್ಥ Dr ಗಿರೀಶ್ ಮೆನನ್ ರು ” ಪಕ್ಷವಾತ ದಲ್ಲಿ ಶಸ್ತ್ರ ಚಿಕಿತ್ಸೆಯ ಪಾತ್ರ ” ದ ಬಗ್ಗೆ ಹಾಗೂ ಎಲುಬು ಕೀಲು ವಿಭಾಗ ದ Dr ಕೃಷ್ಣಪ್ರಸಾದ […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕ ಈ ದಿನ ಹಳ್ಳಿಹೊಳೆಯ ತಲೆಸ್ಸೀಮಿಯ ದಿಂದ ಬಳಲುತ್ತಿರುವ ಪ್ರೀತಿಕಾ ಎನ್ನುವ ಬಾಲಕಿಯ ಶಸ್ತ್ರ ಚಿಕಿತ್ಸೆಗೆ ರೂಪಾಯಿ 25,000/- ದೇಣಿಗೆ ನೀಡಿದರು. ಈ ದೇಣಿಗೆ ಯನ್ನು ಸಭಾಪತಿ ಎಸ್. ಜಯಕರ ಶೆಟ್ಟಿ ಹಸ್ತಾಂತರಿಸಿದರು. ಈ ಕಾರ್ಯಕ್ರಮ ದಲ್ಲಿ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಅಬ್ದುಲ್ ಬಶೀರ್, ಸತ್ಯನಾರಾಯಣ ಪುರಾಣಿಕ, ನಾರಾಯಣ ದೇವಾಡಿಗ ಮತ್ತು […]
ಮಣಿಪಾಲ: ಎಂ ಪಿ ಯು ಸಿ ಕಾಲೇಜು ಮಣಿಪಾಲ ಆಯೋಜಿಸಿದ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾವಳಿಯಲ್ಲಿ, ಸಾಸ್ತಾನದ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ಫೈನಲ್ ಪಂದ್ಯದಲ್ಲಿ ಗೆದ್ದು ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಶಾಲೆಗೆ ಕೀರ್ತಿ ತಂದ ಬಾಲಕೀಯರ ತಂಡಕ್ಕೆ ಶಾಲೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ವಂ|ಫಾ|ಸುನೀಲ್ ಡಿಸಿಲ್ವಾ, ಶಾಲಾ ಮುಖ್ಯೋಪಾಧ್ಯಾಯಿನಿ ಸುಜಾ ಡಿಸೋಜಾ, ತರಬೇತಿದಾರರು, ಶಿಕ್ಷಕರು, ಪಾಲಕರು ತಂಡಕ್ಕೆ ಅಭಿನಂದನೆ ಸಲ್ಲಿಸಿದರು.