ಮಂಗಳೂರು;ಇಂದಿಲ್ಲಿ ಶನಿವಾರ ಸಂಜೆ ಸುಮಾರು 6.00 ಗಂಟೆ ವೇಳೆಗೆ ಮಂಗಳೂರು ಪದುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರೆಡ್‌ಮಿಕ್ಸ್ ಕಾಂಕ್ರೀಟ್ ಸಾಗಿಸುವ ಟ್ರಕ್‌ನ ನಿರ್ಲಕ್ಷ್ಯದಿಂದಾಗಿ, ಮಾರ್ಗದಲ್ಲಿ ಕಾಂಕ್ರೀಟ್ ಚೆಲ್ಲಿದ್ದರಿಂದ ದ್ವಿಚಕ್ರ ವಾಹನವೊಂದು ಜಾರಿ ರಸ್ತೆಗೆ ಅಪ್ಪಳಿಸಿತು. ಆದ್ದರಿಂದ ಉಳಿದ ವಾಹನಗಳ ಸಂಚಾರಕೆಜೆ ಅಡ್ಡಿಯಾಯಿತು. ಇದನ್ನು ಗಮನಿಸಿದ ಸ್ಥಾನಿಯವಾಗಿ ಧರ್ಮಾರ್ಥ ಸೇವೆ ನೀಡುತ್ತಿರುವ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ತಕ್ಷಣವೇ ಎಚ್ಚರ ವಹಿಸಿ ಪೊರಕೆಯೊಂದನ್ನು ತಂದು ರಸ್ತೆಯನ್ನು ಸ್ವಚ್ಛಗೊಳಿಸಿ ತನ್ನ ಪ್ರಾಮಾಣಿಕ ಸೇವೆಗಾಗಿ ಸಾರ್ವಜನಿಕರ ಪ್ರಶಂಗೆ ಪಾತ್ರರಾದರು.

Read More

ಮಂಗಳೂರು ; ಎಸ್.ಸಿ.ಎಸ್ ಕಾಲೇಜ್ ಮತ್ತು ಇನ್ಸ್ಟಿಟ್ಯೂಟ್ ಆಫ್ ನಸಿರ್ಂಗ್ ಸೈನ್ಸಸ್‍ನ ಪದವಿ ಮತ್ತು ಡಿಪ್ಲೊಮಾ ಪ್ರದಾನ ಸಮಾರಂಭವು ಬುಧವಾರ ಮಾರ್ಚ್ 19, 2025 ರಂದು ಮಂಗಳೂರಿನ ಬೆಂದೂರಿನಲ್ಲಿರುವ ಸೇಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಹಾಲ್‍ನಲ್ಲಿ ನಡೆಯಿತು. ಕಾರ್ಯಕ್ರಮವು ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು, ನಂತರ ಗಣ್ಯರು ವೇದಿಕೆಯಲ್ಲಿ ದೀಪ ಬೆಳಗಿಸಿದರು. ಸಮಾರಂಭದ ಮುಖ್ಯ ಅತಿಥಿ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಸಂತೋಷ್ ಸುಭಾಷ್ ಇಂಡಿ ಪದವೀಧರರನ್ನು ಪ್ರೀತಿ, ಸಹಾನುಭೂತಿ ಮತ್ತು […]

Read More

ಗಂಗೊಳ್ಳಿ; ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿಯ ಮುಂದಾಳತ್ವದಲ್ಲಿ ಅಪ್ಪಂದಿರ ಜಯಂತೋತ್ಸವ ಆಚರಣೆಯನ್ನು ಮಾರ್ಚ್ 16 ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು. ಒಟ್ಟು 71 ತಂದೆಯಂದಿರು ಈ ಕಾರ್ಯಕ್ರಮಕ್ಕೆ ಹಾಜರಿದ್ದರು. ದೇವಾಲಯದ ಧರ್ಮ ಗುರುಗಳಾದ ವಂದನೀಯ ಗುರು ಥಾಮಸ್ ರೋಶನ್ ಡಿಸೋಜರವರ ಮುಂದಾಳತ್ವದಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು. ನಂತರ ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಗಳನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಸ್ವಾಗತಿಸಲಾಯಿತು. ಸಭಾಂಗಣದಲ್ಲಿ ತಂದೆಯಂದಿರಿಗಾಗಿ ನೃತ್ಯ, ಮೈಮ್, ಅಭಿನಂದನೆ ಗೀತೆ, ವಿಡಿಯೋ ಕ್ಲಿಪ್ಪಿಂಗ್ ಕಾರ್ಯಕ್ರಮ […]

Read More

ಉಡುಪಿ ; ಮಾನವೀಯತೆ ಮರೆತ ಉಡುಪಿ ನಾಗರಿಕ ಸಮಾಜ ಪರಶುರಾಮ ದೇವರ ಮೂರ್ತಿ ಹೆಸರಲ್ಲಿ ಕೋಟಿ ಕದ್ದವನನ್ನು ಓಟು ಹಾಕಿ ಗೆಲ್ಲಿಸುತ್ತಾರೆ. ಉಡುಪಿಯ ಜೀವನಾಡಿಯಂತಿದ್ದ ಸಕ್ಕರೆ ಕಾರ್ಖಾನೆಯ ಸಂಪತ್ತು ಕೊಳ್ಳೆ ಹೊಡೆದವರನ್ನು ಸಮರ್ಥನೆ ಮಾಡುತ್ತಾರೆ. ಹಗರಣಗಳ ಮೇಲೆ ಹಗರಣ ಮಾಡಿದವರಿಗೆ ಇಲ್ಲಿ ಹಿಂಬಾಲಕರು ನಾಯಿ ಬಾಲದಂತೆ ಛವಣಿ ಬಿಸುತ್ತಾರೆ. ಆದರೆ ನೆಲದಲ್ಲಿ ಕಾಲಡಿಗೆ ಬಿದ್ದ ನಾಲ್ಕು ಮೀನುಗಳನ್ನು ಪದಾರ್ಥಕ್ಕೆಂದು ಹೆಕ್ಕಿಕೊಂಡು ಹೋದರೆ ಮರಕ್ಕೆ ಕಟ್ಟಿಹಾಕಿ ಬಡಿಯುತ್ತಾರೆ.ಇಂದು ಉಡುಪಿ ಮಲ್ಪೆ ಬಂದರಿನಲ್ಲಿ ಮಹಿಳೆಯೋರ್ವರನ್ನು ಮೀನು ಕದ್ದರೆಂಬ ಕಾರಣ ನೀಡಿ […]

Read More

ಬ್ರಹ್ಮಾವರ ; ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹು ಕೋಟಿ ವಂಚನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ 27ನೇ ದಿನದಂದು ಜಿಲ್ಲಾ ಕ್ರೈಸ್ತ ನಾಯಕರುಗಳು ಭಾಗವಹಿಸಿದ್ದರು.ರಾಜ್ಯ ಸಾಬೂನು ಮತ್ತು ಡಿಟರ್ಜೆಂಟ್ ಲಿಮಿಟೆಡ್ ನಿಗಮ ಮಾಜಿ ಅಧ್ಯಕ್ಷೆ ವೇರೊನಿಕಾ ಕರ್ನೆಲಿಯೋ ಮಾತನಾಡಿ, 15 ಕೋಟಿ ಅಕ್ರಮದ ಆರೋಪವಿದ್ದರೂ ಜಿಲ್ಲಾ ಜನಪ್ರತಿನಿಧಿಗಳ ಜಾಣ ಮೌನ ಜನಸಾಮಾನ್ಯರ ಸಂಶಯಕ್ಕೆ ಕಾರಣವಾಗಿದೆ ಎಂದರು. ರೈತ ಸಂಘದ ಅಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ ಅವರು ಸರ್ವರನ್ನು ಸ್ವಾಗತಿಸಿ, ಬ್ರಹ್ಮಾವರ […]

Read More

ಮಂಗಳೂರು; ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮಾಜಿ ಅಧ್ಯಕ್ಷರಾದ ದಿವಂಗತ ಕಾಸ್ಮಿರ್ ಮಿನೇಜಸ್ ಇವರಿಗೆ ಶೃದ್ಧಾಂಜಲಿ ಅರ್ಪಿಸುವ ಸಲುವಾಗಿ ಹಾಗೂ ಅವರು ಸಮಾಜಕ್ಕೆ ನೀಡಿದ ದೇಣಿಗೆಯನ್ನು ಪರಿಗಣಿಸಿ “ಧೀರ್ ತಾಂಡೆಲಿ” ಎಂಬ ಬಿರುದನ್ನು ನೀಡಿ ಗೌರವಿಸುವ ಸಲುವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದಿನಾಂಕ 17/3/2025 ರಂದು ಮಂಗಳೂರಿನ ಬಿಜೈಯಲ್ಲಿರುವ ಬಿಜೈ ಚರ್ಚ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ದಿವ್ಯ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|ಪೀಟರ್ ಪೌಲ್ ಸಲ್ಡಾನ್ಹಾರವರು ಹಾಗೂ ಕಥೊಲಿಕ್ ಸಭಾ […]

Read More

ಕುಂದಾಪುರ, ಮಾರ್ಚ್ 11 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಸ್ರೂರಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನವರು ನಡೆಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಡಾ|| ವಿದ್ಯಾ ಅಶೋಕ್ ವೈದ್ಯಕೀಯ ಅಧಿಕಾರಿ, ಶ್ರೀ ದಿನಕರ ಶೆಟ್ಟಿ ಗ್ರಾಮ ಪಂಚಾಯತ್ ಅದ್ಯಕ್ಷರು ಬಸ್ರೂರು, ಶ್ರೀಮತಿ ಪ್ರಭಾವತಿ ಶೆಟ್ಟಿ ಅಂಗನವಾಡಿ ಮೇಲ್ವಿಚಾರಕರು ಬಸ್ರೂರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಅಂಗನವಾಡಿ ಶಿಕ್ಷಕಿಯರು, ಅಕ್ಷತಾ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಉಪನ್ಯಾಸಕರು ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು […]

Read More

ಕುಂದಾಪುರ : ತಾಲೂಕಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ಮದರ್ ತೆರೇಸಾಸ್ ಪದವೀಪೂರ್ವ ಕಾಲೇಜು ಶಂಕರನಾರಾಯಣ ಇಲ್ಲಿ ವ್ಯಾಸಂಗ ಮಾಡಿದ ಹಳೆ ವಿದ್ಯಾರ್ಥಿಗಳಿಂದ ಮಂಗಳೂರು ವಿ ವಿ ಪರೀಕ್ಷೆಯಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಎಂ ಕಾಮ್ ವಿಭಾಗದ ಪರೀಕ್ಷೆ ಯಲ್ಲಿ ಕುಮಾರಿ ಪ್ರತೀಕ್ಷಾ ಪಿ ಎಸ್ ದ್ವಿತೀಯ ರ‍್ಯಾಂಕ್, ಮತ್ತು ಕುಮಾರಿ ಕೀರ್ತನಾ ಬಿ ಸಿ ಎ ವಿಭಾಗದ ಪರೀಕ್ಷೆಯಲ್ಲಿ ಐದನೇ ರ‍್ಯಾಂಕ್ ಹಾಗೂ ಕುಮಾರ.ಸಚಿನ್ ವಿ ಎನ್, ಶ್ರೀನಿವಾಸ್ ವಿಶ್ವವಿದ್ಯಾನಿಲಯ ಮಂಗಳೂರು ಬಿ ಸಿ ಎ ವಿಭಾಗದ […]

Read More

ಸರ್ಜನ್ ಆಸ್ಪತ್ರೆ ಕೋಟೇಶ್ವರದಲ್ಲಿ  ವಿಶ್ವ ಮೂತ್ರಪಿಂಡದ ದಿನಾಚರಣೆಯನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನವರು ನಡೆಸಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಡಾ|| ವಿಶ್ವೇಶ್ವರ ರಾವ್, ಸರ್ಜನ್ , ಡಾ||ವಿಲಾಸ್ ರಾವ್,ಸರ್ಜನ್ , ಶ್ರೀಮತಿ ಮಾಲತಿ ಮತ್ತು ಶ್ರೀಮತಿ ಲಲಿತಾ ನರ್ಸಿಂಗ್ ಸೂಪರಿಂಟೆಂಡೆಂಟ್, ಸರ್ಜನ್ ಆಸ್ಪತ್ರೆ ಕೋಟೇಶ್ವರ ಹಾಗೂ ಹಿರಿಯ ವಯಸ್ಕರು, ಕೀರ್ತನ ಹಾಗೂ ರಕ್ಷಿತಾ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ಉಪನ್ಯಾಸಕರು ಮತ್ತು ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 3 ನೇ ಸೆಮಿಸ್ಟರ್ ಬಿ ಎಸ್ ಸ್ಸಿ […]

Read More