ಕುಂದಾಪುರ: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ, ಗಣಿತ, ಸಮಾಜ ಹಾಗೂ ಕರಕುಶಲ ವಿಷಯಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳ ಪ್ರದರ್ಶನ 03-01-2023 ರಂದು ನೆಡೆಯಿತು. ಪ್ರದರ್ಶನವನ್ನು ಸಮಾಜ ವಿಜ್ಞಾನ ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ಉದ್ಘಾಟಿಸಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆ ಹಾಗೂ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಸನ ವೃದ್ಧಿಯಾಗುವುದು ಎಂದರು. ಗಮನ ಸೆಳೆಯುವಂತಹ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲೆಯ ಶಿಕ್ಷಕರಾದ ಮೈಕಲ್ ಸರ್, […]
ಕುಂದಾಪುರ: ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಿ ’ಶಿಕ್ಷಣಾಧಿಕಾರಿಗಳು ಉಡುಪಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸ್ಥಳೀಯ ಸಂಸ್ಥೆಯಿಂದ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ,ಭಾಗವಹಿಸಿರುವ ಬಗ್ಗೆ ತಮ್ಮ ಸಂತೋಷವನ್ನು ಹಂಚಿಕೊಂಡರು .ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಂದಿರುವ ಶಿಕ್ಷಕರ ಜವಾಬ್ದಾರಿಯನ್ನು ಹೊಗಳಿದರು. ಇದೇ ರೀತಿಯಲ್ಲಿ ಮುಂದೆಯೂ ಒಗ್ಗಟ್ಟಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗಿ ಹಾಗೂ ಇಂತಹ ಜವಾಬ್ದಾರಿಯುತ ಶಿಕ್ಷಕರಿಂದ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣಲಿ ಎಂದು […]
ಕುಂದಾಪುರ : ರವಿ ಬಸ್ರೂರು’ರಿಗೆ ಕೋ. ಮ. ಕಾರಂತ ಪ್ರಶಸ್ತಿ ಕುಂದ ಕನ್ನಡ ಭಾಷೆಯ ಬಗ್ಗೆ ಹೊರಗಿನವರಿಗೆ ಕುತೂಹಲ ಇತ್ತು. ಆದರೆ ಮಹತ್ವ ನೀಡುತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ರವಿ ಬಸ್ರೂರು ಎಂಬ ಯುವಕ ತನ್ನ ಕುಂದಾಪ್ರ ಕನ್ನಡಕ್ಕೆ ಮಹತ್ವ ಕೊಟ್ಟು ಹಾಡು, ಚಲನಚಿತ್ರ ನಿರ್ಮಾಣ ಮಾಡುವುದರೊಂದಿಗೆ ಕುಂದಾಪ್ರ ಕನ್ನಡ ಭಾಷೆಗೆ ಈ ಮಣ್ಣಿನ ಸಂಸ್ಕøತಿಗೆ ಶೋಭೆ ತಂದುಕೊಟ್ಟರು. ಇವರ ಶ್ರದ್ಧೆ ಪರಿಶ್ರಮ, ಸಾಧನೆಗೆ ಕುಂದಪ್ರಭ ಬಳಗ ಕೋ.ಮ.ಕಾರಂತ ಪ್ರಶಸ್ತಿಯನ್ನು ಅರ್ಹವಾಗಿಯೇ ಪ್ರದಾನ ಮಾಡಿದೆ. […]
As the old year 2022 was about to end and the New Year 2023 was waiting to see the dawn, the parishioners of Bondel assembled in the Church at 6.30 p.m. on 31st December 2022 to bid good bye to the old year and welcome the New Year 2023 with prayer and hope .The parishioners […]
ಅಲಂಗಾರ್: ಬಾಲ ಯೇಸುವಿನ ಹಬ್ಬದ ತಯಾರಿಯಲ್ಲಿ ಅಲಂಗಾರ್‌ನಲ್ಲಿ ಶಿ 8 ಜನವರಿ 2023 ರಂದು ಪ್ರಾರಂಭವಾಯಿತು. ಮೂಡುಬಿದಿರೆಯ ವಿ.ಫಾ.ಓನಿಲ್ ಡಿಸೋಜ ವಿಕಾರ್ ಫೊರಾನೆ ಉತ್ಸವದ ಧ್ವಜಾರೋಹಣವನ್ನು ನೆರವೇರಿಸಿ 9 ದಿನಗಳ ಹಬ್ಬದ ತಯಾರಿಯನ್ನು ಉದ್ಘಾಟಿಸಿದರು.”ಹಬ್ಬಕ್ಕೆ ಆಧ್ಯಾತ್ಮಿಕವಾಗಿ ತಯಾರಾಗಬೇಕು. ಇದಕ್ಕೆ ಪವಿತ್ರ ಕುಟುಂಬವು ನಮಗೆ ಅತ್ಯುತ್ತಮ ಉದಾಹರಣೆಯಾಗಿದೆ, ಅಲ್ಲಿ ಮೂವರೂ ದೇವರ ಚಿತ್ತವನ್ನು ಪಾಲಿಸಿದರು ಮತ್ತು ಅವನ ಮಾರ್ಗಗಳಿಗೆ ಶರಣಾದರು, ಇದು ಅವರು ಪವಿತ್ರರಾದರು ಮತ್ತು ನಮಗೆಲ್ಲರಿಗೂ ಮಾದರಿಯಾಗಿದೆ. ಹಬ್ಬದ ಈ ಸಿದ್ಧತೆಯು ನಮಗೆ ಪವಿತ್ರವಾಗಿರಲು […]
ಕುಂದಾಪುರ,ಜ.1 : ಅರವತ್ತರ ದಶಕದಲ್ಲೇ ರೈತರ ಹಿತಾಸಕ್ತಿಗಳಿಗಾಗಿ ಶ್ರಮಿಸಿದ ಉದಾತ್ತ ಚೇತನ ಯಡ್ತೆರೆ ಮಂಜಯ್ಯ ಶೆಟ್ಟರು. ಆಗಿನ ಎನ್ ಇ ಎಸ್ ಯೋಜನೆಯಂತೆ ಅವರು ರೈತರ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ದೂರ ದೃಷ್ಟಿಯಿಂದ ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರ ಮಾರಾಟ ಸಂಘವನ್ನು ಸ್ಥಾಪಿಸಿದರು. ತಲ್ಲೂರಿನಲ್ಲಿ ಸುಸಜ್ಜಿತ ಅಕ್ಕಿ ಗಿರಣಿ ಪ್ರಾರಂಭಿಸಿ, ಲೆವಿ ಸಂಗ್ರಹಿತ ಬತ್ತದಿಂದ ಉತ್ತಮ ದರ್ಜೆಯ ಅಕ್ಕಿ ಉತ್ಪಾದಿಸುವ ವ್ಯವಸ್ಥೆ ಮಾಡಿದ್ದರು. ಕುಂದಾಪುರ ಪರಿಸರದಲ್ಲಿ ಮಂಜಯ್ಯ ಶೆಟ್ಟರಿಂದ ಪ್ರಾರಂಭಿಸಲ್ಪಟ್ಟ ಹಲವು ಸಂಸ್ಥೆಗಳು […]
ಕುಂದಾಪುರ : ಡಿಸೆಂಬರ್ 29ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ, ಹಾಲಾಡಿಯಲ್ಲಿ ಭಂಡಾರಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ಶಿಬಿರ 2022-23 ಇದರ ಸಮಾರೋಪ ಸಮಾರಂಭ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಡಾ. ಶುಭಕರಾಚಾರಿ ವಹಿಸಿದ್ದು ಇವರು ಶಿಬಿರವನ್ನುದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳು ಆಗಿರುವ ಅರುಣ ಎ. ಎಸ್,ರಾಮಚಂದ್ರ ಆಚಾರ್ ಮತ್ತು ಅಣ್ಣಪ್ಪ ಇವರಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುದೂರಿ ಇವರ ವತಿಯಿಂದ […]
ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪೂರ್ವಿಕಾ ಇವರು ರಾಜ್ಯಮಟ್ಟದ ಕಲೋತ್ಸವ 2022 ಸ್ಪರ್ಧೆಯ ಭರತನಾಟ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನಗಳಿಸಿರುತ್ತಾಳೆ. ಪೂರ್ವಿಕಾಳ ಈ ಉತ್ತಮ ಕಲಾಸಾಧನೆಯನ್ನು ಮೆಚ್ಚಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿ ಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.
ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ “ಆಧುನಿಕ ಯುಗದ ಉಪಯುಕ್ತ ತಂತ್ರಾಂಶದ ತಿಳುವಳಿಕೆ” ಎಂಬ ವಿಷಯದ ಕುರಿತು ವಿಚಾರ ಗೋಷ್ಠಿಯನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಡೆಲ್ ಟೆಕ್ನಾಲಜೀಸ್‌ನ ಟೆಕ್ನಿಕಲ್ ಸ್ಟಾಫ಼್ ಆಗಿರುವ ಶ್ರೀ ಸುಬ್ರಹ್ಮಣ್ಯ ಪಡುಬಿದ್ರಿ ಅವರು ಆಗಮಿಸಿದ್ದರು. ವಿಧ್ಯಾರ್ಥಿಗಳಿಗೆ ವಿಷಯದ ಜೊತೆಗೆ ಅವರ ಕ್ರಿಯಾಶೀಲತೆ ಹಾಗೂ ದೂರದೃಷ್ಟಿ ವೃದ್ಧಿಸಲು ಸಹಾಯಕವಾಗುವಂತೆ ವಿವಿಧ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸೂರಜ್ ಪಿ ಎಂ ಎಸ್ (ಎಂಬೆಡೆಡ್ ಸಿಸ್ಟಮ್ಸ್)ಮ್ಯಾನೇಜರ್, ಕಾಂಟಿನೆಂಟಲ್ […]