
ಜೆಸಿಐ ಕುಂದಾಪುರ ಸಿಟಿ ಘಟಕದ ಆಶ್ರಯದಲ್ಲಿ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಎಲೆಮರೆಯ ಸಾಧಕರನ್ನು ಗೌರವಿಸುವ ಕಾರ್ಯಕ್ರಮವನ್ನು ಕುಂದಾಪುರದ ಸುಮುಖ ಮಿನಿ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ತಿಂಗಳ ಮೌನ ಸಾಧಕರಾಗಿ ಕುಂದಾಪುರದ ಶ್ರೀ ರಾಮಕೃಷ್ಣ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ರಾಧಿಕಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಪೂರ್ವ ವಲಯ ಅಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷರಾದ ಅಭಿಲಾಶ್ ಬಿ ಏ, ವಲಯದ ವಿವಿಧ ಘಟಕಗಳ ಘಟಕ ಅಧ್ಯಕ್ಷರುಗಳಾದ […]

ಕುಂದಾಪುರ: ಏಪ್ರಿಲ್ 19ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಮೋಹನ ಬಿ. ಇವರ ಕೃತಿ ” ಬಸವಣ್ಣ ಮತ್ತು ನಾರಾಯಣ ಗುರು ಅವರ ಸಾಮಾಜಿಕ ದರ್ಶನ” ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕರಾದ ಡಾ ರೇಖಾ ಬನ್ನಾಡಿ ಅವರು ಬಸವಣ್ಣ ಮತ್ತು ನಾರಾಯಣಗುರು ಇಬ್ಬರು ಜನಸಾಮಾನ್ಯರ ಸ್ವಸ್ಥವಾಗಿ ಬದುಕಬೇಕು ಎಂಬುದರಲ್ಲಿ ನೆಲೆ ಕಂಡುಕೊಂಡವರು. ಅಂದು ಸಾಮಾಜಿಕ ವ್ಯವಸ್ಥೆಯಲ್ಲಿ ವರ್ಗ ಮತ್ತು ವರ್ಣಭೇದದಿಂದ ಶೈಕ್ಷಣಿಕ ಮತ್ತು ಸಮಾನ ಜೀವನದಲ್ಲಿ ತಾರತಮ್ಯತೆ […]

ಕುಂದಾಪುರ : ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಬೆಡ್ಡಿನ ಮೇಲೆ ಸೂರನ್ನು ದ್ರಷ್ಟಿಸುತ್ತಾ ಉದ್ದಕ್ಕೂ ಮೈ ಚೆಲ್ಲಿ ಬಿದ್ದಿರುವ ಇವರ ಹೆಸರು ಚಂದ್ರ ದೇವಾಡಿಗ.ಊರು ಬೈಂದೂರು ತಾಲೂಕಿನ ಕಂಬದ ಕೋಣೆ. ಕೂಲಿ ನಾಲಿಯ ಜತೆ ತೆಂಗಿನ ಮರದ ಕಾಯಿ ಕೀಳುವ ಕಾಯಕ ಮಾಡಿ ಜೀವನ ಸಾಗಿಸುತ್ತಿದ್ದ ಇವರದ್ದು ಪತ್ನಿ ಹಾಗೂ 2 ಪುಟ್ಟ ಮಕ್ಕಳ ಸಣ್ಣ ಸಂಸಾರ.ಅವತ್ಯಾಕೋ ವಿಧಿ ಕಾರಣವಿಲ್ಲದೆ ಮುನಿದು ಬಿಟ್ಟಿತು. ಪಕ್ಕದ ಗ್ರಾಮದೊರ್ವರ ತೋಟದಲ್ಲಿ ತೆಂಗಿನ ಕಾಯಿ ಕೀಳಲು ಮರ ಹತ್ತಿದರು.ಅದೇನಾಯಿತೋ ಗೊತ್ತಿಲ್ಲ ತಲೆ ಸುತ್ತು […]

ಫಾದರ್ ಮುಲ್ಲರ್ ಸೇವಾ ಸಂಸ್ಥೆಯಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ ಸಮಾರಂಭವನ್ನುಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಷನ್ ಸೆಂಟರ್‍ನಲ್ಲಿದಿನಾಂಕ29.04.2023ರಂದುಹಮ್ಮಿಕೊಳ್ಳಲಾಗಿದೆ.ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ದತಿಯಲ್ಲಿಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ, ಹೋಮಿಯೋಪಥಿಚಿಕಿತ್ಸೆಯುಎಲ್ಲಾ ವಿಭಾಗದಜನರಿಗೂತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಸಂಸ್ಥೆಯು‘ಗುಣಪಡಿಸು’ ಮತ್ತು‘ಸಾಂತ್ವನಿಸು’(Heal & Comfort)ಎಂಬ ಧ್ಯೇಯೊಕ್ತಿಯೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿದೆ. ಈ ಮಹಾವಿದ್ಯಾಲಯವುರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಗುರುತಿಸಲ್ಪಟ್ಟಿದ್ದು, ಹೋಮಿಯೋಪಥಿರಾಷ್ಟ್ರೀಯ ಪರಿಷತ್ತು ಮತ್ತುಆಯುಷ್‍ಇಲಾಖೆ, ನವದೆಹಲಿ ಇವುಗಳ […]

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನೊರ್ವ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಎ.28 ರಂದು ಬೆಳಿಗ್ಗೆ ನಡೆದಿದೆ. ಅಮ್ಟಾಡಿ ನಿವಾಸಿ ಸಂದೀಪ್ ಲೋಬೊ ಮೃತಪಟ್ಟ ಯುವಕನಾಗಿದ್ದು, ಈತನ ಜೊತೆ ಕೆಲಸ ಮಾಡುವ ನೆರೆಯ ಮನೆಯ ಅಕಾಶ್ ಎಂಬಾತನಿಗೆ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಂದೀಪ್ ಲೋಬೊ ವೆಲ್ಡಿಂಗ್ ವ್ರತ್ತಿಯಲ್ಲಿ ಕಾಂಟೆಕ್ಟ್ ಮಾಡುವರಾಗಿದ್ದು, ಸಹ ಸವಾರ ಇವರ ಜೊತೆ […]

05.04.2012 ರಂದು ಸ್ನೇಹಾಲಯದ ಸಂಸ್ಥಾಪಕ ಸಹೋದರ ಜೋಸೆಫ್ ಕ್ರಾಸ್ತಾ ಅವರು ಮಂಜೇಶ್ವರ ರೈಲು ನಿಲ್ದಾಣದಲ್ಲಿ ದೈಹಿಕವಾಗಿ ವಿಕಲಚೇತನರು ಮತ್ತು ಮಾನಸಿಕವಾಗಿ ತೊಂದರೆಗೀಡಾದ ನಿರ್ಗತಿಕರನ್ನು ರಕ್ಷಿಸಿದರು. ಮತ್ತು ಅವರನ್ನು ಆರೈಕೆ ಮತ್ತು ಚಿಕಿತ್ಸೆಗಾಗಿ ಸ್ನೇಹಾಲಯ ಮಾನಸಿಕ-ಸಾಮಾಜಿಕ ಪುನರ್ವಸತಿ ಕೇಂದ್ರ ಮಂಜೇಶ್ವರಕ್ಕೆ ದಾಖಲಿಸಲಾಗಿದೆ. ಅವರನ್ನು ಹುಸೇನ್ ಎಂದು ಹೆಸರಿಸಲಾಯಿತು. ಕೆಲ ತಿಂಗಳ ಹಿಂದೆ ತಂಡದ ಸದಸ್ಯರಿಗೆ ತನ್ನ ಹೆಸರು ಹಸೈನ್ ಎಂದು ಹೇಳಲು ಆರಂಭಿಸಿದ್ದ ಆತ ಬೆಂಗಳೂರಿನ ಹಿರಿಯೂರಿನವನು. ಈತನ ಸ್ವದೇಶಿ ವಿವರಗಳಿಗಾಗಿ ಹುಡುಕಾಟ ಮುಂದುವರಿದಿದ್ದು, ಈತ ಚಿತ್ರದುರ್ಗ ಜಿಲ್ಲೆಯ […]

ಕೋಲಾರ,ಏ.26: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಡಬ್ಯೂ.ಎಪ್.ಐ ಮುಖ್ಯಸ್ಥ ಮತ್ತು ಬಿ.ಜೆ.ಪಿ ಸಂಸದ ಬ್ರೀಜ್ ಭೂಷನ್ ಶರಣ್ ಸಿಂಗ್ ವಿರುದ್ದ ಕಾನೂನು ಕ್ರಮ ಕೈಗೊಂಡು ಸಂಸದ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾನ್ಯ ಪ್ರಧಾನ ಮಂತ್ರಿಗಳನ್ನು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ.ಈ ಕುರಿತು ಮಾತನಾಡಿದ ರವರು ದಿನದ 24 ಗಂಟೆ ಎರಡು ವರ್ಷದ ಹಸುಗೂಸಿನಿಂದ 80 ವರ್ಷದ ವೃದ್ದೆ ಮಹಿಳೆಯವವರೆಗೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಚಾರ, ವರದಕ್ಷಿಣೆ ಕಿರುಕುಳ ಹೀಗೆ ಒಂದಲ್ಲಾ ಒಂದು […]

25-4-22 ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಸಂತ ನಿರಂಕಾರಿ ಸತ್ಸಂಗ ನಾಗೂರು ಇಲ್ಲಿ ಬ್ರಹತ್ ರಕ್ತ ದಾನ ಶಿಬಿರವನ್ನು ಆಯೋಜಿಸಿದರು. ಇದರ ಉದ್ಘಾಟನೆ ಯನ್ನು ಸಂತ ನಿರಂಕಾರಿ ಸಂಸ್ಥೆಯ ಆನಂದ್ ಚಾಬ್ರಿಯ ಮತ್ತು ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ಇವರು ಜಂಟಿಯಾಗಿ ಮಾಡಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಗಣೇಶ್ ಆಚಾರ್ಯ, ಸತ್ಯನಾರಾಯಣ ಪುರಾಣಿಕ ಹಾಗೂ ಸಂತ ನಿರಂಕಾರಿ […]

ದಿನಾಂಕ 05.01.2023 ರಂದು ಹೊಸಂಗಡಿಯ ರಸ್ತೆಯಲ್ಲಿ ನಿರ್ಗತಿಕನಾಗಿ,ಕಳಪೆಯಾದ ಸ್ವಚ್ಛತೆ ಮತ್ತು ಖಿನ್ನತೆಗೆ ಒಳಗಾಗಿಅಲೆದಾಡುತ್ತಿದ್ದ ಸುಮಾರು 39 ವರ್ಷ ಪ್ರಾಯದ ವ್ಯಕ್ತಿಯನ್ನು ಸಮಾಜ ಸೇವಕರಾದ ಶ್ರೀ ಇಬ್ರಾಹಿಂ ಅವರು ರಕ್ಷಿಸಿ ಮಂಜೇಶ್ವರದಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಆರೈಕೆ ಮತ್ತು ಚಿಕಿತ್ಸೆಗಾಗಿ ದಾಖಲಿಸಿದರು.ಪ್ರಾಥಮಿಕ ಆರೈಕೆಯ ನಂತರ ಅವರಿಗೆ ಮನೋವೈದ್ಯಕೀಯ ಕಾಯಿಲೆ ಇರುವುದು ಪತ್ತೆಯಾಯಿತು ಮತ್ತು ಅವರು ತನ್ನನ್ನುಅಹ್ಮದ್ ಬಾಷಾ ಎಂಬುದಾಗಿ ತಿಳಿಸಿದರು . ಮನೋರೋಗ ತಜ್ಞರು ಮತ್ತು ಮನೋವೈದ್ಯಕೀಯ ಸಮಾಜ ಸೇವಕರಮಾರ್ಗದರ್ಶನದಲ್ಲಿ ಅವರಿಗೆ ವಿವಿಧ ಚಿಕಿತ್ಸಕ ಚಟುವಟಿಕೆಗಳೊಂದಿಗೆ ಚಿಕಿತ್ಸೆಯನ್ನು […]