Manglooru: A book called  ‘To Live is Christ’ jointly authored by six scholars, namely Dr. Augustine Mulloor from Cochin, Dr. Richard D Souza and Dr. Johannes Gorantla both from Rome, Dr. Rathan Almeida from Mysore , Dr. Rudolph Raj from Mangalore and Dr. Gregory D Souza and  edited by   Rev. Dr. Gregory D Souza, was […]

Read More

ಮಂಗಳೂರು: ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಅಪರಾಹ್ನ 3.30. ಕ್ಕೆ ಶಾಲಾ ಸಭಾಂಗಣದಲ್ಲಿ ನೆರವೇರಿತು. ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರಾದ ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಗುರು ಆಂಟನಿ ಸೆರಾ, ಇವರುನವೀಕರಿಸಲ್ಪಟ್ಟ ಶಾಲಾ ಸಭಾಂಗಣವನ್ನು ಹಾಗೂಕಾರ್ಯಕ್ರಮವನ್ನು ಉದ್ಘಾಟಿಸಿ ಸೌಹಾರ್ದದ ಪ್ರತಿಕವಾದ ಈ ಶಾಲೆಯಿಂದ ಇನ್ನಷ್ಟು ಮಕ್ಕಳು ಕಲಿತು ಸಮಾಜದ ವಿವಿಧಸ್ಥಳಗಳಲ್ಲಿ ಬೆಳಗಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಸ್ವಾಮಿ ಜಿತಕಾಮನಂದಾಜಿ ಅಧ್ಯಕ್ಷರು ಶ್ರೀರಾಮಕೃಷ್ಣ ಮಠ ಮಂಗಳೂರು ಇವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ ಆಶೀರ್ವಾದ ನೀಡಿದರು. ಕಾರ್ಯಕ್ರಮದಲ್ಲಿ […]

Read More

ಕುಂದಾಪುರ:’ನಾವು ದಿನನಿತ್ಯ ವಿವಿಧ ರೀತಿಯ ಅವಕಾಶಗಳನ್ನು  ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಇರುತ್ತೇವೆ. ನಮಗೆ ಸಿಕ್ಕಿದ ಅವಕಾಶ- ಸೌಲಭ್ಯಗಳನ್ನು ಇತರರಿಗೂ ನೀಡುವ ಔದಾರ್ಯ ನಮ್ಮಲ್ಲಿರಬೇಕು. ಇಂಥ ಸರಳ ಮೌಲ್ಯಗಳನ್ನು ನಾವು ಪಾಲಿಸಿದರೆ ಸ್ವಾಮಿ ವಿವೇಕಾನಂದರ ಕನಸಿನ ಭಾರತ ದೇಶ ಕಟ್ಟುವಲ್ಲಿ ನಾವು ಕೊಡುಗೆಯನ್ನು ನೀಡಿದಂತಾಗುತ್ತದೆ’ ಎಂದು ಜೆಸಿ ಅಕ್ಷತಾ ಗಿರೀಶ್ ಐತಾಳ್ , ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರು, ಜೆಸಿಐ ಇವರು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಜೆ.ಸಿ.ಐ ಕುಂದಾಪುರ ಸಿಟಿಯ ಸಹಯೋಗದಲ್ಲಿ ಆಯೋಜಿಸಿದ ‘ ಎಂಪವರಿಂಗ್ ಯೂತ್ ‘  ಕಾರ್ಯಕ್ರಮವನ್ನು ಉದ್ಘಾಟಿಸಿ ಕರೆ‌ ನೀಡಿದರು. ಮುಖ್ಯ ಅತಿಥಿಯವರಾದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ‌ ನವೀನ್  ಕುಮಾರ್ ಶೆಟ್ಟಿಯವರು ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಉದಾತ್ತ ಸ್ಮರಣೆ ಮಾಡಿ ತರಬೇತುದಾರರು ನೀಡುವ ಸ್ಪೂರ್ತಿದಾಯಕ ಮಾತುಗಳಿಂದ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು. ತರಬೇತುದಾರರಾಗಿ ಆಗಮಿಸಿದ ಪ್ರೊವಿಶನಲ್ ಝೋನಲ್ ಟ್ರೈನರ್ ಜೆಸಿ ಕ್ವೀನಿ ಡಿಕೊಸ್ಟಾ ರವರು ಸಂವಹನ, ಸೃಜನಶೀಲತೆ‌ ಮತ್ತು‌ ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ಮಾಡಬೇಕಾದ ಸದಭಿರುಚಿಯ ವರ್ತನೆಯ ಬಗ್ಗೆ ವಿದ್ಯಾರ್ಥಿಗಳನ್ನು ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿವರಿಸಿದರು. ಕುಂದಾಪುರ ವಲಯ ಉಪಾಧ್ಯಕ್ಷರಾದ ಜೆಸಿ ಅಭಿಲಾಷ್ ಬಿ.ಎ ಯವರು ವಿದ್ಯಾರ್ಥಿಗಳು ಬದುಕಿನಲ್ಲಿ ಒಳ್ಳೆಯ ವಿಚಾರಗಳನ್ನು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಯೂತ್ ಐಕಾನ್ ಗಳಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜೆ.ಸಿ.ಐ ಕುಂದಾಪುರ ಸಿಟಿ ಯ ನೂತನ ಅಧ್ಯಕ್ಷರಾದ ಜೆಸಿ ಡಾ. ಸೋನಿ ಡಿಕೊಸ್ಟಾ ರವರು ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಜೆ.ಸಿ. ಸಂಯೋಜಕಿ ಜೆಸಿ ಪ್ರೇಮಾ ಡಿ ಕುನ್ಹಾ ರವರು ಧನ್ಯವಾದ ಸಲ್ಲಿಸಿದರು. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ ನಿರೂಪಿಸಿದರು. 

Read More

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಯೋಜನಾ ಅರಿವು ‘ ಕಾರ್ಯಕ್ರಮ’  ’  ಕುಂದಾಪುರದ ಆರ್. ಎನ್‌ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಪುರಸಭೆ ಕುಂದಾಪುರ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ(KUIDFC), ಕರ್ನಾಟಕ ಸಮಗ್ರ ನಗರ ನೀರು ನರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ- ಜಲಸಿರಿ ಹಾಗೂ  ಆರ್.ಡಿ.ಎಸ್ ಸಂಸ್ಥೆಯ ಸಹಯೋಗದಲ್ಲಿ ಸಮುದಾಯ ಜಾಗೃತಿ, ಭಾಗವಹಿಸುವಿಕೆ ಪುನರ್ವಸತಿ ಹಾಗೂ ಪುನರ್ನಿರ್ಮಾಣ(CAPRR) ಚಟುವಟಿಕೆಗಳ ಆಶ್ರಯದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಯೋಜನಾ ಅರಿವು ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರುಗಿತು. ಶ್ರೀ ಮಾಲತೇಶ್ ಎಮ್.ಎಚ್, ಸುಮುದಾಯ ಅಭಿವೃದ್ಧಿ ಸಹಾಯಕರು, KUIDFC KIUWMIP, ಉಡುಪಿ, ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಜಲಮೂಲದಿಂದ ಸಂಗ್ರಹಿಸಿದ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಎಲ್ಲಾ ಕಡೆ ನಿರಂತರವಾಗಿ ಸರಬರಾಜು ಮಾಡುವ ಬಗ್ಗೆ ದೃಶ್ಯಾವಳಿಗಳ ಮೂಲಕ ಸವಿವರವಾದ ಮಾಹಿತಿಗಳನ್ನು ನೀಡಿದರು. ಕೆಯುಐಡಿಎಫ್ ಸಿಪಿಐಯು, ಕುಂದಾಪುರ ಇದರ ಸಹಾಯಕ ಅಭಿಯಂತರರಾದ ಶ್ರೀ ಮೃತ್ಯುಂಜಯ ಎಸ್‌. ಹಿರೇಮಠ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ಟಿ.ಸಿ, ಕುಂದಾಪುರ ಇದರ ಸಮಾಲೋಚಕ ಅಭಿಯಂತರರಾದ ಶ್ರೀ ಪಿ.ವಿ.ಸುರೇಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಇವರು ವಿದ್ಯಾರ್ಥಿಗಳಲ್ಲಿ ಮೂಲಭೂತ ಸೌಕರ್ಯದ ಬಗ್ಗೆ ಹೊಸ ಅರಿವು ಮೂಡಿಸುವ ಪುರಸಭೆಯ ಅಧಿಕಾರಿಗಳ ಪ್ರಯತ್ನವನ್ನು ಶ್ಲಾಘಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಧನ್ಯವಾದ ಸಲ್ಲಿಸಿದರು. 

Read More