ಕಳೆದ ಸುಮಾರು ನಾಲ್ಕು ದಶಕಗಳಿಂದ ಟ್ಯಾಕ್ಸಿ,ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ಕೆ.ಸಾದಿಕ್ ಹೆಮ್ಮಾಡಿ ಅವರನ್ನು ಸಮಾಜ ಮುಖಿಯಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜಿಲ್ಲಾ ಟ್ಯಾಕ್ಸಿ ಮೆನ್ ಹಾಗೂ ಮಾಕ್ಸಿ ಕ್ಯಾಬ್ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಅಧ್ಯಕ್ಷರಾದ ರಘುಪತಿ ಭಟ್ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಸಂಘದ ವಾರ್ಷಿಕ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಿದರು.
ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಆಧೀನದ ಕಥೊಲಿಕ್ ಶಿಕ್ಷಣ ಮಂಡಳಿ (ಸಿಬಿಇ) ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ಭೋಧಿಸುವ ಶಿಕ್ಷಕರಿಗಾಗಿ 5 ದಿನಗಳ ಕಮ್ಯುನಿಕೇಟಿವ್ ಇಂಗ್ಲಿಷ್ ಕೋರ್ಸ್ನ್ನು ಏಪ್ರಿಲ್ 17, 2023 ರಂದು ಮಂಗಳೂರಿನ ಪಾದುವಾ ಕಾಲೇಜಿನಲ್ಲಿ ಪ್ರಾರಂಭಿಸಲಾಯಿತು.ಕಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಫಾದರ್ ಆ್ಯಂಟನಿ ಸೆರಾ ಅವರು ಮಾತಾನಾಡುತ್ತಾ, “ಇಂಗ್ಲಿμï ಮಾಧ್ಯಮ ಶಿಕ್ಷಕರಲ್ಲಿ ಸಂವಹನ ಕೌಶಲ್ಯವನ್ನು ಹೆಚ್ಚಿಸುವುದು, ಮತ್ತು ವಿದ್ಯಾರ್ಥಿಗಳೊಂದಿಗೆ ಮತ್ತು ಅವರ ಪೋಷಕರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಅನುಕೂಲವಾಗುವಂತಹ ತರಬೇತಿ ನೀಡುವುದು ಈ ಕಾರ್ಯಕ್ರಮದ […]
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ವಿಶ್ವ ಭೂಮಿಯ ದಿನಾಚರಣೆಯನ್ನು ಆಚರಿಸಲಾಯಿತು.ಭೂಮಿಯ ದಿನವು ಪರಿಸರ ಸಂರಕ್ಷಣೆಗೆ ಬೆಂಬಲವನ್ನು ಪ್ರದರ್ಶಿಸಲು ,ಹಸಿರು ಜೀವನ ಮತ್ತು ಹವಾಮಾನ ಬಿಕ್ಕಟ್ಟನ್ನು ಎದುರಿಸುವುದರ ಮೇಲೆ ಕೇಂದ್ರೀಕೃತವಾಗಿವೆ. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ ಎಂದು ಮುಖ್ಯ ಅತಿಥಿಯಾಗಿ ಕಾಲೇಜಿನ ರೋವರ್ಸ್ ಸ್ಕೌಟ್ ಲೀಡರ್ ಶ್ರೀ ಪ್ರಕಾಶ್ ರವರು ಮಾತನಾಡಿದರು. ಪರಿಸರ ಸಂರಕ್ಷಣೆಯು ಪರಿಸರದ ಗುಣಮಟ್ಟವನ್ನು ಸುಧಾರಿಸುವುದು, ರಕ್ಷಿಸುವುದು […]
ಕುಂದಾಪುರ, 12: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ, ಚುನಾವಣಾ ಸಾಕ್ಷರತ ಕ್ಲಬ್, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ,ಎನ್. ಸಿ. ಸಿ., ಮತ್ತು ಜಿಲ್ಲಾ ಸ್ವಿಪ್ ಸಮಿತಿಯ ಅವರ ಸಹಯೋಗದಲ್ಲಿ ಮತದಾರರ ಅರಿವು ಕಾರ್ಯಕ್ರಮ ನಡೆಯಿತು.ಡಾ.ಸದಾನಂದ ಬೈಂದೂರು, ಎಸ್ ವಿಈಈಪಿ ತರಬೇತುದಾರರು, ಶಿಕ್ಷಕರು ಸರಕಾರಿ ಶಾಲೆ ಕುಂದಾಪುರ ಮತ್ತು ರಾಘವೇಂದ್ರ ಕಿಣಿ, ಎಲೆಕ್ಷನ್ ಸೆಕ್ಟರ್ ಆಫೀಸರ್, ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮಕ್ಕೆ […]
ಮಂಗಳೂರು: ಬಿಕರ್ನಕಟ್ಟೆ ಬಾಲ ಯೇಸು ದೇವಾಲಯದಲ್ಲಿ ಏಪ್ರಿಲ್ 16 ರಂದು ದೈವಿಕ ಕರುಣೆಯ ಹಬ್ಬವನ್ನು ಆಚರಿಸಲಾಯಿತು. ಫಾ. ಅಲ್ವಿನ್ ಸಿಕ್ವೇರಾ, ಸಾಮೂಹಿಕ ಮುಖ್ಯ ಆಚರಣೆಯ ಪುರೋಹಿತರಾಗಿದ್ದರು. ಸ್ವಾಮಿ ಯೇಸು ಕೃಪೆಯ ಬಾವಿಯಿಂದ ಕುಡಿಯಲು ಅವರು ಕರೆ ನೀಡಿದರು. ಡಿವೈನ್ ಮರ್ಸಿ ಭಾನುವಾರ ವಿಶೇಷ ದಿನವಾಗಿದೆ, ಸ್ವಾಮಿ ಯೇಸುವಿನ ಆಶೀರ್ವಾದವನ್ನು ಪಡೆಯಲಾಗುತ್ತದೆ. ಫಾ. ಲ್ಯಾನ್ಸಿ ಲೂಯಿಸ್ ಮತ್ತು ಫಾ.. ಜೋಸೆಫ್ ಡಿಸೋಜ ಅವರು ಸಾಮೂಹಿಕವಾಗಿ ನೆರವೇರಿಸಿದರು. ದೈವಿಕ ಕರುಣೆಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಶ್ರೀ ಆಲ್ಫ್ರೆಡ್ ರೆಬೆಲ್ಲೊ, ಡಿವೈನ್ […]
ಕುಂದಾಪುರ, ಎ.18: ಪಿಯುಸ್ ನಗರ ಚರ್ಚಿನ ಧರ್ಮಗುರು ಆಲ್ಬರ್ಟ್ ಕ್ರಾಸ್ತಾರ ಗುರುದೀಕ್ಷೆಯ 26 ನೇ ವರ್ಷದ ಸಂಭ್ರಮವನ್ನು ಎ.17 ರಂದು ಪಿಯುಸ್ ನಗರ ಧರ್ಮಕೇಂದ್ರದವರು ಆಚರಿಸಿದರು.ವಂ|ಆಲ್ಬರ್ಟ್ ಕ್ರಾಸ್ತಾ ಅವರು, ವಂ|ವಾಲ್ಟರ್ ಡಿಮೆಲ್ಲೊ ಇವರ ಸಹಭಾಗಿತ್ವದೊಂದಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಧರ್ಮಕೇಂದ್ರದ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಧರ್ಮಗುರುಗಳ ಒಳಿತಿಗಾಗಿ ಪ್ರಾರ್ಥಿಸಿ ಶುಭ ಹಾರೈಸಿದರು.ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಧರ್ಮಗುರುಗಳು ಕೇಕ್ ಕತ್ತರಿಸಿ, ತಮ್ಮ ಸಂಭ್ರಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಜೆಮ್ಸ್ ಡಿಮೆಲ್ಲೊ […]
ಮಂಗಳೂರಿನ ಸುರತ್ಕಲ್ ನಲ್ಲಿ ಪಾಂಡಿಚೇರಿಯ ಕುಟುಂಬವೊಂದು ದಿನಗೂಲಿ ಮಾಡಿ ಜೀವಿಸುತ್ತಿತ್ತು . 2017ರಲ್ಲಿ ಕಲ್ಯಾಣಿ ನಾಪತ್ತೆಯಾಗಿದ್ದು, ಕುಟುಂಬಸ್ಥರು ಆಕೆಗಾಗಿ ಹುಡುಕಾಟ ನಡೆಸಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದುರದೃಷ್ಟವಶಾತ್, ಪೊಲೀಸರು ಅವರ ದೂರನ್ನು ಸ್ವೀಕರಿಸಲಿಲ್ಲ ಮತ್ತು ತಂದೆಯೂ ಅಪಘಾತಕ್ಕೊಳಗಾಗಿ ಮರಣ ಹೊಂದಿದರು.ತದನಂತರ ಅಸಹಾಯಕ ತಾಯಿ ಮತ್ತು ಮಗ ಪಾಂಡಿಚೇರಿಗೆ ಹಿಂತಿರುಗಿದರು. ಕಲ್ಯಾಣಿಯ ಹುಡುಕಾಟ ಮತ್ತು ಆಕೆ ಮರಳಿ ಬರುವ ಭರವಸೆ ಅವರಲ್ಲಿ ಬಲವಾಗಿತ್ತು. ಕಲ್ಯಾಣಿಯನ್ನು ಮತ್ತೆ ಪಡೆಯುವ ಅವರ ವಿಶ್ವಾಸವು ಆಕೆಯು ಕಾಣೆಯಾಗಿ 6 ವರ್ಷಗಳ […]
ಕುಂದಾಪುರ.ಎ.16: ಮುಂಬರುವ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೊಳಹಳ್ಳಿ ದಿನೇಶ್ ಹೆಗ್ಡೆ, ಕುಂದಾಪುರ ಚರ್ಚ್ ಆವರಣಕ್ಕೆ ಬಂದು ಕ್ರೈಸ್ತ ಮತ ಭಾಂದವರಿಗೆ ಭೇಟಿ ನೀಡಿ ತಮಗೆ ಮತ ಹಾಕಿ ಬಹುಮತದಲ್ಲಿ ಆರಿಸಿ ವಿಧಾನ ಸಭೆಗೆ ಕಳುಹಿಸಿಕೊಡಬೇಕಾಗಿ ವಿನಂತಿಸಿಕೊಂಡರು.“ನಾನು ಚುನಾವಣೆಗೆ ನಾಮ ಪತ್ರವನ್ನು ಸಲ್ಲಿಸಿದ್ದೇನೆ, ನನ್ನ ಗೆಲುವಿಗಾಗಿ, ನಾನು ದೇವಾಲಯಗಳಿಗೆ ಭೇಟಿ ಮಾಡಿದ್ದೇನೆ, ಈಗ ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಹೋಲಿ ರೋಜರಿ ಮಾತೆಯ ಆಶಿರ್ವಾದ ಪಡೆಯಲು ಬಂದಿದ್ದೇನೆ, ರೋಜರಿ ಮಾತೆ ನನಗೆ ಆಶಿರ್ವದಿಸುತ್ತಾಳೆಂದು ನನ್ನ ನಂಬಿಕೆ, ಹಾಗೇ ಕ್ರೈಸ್ತ […]
ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ನೆಹರು ಯುವ ಕೇಂದ್ರ ಉಡುಪಿ ವತಿಯಿಂದ ಅಬ್ಬನಡ್ಕದ ಕುಂಟಲಗುಂಡಿಯಲ್ಲಿರುವ ಸಂಘದ ರಂಗಮಂದಿರದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ದೇಶದ ಮೊದಲ ಕಾನೂನು ಸಚಿವರು, ದೇಶ ಕಂಡ ಮಹಾನ್ ವ್ಯಕ್ತಿ ಡಾ. ಬಿ.ಆರ್. ಅಂಬೇಡ್ಕರ್ರವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.ಡಾ. ಬಿ.ಆರ್. ಅಂಬೇಡ್ಕರ್ರವರ ಭಾವಚಿತ್ರಕ್ಕೆ ಸಂಘದ ಅಧ್ಯಕ್ಷ ಪ್ರಶಾಂತ್ ಪೂಜಾರಿ ಪುಷ್ಪಾರ್ಚನೆ ಸಲ್ಲಿಸಿ ಮಾಲಾರ್ಪಣೆ ಮಾಡಿ ದೀಪ ಬೆಳಗಿಸುವ […]