
ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಕೇಂದ್ರ ಸರಕಾರದ ಮಾಜಿ ಸಚಿವ ದಿI ಆಸ್ಕರ್ ಫೆರ್ನಾಂಡಿಸ್ ರವರ 2 ನೇ ಪುಣ್ಯತಿಥಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು . ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಕೆ. ಪ್ರತಾಪ ಚಂದ್ರ ಶೆಟ್ಟಿಯವರು ಈ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸರವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರಳ ವ್ಯಕ್ತಿತ್ವದ ಮೂಲಕ ಪಕ್ಷ , ಜಿಲ್ಲೆ, ರಾಜ್ಯ , ಮತ್ತು ರಾಷ್ಟ್ರಕ್ಕೆ ಅವರು ಪ್ರಚಾರವಿಲ್ಲದೇ ಅನೇಕ ಕೆಲಸ ಮಾಡಿದ್ದರು ಮತ್ತು ಸಾಮಾನ್ಯ ಕಾರ್ಯಕರ್ತರೊಂದಿಗೆ […]

ಉಡುಪಿ: 26ನೇ ವಾರ್ಷಿಕ ಮಹಾಸಭೆ- ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ನಿಂದ ಶೇ.20 ಡಿವಿಡೆಂಡ್ ಘೋಷಣೆಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಮಹಾಸಭೆಯು ದಿನಾಂಕ 10/09-2023ನೇ ಆದಿತ್ಯವಾರದಂದು ಉಡುಪಿ ಶೋಕಮಾತಾ ಇಗರ್ಜಿಯ “ಆವೆ ಮರಿಯಾ” ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಡಿ’ಅಲ್ಮೇಡಾ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಅಧ್ಯಕ್ಷರು ಎಲ್ಲರನ್ನೂ ಸಭೆಗೆ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ಫೆರ್ನಾಂಡೀಸ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು.ಶೇ.20 ಡಿವಿಡೆಂಡ್ ಘೋಷಣೆ : ಸಂಘವು 2022-23 ನೇ ವರದಿ […]

ಕುಂದಾಪುರ : ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜ್ಞಾನದೊಂದಿಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಂಡರೆ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಆತ್ಮ ವಿಶ್ವಾಸ ಬೆಳೆಯುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ತಮ್ಮ ಊರು, ಪರಿಸರ, ನಿತ್ಯ ಜೀವನ ಕ್ರಮದಲ್ಲಿ ಬರುವ ವಿಷಯಗಳು, ಸಾಧಕರ ವಿಷಯಗಳು, ನಮ್ಮ ಸಂಸ್ಕೃತಿ ಹೀಗೆ ವಿವಿಧ ವಿಚಾರಗಳ ಬಗ್ಗೆ ಜ್ಞಾನ ಪಡೆಯುತ್ತಿರಬೇಕು. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅರಿಯುತ್ತಿರಬೇಕು” ಎಂದು ಕುಂದಾಪುರದ ಖ್ಯಾತ ಸಾಮಾಜಿಕ ಧುರೀಣ ಸುಪರ್‌ಗ್ರೇಡ್ ಇಲೆಕ್ಟಿçಕಲ್ ಕಂಟ್ರಾಕ್ಟರ್ ಕೆ. ಆರ್. ನಾಯ್ಕ್ ಹೇಳಿದರು.ಭಂಡರ‍್ಸ್ಕಾರ‍್ಸ್ ಪ.ಪೂ.ಕಾಲೇಜು ಹಾಗೂ “ಕುಂದಪ್ರಭ” ಸಂಸ್ಥೆ […]

“ನಾವೆಲ್ಲರೂ ಕಾನಾಟಿ ( ದಪ್ಪ ಕನ್ನಡಕ ಧರಿಸುವ) ಅರ್ಥಾತ್ ಅಜ್ಜ ಎಂದೇ ಕರೆಯುತಿದ್ದ ನಮ್ಮಜ್ಜ ಲೂವಿಸ್ ಕಣ್ಣಪ್ಪನವರಿಂದಲೇ ನನ್ನ ಬರವಣಿಗೆಗೆ ಮೊದಲ ಪ್ರೇರಣೆ ದೊರೆಯಿತು. ಸ್ವಾತಂತ್ಯ ಪರ‍್ವದಲ್ಲಿ ಮದ್ರಾಸ್‌ವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಮ್.ಎ. ಮತ್ತು ಎಲ್. ಟಿ. ಪದವಿ ಪಡೆದಿದ್ದ ಲೂವಿಸ್ ಕಣ್ಣಪ್ಪನವರು ಮಂಗಳೂರು ಹಂಪನಕಟ್ಟೆಯ ಸರಕಾರಿ ಕಾಲೇಜಿನಲ್ಲಿ (ಇಂದಿನ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಂಶುಪಾಲರಾಗಿ, ನಂತರ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಗಣಿತ ಹಾಗೂ ಲ್ಯಾಟಿನ್ ಭಾಷೆಯಲ್ಲಿ ಸಂತ ಅಲೋಶಿಯಸ್ ಕಾಲೇಜಿಗೆ ಪ್ರಪ್ರಥಮ ಬಾರಿ […]

ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 32 ನೇ ವಾರ್ಷಿಕ ಸಾಮಾನ್ಯ ಸಭೆಯು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಭಾನುವಾರ (ಸೆ.10 ರಂದು) ನಡೆಯಿತು. ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ ಅಲ್ಮೇಡಾ ಅಧ್ಯಕ್ಷತೆ ವಹಿಸಿ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದರು. ಸಂಘದ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 4123 ಸದ್ಯಸರಿಂದ 1,00,68,230 […]

ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆಯನ್ನು ಉರ್ವ ಸ್ಟೋರ್‌ನಲ್ಲಿರುವ ಪಾರಿಜಾತಾ ಕಾಂಪ್ಲೆಕ್ಸ್ನ ನೆಲಮಹಡಿಗೆ ದಿನಾಂಕ ೦೯.೦೯.೨೦೨೩ರಂದು ಸ್ಥಳಾಂತರಿಸಲಾಯಿತು. ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಬಿಜೈ ಚರ್ಚ್ನ ಧರ್ಮಗುರುಗಳಾದ ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು ಸ್ಥಳಾಂತರಗೊoಡ ಹೊಸ ಶಾಖೆಯನ್ನು ಉದ್ಘಾಟಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊರವರು ಆಡಳಿತ ಮಂಡಳಿಯು ಒಂದು ವರ್ಷದ ಹಿಂದೆ ಗ್ರಾಹಕರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆಯನ್ನು ಅಶೋಕನಗರ ಶಾಖೆಯ ಸ್ಥಳಾಂತರದ ಮೂಲಕ ಈಡೇರಿಸಿದೆ ಎಂದರು. ನಮ್ಮ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕಿನ […]

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಇವರಿಗೆ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ: “ಕ್ರೀಡಾ ಪಂದ್ಯಾಟ ಯುವ ವಿದ್ಯಾರ್ಥಿಗಳಲ್ಲಿ ಮನೋ-ದೈಹಿಕ ಬಲವನ್ನು ಹೆಚ್ಚಿಸುತ್ತದೆ. ಕಬ್ಬಡ್ಡಿಯಂಥ ಕ್ರೀಡೆ ವಿದ್ಯಾರ್ಥಿಗಳ ಸಾಹಸ ಬುದ್ಧಿಯನ್ನು ಹೆಚ್ಚಿಸಿ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ ” ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿ ಯವರು ಕುಂದಾಪುರದ ಆರ್.ಎನ್. ಶೆಟ್ಟಿ ಪಿ.ಯು ಕಾಲೇಜು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಕರೆ ನೀಡಿದರು. ಮುಖ್ಯ […]