
ಅಹ್ಮದಾಬಾದ್: ಇಂದು ಅಹಮದಬಾದಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ವಿಶ್ವಕಪ್ 2023 ರ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತ್ತು. ಇದನ್ನು ಸಮರ್ಥಿಸಿದ ಆಸ್ಟ್ರೇಲಿಯಾ ಬೌಲರ್ ಗಳು ಅತ್ಯುತ್ತಮ ಬೌಲಿಂಗ್ ಮಾಡಿ ಭಾರತದ ಮೊತ್ತವನ್ನು ಕೇವಲ 240 ರನ್ನಿಗೆ ನಿಯಂತ್ರಿಸಿದರು. ಭಾರತದ ಬ್ಯಾಟಿಂಗ್ ಬಿರುಸನ್ನೆ ಪಡೆಯಲಿಲ್ಲ. ಮಂದಗತಿ ಬ್ಯಾಟಿಂಗ್ ಭಾರತಕ್ಕೆ ಮುಳುವಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಲ್ಲಿ ಕೇವಲ 47 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನು ವಿಕ್ಷೀಸಿದ […]

ಕುಂದಾಪುರ: ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಉಡುಪಿ ಜಿಲ್ಲೆಯ ವತಿಯಿಂದ ಶಾಲಾ ಮತ್ತು ಕಾಲೇಜ್ ಮಟ್ಟದ ಟೆನ್ನಿಸ್ಬಾಲ್ ಕ್ರಿಕೆಟ್ ಟೂರ್ನಮೆಂಟ್ ನವೆಂಬರ್ 6ರಿಂದ ನವೆಂಬರ 14, 2023ರ ವರೆಗೆ ಕುಂದಾಪುರದಲ್ಲಿ ಆಯೋಜಿಸಲಾಗಿದೆಂದು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷಿನಿನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಅವರು ತಿಳಿಸಿದ್ದಾರೆ.ಈ ಪಂದ್ಯಾಟವು ಶಾಲಾ ಮತ್ತು ಕಾಲೇಜು ಮಟ್ಟ ಇದ್ದು, ಈದು ಎರಡು ಹಂತಗಳಲ್ಲಿ ನಡೆಯಲಿದೆ.1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿ, ಪಿಯುಸಿಯಿಂದ ಡಿಗ್ರಿವರೆಗಿನ ವಿದ್ಯಾರ್ಥಿಗಳು ಕಾಲೇಜು ಮಟ್ಟದಲ್ಲಿ ಸ್ಪರ್ಧಿಸಬಹುದಾಗಿದೆ. ಇದು 1೦ […]

ಕುಂದಾಪುರ: ಅ:06: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್&ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ “ಐಕ್ಯಂ”ನ ಅಂಗವಾಗಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಕ್ರೀಡೋತ್ಸವವು ಅತ್ಯುತ್ತಮವಾಗಿ ನೆರವೇರಿತು. ಟಾರ್ಪಿಡೋಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಶ್ರೀಯುತ ಗೌತಮ್ ಶೆಟ್ಟಿ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರೀಡೆಯಲ್ಲಿಯೂ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ. ನಮ್ಮನ್ನು ನಾವು ಮೊದಲು ಪ್ರೀತಿಸಿದರೆ ಜೀವನದಲ್ಲಿ ಎಲ್ಲವನ್ನೂ ಸಾಧ್ಯಗೊಳಿಸಬಹುದು.“ಎಲ್ಲವೂ ಸಾಧ್ಯ ಆದರೆ ಸುಲಭವಲ್ಲ”. ಮೊದಲು ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿಯಬೇಕು ಮತ್ತು ನಮ್ಮಲ್ಲಿ ಧನಾತ್ಮಕ […]

ಕೊಲಂಬೊ: ಏಷ್ಯಾ ರಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ದಾಖಲೆಯ 8ನೇ ಬಾರಿ ಭಾರತ ತಂಡ ಏಷ್ಯಾ ಕಪ್ ಛಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಲಂಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಮೊಹಮ್ಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಲಂಕಾ ಕೇವಲ 15.2 ಓವರ್ಗಳಲ್ಲಿ 50 […]

ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಗೌತಮ್ ಶೆಟ್ಟಿ ಅವರು ಭಾನುವಾರ ಧಾರವಾಡದಲ್ಲಿ ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಆಯ್ಕೆಯ ಬಳಿಕ ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿ,ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ […]

ಕುಂದಾಪುರ ವಾಲಿಬಾಲ್ ಅಕಾಡೆಮಿಯ ಉದ್ಘಾಟನೆ ಹಾಗೂ, ವಾಲಿಬಾಲ್ ಅಕಾಡೆಮಿ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ನಡೆದೆ ವಾಲಿಬಾಲ್ ತರಬೇತಿಯ ಸಮಾರೋಪ ಸಮಾರಂಭ . ಮೇ 27 . ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೂತನ ” ಕುಂದಾಪುರ ವಾಲಿಬಾಲ್ ಅಕಾಡೆಮಿ ಯ ಉದ್ಘಾಟನೆಯನ್ನು ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಯ ಮೊಕ್ತೇಸರ, ಮಾಜಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಶ್ರೀ ಜಯಾನಂದ ಖಾರ್ವಿ ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಅಥ್ಲೆಟ್ ಶ್ರೀ ಪರಮೇಶ್ವರ […]

ಮಂಗಳೂರು:ಬೊಂದೆಲಿನ ಸಂತಲಾರೆನ್ಸ್ ಅನುದಾನ ರಹಿತ ಶಾಲೆಯ 7ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಮಹಮ್ಮದ್ ಶಾಮಿ ದಕ್ಷಿಣ ಕನ್ನಡ ಜಿಲ್ಲೆಯಿಂದ 100 ಮೀಟರ್ ಓಟಕ್ಕೆ ಆಯ್ಕೆಯಾಗಿದ್ದು ಫೆಬ್ರವರಿ 20 ರಿಂದ 23ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಥೆಟಿಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾನೆ. ಮೊಹಮ್ಮದ್ ಶಾಮಿ ಇವನು ಕಮರುದ್ದೀನ್ ಹಾಗೂ ನಾಜಿಯಾ ರವರ ಪುತ್ರನಾಗಿದ್ದು ದೈಹಿಕ ಶಿಕ್ಷಕರಾದ ಯೋಗೇಶ್ ಕುಮಾರ್ ರವರ ವಿದ್ಯಾರ್ಥಿಯಾಗಿರುತ್ತಾನೆ.

ಬಸ್ರೂರು: ಬಸ್ರೂರು ಸ್ಪೋರ್ಟ್ಸ್ ಆಶ್ರಯದಲ್ಲಿ ರವಿವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಮೈದಾನದಲ್ಲಿ ಹಿರಿಯರ ಕ್ರಿಕೆಟ್ ಟ್ರೋಫಿ-2023 ನಡೆಯಿತು. ಪಂದ್ಯಾವಳಿಯಲ್ಲಿ ಬಸ್ರೂರು ಪರಿಸರದ ಹಿರಿಯ ಕ್ರಿಕೆಟ್ ತಂಡಗಳು ಭಾಗವವಹಿಸಿದ್ದು, ಲಕ್ಕಿ ಲೆಜೆಂಡ್ಸ್ ಪ್ರಥಮ, ಲೆಜೆಂಡ್ಸ್ ಕಿಂಗ್ಸ್ ತಂಡ ದ್ವಿತೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಟ್ರೋಫಿಗಳನ್ನು ವಿಜೇತರಿಗೆ ವಿತರಿಸಿದ ಧಾರ್ಮಿಕ ನೇತಾರ, ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಮಾತನಾಡಿ, ಸುಮಾರು 25-30 ವರ್ಷಗಳ ಹಿಂದೆ ಜಿಲ್ಲೆ ರಾಜ್ಯ,ರಾಷ್ಟ್ರದಲ್ಲಿ ಮಿಂಚಿದ ಸ್ಥಳೀಯ ಕ್ರಿಕೆಟ್ ಪಟುಗಳ ಸಮಾಗಮ ಈಗ ಮತ್ತೊಮ್ಮೆ ನಡೆದಿರುವುದು […]

ದಿನಾಂಕ-2-1-2023 ರಂದು ಉಪ ನಿರ್ದೇಶಕರ ಕಛೇರಿ ಶಾಲಾ ಶಿಕ್ಷಣ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 14/17 ರ ವಯೋಮಿತಿಯೊಳಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲಾ 6ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಾಸ್ಯ ಮಧ್ಯಸ್ಥ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ […]