
ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಕೂಡಲೇ ಆತ SC ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಎಸ್‌ಸಿ/ ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಗುಂಟೂರು ಜಿಲ್ಲೆಯ ಕೊತ್ತಪಾಲೆಂನ ಪಾದ್ರಿ ಚಿಂತದ ಆನಂದ್ ಎಂಬುವವರು ಎಸ್‌ಸಿ/ ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್. ಹರಿನಾಥ್ ಅವರು ಈ ತೀರ್ಪು ನೀಡಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.ಹತ್ತು ವರ್ಷಕ್ಕೂ ಹೆಚ್ಚು ಕಾಲ […]

ನಾಗಾಲ್ಯಾಂಡ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ (ಎನ್‌ಬಿಎಸ್‌ಇ) ನಡೆಸಿದ ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಶೇಕಡಾ 100 ಪಾಸು ಫಲಿತಾಂಶವನ್ನು ಪಡೆದು ಸೆಂಟ್ ಕ್ಲೇರ್ ಶಾಲೆಯು ಮತ್ತೊಮ್ಮೆ ಶೈಕ್ಷಣಿಕ ಶ್ರೇಷ್ಠತೆಯನ್ನು ಪ್ರದರ್ಶಿಸಿದೆ. ಇದು ಶಾಲೆಗೆ ಅನುಕ್ರಮವಾಗಿ ಐದನೇ ಬಾರಿ ಸಂಪೂರ್ಣ ಪಾಸು ಫಲಿತಾಂಶ ಸಿಕ್ಕಿದೆ. ಈ ವರ್ಷ ಶಾಲೆಯಿಂದ ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ, 3 ಮಂದಿ ದ್ವಿತೀಯ ದರ್ಜೆಯಲ್ಲಿ ಮತ್ತು ಉಳಿದವರು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಈ ನಿರಂತರ […]

ಶಿವಮೊಗ್ಗ; ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥರಾವ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಐಬಿ ಸರ್ಕಲ್ ಮೂಲಕ, ಕುವೆಂಪು ರಸ್ತೆ, ಜೈಲ್ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪಶೆಟ್ಟಿ ಸರ್ಕಲ್ ಮೂಲಕ ಅಮೀರ್ ಅಹಮದ್ ವೃತ್ತ ದಾಟಿ ಬಿಹೆಚ್ ರಸ್ತೆ ಮೂಲಕ ರೋಟರಿ ಚಿತಾಗಾರದತ್ತ ಸಾಗಿದೆ.ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದು, ಭಾರತ್ ಮಾತಾ ಕೀ ಜೈ, ಮಂಜುನಾಥ್ ಅಮರ್ ರಹೆ ಘೋಷಣೆಗಳು ಮೊಳಗಿದವು.ಶಾಸಕ ಎಸ್.ಎನ್. ಚನ್ನಬಸಪ್ಪ, ಕಾಂಗ್ರೆಸ್ ಮುಖಂಡ ಹೆಚ್.ಸಿ. […]

ಉಡುಪಿ: ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ಉಗ್ರವಾದಿಗಳಿಂದ ನಡೆದಿರುವ ಹೃದಯ ವಿದ್ರಾವಕ ಘಟನೆನಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಖಂಡಿಸಿದ್ದಾರೆ.ಈ ಘಟನೆಯಯಿಂದ ಆಮಾಯಕರ ಜೀವಗಳನ್ನು ಬಲಿಯಾಗುವುದರೊಂದಿಗೆ ಅನೇಕ ಕುಟುಂಬಗಳನ್ನು ಧ್ವಂಸಗೊಳಿಸಿದ್ದು ಇಂತಹ ಹಿಂಸಾಚಾರಗಳು ಸಂಪೂರ್ಣವಾಗಿ ಅಮಾನವೀಯವಾಗಿದ್ದು ನ್ಯಾಯ, ಘನತೆ ಮತ್ತು ಶಾಂತಿಯನ್ನು ಬಯಸುವ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಪ್ರತಿಯೊಂದು ಜೀವವೂ ಕೂಡ ಅಮೂಲ್ಯವಾಗಿದ್ದು ಹಿಂಸಾಚಾರದಿಂದ ಉಂಟಾಗುವ ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆಗುವ ಗಾಯವಾಗಿದೆ.“ಶಾಶ್ವತ ಶಾಂತಿಯ ನಿಜವಾದ ಅಡಿಪಾಯವೇ ಸಹೋದರತ್ವ” ಎಂದು ಪವಿತ್ರ […]

ಏಪ್ರಿಲ್ 13, 2025 ರಂದು ಪಾಮ್ ಸಂಡೆಯಂದು ಅಕುಲುಟೊದ ಸೇಂಟ್ ಕ್ಲೇರ್ ಚರ್ಚ್‌ನ ಭಕ್ತರು ಭಕ್ತಿ ಮತ್ತು ಆಚರಣೆಯ ಮನೋಭಾವದಿಂದ ಒಟ್ಟುಗೂಡಿದರು, ಬೆಳಿಗ್ಗೆ 9:00 ಗಂಟೆಗೆ ನಡೆದ ಗಂಭೀರ ಮತ್ತು ರೋಮಾಂಚಕ ಬಲಿದಾನದೊಂದಿಗೆ ಪವಿತ್ರ ವಾರದ ಆರಂಭವನ್ನು ಗುರುತಿಸಿದರು. ನಾಗಾಲ್ಯಾಂಡ್ ಕ್ಯಾಥೋಲಿಕ್ ಯುವ ಚಳವಳಿಯ (NCYM) ನಿರ್ದೇಶಕ ರೆವರೆಂಡ್ ಫಾದರ್ ಕೊಕ್ಟೊ ಕುರಿಯನ್ ಅವರ ಉಪಸ್ಥಿತಿಯಿಂದ ಆಚರಣೆಯು ಅಲಂಕರಿಸಲ್ಪಟ್ಟಿತು, ಅವರು ಮುಖ್ಯ ಆಚರಣೆಯಲ್ಲಿ ಸೇವೆ ಸಲ್ಲಿಸಿದರು.ಫಾದರ್ ಕೊಕ್ಟೊ ಅವರೊಂದಿಗೆ ಡಾ. ರೋಸೌ ಪೊಹೆನಾ (ಅಧ್ಯಕ್ಷರು), ಶ್ರೀಮತಿ ವೆರೋನಿಕಾ […]

ಸೈಂಟ್ ಕ್ಲೆರ್ ಶಾಲೆ, ಅಕುಲೋಟೊ ದಲ್ಲಿ ಪೋಷಕರ ದಿನ, ವಿವಿಧ ಬಗೆಯ ಆಹಾರ ಉತ್ಸವ ಮತ್ತು ಕ್ರೀಡಾ ಕೂಟ ಉದ್ಘಾಟನೆಯೊಂದಿಗೆ ‘ಕ್ಲಾರೈಟ್ ಕಾರ್ನಿವಲ್ 2025’ ಜರುಗಿತು. 2025ರ ಏಪ್ರಿಲ್ 7ರ ಸೋಮವಾರದಂದು ಸ್ಟೆ. ಕ್ಲೇರ್ ಶಾಲೆಯು ಹರ್ಷೋದ್ಗಾರ ಮತ್ತು ವಿಜೃಂಭಿತ ಉತ್ಸವಗಳೊಂದಿಗೆ ಆರಂಭವಾಯಿತು, ಏಕೆಂದರೆ ಬಹು ದಿನಗಳ ನಿರೀಕ್ಷಿತವಾದ ‘ಕ್ಲಾರೈಟ್ ಕಾರ್ನಿವಲ್ 2025’ ಪೋಷಕರ ದಿನ, ವಿವಿಧ ಬಗೆಯ ಆಹಾರ ಭಕ್ಷ್ಯ ಹಾಗೂ ವಾರ್ಷಿಕ ಕ್ರೀಡಾ ಕೂಟ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು. ಶಾಲಾ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ […]

ಭಾರತೀಯ ರೈಲ್ವೆ ಇಲಾಖೆಯು 2025ನೇ ಸಾಲಿನ ಬರೋಬರಿ 9,900 ಅಸಿಸ್ಟಂಟ್ ಲೋಕೋಪೈಲಟ್ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಹುದ್ದೆ ಹೆಸರು ಅಸಿಸ್ಟಂಟ್ ಲೋಕೋ ಪೈಲಟ್ಹುದ್ದೆಗಳ ಸಂಖ್ಯೆ 9,900ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ವಿದ್ಯಾರ್ಹತೆಮೆಟ್ರಿಕ್ಯೂಲೇಷನ್ / ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಅನ್ನು ಅಂಗೀಕೃತ ಸಂಸ್ಥೆಗಳಲ್ಲಿ ವಿವಿಧ ಟ್ರೇಡ್‌ಗಳಲ್ಲಿ ಪಡೆದು ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು. ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಗೆ ವಯಸ್ಸಿನ ಅರ್ಹತೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ […]

ಪಣಜಿ; 2024-2025 ರ ಶೈಕ್ಷಣಿಕ ವರ್ಷದುದ್ದಕ್ಕೂ, ಫ್ರೆಂಡ್ಸ್ ಆಫ್ 3L ಸಂಸ್ಥೆಯು ಗೋವಾದ ಪಣಜಿಯ ರಾಮದಾಸ್ ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಡಿಕ್ಟೇಷನ್, ಹಾಡುಗಾರಿಕೆ, ಚಿತ್ರ ಬಿಡಿಸುವುದು ಮತ್ತು ಬಣ್ಣ ಬಳಿಯುವುದು, ಇಂಗ್ಲಿಷ್ ಕೈಬರಹ, ಕನ್ನಡ ಕೈಬರಹದಂತಹ ವಿವಿಧ ಸ್ಪರ್ಧೆಗಳನ್ನು ನಡೆಸಿತು. ಇದು ಪಣಜಿಯ ಫಾರ್ಮಸಿ ಕಾಲೇಜಿನ ಬಳಿ ಇದೆ. ಮಾರ್ಚ್ 24 ರಂದು ವಿಜೇತರಿಗೆ 10 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 28 ಮೆರಿಟ್ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. […]

ತಂದೆ-ತಾಯಿ ಹಾಗೂ ಹಿರಿಯರನ್ನು ಆರೈಕೆ ಮಾಡದಿದ್ದರೆ, ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅವರು ನೀಡಿದ ವಿಲ್ ಅಥವಾ ಧಾನಪತ್ರವನ ರದ್ದು ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರದ ”ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007′ ನೀಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ವಿಧಾನ ಪರಿಷತ್‌ನಲ್ಲಿ ಬುಧವಾರ ಸದಸ್ಯೆ ಬಲ್ಕೀಸ್ ಬಾನು ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯನ್ನೇ ಆರೈಕೆ ಮಾಡದಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. […]